ಗ್ರಾಹಕರ ಸೋಗಿನಲ್ಲಿ ಕಣ್ಣಿಗೆ ಖಾರದ ಹುಡಿ ಎರಚಿ  50,000 ರೂಪಾಯಿ ಲೂಟಿ

Team Udayavani, Sep 5, 2017, 8:20 AM IST

KOLI-FARM.jpg

ಕೋಟ: ಕೋಳಿಯಂಗಡಿಗೆ ಗ್ರಾಹಕರ ಸೋಗಿನಲ್ಲಿ ಬಂದ ಈರ್ವರು ದುಷ್ಕರ್ಮಿಗಳು ಅಂಗಡಿ ಮಾಲಕನ ಕಣ್ಣಿಗೆ ಖಾರದ ಪುಡಿ ಎರಚಿ 50 ಸಾವಿರ ರೂ. ಲೂಟಿ ಮಾಡಿದ ಘಟನೆ ಸಾಲಿಗ್ರಾಮದ ಲೋಬೊ ಕೋಳಿ ಫಾರ್ಮ್ನಲ್ಲಿ  ರವಿವಾರ ರಾತ್ರಿ ಸಂಭವಿಸಿದೆ. 

ಅಂಗಡಿ ಮಾಲಕ, ಕಾರ್ಕಡ ನಿವಾಸಿ ಗ್ರೇಶನ್‌ ಲೋಬೊ (37) ಲೂಟಿಗೊಳಗಾದ ವ್ಯಕ್ತಿ. ಗ್ರಾಹಕರ ಸೋಗಿನಲ್ಲಿ ಬಂದು ಕೃತ್ಯ: ವ್ಯಾಪಾರ ಮುಗಿಸಿ ಅಂಗಡಿಯ ಎದುರು ಬಾಗಿಲನ್ನು  ಹಾಕಿ ಮನೆಗೆ ಹೋಗಲು ತಯಾರಿ ನಡೆಸುತ್ತಿದ್ದ  ಸಂದರ್ಭ ಹೆಲ್ಮೆಟ್‌ ಧರಿಸಿದ್ದ ವ್ಯಕ್ತಿಯೋರ್ವ ಗ್ರಾಹಕನಂತೆ ಹಿಂದಿನ ಬಾಗಿಲಿನಿಂದ ಒಳಗಡೆ ಬಂದು ಕೋಳಿ ಕ್ಲೀನ್‌ ಮಾಡಿಕೊಡುವಂತೆ  ವಿನಂತಿಸಿಕೊಂಡ. ವ್ಯಾಪಾರ ಮುಗಿದಿದ್ದು  ಇವತ್ತು ಸಾಧ್ಯವಿಲ್ಲ, ಫ್ರಿಜ್‌ನಲ್ಲಿಟ್ಟು ನಾಳೆ ಕ್ಲೀನ್‌ ಮಾಡಿಕೊಡುವುದಾಗಿ ಅಂಗಡಿ ಮಾಲಕ ಆತನಿಗೆ ತಿಳಿಸಿದ್ದರು ಹಾಗೂ ಆತ  ನೀಡಿದ ಪ್ಲಾಸ್ಟಿಕ್‌ ಚೀಲವನ್ನು  ಫ್ರಿಜ್‌ನಲ್ಲಿ ಇಡಲು ತೆರಳುತ್ತಿದ್ದಾಗ ಆ ಅಪರಿಚಿತ ವ್ಯಕ್ತಿ ಮುಖಕ್ಕೆ ಖಾರದ ಪುಡಿ ಎರಚಿದ್ದು, ಮುಖಕ್ಕೆ  ಬಟ್ಟೆ ಕಟ್ಟಿಕೊಂಡಿದ್ದ ಇನ್ನೋರ್ವ ವ್ಯಕ್ತಿ ಅಂಗಡಿಯೊಳಗೆ ಪ್ರವೇಶಿಸಿ ಚೂರಿ ತೋರಿಸಿ ಕೊಲ್ಲುವುದಾಗಿ  ಬೆದರಿಕೆ ಹಾಕಿ ಕ್ಯಾಶ್‌ ಬಾಕ್ಸಿನಲಿದ್ದ 50 ಸಾವಿರ ರೂ. ದೋಚಿ, ಅಂಗಡಿ ಮಾಲಕನ ಕೈಕಾಲುಗಳನ್ನು ಕಟ್ಟಿ  ಮಂಚದ ಕೆಳಗಡೆ ತಳ್ಳಿದ್ದರು.  

