94ಸಿ, 94ಸಿಸಿ ಹಕ್ಕುಪತ್ರಕ್ಕೆ ಆದೇಶ: ಕಂದಾಯ ಸಚಿವ ಕಾಗೋಡು
Team Udayavani, Mar 11, 2017, 12:17 PM IST
ಉಡುಪಿ: ಸಾಗುವಳಿ ಭೂಮಿ ಮತ್ತು ಮನೆ ನಿವೇಶನಕ್ಕೆ ಸಂಬಂಧಿಸಿ 94ಸಿ ಮತ್ತು 94 ಸಿಸಿಯಡಿ ಅರ್ಹರಿಗೆ ಹಕ್ಕುಪತ್ರ ನೀಡಲು ಕಂದಾಯ ಇಲಾಖೆಯಿಂದ ಸೂಕ್ತ ಆದೇಶ ನೀಡಲಾಗುವುದು ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದರು.
ಅವರು ಗುರುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಈ ಪ್ರಕರಣಗಳ ವಿಲೆವಾರಿ ಪ್ರಗತಿ ಪರಿಶೀಲನೆ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ
ದರು. ಜಮೀನಿನ ವಿಶೇಷ ಹಕ್ಕು ಕಾಯಿದೆಯಡಿ ಸರಕಾರಿ ಜಾಗ ಗುರುತಿಸಿ ಅರ್ಹರಿಗೆ ಭೂಮಿ ಹಂಚಲಾಗುವುದು ಎಂದರು.
ಗೋಮಾಳಕ್ಕೆ ತಿದ್ದುಪಡಿ
ಗೋಮಾಳಕ್ಕೆ ಸಂಬಂಧಿಸಿ ತಿದ್ದುಪಡಿ ಆದೇಶ ಬಂದಿರುವುದಾಗಿ ಜಿಲ್ಲಾಧಿಕಾರಿ ತಿಳಿಸಿದರು. ಕುಮ್ಕಿ ಮತ್ತು ಡೀಮ್r ಫಾರೆಸ್ಟ್ ಸಂಬಂಧ ಕ್ಯಾಬಿನೆಟ್ ಉಪಸಮಿತಿ ಪರಿಶೀಲಿಸುತ್ತಿದ್ದು, 15 ದಿನಗಳೊಳಗಾಗಿ ನಿರ್ಣಯ ತೆಗೆದುಕೊಂಡು ಆದೇಶ ಹೊರಡಿಸಲಾಗುವುದು. ಕುಮ್ಕಿಗೆ ಸಂಬಂಧಪಟ್ಟಂತೆ ಸು. ಕೋ. ಸರಕಾರಿ ಜಮೀನು ಎಂದು ಆದೇಶ ನೀಡಿದ್ದು, ಈ ಬಗ್ಗೆ ಸುತ್ತೋಲೆ ಕಳುಹಿಸಲಾಗುವುದು. ಇದನ್ನು ಅನು ಷ್ಠಾನಕ್ಕೆ ತನ್ನಿ ಎಂದು ಅಧಿಕಾರಿಗಳಿಗೆ ಸಚಿವರು ಹೇಳಿದರು.
ಅರ್ಜಿ ಸಲ್ಲಿಸಲು ಅವಕಾಶ
ಅರಣ್ಯ ಹಕ್ಕು ಕಾಯಿದೆಯಡಿ ಸಂಬಂಧಪಟ್ಟ ಗ್ರಾಮ ಅರಣ್ಯ ಸಮಿತಿಗೆ ಇಂದೂ ಅರ್ಜಿ ಸ್ವೀಕರಿಸಲು ಅವಕಾಶ ಕಲ್ಪಿಸಲಾಗಿದೆ. ಗೋಮಾಳ ವಿರಹಿತಗೊಳಿಸಲು ಈಗಾಗಲೇ ಸುತ್ತೋಲೆ ಕಳುಹಿಸಲಾಗಿದ್ದು, ಸುತ್ತೋಲೆಗಳನ್ನು ತಹಶೀಲ್ದಾರ್‌ಗಳು ಸ್ಪಷ್ಟವಾಗಿ ಓದಿ ಅನುಷ್ಠಾನಕ್ಕೆ ತನ್ನಿ ಎಂದರು.
