ಕಾಪು: 40 ಪವನ್ ಚಿನ್ನಾಭರಣವಿದ್ದ ಬ್ಯಾಗ್ ಮರಳಿಸಿ ಪ್ರಾಮಾಣಿಕತೆ
Team Udayavani, Jun 12, 2022, 1:28 AM IST
ಕಾಪು: ಕಟಪಾಡಿ – ಶಿರ್ವ ನಡುವಿನ ಚೊಕ್ಕಾಡಿ ರೈಲ್ವೇ ಸೇತುವೆ ಬಳಿ ಸಿಕ್ಕಿದ 40 ಪವನ್ ತೂಕದ ಚಿನ್ನಾಭರಣವಿದ್ದ ಬ್ಯಾಗನ್ನು ಅದರ ವಾರೀಸುದಾರರಿಗೆ ಮರಳಿಸಿದ ಶಂಕರಪುರದ ಉದ್ಯಮಿ ಕೆನ್ಯೂಟ್ ಮೋನಿಸ್ ಪ್ರಾಮಾಣಿಕತೆ ಮೆರೆದರಲ್ಲದೇ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಶಿರ್ವಕ್ಕೆ ರಿಕ್ಷಾದಲ್ಲಿ ತೆರಳುತ್ತಿದ್ದ ಅನ್ಸಿರಾ ಬಾನು ಅವರ ಚಿನ್ನಾಭರಣವಿದ್ದ ಬ್ಯಾಗ್ ರೈಲ್ವೇ ಸೇತುವೆ ಬಳಿ ಕಳೆದು ಹೋಗಿತ್ತು. ಕೆನ್ಯೂಟ್ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ರೈಲ್ವೇ ಸೇತುವೆಯ ಬಳಿ ಸಿಕ್ಕಿದ ಬ್ಯಾಗ್‌ಅನ್ನು ಪರಿಶೀಲಿಸಿದಾಗ ಚಿನ್ನಾಭರಣಗಳಿರುವುದು ಪತ್ತೆಯಾಗಿತ್ತು. ಅವರು ಅದನ್ನು ಕಟಪಾಡಿ ಹೊರಠಾಣೆಗೆ ಮುಟ್ಟಿಸಿದ್ದರು.
ಇದೇ ವೇಳೆ ಚಿನ್ನಾಭರಣವಿದ್ದ ಬ್ಯಾಗ್ ಕಳೆದುಕೊಂಡಿದ್ದ ಅನ್ಸಿರಾ ಬಾನು ಮರಳಿ ಕಟಪಾಡಿಗೆ ಬಂದು ರಿಕ್ಷಾ ನಿಲ್ದಾಣದಲ್ಲಿ ವಿಚಾರಿಸುತ್ತಿದ್ದರು. ಅವರು ಮತ್ತು ಪೊಲೀಸರಿಗೆ ಚಿನ್ನದ ಬ್ಯಾಗ್ ಸಿಕ್ಕಿರುವ ಘಟನೆ ಕೂಡ ಒಂದೇ ಸಮಯದಲ್ಲಿ ನಡೆದ ಕಾರಣ ಪೊಲೀಸರು ಮಹಿಳೆಯನ್ನು ಠಾಣೆಗೆ ಕರೆಯಿಸಿ ಬ್ಯಾಗ್ ಬಗ್ಗೆ ಮಾಹಿತಿ ಪಡೆದರು. ಮಹಿಳೆ ನೀಡಿದ ಮಾಹಿತಿ ಮತ್ತು ಬ್ಯಾಗ್‌ನಲ್ಲಿದ್ದ ವಸ್ತುಗಳು ಪರಸ್ಪರ ತಾಳೆಯಾಗಿದ್ದರಿಂದ ಪೊಲೀಸರು ಚಿನ್ನಾಭರಣವನ್ನು ಕೆನ್ಯೂಟ್ ಮೋನಿಸ್ ಅವರ ಉಪಸ್ಥಿತಿಯಲ್ಲಿ ಮಹಿಳೆಯ ಸಂಬಂಧಿಕರಿಗೆ ಗೆ ಮರಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Online Fraud: ಸುರಕ್ಷೆಗೆ ಹೀಗೆ ಮಾಡಿ: ಸದಾ ಜಾಗರೂಕರಾಗಿರಿ
Ajekar: ಬಾಲಕೃಷ್ಣ ಪೂಜಾರಿ ಪ್ರಕರಣ: ಮರಣೋತ್ತರ ಪರೀಕ್ಷೆಯಲ್ಲಿ ಉಸಿರುಗಟ್ಟಿ ಸಾವು ಉಲ್ಲೇಖ
Udupi-Dakshina Kannada: ಕರ್ನಾಟಕ ಜಾನಪದ ಪ್ರಶಸ್ತಿ ಪ್ರಕಟ
ಮೀನುಗಾರಿಕೆ ಬಂದರುಗಳ ಕಾಮಗಾರಿ ಶೀಘ್ರ ಆರಂಭಿಸಿ: ಅಧಿಕಾರಿಗಳ ಸಭೆಯಲ್ಲಿ ಕೋಟ ಸೂಚನೆ
Udupi: ಗೀತಾರ್ಥ ಚಿಂತನೆ-84: ಮಧುವಾದದ್ದನ್ನು ನಾಶಪಡಿಸುವವ ಮಧುಸೂದನ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.