ಈ ಸಂದರ್ಭ ಮನೆಗೆ ತೆರಳುವುದಾಗಿ ಹೋಗಿದ್ದ ಅಂಗಡಿ ಕೆಲಸದ ಕೃಷ್ಣ ಬಸ್‌  ಸಿಗದೆ ಅಂಗಡಿಗೆ ವಾಪಸಾಗಿದ್ದು, ಅಂಗಡಿ ಒಳಗಡೆ ಶಬ್ದವಾಗುತ್ತಿರುವುದನ್ನು ಗಮನಿಸಿ ಹತ್ತಿರ ಹೋದಾಗ ಕಳ್ಳರು ಸ್ಥಳದಿಂದ ಪರಾರಿ ಯಾಗಿದ್ದರು.
ಅನಂತರ  ಸ್ಥಳೀಯರ ಸಹಕಾರದೊಂದಿಗೆ ಕೈ-ಕಾಲಿಗೆ ಕಟ್ಟಿದ ಹಗ್ಗವನ್ನು ಬಿಚ್ಚಿ  ಹಲ್ಲೆ ಗೊಳಗಾದವನನ್ನು ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. 

ದರೋಡೆಕೋರರ ತಂಡ  ಕೋಳಿ ಎಂದು ನೀಡಿದ ಚೀಲವನ್ನು ಪರೀಕ್ಷಿಸಿದಾಗ ಅದರಲ್ಲಿ ಕೋಳಿಯ ಬದಲಿಗೆ ಚಾಕು ಮುಂತಾದ ವಸ್ತುಗಳು ಇದ್ದವು. ಅದನ್ನು ಪೊಲೀಸರ ವಶಕ್ಕೆ ನೀಡಲಾಗಿದೆ. 

ಸಮಯ ಸಾಧಿಸಿ ಕೃತ್ಯ: ಅಂಗಡಿಯಲ್ಲಿ ಗ್ರೇಶನ್‌ ಲೋಬೊ ಮತ್ತು ಸಹೋದರ ರೋಶನ್‌ ಲೋಬೊ ಹಾಗೂ ಕೆಲಸಗಾರರಾದ ರಮೇಶ ಮತ್ತು ಕೃಷ್ಣ ಬೆಳಗ್ಗೆಯಿಂದ ಕೆಲಸ ಮಾಡುತ್ತಿದ್ದರು ಹಾಗೂ ಘಟನೆ ನಡೆಯುವುದಕ್ಕೆ  ಹತ್ತು ನಿಮಿಷ ಮುಂಚೆ ರೋಶನ್‌ ಲೋಬೊ ಮತ್ತು ರಮೇಶ  ತ್ಯಾಜ್ಯವನ್ನು  ವಿಲೇವಾರಿ ಮಾಡಲು ತೆರಳಿದ್ದರು. ಗ್ರೇಶನ್‌ ಅವರು  ಹದಿನೈದು ದಿನದ ಹಿಂದೆ ಅಂಗಡಿ ಸಮೀಪ ಬಿದ್ದು ಕಾಲುಮುರಿದಿದ್ದು ಸರಿಯಾಗಿ ನಡೆಯಲು ಆಗುತ್ತಿರಲಿಲ್ಲ.

ರವಿವಾರ ಅಂಗಡಿಯಲ್ಲಿ ಸ್ವಲ್ಪ ಹೆಚ್ಚು ವ್ಯಾಪಾರವಿದ್ದು, ಹಣವನ್ನು ಬ್ಯಾಂಕ್‌ಗೆ ಹಾಕದೆ ಅಂಗಡಿಯಲ್ಲೇ ಇರಿಸಿಕೊಳ್ಳಲಾಗಿತ್ತು. ಇದನ್ನೆಲ್ಲ ಗಮನಿಸಿಯೇ ಈ ಕೃತ್ಯ ನಡೆಸಲಾಗಿದೆ. 

ಈ ಅನಿರೀಕ್ಷಿತ ಘಟನೆಯಿಂದ ಭೀತಿಗೊಂಡ ಗ್ರೇಶನ್‌ ಅವರು ಸುಮಾರು 4 ಗಂಟೆ ಆಸ್ಪತ್ರೆಯಲ್ಲಿ  ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ತೀವ್ರ ಅಸ್ವಸ್ಥಗೊಂಡಿದ್ದರು.

ಹಿಂದೊಮ್ಮೆ  ದರೋಡೆ ಯತ್ನ ನಡೆದಿತ್ತು:  ಗ್ರೇಶನ್‌ ಲೋಬೊ ಅವರಿಗೆ ಸುಮಾರು ನಾಲ್ಕೈದು ವರ್ಷಗಳ ಹಿಂದೆ ಮನೆಯಲ್ಲಿರುವಾಗ ಅಪರಿಚಿತರು ಚೂರಿ ಇರಿದು ದರೋಡೆ ನಡೆಸಲು ಪ್ರಯತ್ನಿಸಿದ್ದರು. ಆ ಸಂದರ್ಭ ಇವರು ಕೂಗಿಕೊಂಡಾಗ ಅಕ್ಕ-ಪಕ್ಕದ ಮನೆಯವರು ಸ್ಥಳಕ್ಕೆ ಧಾವಿಸಿದ್ದು, ದರೋಡೆ ನಡೆಸಲು ಬಂದ ತಂಡ ಸ್ಥಳದಿಂದ ಪರಾರಿಯಾಗಿತ್ತು.  ಈಗ ನಾಲ್ಕೈದು ವರ್ಷದ ಅನಂತರ ಮತ್ತೆ ಅದೇ ಮಾದರಿಯಲ್ಲಿ  ಈ ಕೃತ್ಯ ನಡೆದಿದೆ.  
ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿರುವ ಅಂಗಡಿಯಿಂದ, ಜನ ಸಂಚಾರವಿರುವ ಸಂದರ್ಭ ದಲ್ಲೇ ನಡೆದ ಈ ದರೋಡೆ ಪ್ರಕರಣದಿಂದ ಸಾಲಿಗ್ರಾಮ ನಿವಾಸಿಗಳು ಬೆಚ್ಚಿಬಿದ್ದಿದ್ದಾರೆ. 

ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ್‌, ಕೋಟ  ಠಾಣಾಧಿಕಾರಿ ಸಂತೋಷ್‌ ಎ. ಕಾಯ್ಕಿಣಿ ಹಾಗೂ ಸಿಬಂದಿ ಆಸ್ಪತ್ರೆಗೆ ಭೇಟಿ ನೀಡಿ ಘಟನೆ ಕುರಿತು ಮಾಹಿತಿ ಪಡೆದಿದ್ದಾರೆ.

ಶ್ವಾನದಳ, ಬೆರಳಚ್ಚು ತಜ್ಞರು ಸ್ಥಳಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದ್ದು, ಈ ಕುರಿತು ತನಿಖೆ ನಡೆಯುತ್ತಿದೆ.

ಟಾಪ್ ನ್ಯೂಸ್

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

DKShivakumar

Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್‌

Gaviyappa-MLA

Congress Guarantee: ಎರಡು-ಮೂರು ಗ್ಯಾರಂಟಿ ನಿಲ್ಲಿಸಿ: ಎಚ್‌.ಆರ್‌. ಗವಿಯಪ್ಪ ಒತ್ತಾಯ

ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ

ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ

ಕೆರೆ ಬತ್ತುವ ಮೊದಲೇ ಎಚ್ಚರಿಕೆ ಅಗತ್ಯ; ಜೀವ ಸೆಲೆಯಾಗಿರುವ ಕೆರೆಗಳ ನಿರ್ವಹಣೆಯೇ ಆಗುತ್ತಿಲ್ಲ

Yakshagana: ಇಂದು ನೀಲಾವರ ಮೇಳ ತಿರುಗಾಟಕ್ಕೆ ಚಾಲನೆ

Yakshagana: ಇಂದು ನೀಲಾವರ ಮೇಳ ತಿರುಗಾಟಕ್ಕೆ ಚಾಲನೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ರಾಜ್ಯಮಟ್ಟದ ಅತ್ಯುತ್ತಮ ಪ್ರಗತಿಪರ ಹೈನುಗಾರ ಪ್ರಶಸ್ತಿಗೆ ಪ್ರಕಾಶ್ಚಂದ್ರ ಶೆಟ್ಟಿ ಆಯ್ಕೆ

ಗೀತಾರ್ಥ ಚಿಂತನೆ 106: ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

Udupi: ಗೀತಾರ್ಥ ಚಿಂತನೆ-106; ದುಃಖಶಮನಕ್ಕೆ ಆದ್ಯತೆ, ದುಃಖೋತ್ಕರ್ಷಕ್ಕೆ ಅನಾದ್ಯತೆ

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

BYV-yathnal

BJP Internal Dispute: ಶಾಸಕ ಬಸನಗೌಡ ಯತ್ನಾಳ್‌ ವಿವಾದ ಇತ್ಯರ್ಥಕ್ಕೆ ಡಿ.9ರ ಗಡುವು

Pejavara-Shree–Siddu

Constitution Day: ಉಡುಪಿ ಪೇಜಾವರ ಶ್ರೀ ಮನುಸ್ಮೃತಿ ಪ್ರತಿಪಾದಕರು: ಸಿಎಂ ಸಿದ್ದರಾಮಯ್ಯ

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Train: ಗೋಮಟೇಶ್ವರ ಎಕ್ಸ್‌ಪ್ರೆಸ್‌ ರೈಲು ಮಂಗಳೂರು ಸೆಂಟ್ರಲ್‌ಗೆ ಬಾರದು

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

Kambala: ತೀರ್ಪುಗಾರರ ತೀರ್ಮಾನವೇ ಅಂತಿಮ:ಜಿಲ್ಲಾ ಕಂಬಳ ಸಮಿತಿ ಸಭೆಯಲ್ಲಿ ನಿರ್ಣಯ

DKShivakumar

Congress: ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಸ್ವರ ಎತ್ತಿದರೆ ಶಿಸ್ತುಕ್ರಮ: ಡಿ.ಕೆ.ಶಿವಕುಮಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.