ಸೈಂಟ್ ಮೇರಿಸ್‌ನಿಂದ ಮಲ್ಪೆಗೆ ಈಜಿದ 41 ಮಂದಿ!
Team Udayavani, Feb 15, 2021, 2:25 AM IST
ಉಡುಪಿ: ಈಜುಗಾರಿಕೆ ಬಗ್ಗೆ ಜನಜಾಗೃತಿ ನಿಟ್ಟಿನಲ್ಲಿ ಕಡೆಕಾರು ಜೈದುರ್ಗ ಸ್ವಿಮ್ಮಿಂಗ್ ಕ್ಲಬ್ ವತಿಯಿಂದ ಹಿರಿಯ ಈಜುಪಟು ಗಂಗಾಧರ್ ಜಿ. ನೇತೃತ್ವದಲ್ಲಿ 41 ಮಂದಿ ರವಿವಾರ ಸೈಂಟ್ ಮೇರಿಸ್ ದ್ವೀಪದಿಂದ ಮಲ್ಪೆ ಬೀಚ್‌ವರೆಗೆ ಈಜುವ ಮೂಲಕ ಸಾಧನೆ ಮಾಡಿದ್ದಾರೆ.
ಬೆಳಗ್ಗೆ 7.10ಕ್ಕೆ ನಾಲ್ಕು ತಂಡಗಳಲ್ಲಿ ಹೊರಟವರು 3.8 ಕಿ.ಮೀ. ದೂರದ ಬೀಚ್‌ಗೆ 9.45ಕ್ಕೆ ತಲುಪಿದರು. ನೇತೃತ್ವ ವಹಿಸಿದ್ದ ನಾಲ್ವರು ಕೈಯಲ್ಲಿ ರಾಷ್ಟ್ರಧ್ವಜ ಹಿಡಿದುಕೊಂಡಿದ್ದರು. ಶಿವಮೊಗ್ಗದ ಹಿರಿಯರಾದ ಸುಬ್ಬಣ್ಣ ಈಜುಗಾರರಿಗೆ ಹಸುರು ನಿಶಾನೆ ತೋರಿದರು.
ಪ್ರಮಾಣಪತ್ರ ಹಸ್ತಾಂತರ:
ಬಳಿಕ ಬೀಚ್ ಸಮೀಪದ ಜ್ಞಾನಜ್ಯೋತಿ ಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಪದ್ಮಾಸನ ಭಂಗಿಯಲ್ಲಿ ಕಾಲಿಗೆ ಸರಪಳಿ ಸುತ್ತಿ ಬೀಗ ಹಾಕಿ ಸಮುದ್ರದಲ್ಲಿ ಈಜುವ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ದಾಖಲೆ ಬರೆದ ಗಂಗಾಧರ ಜಿ. ಕಡೆಕಾರು ಅವರಿಗೆ ಮೂಲ ಪ್ರಮಾಣಪತ್ರವನ್ನು ಹಸ್ತಾಂತರಿಸಲಾಯಿತು. ಎಲ್ಲ 41 ಮಂದಿಗೂ ಪ್ರಮಾಣ ಪತ್ರ ಮತ್ತು ಪದಕಗಳನ್ನು ವಿತರಿಸಲಾಯಿತು.
ಎಡಿಸಿ ಸದಾಶಿವ ಪ್ರಭು, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಶಿವಕುಮಾರ್, ಲೆಕ್ಕಪರಿಶೋಧಕ ಮಲ್ಲೇಶ್, ಮಂದಿರದ ಅಧ್ಯಕ್ಷ ವಿಜಯ ತಿಂಗಳಾಯ, ಮಂಗಳೂರಿನ ಈಜು ಪಟು ಡಾ| ಸುರೇಶ್ ಶಾಸ್ತ್ರಿ, ಕ್ಲಬ್‌ನ ಉಪಾಧ್ಯಕ್ಷ ಚಂದ್ರ ಕುಂದರ್ ಉಪಸ್ಥಿತಿ
ಯಲ್ಲಿ ಸಭೆ ನಡೆಯಿತು. ನ್ಯಾಯವಾದಿ ರಾಜಶೇಖರ್ ನಿರ್ವಹಿಸಿದರು.
9ರಿಂದ 60+ ಈಜುಗಾರರು :
ಹಿರಿಯ ಈಜುಪಟು ಸೀತಾರಾಮ ಅವರ ಮುಂದಾಳತ್ವ ದಲ್ಲಿ ಮಂಗಳೂರಿನಿಂದ ಆಗಮಿಸಿದ 11 ಮಂದಿ ಪಾಲ್ಗೊಂಡಿ ದ್ದರು. 9 ವರ್ಷ ಮತ್ತು ಮೇಲ್ಪಟ್ಟ ವಿದ್ಯಾರ್ಥಿ, ವಿದ್ಯಾರ್ಥಿ ನಿಯರು, ಓರ್ವ ಮಹಿಳೆ, 60 ವರ್ಷ ಮೇಲ್ಪಟ್ಟ ನಾಲ್ವರು ಅಲೆಗಳು ಮತ್ತು ಗಾಳಿಯ ಒತ್ತಡದ ಮಧ್ಯೆಯೂ ಉತ್ಸಾಹ ದಿಂದ ಈಜಿ ಗುರಿ ಮುಟ್ಟಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.