ಉಡುಪಿ ಜಿಲ್ಲೆ: 41 ಪಾಸಿಟಿವ್ ಪ್ರಕರಣ ; ದಾವಣಗೆರೆ ವ್ಯಕ್ತಿ ಸಾವು
Team Udayavani, Jul 13, 2020, 6:00 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಉಡುಪಿ: ಉಡುಪಿ ಜಿಲ್ಲೆಯಲ್ಲಿ ರವಿವಾರ 573 ಕೋವಿಡ್ 19 ನೆಗೆಟಿವ್ ಮತ್ತು 41 ಪಾಸಿಟಿವ್ ಪ್ರಕರಣಗಳು ವರದಿಯಾಗಿವೆ. ಸೋಂಕಿತರ ಸಂಖ್ಯೆ 1,608ಕ್ಕೇರಿದೆ.
ಸೋಂಕಿತರ ಪೈಕಿ 26 ಮಂದಿ ಉಡುಪಿ ತಾಲೂಕಿನವರು, 11 ಮಂದಿ ಕುಂದಾಪುರ ತಾಲೂಕಿನವರು, ನಾಲ್ವರು ಕಾರ್ಕಳ ತಾಲೂಕಿನವರು.
ಅವರಲ್ಲಿ ಇಬ್ಬರು ಮುಂಬಯಿಯಿಂದ, ಒಬ್ಬರು ಸೌದಿ ಅರೇಬಿಯಾದಿಂದ, ಆರು ಮಂದಿ ಇತರ ಜಿಲ್ಲೆಗಳಿಂದ ಬಂದವರು.
32 ಜನರು ಕೋವಿಡ್ 19 ಸೋಂಕಿತರ ಸಂಪರ್ಕಿತರು. 26 ಪುರುಷರು, 11 ಮಹಿಳೆಯರು, ನಾಲ್ವರು ಮಕ್ಕಳು. ರವಿವಾರ 28 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ.
1,856 ವರದಿ ಬಾಕಿ
ರವಿವಾರ 649 ಜನರ ಗಂಟಲ ದ್ರವ ಸಂಗ್ರಹಿಸಿದ್ದು ಇವರಲ್ಲಿ 115 ಮಂದಿ ಕೋವಿಡ್ 19 ಶಂಕಿತರು, 141 ಮಂದಿ ಕೋವಿಡ್ 19 ಸಂಪರ್ಕಿತರು, 51 ಮಂದಿ ಜ್ವರಪೀಡಿತರು, 342 ಮಂದಿ ಇತರ ಹಾಟ್‌ಸ್ಪಾಟ್‌ನಿಂದ ಬಂದವರು. 1,856 ಮಾದರಿಗಳ ವರದಿ ಬರಬೇಕಾಗಿದೆ.
1,273 ಜನರು ಗುಣಮುಖರಾಗಿ ಬಿಡುಗಡೆಗೊಂಡಿದ್ದು 332 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸ್ತುತ 1,304 ಜನರು ಮನೆಗಳಲ್ಲಿ ಮತ್ತು 140 ಮಂದಿ ಐಸೊಲೇಶನ್ ವಾರ್ಡ್‌ಗಳಲ್ಲಿ ಕ್ವಾರಂಟೈನ್‌ನಲ್ಲಿದ್ದಾರೆ. 22 ಮಂದಿ ಸೇರಿದ್ದು 19 ಮಂದಿ ಬಿಡುಗಡೆಗೊಂಡಿದ್ದಾರೆ.
ಹೆರ್ಗದಲ್ಲಿ 2, ಲಕ್ಷ್ಮೀಂದ್ರನಗರ, ಕರಂಬಳ್ಳಿ, ಬೈಲಕೆರೆ, ಮೂಡನಿಡಂಬೂರು, ಅಂಬಲಪಾಡಿ, 76 ಬಡಗಬೆಟ್ಟುವಿನಲ್ಲಿ ತಲಾ ಒಂದೊಂದು ಮನೆ, ಪುತ್ತೂರಿನಲ್ಲಿ ಒಂದು ಅಪಾರ್ಟ್‌ಮೆಂಟನ್ನು ಸೀಲ್‌ಡೌನ್ ಮಾಡಲಾಗಿದೆ.
