34ನೇ ವರ್ಷದ ಸ್ವಾತಂತ್ರ್ಯೋತ್ಸವ ತಾಳಮದ್ದಳೆ : ಸರಸ್ವತಿ ಆರಾಧನೆ ನನ್ನ ಕರ್ತವ್ಯ: ಅಮ್ಮಣ್ಣಾಯ


Team Udayavani, Aug 17, 2024, 1:22 AM IST

34ನೇ ವರ್ಷದ ಸ್ವಾತಂತ್ರ್ಯೋತ್ಸವ ತಾಳಮದ್ದಳೆ : ಸರಸ್ವತಿ ಆರಾಧನೆ ನನ್ನ ಕರ್ತವ್ಯ: ಅಮ್ಮಣ್ಣಾಯ

ಉಡುಪಿ: ಒಂದೇ ವೇದಿಕೆಯಲ್ಲಿ 25 ಯುವ ಯಕ್ಷಾವತಾರಿಗಳನ್ನು ಕಂಡು ಭಾವ ಪರವಶ ನಾದೆ ಎಂದು ಹಿರಿಯ ಭಾಗವತ ಎಂ. ದಿನೇಶ್‌ ಅಮ್ಮಣ್ಣಾಯ ಹೇಳಿದರು.

ಕಿದಿಯೂರು ಹೊಟೇಲ್‌ನ ಶೇಷಶಯನ ಹಾಲ್‌ನಲ್ಲಿ ಗುರುವಾರ ಜರಗಿದ ಸುಧಾಕರ ಆಚಾರ್ಯರ ಕಲಾರಾಧನೆಯ 34ನೇ ವರ್ಷದ ಸ್ವಾತಂತ್ರ್ಯೋತ್ಸವ ತಾಳಮದ್ದಳೆ ಆಚರಣೆಯಲ್ಲಿ ನಿರಂತರ 25 ವರ್ಷ ಭಾಗವತಿಕೆ ನಡೆಸಿಕೊಟ್ಟ ಅವರು ರಜತ ಗೌರವ ಸ್ವೀಕರಿಸಿ ಮಾತನಾಡಿದರು.

ಯಕ್ಷಗಾನದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ದೇವರ ಆಶೀರ್ವಾದ, ಕಲಾಭಿಮಾನಿಗಳ ಅಭಿಮಾನವೇ ಕಾರಣ. ಕಲಾ ಸರಸ್ವತಿಯನ್ನು ಆರಾಧಿಸುವುದು ನನ್ನ ಕರ್ತವ್ಯ ಎನ್ನುವ ನೆಲೆಯಲ್ಲಿ ನಿವೃತ್ತನಾದರೂ ಹಾಡುತ್ತಿದ್ದೇನೆ ಎಂದರು.

ಭಾರತೀಯ ಸಂಸ್ಕೃತಿ ಬಗ್ಗೆ ಇರುವ ಕಾಳಜಿ ನೆಲೆಯಲ್ಲಿ ಹಮ್ಮಿಕೊಂಡ ಈ ಕಾರ್ಯಕ್ರಮ ಅಭೂತಪೂರ್ವ. ಸ್ವರ ಮಾಧುìಯಕ್ಕೆ ರಾಗ ಸಂಯೋಜನೆಯೊಂದಿಗೆ ಲಯಬದ್ಧವಾಗಿ ಹಾಡಬಲ್ಲ ಮೇರು ಕಲಾವಿದ ಅಮ್ಮಣ್ಣಾಯರಲ್ಲಿರುವ ಕಲಾ ಪ್ರೌಢಿಮೆಯನ್ನು ಯುವ ಕಲಾವಿದರು ಅನುಸರಿಸಿ ಬೆಳೆಸಿದರೆ ಯಕ್ಷಗಾನ ಕಲೆ ಬೆಳಗಲಿದೆ ಎಂದು ಕಲಾ ವಿಮರ್ಶಕಿ ಪ್ರತಿಭಾ ಎಂ.ಎಲ್‌. ಸಾಮಗ ಅಭಿನಂದನ ಭಾಷಣ ಮಾಡಿದರು.

