ಉಡುಪಿ ಜಿಲ್ಲೆ: 34 ಜನರಿಗೆ ಪಾಸಿಟಿವ್ ; ಜಿಲ್ಲೆಯ ವಿವಿಧೆಡೆ ಕೋವಿಡ್ ಕಾಟ
Team Udayavani, Jul 11, 2020, 6:05 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಉಡುಪಿ: ಉಡುಪಿ ಜಿಲ್ಲೆಯಲ್ಲಿ ಶುಕ್ರವಾರ 673 ಜನರಿಗೆ ನೆಗೆಟಿವ್ ಮತ್ತು 34 ಜನರಿಗೆ ಪಾಸಿಟಿವ್ ಪ್ರಕರಣ ವರದಿಯಾಗಿದೆ.
34 ಜನರಲ್ಲಿ ಬ್ರಹ್ಮಾವರ, ಕಾರ್ಕಳ, ಉಡುಪಿ ತಾಲೂಕಿನವರು ತಲಾ ನಾಲ್ವರು, ಕಾಪುವಿನವರು ಐವರು, ಕುಂದಾಪುರದವರು ಆರು, ಬೈಂದೂರಿನವರು 11 ಮಂದಿ ಇದ್ದಾರೆ.
22 ಪುರುಷರು, 10 ಮಹಿಳೆಯರು, ಒಂದು ಗಂಡು ಮಗು, ಒಂದು ಹೆಣ್ಣು ಮಗುವಿದೆ. ದುಬಾೖಯಿಂದ ಬಂದವರು ಇಬ್ಬರು, ಕುವೈಟ್‌ನಿಂದ ಒಬ್ಬರು, ಬೆಂಗಳೂರಿನಿಂದ ಇಬ್ಬರು, ಮುಂಬಯಿಯಿಂದ ಬಂದವರು ಮೂವರು ಇದ್ದಾರೆ.
ಶುಕ್ರವಾರ 698 ಜನರ ಮಾದರಿಗಳನ್ನು ಸಂಗ್ರಹಿಸಿದ್ದು 2,424 ಜನರ ವರದಿಗಳು ಬರಬೇಕಾಗಿದೆ. ಸದ್ಯ 250 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಶುಕ್ರವಾರ ಏಳು ಮಂದಿ ಬಿಡುಗಡೆಗೊಂಡಿದ್ದಾರೆ. ಪ್ರಸ್ತುತ 1,261 ಮಂದಿ ಮನೆಗಳಲ್ಲಿ ಮತ್ತು 141 ಜನರು ಆಸ್ಪತ್ರೆಗಳ ಐಸೊಲೇಶನ್ ವಾರ್ಡ್‌ಗಳಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ.
ಉಡುಪಿ ತಾಲೂಕಿನಲ್ಲಿ ಪಾಸಿಟಿವ್ ಪ್ರಕರಣ ಕಂಡು ಬಂದ ಹಿನ್ನೆಲೆಯಲ್ಲಿ ಹಲವೆಡೆ ಸೀಲ್‌ಡೌನ್ ಮಾಡಲಾಗಿದೆ. ಬೊಮ್ಮರಬೆಟ್ಟಿನಲ್ಲಿ ಎರಡು, ಉದ್ಯಾವರ, 41 ಶಿರೂರು, 80 ಬಡಗಬೆಟ್ಟು, ಪೆರ್ಣಂಕಿಲ, ಕಡೆಕಾರಿನಲ್ಲಿ ತಲಾ ಒಂದೊಂದು ಮನೆ, ಆದಿಉಡುಪಿಯಲ್ಲಿ ಹಣ್ಣು, ತರಕಾರಿ ಅಂಗಡಿಯನ್ನು ಸೀಲ್‌ಡೌನ್ ಮಾಡಲಾಗಿದೆ.
ಕೋಟ: ಹೊಟೇಲ್, ಬ್ಯಾಂಕ್ ನೌಕರರಿಗೆ ಸೋಂಕು
ಕೋಟ ಹೋಬಳಿಯ ಸಾಲಿಗ್ರಾಮ-ಚಿತ್ರಪಾಡಿಯ ಹೊಟೇಲ್‌ವೊಂದರ ಇಬ್ಬರು ನೌಕರರಿಗೆ ಹಾಗೂ ಸಹಕಾರಿ ಬ್ಯಾಂಕ್‌ನ ಗಿಳಿಯಾರು ಶಾಖೆಯಲ್ಲಿ ಸೇವೆ ಸಲ್ಲಿಸುವ ಓರ್ವ ನೌಕರನಿಗೆ ಪಾಸಿಟಿವ್ ಇರುವುದು ದೃಢಪಟ್ಟಿದೆ.
ಮೂವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದ್ದು ಹೊಟೇಲ್ ಹಾಗೂ ನೌಕರ ವಾಸವಿದ್ದ ಹಂದಟ್ಟಿನ ಮನೆ ಮತ್ತು ಸಹಕಾರಿ ಬ್ಯಾಂಕ್ ನೌಕರ ವಾಸಿಸುತ್ತಿದ್ದ ಸಾಸ್ತಾನ ಸಮೀಪದ ಮೂಡುಹಡುವಿನ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ. ಹೊಟೇಲ್ ಹಾಗೂ ಸಹಕಾರಿ ಬ್ಯಾಂಕ್‌ನ ಶಾಖೆಯಲ್ಲಿ ನೂರಾರು ಮಂದಿ ವ್ಯವಹಾರ ನಡೆಸಿರುವುದರಿಂದ ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.
