4 ದಿನದೊಳಗೆ ರಾ.ಹೆ. ಕಾಮಗಾರಿ ವರದಿ ನೀಡಲು ಸೂಚನೆ


Team Udayavani, Feb 5, 2017, 3:45 AM IST

040217uk9a.jpg

ಉಡುಪಿ: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಟೋಲ್‌ ಸಂಗ್ರಹಕ್ಕೆ ಸಂಬಂಧಿಸಿದಂತೆ ಕಾಮಗಾರಿ ಶೇಕಡಾ 90ರಷ್ಟು ಮುಗಿದಿರುವ ಬಗ್ಗೆ ನಾಲ್ಕು ದಿನಗಳೊಳಗಾಗಿ ಪಿಡಬ್ಲ್ಯುಡಿ ಮತ್ತು ರಾಷ್ಟ್ರೀಯ ಹೆದ್ದಾರಿ ಇಲಾಖೆ ಎಂಜಿನಿಯರ್‌ಗಳು ಸಮೀಕ್ಷೆ ನಡೆಸಿ ವರದಿ ನೀಡಲು ಸಚಿವ ಪ್ರಮೋದ್‌ ಮಧ್ವರಾಜ್‌ ಸೂಚನೆ ನೀಡಿದರು.

ಅವರು ಶನಿವಾರ ಜಿಲ್ಲೆಯಲ್ಲಿ ಟೋಲ್‌ ಜಾರಿ ಸಂಬಂಧ ನಡೆಯುತ್ತಿರುವ ಪ್ರತಿಭಟನೆಗಳ ಹಿನ್ನಲೆಯಲ್ಲಿ ಸ್ಥಳೀಯ ಶಾಸಕರು, ಜನಪ್ರತಿನಿಧಿಗಳು ಮತ್ತು ವಿವಿಧ ಮುಖಂಡರು, ಬಸ್‌ ಮಾಲಕರು, ಟ್ಯಾಕ್ಸಿ ಮಾಲಕರ ಸಭೆಯನ್ನು ನಡೆಸಿದರು.
ಟೋಲ್‌ ಜಾರಿ ಬಗ್ಗೆ ಕೇಂದ್ರ ಸರಕಾರದಿಂದ ಅನುಮತಿ ದೊರೆತಿದ್ದು, ಕಾಮಗಾರಿ ಸಂಪೂರ್ಣಗೊಂಡ ವರದಿಯ ಬಗ್ಗೆ ಸಭೆಯಲ್ಲಿ ಅಪಸ್ವರ ಕೇಳಿಬಂತು. ಕಾನೂನು ಮತ್ತು ಒಪ್ಪಂದ ಬಗ್ಗೆ ಸವಿವರ ಚರ್ಚೆ ಸಭೆಯಲ್ಲಿ ನಡೆಯಿತು ಎಂದು ಪ್ರಕಟನೆ ತಿಳಿಸಿದೆ.

ಸರ್ವೀಸ್‌ ರೋಡ್‌ ಜೂನ್‌ನೊಳಗೆ ಸಂಪೂರ್ಣಗೊಳ್ಳಲಿದ್ದು, ಸರ್ವೀಸ್‌ ರೋಡ್‌ ಮುಗಿದ ಬಳಿಕವೇ ಟೋಲ್‌ ಹಾಕಬೇಕೆಂದು ಯಾವುದೇ ಕಾನೂನಿಲ್ಲ, ಚತುಷ#ಥ ಕಾಮಗಾರಿ ಶೇ. 90 ಕಾಮಗಾರಿ ಪೂರ್ಣಗೊಂಡಿದೆ ಎಂದು ರಾ.ಹೆ. ಅಧಿಕಾರಿ ವಿಜಯ್‌ ಸ್ಯಾಮ್ಸ್‌ನ್‌ ಸಚಿವರ ಪ್ರಶ್ನೆಗೆ ಉತ್ತರಿಸಿದರು.

ಮಾಜಿ ಸಂಸದ ಜಯಪ್ರಕಾಶ್‌ ಹೆಗ್ಡೆ ಮಾತನಾಡಿ, ಸರ್ವೀಸ್‌ ರೋಡ್‌ ಸೇರಿದಂತೆ ಮೂಲ ಸೌಕರ್ಯಗಳನ್ನು ನೀಡದೆ, ಅತಿ ಹೆಚ್ಚು ಅವಘಡಗಳಿಗೆ ಕಾರಣವಾಗುತ್ತಿರುವ ಕಾಮಗಾರಿಗಳ ಬಗ್ಗೆ ಸಚಿವರ ಗಮನಸೆಳೆದರು. ಅದರಲ್ಲೂ ಮುಖ್ಯವಾಗಿ ಸಾಸ್ತಾನದಲ್ಲಿ ರಾಂಗ್‌ ಸೈಡ್‌ ಡ್ರೆ„ವಿಂಗ್‌ನಿಂದ ಅಪಘಾತಗಳು ಹೆಚ್ಚಿವೆ ಎಂದರು.

ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಮಾತನಾಡಿ, ಕುಂದಾಪುರದಿಂದ ಮಂಗಳೂರುವರೆಗೆ ಟಾಯ್ಲೆಟ್‌ ಇಲ್ಲ, ಭೂಸ್ವಾಧೀನ ಮಾಡಿ ಜಾಗಕೊಡಿ. ಹೆಜಮಾಡಿ, ಸುರತ್ಕಲ್‌ನಲ್ಲಿ ಟೋಲ್‌ಗ‌ಳು ಬರೀ 12ರಿಂದ 15 ಕಿ.ಮೀ ಇದ್ದು ಜನರಿಗೆ ಟೋಲ್‌ ನೀಡುವ ಹೊಣೆ ಅಕ್ಷಮ್ಯ ಎಂದರು.

ಟೋಲ್‌ ಸಂಗ್ರಹ ಬಗ್ಗೆ ಇನ್ನಷ್ಟು ಸ್ಪಷ್ಟ ಮಾಹಿತಿ ಬೇಕಿದೆ. ಸಾಸ್ತಾನ, ಬ್ರಹ್ಮಾವರದಲ್ಲಿನ ಜನರು ದೈನಂದಿನ ಕಾರ್ಯಗಳಿಗೆ ತೊಂದರೆಯಾಗುತ್ತಿರುವ ಬಗ್ಗೆ ಜಿ.ಪಂ. ಸದಸ್ಯೆ ಶಿಲ್ಪಾ$ಸುವರ್ಣಾ ಅವರು ಉಚ್ಚಿಲದಲ್ಲಿ ಎದುರಿಸುತ್ತಿರುವ ಸಮಸ್ಯೆ ಬಗ್ಗೆ ಗಮನಸೆಳೆದರು.

ಕಾಪು ದಿವಾಕರ ಶೆಟ್ಟಿ ಅವರು ಮಾತನಾಡಿ, ಮಾಹಿತಿ ಹಕ್ಕಿನಿಂದ ಪಡೆದ ಮಾಹಿತಿಯ ಪ್ರಕಾರ ಸುಳ್ಳು ಮಾಹಿತಿ ನೀಡಲಾಗಿದೆ ಎಂದು ಆರೋಪಿಸಿದರು. ಸರ್ವೀಸ್‌ ರೋಡ್‌ ಇಲ್ಲ. ನಮ್ಮ ಕೆಲಸ ಮಾಡಿ ನೀವು ಟೋಲ್‌ ಹಾಕಿ ಎಂದರು.

ಸಹಾಯಕ ಆಯುಕ್ತೆ ಶಿಲ್ಪಾ$ನಾಗ್‌ ಅವರು ಮಾಹಿತಿ ನೀಡಿ, ಹೆದ್ದಾರಿ ಕಾಮಗಾರಿಗೆ ಜಾಗ ಕೊಟ್ಟಿದ್ದು ಜಾಗದ ಸಮಸ್ಯೆ ಇಲ್ಲ ಎಂದರು. ಸಾಸ್ತಾನದ ಸಾರ್ವಜನಿಕರು ತಾವು ಯಾವುದೇ ಕಾರಣಕ್ಕೂ ಟೋಲ್‌ ನೀಡುವುದಿಲ್ಲ ಎಂದು ಪುನರುಚ್ಚರಿಸಿದರು. ವಸತಿ ಪ್ರದೇಶಕ್ಕಿಂತ ಮೇಲೆ ಡ್ರೆ„ನೆಜ್‌ ಇದ್ದು, ಸ್ಥಳೀಯ ಜನರಿಗೆ ತೊಂದರೆ ಇದೆ. ಸರ್ವೀಸ್‌ ರೋಡ್‌, ಬಸ್‌ ಬೇ, ಲಾರಿ ಬೇ ಆಗದೆ ಟೋಲ್‌ ಸಂಗ್ರಹ ಮಾಡಬಾರದು ಎಂದು ನಾಗರೀಕರು ಒತ್ತಾಯಿಸಿದರು.

