ಭುವನೇಂದ್ರ ಕಿದಿಯೂರು ಅವರಿಗೆ ಅದ್ದೂರಿ ಅಭಿನಂದನೆ

75ರ ಹುಟ್ಟುಹಬ್ಬದ ಸಂಭ್ರಮ

Team Udayavani, Jul 22, 2019, 5:00 AM IST

210719ASTRO09

ಪೇಜಾವರ ಶ್ರೀಗಳು ಭುವನೇಂದ್ರ ಕಿದಿಯೂರು ದಂಪತಿಯನ್ನು ಸಮ್ಮಾನಿಸಿ ಆಶೀರ್ವದಿಸಿದರು.

ಉಡುಪಿ: ಹಿರಿಯ ಹೊಟೇಲ್‌ ಉದ್ಯಮಿ, ದಾನಿ, ಧಾರ್ಮಿಕ-ಸಾಮಾಜಿಕ ಮುಂದಾಳು ಭುವನೇಂದ್ರ ಕಿದಿಯೂರು ಅವರಿಗೆ 75 ವರ್ಷ ತುಂಬುವ ಸುಸಂದರ್ಭ ಅವರನ್ನು ಅಭಿಮಾನಿಗಳು ರವಿವಾರ ಅಂಬಲಪಾಡಿ ಶ್ಯಾಮಿಲಿ ಸಭಾಂಗಣದಲ್ಲಿ ಅದ್ದೂರಿಯಾಗಿ ಅಭಿನಂದಿಸಿದರು.

ಕಾರ್ಯಕ್ರಮಕ್ಕೆ ಮುನ್ನ ಸ್ವಾಮೀಜಿ, ಧರ್ಮಗುರು, ಅತಿಥಿಗಣ್ಯರನ್ನು ವಾದ್ಯಘೋಷ, ಕೊಂಬು ಕಹಳೆ, ಚೆಂಡೆ, ಸ್ಯಾಕ್ಸೊಫೋನ್ ವಾದನದೊಂದಿಗೆ ಸ್ವಾಗತಿಸಲಾಯಿತು. ಶ್ರೀಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಸಮಾರಂಭವನ್ನು ಉದ್ಘಾಟಿಸಿದರು.

ಪ್ರತಿಯೊಬ್ಬರೂ ಸಮಾಜದಿಂದಲೇ ಬದುಕು ನಡೆಸುತ್ತಿರುವುದು. ರೈತ ಅಕ್ಕಿಯನ್ನು ಉತ್ಪಾದನೆ ಮಾಡಿದರೆ ಮಾತ್ರ ಎಲ್ಲರಿಗೂ ಸುಗ್ರಾಸವಾದ ಊಟ ದೊರಕುತ್ತದೆ. ಹೀಗೆ ಸಮಾಜದಿಂದ ಬದುಕಿದ ನಾವು ಸಮಾಜಕ್ಕೆ ಏನಾದರೂ ಕೊಡುಗೆಗಳನ್ನು ಸಲ್ಲಿಸಬೇಕು. ಇಲ್ಲವಾದರೆ ಬದುಕು ವ್ಯರ್ಥವಾಗುತ್ತದೆ. ಭಗವಂತ ಕೊಟ್ಟ ಸಂಪತ್ತನ್ನು ಸಮಾಜಕ್ಕೆ ವಿನಿಯೋಗಿಸಬೇಕು. ಬಡವರು, ದೀನದಲಿತರಲ್ಲಿ ಭಗವಂತನ ವಿಶೇಷ ಸನ್ನಿಧಾನವಿರುವುದರಿಂದ ಅಂತಹವರ ಸೇವೆ ಮಾಡಿದಲ್ಲಿ ದೇವರು ಸುಪ್ರೀತನಾಗುತ್ತಾನೆ. ಭುವನೇಂದ್ರ ಕಿದಿಯೂರು ಅವರು ಪ್ರತಿಮಾ ಸೇವೆಯೊಂದಿಗೆ ಇಂತಹ ಸಮಾಜ ಸೇವೆಯನ್ನು ಮಾಡುತ್ತಿದ್ದಾರೆ ಎಂದು ಆಶೀರ್ವಚನದಲ್ಲಿ ಶ್ರೀಕಾಣಿಯೂರು ಮಠದ ಶ್ರೀವಿದ್ಯಾವಲ್ಲಭತೀರ್ಥ ಶ್ರೀಪಾದರು ನುಡಿದರು.

