ಎಪಿಎಂಸಿ ಯಲ್ಲಿ 4 ನೂತನ ಗೋದಾಮು ಕೊಠಡಿ
Team Udayavani, Jul 1, 2019, 5:37 AM IST
ಉಡುಪಿ: ಉತ್ಪನ್ನ ಮಾರಾಟಗಾರರಿಗೆ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆದಿಉಡುಪಿಯಲ್ಲಿರುವ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ನೂತನವಾಗಿ 4 ಸುಸಜ್ಜಿತ ಗೋದಾಮುಗಳನ್ನು ನಿರ್ಮಿಸಲಾಗಿದೆ. ಈಗಾಗಲೆ ಮಾರುಕಟ್ಟೆ ಜಾಗದಲ್ಲಿ 30 ಗೋದಾಮುಗಳಿದ್ದು, ಎಲ್ಲವೂ ಬಳಕೆಯಲ್ಲಿವೆ. ಇಲ್ಲಿ ಹೆಚ್ಚುವರಿ ಗೋದಾಮುಗಳ ಬೇಡಿಕೆ ಇದ್ದ ಹಿನ್ನೆಲೆ ಯಲ್ಲಿ 86 ಲಕ್ಷ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ.
ಇಲಿಗಳ ಸಮಸ್ಯೆ ಇಲ್ಲ
ನಾಲ್ಕು ಗೋದಾಮುಗಳು 1,350 ಚದರ ಅಡಿ ಹೊಂದಿದ್ದು, 150 ಮೆಟ್ರಿಕ್ ಟನ್ ಸಾಮಥ್ಯ ಹೊಂದಿದೆ. ಮೇಲ್ಭಾಗದಲ್ಲಿ ಶೀಟ್ ಅಳವಡಿಸಲಾಗಿದೆ. ಇಲಿ, ಹೆಗ್ಗಣ, ಹಾವುಗಳು ಗೋದಾಮಿಗೆ ಬಾರದ ರೀತಿಯಲ್ಲಿ ಗೋದಾಮು ಸುತ್ತಲೂ ರ್ಯಾಟ್ ಪ್ರೂಫ್ ವ್ಯವಸ್ಥೆ ಮಾಡಲಾಗಿದೆ.
ವೈಜ್ಞಾನಿಕ ಗೋದಾಮು
ಎಪಿಎಂಸಿಯಲ್ಲಿ ಈಗಾಗಲೆ 30 ಗೋದಾಮುಗಳಿದ್ದು, ದಿನಸಿ ಪದಾರ್ಥಗಳು, ಹಣ್ಣು, ತರಕಾರಿ ಸಂಗ್ರಹಿಸಿ ಇಡಲು ಅನುಕೂಲವಾಗಿವೆ. ಒಂದು ತಿಂಗಳ ಹಿಂದೆ 1.10 ಕೋಟಿ ರೂ., ವೆಚ್ಚದಲ್ಲಿ ಹಣ್ಣು, ತರಕಾರಿ, ದಿನಸಿ ಪದಾರ್ಥಗಳು ಕೆಡದಂತೆ ವೈಜ್ಞಾನಿಕ ಗೋದಾಮು ಸಹ ನಿರ್ಮಿಸಲಾಗಿದೆ. 30 ಲಕ್ಷ ರೂ. ಮತ್ತು 13 ಲಕ್ಷ ರೂ., ವೆಚ್ಚದಲ್ಲಿ ಇತ್ತೀಚೆಗೆ ಮುಚ್ಚು ಹರಾಜು ಕಟ್ಟೆಯನ್ನು ನಿರ್ಮಿಸಲಾಗಿದೆ.
ಆದಾಯ ವೃದ್ಧಿ
ಎಪಿಎಂಸಿ ಮಾರುಕಟ್ಟೆಯಲ್ಲಿ ಶುಲ್ಕದಿಂದ ಬರುವ ಆದಾಯದಲ್ಲಿ ಸಾಕಷ್ಟು ಹೆಚ್ಚಳವಾಗಿದೆ. 2015ಕ್ಕಿಂತ ಮೊದಲು ಎಪಿಎಂಸಿ ಆದಾಯ 1 ಕೋಟಿ ರೂ., ಮೀರಿರಲಿಲ್ಲ. 2015ರ ಬಳಿಕ ವಾರ್ಷಿಕ 2.5 ಕೋಟಿ ರೂ. ಆದಾಯ ಎಪಿಎಂಸಿಗೆ ಬರುತ್ತಿದೆ. ಗೋದಾಮುಗಳ ಶುಲ್ಕ ಮಾಸಿಕ, ಮಾರುಕಟ್ಟೆ ವ್ಯಪಾರಸ್ಥರಿಂದ ಪ್ರತೀವಾರ ಶುಲ್ಕ ಸಂಗ್ರಹವಾಗುತ್ತದೆ.
-ಕೆ.ಶ್ಯಾಮ ಪ್ರಸಾದ್ ಭಟ್, ಎಪಿಎಂಸಿ ಅಧ್ಯಕ್ಷ
-ರಾಮಚಂದ್ರ ಕೆ.ನಾಯ್ಕ, ಎಪಿಎಂಸಿ ಸಹಾಯಕ ನಿರ್ದೇಶಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Fraud: ಸಿಬಿಐ ಹೆಸರಲ್ಲಿ ಕಾರ್ಕಳದ ಮಹಿಳೆಗೆ 24 ಲಕ್ಷ ರೂ. ವಂಚನೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.