ಕೇಂದ್ರ ಸರಕಾರದ ನೀತಿಯನ್ನು ಬದಲಾಯಿಸಲು ಜಿಲ್ಲಾಡಳಿತಕ್ಕೆ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್‌ ಸ್ಪಷ್ಟಪಡಿಸಿದರು.

ಕಳೆದ ಸೆಪ್ಟೆಂಬರ್‌ನಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ತೆಗೆದುಕೊಂಡ ನಿರ್ಧಾರಗಳನ್ನು ಅನುಷ್ಠಾನಕ್ಕೆ ತರಲು ಎನ್‌ ಎಚ್‌ ಅಧಿಕಾರಿಗಳಿಗೆ ಸಚಿವರು ಸೂಚಿಸಿದರು. 

ಕಾಮಗಾರಿಗಳಿಂದಾಗಿ ಸಂಭವಿಸಿದ ಅಪಘಾತಗಳ ಬಗ್ಗೆ ಮಾಹಿತಿ ನೀಡಲು ಪೊಲೀಸ್‌ ಇಲಾಖೆಯಿಂದ ಸಚಿವರು ವರದಿ ಕೇಳಿದರು. ಅಪಘಾತಗಳನ್ನು ನಿವಾರಿಸಲು, ರಸ್ತೆ ಸುರಕ್ಷತೆಗೆ ಎನ್‌ಎಚ್‌ ಕೈಗೊಂಡ ಕ್ರಮಗಳೇನು ಎಂದು ಕೇಳಿದರು.

ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಯಕರ ಸುವರ್ಣ ಮಾತನಾಡಿದರು. ಜಿಲ್ಲಾಡಳಿತಕ್ಕೆ ಜನರ ಹಿತರಕ್ಷಣೆ ಹೊಣೆ ಇದ್ದು, ಜನಪ್ರತಿನಿಧಿಗಳು, ಜನರು ಟೋಲ್‌ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದು ಕಾಮಗಾರಿಗಳನ್ನು ಸಂಪೂರ್ಣಗೊಳಿಸಿ ಎಂದು ಸಚಿವರು ನಿರ್ದೇಶಿಸಿದರು. ಅಪರ ಜಿಲ್ಲಾಧಿಕಾರಿ ಅನುರಾಧ ಉಪಸ್ಥಿತರಿದ್ದರು. ಡಿವೈಎಸ್‌ಪಿ ಕುಮಾರಸ್ವಾಮಿ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್‌ ಚಂದ್ರಶೇಖರ್‌ ಇದ್ದರು.

ಟಾಪ್ ನ್ಯೂಸ್

ಕಿತ್ತೂರಿಗೂ ಕಲ್ಯಾಣ ಕರ್ನಾಟಕ ಸ್ಥಾನ ನೀಡಿ: ಶಾಸಕರ ಆಗ್ರಹ

ಕಿತ್ತೂರಿಗೂ ಕಲ್ಯಾಣ ಕರ್ನಾಟಕ ಸ್ಥಾನ ನೀಡಿ: ಶಾಸಕರ ಆಗ್ರಹ

voter

One Nation One Election ;ಇಂದು ಲೋಕಸಭೆಯಲ್ಲಿ ಮಸೂದೆ ಮಂಡನೆ?

BJP: ಬಿವೈವಿ ವಿರುದ್ಧ ಬಣ ರಾಜಕೀಯ ಇನ್ನೂ ತೀವ್ರ?

BJP: ಬಿವೈವಿ ವಿರುದ್ಧ ಬಣ ರಾಜಕೀಯ ಇನ್ನೂ ತೀವ್ರ?

1-sssk

Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್‌!