ಡಾ| ಟಿಎಂಎ ಪೈ, ಟಿ.ಎ.ಪೈ, ಶ್ರೀನಿವಾಸ ಮಲ್ಯ, ಡಾ| ವಿ.ಎಸ್‌.ಆಚಾರ್ಯ, ಆಸ್ಕರ್‌ ಫೆರ್ನಾಂಡಿಸ್‌ ಮೊದಲಾದವರ ಕೊಡುಗೆಯಿಂದಾಗಿ ಕರಾವಳಿ ಜಿಲ್ಲೆಗಳು ಶಿಕ್ಷಣ, ಆರೋಗ್ಯ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿವೆ. ಇಂಥ ಸಾಧಕರ ಸಾಲಿಗೆ ಭುವನೇಂದ್ರ ಕಿದಿಯೂರು ಕೂಡ ಸೇರಿದ್ದಾರೆ. ಅವರ ಬದುಕು ಇತರರಿಗೆ ಮಾರ್ಗದರ್ಶನ ನೀಡುವಂತಿದೆ ಎಂದು ವಿಧಾನಪರಿಷತ್‌ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಮೊನ್ನೆಯಷ್ಟೇ ಪ್ರಧಾನಿ ನರೇಂದ್ರ ಮೋದಿಯವರನ್ನು ಹರಸಿ ಬಂದಿರುವ ಸರ್ವಶ್ರೇಷ್ಠ ಜಗದ್ಗುರು ಪೇಜಾವರ ಶ್ರೀಗಳಿಂದ ಭುವನೇಂದ್ರ ಕಿದಿಯೂರು ಅವರು ಆಶೀರ್ವಾದ ಪಡೆಯುತ್ತಿರುವುದು ನಿಜಕ್ಕೂ ರೋಮಾಂಚನದ ಕ್ಷಣ. ಇದೊಂದು ಅರ್ಥಪೂರ್ಣ ಮತ್ತು ಹೃದಯ ತಟ್ಟುವ ಸಮಾರಂಭ ಎಂದು ಶ್ರೀನಿವಾಸ ಪೂಜಾರಿ ಹೇಳಿದರು.

ದೇವರು ಕೊಟ್ಟ ವರ
ಶುಭಾಶಂಸನೆಗೈದ ಉಡುಪಿ ಮದರ್‌ ಆಫ್ ಸಾರೋಸ್‌ ಚರ್ಚ್‌ನ ಧರ್ಮಗುರು ರೆ| ಫಾ| ವಲೇರಿಯನ್‌ ಮೆಂಡೋನ್ಸ ಅವರು, “ಶ್ರದ್ಧೆಯಿಂದ ದುಡಿದು ಅದರಿಂದ ಗಳಿಸಿದ ಹಣವನ್ನು ಬಡ ಮಕ್ಕಳ ಶಿಕ್ಷಣ, ಬಡ ಕುಟುಂಬಗಳ ಆರೋಗ್ಯಕ್ಕಾಗಿ ನೀಡುತ್ತಿದ್ದಾರೆ. ಇವರು ಉಡುಪಿಗೆ ದೇವರು ಕೊಟ್ಟ ವರ. ಇವರು ಸಮಾಜದ ರತ್ನ. ಬಡವರ ಬಂಧು ಆಗಿರುವ ಇವರ ಬದುಕು ಸಾರ್ಥಕವಾಗಿ ಇತರರಿಗೆ ದಾರಿದೀಪವಾಗಲಿ’ ಎಂದು ಹೇಳಿದರು.