ಅರ್ಹ ಫಲಾನುಭವಿಗಳು ಅರ್ಜಿ ಸಲ್ಲಿಸದಿದ್ದರೆ ಅರ್ಜಿಯನ್ನು ಈಗಲೂ ಸ್ವೀಕರಿಸಿ ಎಂದು ತಹಶೀಲ್ದಾರ್‌ರಿಗೆ ಸಚಿವರು ಹೇಳಿದರು.
ಬಾಪೂಜಿ ಸೇವಾ ಕೇಂದ್ರದಲ್ಲಿ ನೀಡುವ ಸೇವೆಗಳ ಬಗ್ಗೆ ಮಾಹಿತಿ ನೀಡಿ ಎಂದರು. ಬರ, ಕುಡಿಯುವ ನೀರು, ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ಹಣಕ್ಕೆ ಕೊರತೆ ಇಲ್ಲ. ಅಂದಾಜುಪಟ್ಟಿ ತಯಾರಿಸಿ ಕಳುಹಿಸಿಕೊಡಲು ಜಿಲ್ಲಾಧಿಕಾರಿ ಪ್ರಿಯಾಂಕಾ ಮೇರಿ ಫ್ರಾನ್ಸಿಸ್ ಅವರಿಗೆ ಸೂಚನೆ ನೀಡಿದರು.
ಪೋಡಿ ಮುಕ್ತ ಗ್ರಾಮ, ಪಿಂಚಣಿ ಅದಾಲತ್, ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಸರ್ವೇಯರ್ ಬಗ್ಗೆ, ಹುದ್ದೆ ಮಂಜೂರಾತಿ ಬಗ್ಗೆ,
ವಿದ್ಯಾರ್ಥಿ ನಿಲಯಗಳಿಗೆ ಭೂಮಿ ಕಾಯ್ದಿರಿಸುವಿಕೆ ಬಗ್ಗೆ ಚರ್ಚಿಸಲಾಯಿತು. ಪಂಚಾಯತ್‌ಗಳು ಇನ್ನಷ್ಟು ಉತ್ತಮವಾಗಿ ಕಾರ್ಯನಿರ್ವಹಿಸಬೇಕೆಂದ ಸಚಿವರು, ಕಳುಹಿಸಿದ ಸುತ್ತೋಲೆಗಳನ್ನು ಓದಿ ಜನರಿಗೆ ಮಾಹಿತಿ ಕೊಡಿ ಎಂದು ತಹಶೀಲ್ದಾರ್‌ರಿಗೆ ಸೂಚಿಸಿದರು. ಸಚಿವ ಪ್ರಮೋದ್ ಮಧ್ವರಾಜ್, ಶಾಸಕರಾದ ವಿನಯಕುಮಾರ್ ಸೊರಕೆ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಕೆಎಸ್‌ಆರ್‌ಟಿಸಿ ಅಧ್ಯಕ್ಷ ಗೋಪಾಲ್ ಪೂಜಾರಿ ಅಕ್ರಮ-ಸಕ್ರಮ ಬೈಠಕ್ ಹಾಗೂ ತಮ್ಮ ವ್ಯಾಪ್ತಿಯ ಜನರ ಸಮಸ್ಯೆಗಳನ್ನು ಸಚಿವರ ಗಮನಕ್ಕೆ ತಂದರು. ಅಪರ ಜಿಲ್ಲಾಧಿಕಾರಿ ಅನುರಾಧ, ಸಹಾಯಕ ಆಯುಕ್ತೆ ಶಿಲ್ಪಾ$ನಾಗ್, ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ಅಶೋಕ್ ಕುಮಾರ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.