ವಕ್ಫ್ ಆಸ್ತಿ ಬಗ್ಗೆ ಸರ್ಕಾರದ ನಿಲುವು ದ್ವಂದ್ವಮಯ: ಸಿ.ಟಿ. ರವಿ

ವಕ್ಫ್ ಆಸ್ತಿ ಬಗ್ಗೆ ಸರ್ಕಾರದ ನಿಲುವು ದ್ವಂದ್ವಮಯ: ಸಿ.ಟಿ. ರವಿ

Budget: Rs 5318 crore. Presentation of supplementary estimates

Budget: 5,318 ಕೋಟಿ ರೂ. ಪೂರಕ ಅಂದಾಜು ಮಂಡನೆ

Nandikoor-Kasaragod ವಿದ್ಯುತ್‌ ಲೈನ್‌ ರಾಜ್ಯ ಸರಕಾರದ ವ್ಯಾಪ್ತಿಗೆ ಬರುವುದಿಲ್ಲ: ಜಾರ್ಜ್‌

Nandikoor-Kasaragod ವಿದ್ಯುತ್‌ ಲೈನ್‌ ರಾಜ್ಯ ಸರಕಾರದ ವ್ಯಾಪ್ತಿಗೆ ಬರುವುದಿಲ್ಲ: ಜಾರ್ಜ್‌


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Arrest

Karkala: ಹೋಂ ನರ್ಸ್‌ 9 ಲಕ್ಷ ರೂ. ವಂಚನೆಗೈದ ಪ್ರಕರಣ: ಮುಂಬಯಿಯಲ್ಲಿ ಇಬ್ಬರು ಆರೋಪಿಗಳ ಸೆರೆ

UV-Deepavali

Manipal: ‘ಉದಯವಾಣಿ’ ಸದಭಿರುಚಿಯ ಓದುಗರ ಸೃಷ್ಟಿಸಿದೆ: ಜಯಪ್ರಕಾಶ್‌

Ramesh-Kanchan1

Highway: ಅಂಬಲಪಾಡಿ ಅಂಡರ್‌ಪಾಸ್‌: ಗೊಂದಲ ನಿವಾರಣೆಗೆ ರಮೇಶ್‌ ಕಾಂಚನ್‌ ಆಗ್ರಹ

Udupi: ಗೀತಾರ್ಥ ಚಿಂತನೆ-126: ವಾರ್ಧಕ್ಯಕ್ಕಾಗಿ ದುಃಖವಲ್ಲ, ಸಾಧನಾಚ್ಯುತಿಗಾಗಿ…

Udupi: ಗೀತಾರ್ಥ ಚಿಂತನೆ-126: ವಾರ್ಧಕ್ಯಕ್ಕಾಗಿ ದುಃಖವಲ್ಲ, ಸಾಧನಾಚ್ಯುತಿಗಾಗಿ…

Vishwanath-Rao

Kaup: ಸಹಕಾರಿ ಧುರೀಣ ಬಾಲಂ ವಿಶ್ವನಾಥ್ ರಾವ್ ಪಣಿಯೂರು ನಿಧನ

MUST WATCH

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

udayavani youtube

ಮನೆ ತೊರೆದಿದ್ದ ವ್ಯಕ್ತಿ 14 ವರ್ಷಗಳ ಬಳಿಕ ಮರಳಿ ಗೂಡಿಗೆ.

udayavani youtube

ಅಯ್ಯಪ್ಪ ಸ್ವಾಮಿ ಪವಾಡ | ಮಾತು ಬಾರದ ಬಾಲಕನಿಗೆ ಮಾತು ಬಂತು!

udayavani youtube

CCTV Footage | Udupi; ಹೆದ್ದಾರಿಯಲ್ಲೇ ಶರವೇಗದಲ್ಲಿ ಬಂದು ಅಪ್ಪಳಿಸಿದ ಕಾರು.

ಹೊಸ ಸೇರ್ಪಡೆ

ಕಿತ್ತೂರಿಗೂ ಕಲ್ಯಾಣ ಕರ್ನಾಟಕ ಸ್ಥಾನ ನೀಡಿ: ಶಾಸಕರ ಆಗ್ರಹ

ಕಿತ್ತೂರಿಗೂ ಕಲ್ಯಾಣ ಕರ್ನಾಟಕ ಸ್ಥಾನ ನೀಡಿ: ಶಾಸಕರ ಆಗ್ರಹ

voter

One Nation One Election ;ಇಂದು ಲೋಕಸಭೆಯಲ್ಲಿ ಮಸೂದೆ ಮಂಡನೆ?

BJP: ಬಿವೈವಿ ವಿರುದ್ಧ ಬಣ ರಾಜಕೀಯ ಇನ್ನೂ ತೀವ್ರ?

BJP: ಬಿವೈವಿ ವಿರುದ್ಧ ಬಣ ರಾಜಕೀಯ ಇನ್ನೂ ತೀವ್ರ?

1-sssk

Kidnap ಬಲೆಯಿಂದ ಸ್ವಲ್ಪದರಲ್ಲೇ ಪಾರಾದ ನಟ ಶಕ್ತಿ ಕಪೂರ್‌!

ವಕ್ಫ್ ಆಸ್ತಿ ಬಗ್ಗೆ ಸರ್ಕಾರದ ನಿಲುವು ದ್ವಂದ್ವಮಯ: ಸಿ.ಟಿ. ರವಿ

ವಕ್ಫ್ ಆಸ್ತಿ ಬಗ್ಗೆ ಸರ್ಕಾರದ ನಿಲುವು ದ್ವಂದ್ವಮಯ: ಸಿ.ಟಿ. ರವಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.