ಉಡುಪಿಯಲ್ಲಿ ದಿಗ್ವಿಜಯಕ್ಕಾಗಿ 7 ರಾಜ್ಯ ಕ್ರೀಡಾಳುಗಳ ಪೈಪೋಟಿ
ಅಖೀಲ ಭಾರತ ದಕ್ಷಿಣ ವಲಯ ಕಿರಿಯರ ಕ್ರೀಡಾಕೂಟ
Team Udayavani, Sep 15, 2019, 5:00 AM IST
ಉಡುಪಿ: ಜಿಲ್ಲಾ ಅಮೆಚೂರ್ ಆ್ಯತ್ಲೆಟಿಕ್ ಸಂಸ್ಥೆಯು ಯುವಜನ ಸೇವಾ ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಅಖೀಲ ಭಾರತ ದಕ್ಷಿಣ ವಲಯ ಕಿರಿಯರ ಕ್ರೀಡಾಕೂಟ ಶುಕ್ರವಾರ ರಾತ್ರಿ ಸಾಂಕೇತಿಕವಾಗಿ ಉದ್ಘಾಟನೆಗೊಂಡರೆ, ಕ್ರೀಡಾ ಸ್ಪರ್ಧೆಗಳು ಶನಿವಾರ ಬೆಳಗ್ಗಿನಿಂದ ಆರಂಭವಾಗಿದೆ.
ದಕ್ಷಿಣ ಭಾರತದ 7 ರಾಜ್ಯಗಳಾದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು, ಲಕ್ಷದ್ವೀಪ, ಹಾಗೂ ಪಾಂಡಿಚೇರಿಯ ಸುಮಾರು 835 ಮಂದಿ ಕ್ರೀಡಾಪಟುಗಳು ಭಾಗವಹಿಸುತ್ತಿದ್ದಾರೆ. ಕೇರಳದಿಂದ 210, ತಮಿಳುನಾಡಿನಿಂದ 200, ಕರ್ನಾಟಕದಿಂದ 165, ತೆಲಂಗಾಣದಿಂದ 80, ಆಂಧ್ರಪ್ರದೇಶದಿಂದ 150, ಲಕ್ಷದ್ವೀಪ ದಿಂದ 30, ಪಾಂಡಿಚೇರಿಯಿಂದ 70 ಮಂದಿ ಕ್ರೀಡಾಳುಗಳು ಭಾಗವಹಿಸಿದ್ದರು.
8 ವಿಭಾಗಗಳಲ್ಲಿ ಕಾಲ್ನಡಿಗೆ, ಪೋಲೋವಾಲ್ಟ್, ಡಿಸ್ಕಸ್‌ತ್ರೋ, ಉದ್ದ ಜಿಗಿತ, ಎತ್ತರ ಜಿಗಿತ, ಶಾಟ್‌ಪುಟ್, 100 ಮೀ. ಓಟ, ಜಾವಲಿನ್ ತ್ರೊ, ರಿಲೆ, ಹ್ಯಾಮರ್ ತ್ರೊ, ಟ್ರಿಪಲ್‌ಜಂಪ್ ಇತ್ಯಾದಿ ಒಟ್ಟು 155 ಸ್ಪರ್ಧೆಗಳು ನಡೆಯಲಿದೆ. ಕ್ರೀಡಾಪಟುಗಳಿಗೆ ಪಾರದರ್ಶಕವಾದ ತೀರ್ಪು ದೊರೆಯುವ ನಿಟ್ಟಿನಲ್ಲಿ ಈ ಕ್ರೀಡಾಕೂಟಕ್ಕೆ ಫೋಟೋ ಫಿನಿಷ್ ಸಿಸ್ಟಮ್ ಅಳವಡಿಸಲಾಗಿದೆ. ಆ್ಯತ್ಲೆಟಿಕ್ ಫೆಡರೇಶನ್ ಆಫ್ ಇಂಡಿಯಾ ಮತ್ತು ಕರ್ನಾಟಕ ರಾಜ್ಯ ಆ್ಯತ್ಲೆಟಿಕ್ ಸಂಸ್ಥೆಯು ನೀಡಿದ ಜವಾಬ್ದಾರಿಯಂತೆ ಜಿಲ್ಲೆಯಲ್ಲೇ ಮೊದಲ ಬಾರಿಗೆ ಈ ಕ್ರೀಡಾಕೂಟ ನಡೆಯುತ್ತಿದೆ. ರವಿವಾರ ಕ್ರೀಡಾಕೂಟ ಮುಕ್ತಾಯಗೊಳ್ಳಲಿದೆ.
ದಾಖಲೆಯತ್ತ ಕ್ರೀಡಾಳುಗಳು
10 ಸಾವಿರ ಮೀ. ನಡಿಗೆ ಸ್ಪರ್ಧೆಯಿಂದ ಕ್ರೀಡಾಕೂಟ ಆರಂಭವಾಗಿದೆ. ಕ್ರೀಡಾಳುಗಳು ಉತ್ತಮ ರೀತಿಯಲ್ಲಿ ಸಜ್ಜಾಗಿದ್ದು, ದಾಖಲೆ ಮಾಡಲು ಕಾತರರಾಗಿದ್ದಾರೆ.
-ಎ. ರಾಜವೇಲು,
ಕಾರ್ಯದರ್ಶಿ, ರಾಜ್ಯ ಆ್ಯತ್ಲೆಟಿಕ್ಸ್ ಅಸೋಸಿಯೇಶನ್
ಕಠಿನ ಅಭ್ಯಾಸ
ಉದ್ದ ಜಿಗತ ಮತ್ತು ತ್ರೋಬಾಲ್‌ನಲ್ಲಿ ಸ್ಪರ್ಧಿಸುತ್ತಿದ್ದೇನೆ. ಈ ಬಾರಿ ದಾಖಲೆ ಮಾಡುವ ಇಂಗಿತ ಹೊಂದಿದ್ದೇನೆ. ಇದಕ್ಕಾಗಿ ಕಳೆದ ಎರಡು ತಿಂಗಳಿಂದ ಕಠಿನ ಅಭ್ಯಾಸ ನಡೆಸುತ್ತಿದ್ದೇನೆ.
– ಮಾಲಾ, ಕೇರಳದ ಕ್ರೀಡಾಪಟು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.