ಶ್ರೀ ಕ್ಷೇತ್ರ ಕಟೀಲಿನ ಅರ್ಚಕ ಶ್ರೀನಿವಾಸ ವೆಂಕಟರಮಣ ಆಸ್ರಣ್ಣ ಶುಭಾಶಂಸನೆಗೈದರು. ಅತಿಥಿಗಳಾಗಿ ಡಾ| ಸಾಯಿ ಗಣೇಶ್‌ ಶೆಟ್ಟಿ, ಡಾ| ಭವ್ಯಶ್ರೀ ಕಿದಿಯೂರು, ಡಾ| ಅಭಿನ್‌ ದೇವದಾಸ್‌ ಶ್ರೀಯಾನ್‌, ಸಮೃದ್ಧ್ ಪ್ರಕಾಶ್‌, ಕನಿಷ್‌R ಕಿಶನ್‌ ಹೆಗ್ಡೆ, ಸುಧಾ ದಿನೇಶ್‌ ಅಮ್ಮಣ್ಣಾಯ, ಸುಧಾಕರ ಆಚಾರ್ಯ, ಅಮಿತಾ ಸುಧಾಕರ ಆಚಾರ್ಯ, ಆಚಾರ್ಯ ಯಾಸ್ಕಾ, ಮೇದಿನಿ ಆಚಾರ್ಯ ಉಪಸ್ಥಿತರಿದ್ದರು.

ಪ್ರೊ| ಪವನ್‌ ಕಿರಣಕೆರೆ ಪ್ರಸ್ತಾವನೆಗೈದು, ಸುಧೀಂದ್ರ ಹಂದೆ ನಿರೂಪಿಸಿದರು. ಪ್ರಸಿದ್ಧ ಕಲಾವಿದರ ಕೂಡುವಿಕೆಯಲ್ಲಿ “ವೈಕುಂಠ ದರ್ಶನ’ ಯಕ್ಷಗಾನ ತಾಳಮದ್ದಳೆ ನಡೆಯಿತು.

ನಾದವೈಭವದ ಅನಾವರಣ
ಪ್ರೊ| ಪವನ್‌ ಕಿರಣಕೆರೆ ನಾದ ನಿರ್ದೇಶನದಲ್ಲಿ ವೃತ್ತಿಪರ-ಹವ್ಯಾಸಿ ವಲಯದ 6ನೇ ತರಗತಿಯ ವಿದ್ಯಾರ್ಥಿಗಳು, ಎಂಜಿನಿಯರ್‌, ವೈದ್ಯರನ್ನು ಒಳಗೊಂಡ 6 ತೆಂಕು, 6 ಬಡಗು, 6 ಮಹಿಳಾ ಭಾಗವತರೊಂದಿಗೆ 7 ಚೆಂಡೆ-ಮದ್ದಳೆ ವಾದಕರನ್ನು ಸೇರಿಸಿ 25 ಯುವ ಯಕ್ಷಾವತಾರಿಗಳ ಸಾಂಗತ್ಯದಲ್ಲಿ “ನಾದ ವೈಕುಂಠ’ ನೆರವೇರಿತು.

 

ಟಾಪ್ ನ್ಯೂಸ್

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ

1-congress

Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ

DKSHi-4

Siddaramaiah ನಮ್ಮ ನಾಯಕ, ಹೆಸರು ದುರ್ಬಳಕೆ ಮಾಡಿಕೊಳ್ಳುವ ಅಗತ್ಯವಿಲ್ಲ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

5

Kaup: ಶಿಲಾಮಯ ಗುಡಿಯ ಮೆರುಗು ಹೆಚ್ಚಿಸಿದ ಕಾರ್ಕಳ, ಸಿರಾದ ಕಲ್ಲು

4(1

Manipal: ನಮ್ಮ ಸಂತೆಯಲ್ಲಿ ಜನ ಸಾಗರ

Namma-SANTHE-1

Manipal: ನಮ್ಮ ಸಂತೆಗೆ ಎರಡನೇ ದಿನವೂ ಅಭೂತಪೂರ್ವ ಸ್ಪಂದನೆ: ಇಂದೇ ಕೊನೆಯ ದಿನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

1-neyge-1

Udayavani-MIC ನಮ್ಮ ಸಂತೆ:ಗಮನ ಸೆಳೆದ ನೇಯ್ಗೆ ಯಂತ್ರ

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.