ಪಿತ್ರೋಡಿ: ವೃದ್ಧರಿಗೆ ಸೋಂಕು
ಉದ್ಯಾವರದ 65ರ ಹರೆಯದ ವೃದ್ಧರೋರ್ವರಿಗೆ ಕೋವಿಡ್ 19 ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಪಿತ್ರೋಡಿಯಲ್ಲಿನ ಅವರ ಮನೆಯನ್ನು ಸೀಲ್‌ಡೌನ್ ಮಾಡಲಾಗಿದೆ.
ಮುಂಡ್ಕೂರು: ಮೂವರಿಗೆ ಸೋಂಕು
ಮುಂಡ್ಕೂರು ಗ್ರಾ. ಪಂ. ವ್ಯಾಪ್ತಿಯಲ್ಲಿ ಮೂವರಿಗೆ ಸೋಂಕು ದೃಢಪಟ್ಟಿದೆ. ಮುಂಬಯಿಯಿಂದ ಬಂದಿದ್ದ ಸಚ್ಚೇರಿಪೇಟೆಯ 1 ವರ್ಷದ ಮಗು, ಮುಂಡ್ಕೂರು ರಾಜ ಮುಗುಳಿಯ ವ್ಯಕ್ತಿ ಹಾಗೂ ಮುಲ್ಲಡ್ಕದ 9ರ ಹರೆಯದ ಮಗುವಿಗೆ ಸೋಂಕು ದೃಢಪಟ್ಟಿದೆ.
ಗಂಗೊಳ್ಳಿ: ಓರ್ವರಿಗೆ ಪಾಸಿಟಿವ್
ಗಂಗೊಳ್ಳಿಮೂಲದ ಸದ್ಯ ಮಣಿಪಾಲದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 40 ವರ್ಷದ ವ್ಯಕ್ತಿಯೊಬ್ಬರಿಗೆ ಶುಕ್ರವಾರ ಪಾಸಿಟಿವ್ ಇರುವುದು ದೃಢವಾಗಿದೆ.
ಮಹಿಳೆಗೆ ಸೋಂಕು
ಕೋವಿಡ್ 19 ಪಾಸಿಟಿವ್ ಬಂದಿದ್ದ ಸಿದ್ದಾಪುರ ಗ್ರಾಮದ ಹೆನ್ನಾಬೈಲು ಯುವಕನ ಪ್ರಾಥಮಿಕ ಸಂಪರ್ಕದಲ್ಲಿದ್ದ 50 ವರ್ಷದ ತಾಯಿಗೆ ಶುಕ್ರವಾರ ಸೋಂಕು ದೃಢಪಟ್ಟಿದೆ.
ಶಿರೂರು: ಬ್ಯಾಂಕ್ ಮ್ಯಾನೇಜರ್ ಸಹಿತ ನಾಲ್ವರಿಗೆ ಪಾಸಿಟವ್
ಇಲ್ಲಿನ ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಸಹಿತ ನಾಲ್ವರಿಗೆ ಕೋವಿಡ್ 19 ಪಾಸಿಟಿವ್ ದೃಢಪಟ್ಟಿದೆ. ಸಿಂಡಿಕೇಟ್ ಬ್ಯಾಂಕನ್ನು ಸೀಲ್‌ಡೌನ್ ಮಾಡಲಾಗಿದ್ದು ಎಲ್ಲ ಸಿಬಂದಿಯನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
WTC “ಟೆಸ್ಟ್ ಫೈನಲ್’ಗೂ ಮುನ್ನ ಒಂದು ಟೆಸ್ಟ್ ಆಡಲು ದ. ಆಫ್ರಿಕಾ ಯೋಜನೆ
Galaxy: ಹೊಸ ಗ್ಯಾಲಕ್ಸಿ ಸೃಷ್ಟಿಯನ್ನು ಕಂಡುಹಿಡಿದ ಭಾರತದ ಖಗೋಳ ವಿಜ್ಞಾನಿಗಳು!
AI: ಶಾರುಖ್ ಪತ್ನಿ ಗೌರಿ ಮತಾಂತರ?: ಡೀಪ್ ಫೇಕ್ ಫೋಟೋ ವೈರಲ್
Mangaluru ಎಚ್‌ಎಂಪಿ ವೈರಸ್; ಆತಂಕದ ಅಗತ್ಯವಿಲ್ಲ, ಚಳಿಗಾಲದಲ್ಲಿ ಶೀತ, ಜ್ವರ ಸಾಮಾನ್ಯ
BJP Leader; ಇಂಡಿಯಾ ಗೇಟ್‌ಗೆ “ಭಾರತ್ ಮಾತಾ ದ್ವಾರ’ ಹೆಸರಿಡಿ: ಮೋದಿಗೆ ಪತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.