ಉತ್ತಮ ಸಂದೇಶ
ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ.ಮೋಹನ ಆಳ್ವ ಅವರು ಮಾತನಾಡಿ, “ಭುವನೇಂದ್ರ ಕಿದಿಯೂರು ಅವರು ತಮ್ಮ ಆದರ್ಶ ಜೀವನದ ಮೂಲಕ ಸಮಾಜಕ್ಕೆ ಉತ್ತಮ ಸಂದೇಶಗಳನ್ನು ನೀಡುತ್ತಿದ್ದಾರೆ. ಅವರೊಂದಿಗೆ ನಾವು ಇರುವುದೇ ಸಂತೋಷದ ಸಂಗತಿ’ ಎಂದರು ಹೇಳಿದರು.

ಫ‌ಲ ನೀಡುವ ಮರ
ಕೋಟ ಗೀತಾನಂದ ಫೌಂಡೇಶನ್‌ ಅಧ್ಯಕ್ಷ ಆನಂದ ಸಿ.ಕುಂದರ್‌ ಅವರು ಮಾತನಾಡಿ, “ಜೀವನದಲ್ಲಿ ಸಂತೃಪ್ತಿ ಸಿಗಬೇಕಾದರೆ ನಾವು ನೆರಳು ಮತ್ತು ಫ‌ಲ ನೀಡುವ ಮರದಂತಿರಬೇಕು. ಭುವನೇಂದ್ರ ಕಿದಿಯೂರು ಅವರು ಬೆಳೆದ ರೀತಿ, ಅವರ ಜನಪರ, ಧಾರ್ಮಿಕ ಕಾರ್ಯಕ್ರಮಗಳು ಸಮಾಜಕ್ಕೆ ಹೆಮ್ಮೆ’ ಎಂದರು.

ಪರಿಶ್ರಮದಿಂದ ಬಂದ ಯಶಸ್ಸು
ಅಧ್ಯಕ್ಷತೆ ವಹಿಸಿದ್ದ ಮಣಿಪಾಲ ಮಾಹೆ ವಿ.ವಿ. ಸಹಕುಲಾಧಿಪತಿ ಡಾ|ಎಚ್‌.ಎಸ್‌.ಬಲ್ಲಾಳ್‌ ಅವರು, ಬಡಕುಟುಂಬದಿಂದ ಬಂದ ಭುವನೇಂದ್ರ ಕಿದಿಯೂರು ಅವರು ಸ್ವಂತ ಪರಿಶ್ರಮದಿಂದ ಯಶಸ್ಸನ್ನು ಗಳಿಸಿ ಸಮಾಜ ಸೇವೆಯಲ್ಲಿ ತೊಡಗಿಕೊಂಡಿದ್ದಾರೆ ಎಂದು ಪ್ರಶಂಸಿಸಿದರು. ಹೀರಾ ಭುವನೇಂದ್ರ ಕಿದಿಯೂರು, ದ.ಕ ಮೊಗವೀರ ಮಹಾಜನ ಸಂಘ ಉಚ್ಚಿಲದ ಅಧ್ಯಕ್ಷ ಜಯ ಸಿ.ಕೋಟ್ಯಾನ್‌ ಉಪಸ್ಥಿತರಿದ್ದರು.

ಎರ್ಮಾಳಿನ ಚಂದ್ರಶೇಖರ್‌ ಮತ್ತು ಬಳಗದವರಿಂದ ವಾದ್ಯ ಸಂಗೀತ, ನೃತ್ಯನಿಕೇತನ ಕೊಡವೂರು ಕಲಾವಿದರಿಂದ ಪ್ರಾರ್ಥನ ನೃತ್ಯ ನಡೆಯಿತು.