ಬೈಂದೂರು, ಕುಂದಾಪುರ 12 ಮಂದಿಗೆ ಪಾಸಿಟಿವ್
ಬೈಂದೂರು ಮತ್ತು ಕುಂದಾಪುರ ತಾಲೂಕು ವ್ಯಾಪ್ತಿಯಲ್ಲಿ ತಲಾ 6ರಂತೆ ರವಿವಾರ ಒಟ್ಟು 12 ಮಂದಿಗೆ ಕೋವಿಡ್ 19 ಸೋಂಕು ದೃಢವಾಗಿದೆ.
ಕುಂದಾಪುರ ತಾಲೂಕಿನ ಸಿದ್ದಾಪುರ, ತ್ರಾಸಿ, ಕೋಟೇಶ್ವರ, ಬಸ್ರೂರು, ಚಿತ್ತೂರು ಹಾಗೂ ಕಾವ್ರಾಡಿ ಗ್ರಾಮದಲ್ಲಿ ತಲಾ ಒಬ್ಬರಿಗೆ ಪಾಸಿಟಿವ್ ಬಂದಿದೆ. ಮನೆಯವರೆಲ್ಲರನ್ನೂ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.
ಬೈಂದೂರು ತಾಲೂಕಿನ ಉಪ್ಪುಂದದಲ್ಲಿ ಇಬ್ಬರಿಗೆ, ತಗ್ಗರ್ಸೆ, ಬೈಂದೂರು, ಬಡಾಕೆರೆ ಹಾಗೂ ಕಂಬದಕೋಣೆಯ ತಲಾ ಒಬ್ಬರಿಗೆ ಪಾಸಿಟಿವ್ ಬಂದಿದೆ. ಎಲ್ಲರಿಗೂ ಮಹಾರಾಷ್ಟ್ರದಿಂದ ಬಂದಿದ್ದವರ ಪ್ರಾಥಮಿಕ ಸಂಪರ್ಕದಿಂದ ಸೋಂಕು ತಗಲಿದೆ.
ಗಂಗೊಳ್ಳಿ: ಒಬ್ಬರಿಗೆ ಕೋವಿಡ್ 19 ಸೋಂಕು ದೃಢ
ಉಡುಪಿಯಲ್ಲಿ ಉದ್ಯೋಗಿಯಾಗಿದ್ದ ಗಂಗೊಳ್ಳಿ ಗ್ರಾಮದ ಬೇಲೆಕೇರಿ ಪ್ರದೇಶದ ನಿವಾಸಿಗೆ ಕೋವಿಡ್ 19 ಸೋಂಕು ದೃಢಪಟ್ಟಿದೆ. ಅಸ್ವಾಸ್ಥ್ಯದ ಕಾರಣ ಅವರನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪರೀಕ್ಷೆ ನಡೆಸಿದಾಗ ಸೋಂಕು ದೃಢಪಟ್ಟಿದೆ.
