German ಮಿಲಿಟರಿ ಅಧಿಕಾರಿ ಎಂದು ಪೇತ್ರಿಯ ಮಹಿಳೆಗೆ 54 ಲಕ್ಷ ರೂ. ವಂಚನೆ!
ಫೇಸ್‌ಬುಕ್‌ನಲ್ಲಿ ಪರಿಚಯ, ವಾಟ್ಸ್ಅಪ್ ಮುಖೇನ ಚಾಟಿಂಗ್...!!
Team Udayavani, Mar 10, 2024, 4:10 PM IST
ಉಡುಪಿ: ಸಾಮಾಜಿಕ ತಾಣದಲ್ಲಿ ಪರಿಚಯವಾದ ವಂಚಕನೊಬ್ಬ ಜರ್ಮನಿಯಲ್ಲಿ ಮಿಲಿಟರಿ ಅಧಿಕಾರಿ ಎಂದು ವಂಚಿಸಿ ಬ್ರಹ್ಮಾವರದ ಪೇತ್ರಿಯ ಮಹಿಳೆಯೊಬ್ಬರಿಗೆ 54 ಲಕ್ಷ 74 ಸಾವಿರ ರೂ. ವಂಚನೆ ಮಾಡಿದ ಬಗ್ಗೆ ಪ್ರಕರಣ ದಾಖಲಾಗಿದೆ.
ಫೆಬ್ರವರಿ 10 ರಂದು ಫೇಸ್‌ಬುಕ್‌ನಲ್ಲಿ ಮಿಹಿಯಾಲ್ ನೀಲ್ಗೆನ್ ಎಂಬಾತ ತಾನು ಜರ್ಮನಿಯಲ್ಲಿ ಮಿಲಿಟರಿ ಅಧಿಕಾರಿ ಎಂಬುದಾಗಿ ಹೇಳಿಕೊಂಡು ಪೇತ್ರಿಯ ಲವೀನಾ ಸ್ಟೆಫನಿ ಕ್ರಾಸ್ಟೊ (42) ಎಂಬವರ ಸ್ನೇಹ ಬೆಳೆಸಿಕೊಂಡಿದ್ದಾನೆ.
ಪರಿಚಯವಾದ ನಂತರ ಎಕ್ಸ್( ವಾಟ್ಸ್ಅಪ್) ಮುಖೇನ ಚಾಟಿಂಗ್ ನಡೆಸಿ ಸ್ನೇಹಿತರಾಗಿದ್ದಾರೆ. ಗಿಫ್ಟ್ ಕಳುಹಿಸುವುದಾಗಿ ನಂಬಿಸಿ ಫೆ.1 ರಂದು, ದೆಹಲಿಯ ಪಾರ್ಸೆಲ್ ಆಫೀಸ್‌ನಿಂದ ಎಂಬುದಾಗಿ ಅಪರಿಚಿತ ವ್ಯಕ್ತಿ ಮೊಬೈಲ್ ನಂಬರ್ ನಿಂದ ಕರೆ ಮಾಡಿ ಜರ್ಮನಿಯಿಂದ ಬಂದಿರುವ ಪಾರ್ಸೆಲ್ ನಲ್ಲಿ ಜ್ಯುವೆಲರಿ, ಯುರೋ ಕರೆನ್ಸಿ ಇದ್ದು ಈ ಬಗ್ಗೆ ಪಾರ್ಸೆಲ್ ಪಡೆಯಲು ಪಾರ್ಸೆಲ್ ಚಾರ್ಜ್, ಮನಿ ಲ್ಯಾಂಡಿಂಗ್ ಸರ್ಟಿಫಿಕೇಟ್, ಕಸ್ಟಂ ಸರ್ಟಿಫಿಕೇಟ್ ಪಡೆಯಲು ಹಣ ಪಾವತಿಸಬೇಕು ಎಂದು ತಿಳಿಸಿದ್ದಾನೆ.
ಲವೀನಾ ಅದನ್ನು ನಂಬಿ, ಆರೋಪಿ ಸೂಚಿಸಿದ ಬ್ಯಾಂಕ್ ಖಾತೆಗಳಿಗೆ, ಗೂಗಲ್ ಪೇ ಗಳಿಗೆ ಹಂತ ಹಂತವಾಗಿ ಒಟ್ಟು 54 ಲಕ್ಷದ 74 ಸಾವಿರ ಹಣವನ್ನು ಪಾವತಿಸಿದ್ದಾರೆ. ಆರೋಪಿ ಜರ್ಮನಿಯಲ್ಲಿ ಮಿಲಿಟರಿ ಅಧಿಕಾರಿ ಎಂದು, ಗಿಫ್ಟ್ ಪಾರ್ಸೆಲ್ ಕಳಿಸುವುದಾಗಿ ನಂಬಿಸಿ, ಪಾರ್ಸೆಲ್ ಪಡೆಯಲು ಭಾರೀ ಪ್ರಮಾಣದ ಹಣವನ್ನು ಪಡೆದು, ಪಾರ್ಸೆಲ್ ಕಳುಹಿಸದೇ, ಕಳುಹಿಸಿದ ಹಣವನ್ನು ವಾಪಾಸು ನೀಡದೇ ಮೋಸ ಮಾಡಿದ್ದಾನೆ. ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.