ದೋಷ ಗ್ರಹಿಸುವ ಪ್ರವೃತ್ತಿ ಸಲ್ಲ: ಡಾ| ಹೆಗ್ಗಡೆ
ಹರಿಪ್ರಸಾದ್ ರೈ ಬೆಳ್ಳಿಪಾಡಿ 70ರ ಸಂಭ್ರಮ
Team Udayavani, Jun 10, 2019, 10:54 AM IST
ಉಡುಪಿ: ಸಾಮಾನ್ಯವಾಗಿ ಜನರಲ್ಲಿ ಉತ್ತಮ ಗುಣಕ್ಕಿಂತ ದೋಷವನ್ನು ಗ್ರಹಿಸುವ ಶಕ್ತಿ ಹೆಚ್ಚಿರುತ್ತದೆ. ಆದರೆ ಹರಿಪ್ರಸಾದ ರೈ ಅವರ ವ್ಯಕ್ತಿತ್ವ ಭಿನ್ನವಾಗಿದೆ. ಅವರು ಇಲ್ಲಿಯವರೆಗೆ ಯಾರೊಬ್ಬರನ್ನೂ ಟೀಕೆ ಮಾಡಿದವರಲ್ಲ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ತಿಳಿಸಿದ್ದಾರೆ.
ಶನಿವಾರ ಅಂಬಲಪಾಡಿಯ ಶ್ಯಾಮಿಲಿ ಸಭಾಭವನದಲ್ಲಿ ಆಯೋಜಿಸಿದ್ದ ಹರಿಪ್ರಸಾದ್ ರೈ ಬೆಳ್ಳಿಪಾಡಿ 70ರ ಸಂಭ್ರಮದಲ್ಲಿ ಮಾತನಾಡಿದರು.
ರೈ ತಮ್ಮ 70ರ ಸಂಭ್ರಮದಲ್ಲಿ ನಾಲ್ಕು ಮಠಾಧೀಶರನ್ನು ಒಂದೇ ವೇದಿಕೆಯಲ್ಲಿ ತಂದಿರುವುದು ಸಂತೋಷದ ವಿಷಯ. ರೈ ಅವರ ಮೇಲಿನ ಅಭಿಮಾನದಿಂದ ದೇಶ- ವಿದೇಶಗಳಿಂದ ಬಂದಿದ್ದಾರೆ. ಅವರಿಂದ ಸಾಮಾಜಿಕ ಹಾಗೂ ಧಾರ್ಮಿಕ ಕ್ಷೇತ್ರಗಳಿಗೆ ಇನ್ನೂ ಹೆಚ್ಚಿನ ಸೇವೆ ಸಿಗುವಂತಾಗಲಿ. ಶ್ರೀ ಕ್ಷೇತ್ರ ಧರ್ಮಸ್ಥಳದ ಕುಟುಂಬದಲ್ಲಿ ಅವರು ಒಬ್ಬರಾಗಿದ್ದಾರೆ ಎಂದರು.
ತಾನು ಯಾರೆಂಬುದು ಮನುಷ್ಯನ ಹುಟ್ಟಿ ನೊಂದಿಗೆ ನಿರ್ಧಾರವಾಗಿರುತ್ತದೆ. ಆದರೆ ತಾನು ಏನೆಂಬುದನ್ನು ಮಾತ್ರ ಬದುಕಿನಲ್ಲಿ ಗಳಿಸ ಬೇಕಾಗುತ್ತದೆ. ರೈ ಧಾರ್ಮಿಕ, ಸಾಮಾಜಿಕ ಕಾರ್ಯ ಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಮೂಲಕ ತಾನು ಏನೆಂಬುದು ಬದುಕಿನಲ್ಲಿ ಕಂಡುಕೊಂಡಿದ್ದಾರೆ ಎಂದು ಕಾರ್ಯಕ್ರಮ ಉದ್ಘಾಟಿಸಿ ಶ್ರೀ ಕ್ಷೇತ್ರದ ಧರ್ಮಸ್ಥಳದ ಹೇಮಾವತಿ ವಿ. ಹೆಗ್ಗಡೆ ಹೇಳಿದರು.
ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಶ್ರೀಪಾದರು, ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು. ಬೆಳ್ಳಿ ಬೆಳಕು (ನಡೆದು ಬಂದ ದಾರಿ) ಪುಸ್ತಕವನ್ನು ಕೇಂದ್ರ ಕೃಷಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಡಾ| ಎಸ್.ಕೆ. ಪಟ್ನಾಯಕ್ ಬಿಡುಗಡೆ ಮಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ದಂಪತಿಯನ್ನು ಹರಿಪ್ರಸಾದ್ ರೈ ಕುಟುಂಬದವರು ಸಮ್ಮಾನಿಸಿದರು. ಶ್ರೀ ಪ್ರಸನ್ನ ಗಣಪತಿ ದೇಗುಲ, ಶ್ರೀ ವೇದಾಚಲ ಸೇವಾ ಟ್ರಸ್ಟ್ , ಶ್ರೀ ಕ್ಷೇತ್ರದ ಧರ್ಮಸ್ಥಳದಿಂದ ಹರಿಪ್ರಸಾದ್ ರೈ ದಂಪತಿಯನ್ನು ಸಮ್ಮಾನಿಸಲಾಯಿತು.
ಧರ್ಮಸ್ಥಳ ಡಿ. ಸುರೇಂದ್ರ ಕುಮಾರ್, ಶಾಸಕ ಸಿ.ಟಿ. ರವಿ, ಮಾಹೆ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್, ಹಿರಿಯ ಪತ್ರಕರ್ತ ಈಶ್ವರ ದೈತೋಟ, ಬೆಂಗಳೂರು ಎಂಆರ್‌ಜಿ ಗ್ರೂಪ್ಸ್ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಕುಂದಾಪುರ ಡಾ| ಜಿ.ಎಚ್. ಪ್ರಭಾಕರ ಶೆಟ್ಟಿ, ಏಸ್ ವಿದ್ಯಾಸಂಸ್ಥೆಯ ಲಾತವ್ಯ ಆಚಾರ್ಯ, ಮಂಗಳೂರು ನಂದಳಿಕೆ ಬಾಲಚಂದ್ರ ರಾವ್, ಉಡುಪಿ ಮೀನಾ
ಲಕ್ಷಣಿ ಅಡ್ಯಂತಾಯ, ಆಂಧ್ರಪ್ರದೇಶ ಮಾನವ ಸಂಪನ್ಮೂಲ ಮಾಜಿ ಸಚಿವ ಗಂಟಾ ಶ್ರೀನಿವಾಸ ರಾವ್, ಡಾ| ವಿದ್ಯಾಭೂಷಣ, ನಿವೃತ್ತ ಪೊಲೀಸ್
ಮಹಾನಿರ್ದೇಶಕ ಪಿ. ಓಂಪ್ರಕಾಶ, ಪಡು ಪಣಂಬೂರು ಮೂಲ್ಕಿ ಅರಮನೆ ಎಂ. ದುಗ್ಗಣ್ಣ ಸಾವಂತರು, ಪಡುಬಿದ್ರಿ ಬೀಡು ರತ್ನಾಕರ ರಾಜ ಕಿನ್ಯಕ್ಕ ಬಲ್ಲಾಳ್, ಡಾ| ಜಯಶ್ರೀ ದೇಶಪಾಂಡೆ ಮುಂಬಯಿ, ರಾಜಭವನ ಅಧೀನ ನಿವೃತ್ತ ಕಾರ್ಯದರ್ಶಿ ಸುಮಿತ್ರ ಎಂ. ಸುಮಿತ್ರ, ಹರಿಪ್ರಸಾದ್ ರೈ ಬೆಳ್ಳಿಪಾಡಿ, ವೀಣಾ ಎಚ್. ರೈ. ಟಿಸಿಎಸ್ ನಿರ್ದೇಶಕ ಶೌಕತ್, ನೆದರ್‌ಲ್ಯಾಂಡ್ಸ್ ಎಕ್ಸ್‌ಪೋಶರ್ ಸಂಸ್ಥೆಯ ಗುಣಮಟ್ಟ ನಿಯಂತ್ರಣ ವ್ಯವಸ್ಥಾಪಕಿ ರಿಯಾ ಸುಶಾರ ಉಪಸ್ಥಿತರಿದ್ದರು.