ಕೆದೂರು: 2 ಪ್ರಕರಣ
ತೆಕ್ಕಟ್ಟೆ: ಕುಂದಾಪುರ ತಾಲೂಕಿನ ಕೆದೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬಂದಿ ಹಾಗೂ ಬೇಳೂರು ಗ್ರಾ.ಪಂ.ವ್ಯಾಪ್ತಿಯ ಮೊಗೆಬೆಟ್ಟಿನ ಮೀನು ವ್ಯಾಪಾರದ ಮಹಿಳೆಯೋರ್ವರಿಗೆ ರವಿವಾರ ಕೋವಿಡ್ 19 ಸೋಂಕು ದೃಢಪಟ್ಟಿದೆ. ಅವರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕೋಟ: 8 ಪ್ರಕರಣ
ಕೋಟ ಹೋಬಳಿಯ ವಂಡಾರು, ಸಾಲಿಗ್ರಾಮ, ಪಾಂಡೇಶ್ವರದಲ್ಲಿ ರವಿವಾರ ಎಂಟು ಮಂದಿಗೆ ಕೋವಿಡ್ 19 ಸೋಂಕು ಪತ್ತೆಯಾಗಿದೆ. ಚಿತ್ರಪಾಡಿಯ ಹೊಟೇಲಿನ ಐವರು ಕಾರ್ಮಿಕರಿಗೆ, ಬೆಂಗಳೂರಿನಿಂದ ಆಗಮಿಸಿದ ಪಾಂಡೇಶ್ವರದ ನಿವಾಸಿಗೆ, ವಂಡಾರಿನ ಜನರಲ್ ಸ್ಟೋರ್ ಹಾಗೂ ಝೆರಾಕ್ಸ್ ಅಂಗಡಿ ಮಾಲಕರಿಗೆ ಕೋವಿಡ್ 19 ಸೋಂಕು ದೃಢಪಟ್ಟಿದ್ದು ಅವರನ್ನೆಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಡುಬಿದ್ರಿ: 3 ಪ್ರಕರಣ
ಇಲ್ಲಿನ ಪ್ರಾ. ಅರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ರವಿವಾರ 3 ಪಾಸಿಟಿವ್ ದಾಖಲಾಗಿವೆ. ಹೆಜಮಾಡಿಯ 19ರ ಯುವಕ, ಎರ್ಮಾಳು ಬಡಾದ 58ರ ಪುರುಷ, ಉಚ್ಚಿಲ ಬಡಾದ 41ರ ಮಹಿಳೆ ಬಾಧಿತರು. ಇಬ್ಬರಿಗೆ ಸೋಂಕಿತರ ಪ್ರಾಥಮಿಕ ಸಂಪರ್ಕದಿಂದ ಸೋಂಕು ಬಾಧಿಸಿದೆ. ಆದರೆ ಮಹಿಳೆಗೆ ಯಾವುದೇ ರೋಗ ಲಕ್ಷಣಗಳೂ ಇಲ್ಲ ಮತ್ತು ಹೊರಗಿನ ಸಂಪರ್ಕ ಇಲ್ಲ ಎನ್ನಲಾಗಿದೆ.
ಬೆಳ್ಮಣ್ ಗ್ರಾ.ಪಂ. ಸದಸ್ಯನಿಗೆ ಸೋಂಕು
ಇಲ್ಲಿನ ಗ್ರಾಮ ಪಂಚಾಯತ್ ಸಿಬಂದಿ ಮತ್ತು ಸದಸ್ಯರಿಗೆ ಇತ್ತೀಚೆಗೆ ಕೋವಿಡ್-19 ಪರೀಕ್ಷೆ ಮಾಡಿದ್ದು, ಜಂತ್ರ ಪುನಾರು ನಿವಾಸಿಯಾಗಿರುವ ಸದಸ್ಯರೊಬ್ಬರಿಗೆ ಕೋವಿಡ್ 19 ಸೋಂಕು ದೃಢವಾಗಿದೆ. ಅವರನ್ನು ಕಾರ್ಕಳ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಪಂಚಾಯತ್‌ನ ವಿಶೇಷ ಗ್ರಾಮ ಸಭೆ, ಪರಿಸರ ಉತ್ಸವದ ಪೂರ್ವಭಾವಿ ಸಭೆಗಳಲ್ಲಿ ಪಾಲ್ಗೊಂಡಿದ್ದರು.
