ಸಮ್ಮಿಶ್ರ ಸರಕಾರದಿಂದ ಕಾರ್ಕಳಕ್ಕೆ 58 ಕೋಟಿ ರೂ. ಅನುದಾನ: ಎಚ್‌ಡಿಕೆ
Team Udayavani, Apr 8, 2019, 6:11 AM IST
ಕಾರ್ಕಳ: ನಾನು ಮುಖ್ಯ ಮಂತ್ರಿಯಾದ ಬಳಿಕ ಎಣ್ಣೆಹೊಳೆ ಕಿಂಡಿ ಅಣೆಕಟ್ಟು ಯೋಜನೆಗೆ ಬಜೆಟ್‌ನಲ್ಲಿ 40 ಕೋಟಿ ರೂ., ತಾಲೂಕಿನ 222 ಶಾಲಾ ಸಂಪರ್ಕ ಸೇತುವೆಗಳಿಗೆ 12 ಕೋಟಿ ರೂ., ಗ್ರಾಮೀಣಾಭಿವೃದ್ಧಿಗೆ 7 ಕೋಟಿ ರೂ. ಬಿಡುಗಡೆಗೊಳಿಸಿದ್ದು, ಕಾರ್ಕಳದ ಅಭಿವೃದ್ಧಿಗೆ 9 ತಿಂಗಳಲ್ಲಿ ಒಟ್ಟು 58 ಕೋಟಿ ರೂ. ಅನುದಾನ ಒದಗಿಸಿಕೊಟ್ಟಿದ್ದೇನೆ ಎಂದು ಮುಖ್ಯ ಮಂತ್ರಿ ಕುಮಾರಸ್ವಾಮಿ ಹೇಳಿದರು.
ಅವರು ರವಿವಾರ ಮಂಜುನಾಥ ಪೈ ಸ್ಮಾರಕ ಸಭಾಭವನದಲ್ಲಿ ಕಾಂಗ್ರೆಸ್ ಹಾಗೂ ಜನತಾದಳ ಜಂಟಿಯಾಗಿ ಏರ್ಪಡಿಸಿದ ಸಮಾವೇಶದಲ್ಲಿ ಮಾತನಾಡಿದರು.
2012-13ರಲ್ಲಿ ಬಿಜೆಪಿ ಸರಕಾರ ಕಾರ್ಕಳಕ್ಕೆ ನೀಡಿರುವುದು 5 ಕೋಟಿ, 2013-14ರಲ್ಲಿ 8 ಕೋಟಿ ರೂ. , ಅನಂತರ ಬಂದ ಸಿದ್ದರಾಮಯ್ಯ ಸರಕಾರ 48 ಕೋಟಿ ರೂ. ನೀಡಿದೆ ಎಂದರು.
ದೇಶ ರಕ್ಷಕರು ಸೈನಿಕರು. ಸೇನಾ ಪಡೆಗೆ ರಾಷ್ಟ್ರಪತಿ ಮುಖ್ಯಸ್ಥರೇ ಹೊರತು ಪ್ರಧಾನಿಯಲ್ಲ. ಸೈನಿಕರಸಾಧನೆಯನ್ನೂ ಮೋದಿ ತನ್ನದೆನ್ನುತ್ತಿ ದ್ದಾರೆ. ಇಂದಿರಾ ಗಾಂಧಿ, ಲಾಲ್ ಬಹದ್ದೂರ್ ಶಾಸಿŒಯವರೂ ಸೈನಿಕರ ಸಾಹಸವನ್ನು ತಮ್ಮ ಸರಕಾರದ್ದೆಂದು ಹೇಳಿಕೊಂಡಿರಲಿಲ್ಲ. ದೇವೇಗೌಡರು ಪ್ರಧಾನಿಯಾಗಿದ್ದ ವೇಳೆ ಭಯೋ ತ್ಪಾದಕ ಚಟುವಟಿಕೆಗಳಾಗಲಿ, ಇನ್ನಿತರ ಯಾವುದೇ ಅಹಿತಕರ ಘಟನೆಗಳಾಗಲಿ ನಡೆದಿರಲಿಲ್ಲ. ಹಾಗೆಂದು ಅದು ನಮ್ಮ ಸಾಧನೆ ಎಂದು ಹೇಳಿಕೊಂಡು ಬಂದಿರಲಿಲ್ಲ ಎಂದರು.