ನೆದರ್‌ಲ್ಯಾಂಡ್ಸ್ ಮೆಟ್ರೊಲಾಜಿಕಲ್ ನಿರ್ದೇಶಕ ಮೆಹಾಲ್ ರೈ ಬೆಳ್ಳಿಪಾಡಿ ಸ್ವಾಗತಿಸಿ, ಲಂಡನ್ ಡಿಎಝಡ್‌ಎನ್ ಉಪಾಧ್ಯಕ್ಷೆ ಸೋನಿಯಾ ರೈ ವಂದಿಸಿದರು. ದಾಮೋದರ್ ಶರ್ಮ ನಿರ್ವಹಿಸಿದರು. ಡಾ| ವಿದ್ಯಾಭೂಷಣ ಅವರಿಂದ ಭಕ್ತಿ ಭಾವ ಪೂರ್ಣ ಸಂಗೀತ ಕಾರ್ಯಕ್ರಮ ನಡೆಯಿತು.
ಸೇವೆಯಲ್ಲಿ ದೇವರನ್ನು ಕಾಣಿರಿ
ದೇವರನ್ನು ಆರಾಧಿಸುವುದು ಅತ್ಯಂತ ಸುಲಭ. ಸಮಾಜದಲ್ಲಿರುವ ಅಶಕ್ತರಿಗೆ ಸಹಾಯ ಮಾಡಿದಾಗ ಭಗವಂತ ನಿರಾಯಾಸವಾಗಿ ಒಲಿಯುತ್ತಾನೆ. ರೈ ಅವರ ಸಂಘಟನೆ ಶಕ್ತಿ ಹಾಗೂ ನಿಸ್ವಾರ್ಥ ಸೇವೆಯ ಮೂಲಕ ಜನರ ಪ್ರೀತಿಯನ್ನು ಗಳಿಸಿದ್ದಾರೆ ಎಂದು ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.
ವಿಶ್ವಾಸ ಗಳಿಸಿ
ಜನರ ಪ್ರೀತಿ, ವಿಶ್ವಾಸ ಗಳಿಸಿದಾಗ ಮಾತ್ರ ಜೀವನ ಸಾರ್ಥಕವಾಗುತ್ತದೆ. ಜಿಲ್ಲೆಯಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಲ್ಲಿ ರೈ ಅವರು ಭಾಗವಹಿಸಿ ಕಾರ್ಯಕ್ರಮಗಳ ಯಶಸ್ಸಿಗೆ ಕಾರಣರಾಗಿದ್ದಾರೆ ಎಂದು ಪುತ್ತಿಗೆ ಮಠದ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Shimoga; ಮನೆಯಂಗಳದಿಂದ ನಾಯಿ ಹೊತ್ತೊಯ್ದ ಚಿರತೆ; ಸಿಸಿಕ್ಯಾಮರಾದಲ್ಲಿ ದೃಶ್ಯ ಸೆರೆ
Padubidri: ಮೈದಾನದ ಅಂಚಿನಲ್ಲಿ ಚರಂಡಿ ನಿರ್ಮಾಣ; ಕ್ರೀಡಾಪ್ರೇಮಿಗಳ ಆರೋಪ
Shirva: ಮೂಡುಬೆಳ್ಳೆ ಪೇಟೆ; ನಿತ್ಯ ಟ್ರಾಫಿಕ್ ಜಾಮ್
Manipal: ಇಲ್ಲಿ ನಿರಾಳವಾಗಿ ನಡೆಯಲೂ ಭಯ!; ಪಾತ್‌ನಲ್ಲಿ ತರಗೆಲೆ, ಗಿಡಗಂಟಿ, ಪೊದರಿನ ಆತಂಕ
Canada Court:ಹರ್ದೀಪ್ ನಿಜ್ಜರ್ ಹ*ತ್ಯೆ ಪ್ರಕರಣ: ನಾಲ್ವರು ಭಾರತೀಯರಿಗೆ ಜಾಮೀನು ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.