ದಾವಣಗೆರೆ ವ್ಯಕ್ತಿ ಸಾವು
ಬೇರೆ ಕಾಯಿಲೆಗಳಿಗೆ ಚಿಕಿತ್ಸೆ ಪಡೆಯಲು ಬಂದ ದಾವಣಗೆರೆ ಮೂಲದ 72 ವರ್ಷದ ವ್ಯಕ್ತಿಯೊಬ್ಬರು ಕೋವಿಡ್ 19 ಕಾರಣದಿಂದ ಮೃತಪಟ್ಟಿದ್ದಾರೆ. ಉಡುಪಿಯಲ್ಲಿ ಮೃತಪಟ್ಟರೂ ಅವರು ದಾವಣಗೆರೆಯವರಾದ್ದರಿಂದ ಇದು ದಾವಣಗೆರೆ ಜಿಲ್ಲೆಯ ಅಂಕಿ-ಅಂಶಗಳಿಗೆ ಸೇರುತ್ತದೆ. ಅವರನ್ನು ಮನೆಯ ಸದಸ್ಯರು ಮಣಿಪಾಲ ಆಸ್ಪತ್ರೆಗೆ ಗುರುವಾರ ಕರೆತಂದಿದ್ದರು.
ಅವರಿಗೆ ಹೃದ್ರೋಗ, ರಕ್ತದೊತ್ತಡ, ಮಧುಮೇಹ ಸಮಸ್ಯೆ ಇದ್ದವು. ಇವರ ಗಂಟಲ ದ್ರವವನ್ನು ಪರೀಕ್ಷಿಸಿದಾಗ ಕೋವಿಡ್ 19 ಸೋಂಕು ದೃಢಪಟ್ಟಿತು. ಕೂಡಲೇ ಉಡುಪಿಯ ಡಾ| ಟಿಎಂಎ ಪೈ ಆಸ್ಪತ್ರೆಗೆ ದಾಖಲಿಸಲಾಯಿತು. ದಾಖಲಿಸಿ ಕೇವಲ 25 ನಿಮಿಷಗಳಲ್ಲಿ ಚಿಕಿತ್ಸೆ ಆರಂಭಿಸಬೇಕೆಂಬಷ್ಟರಲ್ಲಿ ಅವರು ನಿಧನ ಹೊಂದಿದರು. ಬಳಿಕ ಅವರ ಅಂತಿಮ ಸಂಸ್ಕಾರವನ್ನು ಉಡುಪಿಯ ಕಬರಸ್ಥಾನದಲ್ಲಿ ಪಿಎಫ್ಐ ಕಾರ್ಯಕರ್ತರು ಪಿಪಿಇ ಉಪಕರಣ ಧರಿಸಿ ನೆರವೇರಿಸಿದರು.
ಕೋವಿಡ್ 19 ಸೋಂಕಿನ ಕಾರಣದಿಂದ ಉಡುಪಿ ಜಿಲ್ಲೆಯಲ್ಲಿ ಮೂವರು ಇದುವರೆಗೆ ಮೃತಪಟ್ಟಿದ್ದಾರೆ. ಜಿಲ್ಲೆಯೊಳಗೆ ಮೃತಪಟ್ಟವರಲ್ಲಿ ಇವರು ನಾಲ್ಕನೆಯವರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Nagavalli Bangale Movie: ಸೆನ್ಸಾರ್ ಪಾಸಾದ ನಾಗವಲ್ಲಿ
Sky Force: ಭಾರತದ ಮೊದಲ ವೈಮಾನಿಕ ದಾಳಿಯ ʼಸ್ಕೈ ಫೋರ್ಸ್ʼ ಟ್ರೇಲರ್ ಔಟ್- ಮಿಂಚಿದ ಅಕ್ಷಯ್
Doddaballapura: ಘಾಟಿ ಕ್ಷೇತ್ರದಲ್ಲಿ ಶ್ರೀ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮ ರಥೋತ್ಸವ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.