ಅಸ್ಥಿರಗೊಳಿಸುವ ತಂತ್ರ
ರಾಜ್ಯ ಸರಕಾರವನ್ನು ಅಸ್ಥಿರಗೊಳಿ ಸುವ ತಂತ್ರ ರೂಪಿಸುತ್ತಿದ್ದ ಬಿಜೆಪಿಯವರು ನೆಮ್ಮದಿಯಾಗಿ ಆಡಳಿತ ನಡೆಸಲು ಬಿಡಲಿಲ್ಲ. ಸರಕಾರಕ್ಕೆ ಪದೇಪದೇ ಗಡುವು ನೀಡುವ ಮೂಲಕ ಅಧಿಕಾರಿಗಳು ಪರಿಣಾಮಕಾರಿ ಯಾಗಿ ಕೆಲಸ ನಿರ್ವಹಿಸದಂತೆ ತಡೆಯು ತ್ತಿದ್ದರು. ಇವೆಲ್ಲವುಗಳ ನಡುವೆ ನಾವು ಜನಪರ ಆಡಳಿತ ನೀಡಿದ್ದೇವೆ. ಅನೇಕ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತಂದಿದ್ದೇವೆ. ನಮ್ಮ ಕೆಲಸ ಕಾರ್ಯಗಳಿಗೆ ನಿರೀಕ್ಷಿತ ಪ್ರಚಾರ ಮಾತ್ರ ಸಿಗುತ್ತಿಲ್ಲ ಎಂದರು.
ಒಂದು ಬಾರಿ ಅವಕಾಶ ಕೊಡಿ…
ಈ ಬಾರಿ ಪ್ರಮೋದ್ ಮಧ್ವರಾಜ್‌ಅವರಿಗೊಂದು ಅವಕಾಶ ಕೊಡಿ. ಕ್ಷೇತ್ರದ ಅಭಿವೃದ್ಧಿಯೊಂದಿಗೆ ಈ ಭಾಗದ ಸಮಸ್ಯೆಗಳನ್ನು ಪರಿಹರಿಸುತ್ತೇನೆ ಎಂದು ಮನವಿ ಮಾಡಿಕೊಂಡರು.
ಸಚಿವರಾದ ಡಾ| ಜಯಮಾಲಾ, ಯು.ಟಿ. ಖಾದರ್, ಮೈತ್ರಿ ಅಭ್ಯರ್ಥಿ ಪ್ರಮೋದ್ ಮಧ್ವರಾಜ್, ನಾಯಕರಾದ ಅಮರನಾಥ ಶೆಟ್ಟಿ, ಭೋಜೇಗೌಡ, ಬಿ.ಎಂ. ಫಾರೂಕ್, ಗೋಪಾಲ ಭಂಡಾರಿ, ಯು.ಆರ್. ಸಭಾಪತಿ, ಅಶೋಕ ಕುಮಾರ್ ಕೊಡವೂರು, ಉದಯ ಶೆಟ್ಟಿ ಮುನಿಯಾಲು, ಅಧ್ಯಕ್ಷ ಶೇಖರ್ ಮಡಿವಾಳ, ಯೋಗಿಶ್ ಶೆಟ್ಟಿ ವೇದಿಕೆ ಯಲ್ಲಿದ್ದರು. ಬಿಪಿನ್ ಚಂದ್ರಪಾಲ್ ಸಭೆ ನಿರ್ವಹಿಸಿದರು.
ಹಣ ರಾಜ್ಯದ್ದು; ಹೆಸರು ಮೋದಿಯದ್ದು!
