ಬೆಂಗಳೂರಿನಿಂದ ಕೋಣಿಗೆ 40 ಗಂಟೆ ಸೈಕಲ್ ಸವಾರಿ
Team Udayavani, Feb 15, 2020, 6:54 AM IST
ಕುಂದಾಪುರ: ತಾಲೂಕಿನ ಕೋಣಿ ಗ್ರಾಮದ ಎಂಜಿನಿಯರಿಂಗ್ ಪದವೀಧರ ಪ್ರಮೋದ್ ಪೂಜಾರಿ ಅವರು ಬೆಂಗಳೂರಿನಿಂದ ಕುಂದಾಪುರದ ಕೋಣಿಗೆ 414 ಕಿ.ಮೀ. ದೂರವನ್ನು 39.32 ಗಂಟೆಯಲ್ಲಿ ಸೈಕಲ್‌ನಲ್ಲಿ ಪ್ರಯಾಣಿಸಿದ್ದಾರೆ.
4 ವರ್ಷದ ಕನಸು
ಪ್ರಮೋದ್‌ಗೆ ಈ ಯೋಚನೆ ಏಕಾಏಕಿ ಬಂದುದಲ್ಲ. ಸರಿ ಸುಮಾರು ನಾಲ್ಕು ವರ್ಷದ ಆ ಸೈಕ್ಲಿಂಗ್ ರೇಸಿನ ಸಾಧನೆಯ ಹಾದಿಯಲ್ಲಿ ಕುಂದಾಪುರಕ್ಕೆ ಹೋಗುವ ಬಗ್ಗೆ ಯೋಚಿಸುತ್ತಲೇ ಇದ್ದರು. ಆ ನಾಲ್ಕು ವರುಷ ಪರಿಪೂರ್ಣವಾಗಿ ಸೈಕ್ಲಿಂಗ್ ಬಗ್ಗೆ ತಿಳಿದುಕೊಂಡರು. ತಂಡದ ಸದಸ್ಯರಲ್ಲಿ ಕುಂದಾಪುರ ಪ್ರಯಾಣ ಕುರಿತು ಹೇಳಿದಾಗ ಆಸೆಯನ್ನು ಬೆಂಬಲಿಸಿದ್ದರು. ಆದರೆ ಕೆಲವು ಕಾರಣಗಳಿಂದ ಅವರಿಗೆ ಜತೆಯಾಗಲು ಸಾಧ್ಯವಾಗಲಿಲ್ಲ.
ಪ್ರಯಾಣ
ಬೆಂಗಳೂರಿನಿಂದ ಬೆಳಗ್ಗೆ 3.30 ಗಂಟೆಗೆ ಪ್ರಮೋದ್ ಸೈಕ್ಲಿಂಗ್‌ಗೆ ಚಾಲನೆ ನೀಡಿದ್ದು ಬಳಿಕ ಎರಡು ಬಾರಿ ಪಂಕ್ಚರ್ ಆದರೂ ಮನಸ್ಸು ಬದಲಾಯಿಸದೆ ಯಾನ ಮುಂದುವರಿಸಿದ್ದಾರೆ. ಮೊದಲ ದಿನ 250 ಕಿ.ಮೀ. ಪೂರ್ಣ
ಗೊಳಿಸಿ ಚಿಕ್ಕಮಗಳೂರಿನಲ್ಲಿ ಉಳಿದು ಕೊಂಡಿದ್ದು ಮರುದಿನ ಬೆಳಗ್ಗೆ ಬೆಳಗ್ಗೆ 7.30ಕ್ಕೆ ಪ್ರಯಾಣ ಶುರು ಮಾಡಿ ಕುಂದಾಪುರಕ್ಕೆ ಸಾಯಂಕಾಲ ಏಳು ಗಂಟೆಗೆ ತಲುಪಿದ್ದಾರೆ. 39 ಗಂಟೆಯಲ್ಲಿ ಸುಮಾರು 25 ಗಂಟೆಗೂ ಅಧಿಕ ಅವರು ಸೈಕಲ್ ತುಳಿದಿದ್ದಾರೆ.