ವಿಶಿಷ್ಟ ಅಭಿನಂದನೆ
ಶಿವಮೊಗ್ಗದಲ್ಲಿ ಮಾಡಿ ತರಿಸಲಾದ ರಕ್ತಚಂದನದ ಶ್ರೀಕೃಷ್ಣನ ಪ್ರತಿಮೆಯನ್ನು ಪರ್ಯಾಯ ಶ್ರೀ ಪಲಿಮಾರು ಶ್ರೀಪಾದರು ಶ್ರೀಕೃಷ್ಣಮಠದಲ್ಲಿಟ್ಟು ಪೂಜಿಸಿ ಅದನ್ನು ಸಭಾಂಗಣದಲ್ಲಿ ಬೆಳ್ಳಿಯ ಪಲ್ಲಕ್ಕಿಯಲ್ಲಿ ವೇದಿಕೆಗೆ ತಂದು ಭುವನೇಂದ್ರ ಕಿದಿಯೂರು ಅವರಿಗೆ ಸ್ಮರಣಿಕೆ ರೂಪದಲ್ಲಿ ನೀಡಿ ಅಭಿನಂದಿಸಲಾಯಿತು.

ಬದುಕು ಸುಗಂಧಮಯವಾಗಲಿ
“ತರಂಗ’ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಸಂಧ್ಯಾ ಎಸ್‌.ಪೈ ಅವರು ಮಾತನಾಡಿ, “ಸಮಾಜದ ನೋವು-ನಲಿವುಗಳಿಗೆ ಸ್ಪಂದಿಸುವವರು ಧರ್ಮಾತ್ಮರು. ಕೆಲವರು ವಿಶೇಷ ಕೆಲಸಗಳಿಗಾಗಿಯೇ ಹುಟ್ಟಿ ಬರುತ್ತಾರೆ. ಅಂಥವರಲ್ಲಿ ಭುವನೇಂದ್ರ ಕಿದಿಯೂರು ಕೂಡ ಒಬ್ಬರು. ಹೂವು ತನ್ನ ಸುಗಂಧದಿಂದ ಸುತ್ತಲಿನವರಿಗೆ ಆಹ್ಲಾದ ನೀಡುವಂತೆ ನಮ್ಮ ಬದುಕು ಕೂಡ ಇರಬೇಕು. ಅದರಿಂದ ಬದುಕು ಅಮೃತತ್ವ ಪಡೆಯಬೇಕು ಎಂದು ಹೇಳಿದರು.

ಟಾಪ್ ನ್ಯೂಸ್

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Stock-market-Exchange

NSE, BSE; ಷೇರು ಮಾರುಕಟ್ಟೆಗೆ ನವೆಂಬರ್‌ 20 ರಂದು ರಜೆ ಘೋಷಣೆ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Sagara: ದನ ಕಳವು ಪ್ರಕರಣ; ಇಬ್ಬರು ಆರೋಪಿಗಳ ಬಂಧನ

Women-Mesure

Proposes: ಪುರುಷ ಟೈಲರ್‌ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ

1-qweeqw

Lucky car; ಅದೃಷ್ಟ ತಂದ ಕಾರಿನ ಸಮಾಧಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ 1,500 ಜನರು!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

15

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್‌; ತಪ್ಪಿದ ಅನಾಹುತ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

Udupi: ಬೆಂಬಲ ಬೆಲೆ ಯೋಜನೆಯಡಿ ಭತ್ತ ಖರೀದಿ

de

Malpe ಸೀವಾಕ್‌ ಸಮುದ್ರತೀರದಲ್ಲಿ ಮೃತದೇಹ ಪತ್ತೆ

sand

Bramavara: ಬೆಣ್ಣೆಕುದ್ರು; ಮರಳು ಅಕ್ರಮ ಸಾಗಾಟ

crime

Brahmavara: ಯಡ್ತಾಡಿ; ಬೈಕ್‌ ಅಪಘಾತ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

4

Mangaluru: ಗಾಂಜಾ ಮಾರಾಟ; ಇಬ್ಬರು ಯುವಕರ ಬಂಧನ

3

Uppinangady: ಕಬ್ಬಿಣದ ರಾಡಿನಿಂದ ಹಲ್ಲೆ; ದೂರು ದಾಖಲು

1-CJI-BG

Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ

BSY-Ballari

By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್‌.ಯಡಿಯೂರಪ್ಪ ಭವಿಷ್ಯ

15

Udupi: ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಮಗುಚಿ ಬಿದ್ದ ಕ್ರೇನ್‌; ತಪ್ಪಿದ ಅನಾಹುತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.