ಮೋದಿ 5 ವರ್ಷಗಳಲ್ಲಿ ಮಾಡಿದ್ದು ಭಾಷಣ ಮಾತ್ರ. ಆಯುಷ್ಮಾನ್ ಭಾರತ್ ಯೋಜನೆಗೆ ರಾಜ್ಯ ಸರಕಾರ 900 ಕೋಟಿ ರೂ. ಭರಿಸಿದರೆ, ಕೇಂದ್ರ ನೀಡಿದ್ದು ಕೇವಲ 350 ಕೋಟಿ. ಆದರೆ ಜಾಹೀರಾತಿನಲ್ಲಿ ಮೋದಿ ಚಿತ್ರ ಮಾತ್ರವಿದೆ ಎಂದು ಟೀಕಿಸಿದ ಮುಖ್ಯಮಂತ್ರಿಗಳು, ನರೇಗಾ ಯೋಜನೆಗೆ ಮೋದಿ ಸರಕಾರ ನಯಾ ಪೈಸೆ ನೀಡದೇ ಕಾರ್ಮಿಕ ರನ್ನು ಸಂಕಷ್ಟಕ್ಕೆ ದೂಡಿತ್ತು. ಈ ವೇಳೆ ರಾಜ್ಯ ಸರಕಾರವೇ 1,300 ಕೋಟಿ ರೂ. ಭರಿಸಿದ್ದು ಎಂದರು.
– ಸಿಎಂ ಆದ ಬಳಿಕ ಗಲಭೆಯಾಗಿಲ್ಲ
ನಾನು ಮುಖ್ಯಮಂತ್ರಿಯಾದ ಬಳಿಕ ಕರಾವಳಿಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ರಾಜಕೀಯಕ್ಕೋಸ್ಕರ ಬಿಜೆಪಿಯು ಜಾತಿ, ಧರ್ಮಗಳ ಮಧ್ಯೆ ವೈಷಮ್ಯ ಸೃಷ್ಟಿಸುತ್ತಿದೆ ಎಂದರು.
ನನ್ನ ಮನೆಗೆ ಪ್ರತಿದಿನ ಅಂಗವಿಕಲರು, ಆನಾರೋಗ್ಯ ಪೀಡಿತರು ಸಾವಿರಾರು ಸಂಖ್ಯೆಯಲ್ಲಿ ಬರುತ್ತಾರೆ. ಅಂಥವರಿಗೆ ನೆರವಾಗು ವಲ್ಲಿ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 9 ತಿಂಗಳಲ್ಲಿ 85 ಕೋಟಿ ರೂ. ನೀಡಲಾಗಿದೆ. ಹಿರಿಯ ನಾಗರಿಕರ ಮಾಸಾಶನವನ್ನು 1 ಸಾವಿರಕ್ಕೆ ಏರಿಸಲಾಗಿದೆ ಎಂದರು.
– ಶೋಭಾ ಮಾತನಾಡಿದ್ದಾರಾ ?
ಅಡಿಕೆ, ತೆಂಗು ಬೆಳೆಗಾರರ ಸಮಸ್ಯೆ, ಮೀನುಗಾರಿಕೆ ಸಮಸ್ಯೆ ಕುರಿತು ಕುರಿತು ಶೋಭಾ ಲೋಕಸಭೆಯಲ್ಲಿ ಮಾತನಾಡಿದ್ದಾರಾ? ನಾಪತ್ತೆ ಯಾದ ಬೋಟ್ ಪತ್ತೆಹಚ್ಚುವಲ್ಲಿ ಕೇಂದ್ರ ಸರಕಾರ ಸ್ಪಂದಿಸಿದೆಯೇ ಎಂದು ಸಿಎಂ ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ
Agriculture: ಬೆಂಬಲ ಬೆಲೆಯಲ್ಲಿ ತೊಗರಿ, ಕಡಲೆ ಖರೀದಿಗೆ ಅನುಮತಿ: ಸಚಿವ ಶಿವಾನಂದ ಪಾಟೀಲ್
Vinod ಕಾಂಬ್ಳಿಗೆ ಉಚಿತ ಚಿಕಿತ್ಸೆ ಘೋಷಿಸಿದ ಥಾಣೆ ಆಸ್ಪತ್ರೆ
Bareilly Court: ಪ್ಯಾಲೆಸ್ತೀನ್ ಪರ ಘೋಷಣೆ: ಸಂಸದ ಒವೈಸಿಗೆ ಸಮನ್ಸ್
Sajipamunnur: ಅಪಘಾತದ ವೇಳೆ ಗೋಮಾಂಸ ಸಾಗಾಟ ಪತ್ತೆ; ಪ್ರಕರಣ ದಾಖಲು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.