ನಿರಂತರ ಅಭ್ಯಾಸ
ಸೈಕಲ್ ರೇಸಿಂಗ್ ಆಸಕ್ತಿ ಹೊಂದಿದ್ದ ಪ್ರಮೋದ್ ಅವರು ಬೆಂಗಳೂರಿನಲ್ಲಿ ಸೈಕ್ಲಿಂಗ್ ಗುಂಪೊಂದರಿಂದ ಆಸಕ್ತಿ ಪ್ರೇರಣೆ ಪಡೆದಿದ್ದು ಬಳಿಕ ರೇಸ್ ಒಂದರಲ್ಲಿ ಕಮಲ್ ಎಂಬವರು ಪ್ರೋತ್ಸಾಹ ನೀಡಿದ್ದರು. ಸೆಕೆಂಡ್ ಹ್ಯಾಂಡ್ ಸೈಕಲ್‌ನೊಂದಿಗೆ 50, 100 ಕಿ.ಮೀ. ರೇಸಿಂಗ್‌ನಲ್ಲಿ ಅವರು ಭಾಗಿಯಾಗಿದ್ದು ಅಭ್ಯಾಸ ನಿರಂತರ ವಾಗಿತ್ತು. ಇದೇ ಸಂದರ್ಭ ಕುಂದಾಪುರಕ್ಕೆ ಹೋಗುವ
ಕನಸು ಮೊಳಕೆಯೊಡೆದಿದ್ದು, ಅದನ್ನೀಗ ನನಸಾಗಿಸಿ ಕೊಂಡಿದ್ದಾರೆ.
ಸಾಧನೆಯೇನಲ್ಲ
ನನ್ನದೇನು ಸಾಧನೆಯಲ್ಲ ನನ್ನದೊಂದು ಚಿಕ್ಕ ಸೇವೆ. ಸೈಕಲ್ ರೇಸಿಂಗ್ ಕಲಿಸಿಕೊಟ್ಟ ಗುರುಗಳಾದ ಕಮಲ್, ಪ್ರಕಾಶ್ , ಸೈಕ್ಲಿಂಗ್ ತಂಡದ ಸದಸ್ಯರು, ವರ್ಲ್x ಕುಂದಾಪುರಿಯನ್ ತಂಡದ ಸದಸ್ಯರಿಗೂ ಧನ್ಯವಾದ ಅರ್ಪಿಸುತ್ತೇನೆ.
-ಪ್ರಮೋದ್ ಪೂಜಾರಿ, ಕೋಣಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Sudeep: ʼಮ್ಯಾಕ್ಸ್ʼ ರಿಲೀಸ್ ದಿನ ಫಿಕ್ಸ್: ಕಿಚ್ಚನ ಸಿಟ್ಟಿಗೆ ಎಚ್ಚೆತ್ತ ನಿರ್ಮಾಣ ಸಂಸ್ಥೆ
Bidar: ಭಾರತದಿಂದಲೇ ವಕ್ಫ್ ತೊಲಗಿಸಬೇಕು: ಯತ್ನಾಳ್
Veerendra Heggade: ಡಾ.ಡಿ.ವೀರೇಂದ್ರ ಹೆಗ್ಗಡೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ ಪ್ರಶಸ್ತಿ
Sambhal Case Follow Up:ಹೊರಗಿನವರಿಗೆ ಸಂಭಾಲ್ ಪ್ರವೇಶಕ್ಕೆ ನಿರ್ಬಂಧ,ಜಲ್ಲಿ ಮಾರಾಟ ನಿಷೇಧ
Kannappa Movie: ವಿಷ್ಣು ಮಂಚು ʼಕಣ್ಣಪ್ಪʼ ರಿಲೀಸ್‌ಗೆ ಡೇಟ್ ಫಿಕ್ಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.