ಸ್ಲ್ಯಾಬ್ ಇಲ್ಲದೇ ಅಪಾಯಕ್ಕೆ ಆಹ್ವಾನ ನೀಡುವ ಚರಂಡಿ
ದ್ವಿಚಕ್ರ ವಾಹನ ಓಡಿಸಲಾದರೂ ರಸ್ತೆ ಕೊಡಿ
Team Udayavani, Feb 24, 2020, 5:01 AM IST
ಅಭಿವೃದ್ಧಿಗೆ ಅಗತ್ಯವಿರುವ ರಸ್ತೆ
ಕುಂದಾಪುರ: ಹೆಸರಿಗೆ ಮೀನುಮಾರುಕಟ್ಟೆ ವಾರ್ಡ್ ಎಂದಿದ್ದರೂ ಮೀನು ಮಾರುಕಟ್ಟೆ ಈ ವಾರ್ಡ್ ವ್ಯಾಪ್ತಿಗೆ ಬರುವುದಿಲ್ಲ. ಅದು ಇರುವುದು ಸರಕಾರಿ ಆಸ್ಪತ್ರೆ ವಾರ್ಡ್‌ನಲ್ಲಿ. ಆದರೆ ಮೀನು ಮಾರುಕಟ್ಟೆ ರಸ್ತೆಯ ಆಜುಬಾಜು ಈ ವಾರ್ಡ್‌ನ ವ್ಯಾಪ್ತಿಯಲ್ಲಿದೆ.
ರಸ್ತೆ ಬೇಕು
“ಸುದಿನ’ ವಾರ್ಡ್ ಸುತ್ತಾಟ ಸಂದರ್ಭ ಫಿಶ್ ಮಾರ್ಕೆಟ್ ವಾರ್ಡ್‌ನ ಜನರನ್ನು ಮಾತನಾಡಿಸಲಾಯಿತು. ಚಿಕನ್‌ಸಾಲ್ ರಸ್ತೆಯಿಂದ ಮೀನು ಮಾರುಕಟ್ಟೆ ರಸ್ತೆಗೆ ಸಂಪರ್ಕ ಕಲ್ಪಿಸುವ ಒಂದು ರಸ್ತೆ ಮೈಲಾರೇಶ್ವರ ಯುವಕ ಮಂಡಲದ ಸಮೀಪದಲ್ಲಿ ಹಾದು ಬರುತ್ತದೆ. ಇದನ್ನು ಸುವ್ಯವಸ್ಥಿತಗೊಳಿಸಲಾಗಿದೆ. ಅದೇ ರೀತಿ ಇನ್ನೊಂದು ರಸ್ತೆ ಮೀನು ಮಾರುಕಟ್ಟೆ ರಸ್ತೆಯ ಎಂಡಿ ಕಟ್ಟಡದ ಇನ್ನೊಂದು ಮಗ್ಗುಲಿನಿಂದ ಹಾದು ಬರುತ್ತದೆ. ರಸ್ತೆ ಕಿರಿದಾದರೂ ಉಪಯೋಗ ದೊಡ್ಡದು. ಇದನ್ನು ಅರ್ಧದಷ್ಟು ಅಭಿವೃದ್ಧಿ ಮಾಡಲಾಗಿದೆ. ಇನ್ನು ಅರ್ಧ ಬಾಕಿ ಇದೆ. ಕಳೆದ ಐದು ವರ್ಷಗಳಿಂದ ಅನುದಾನ ಕೇಳುತ್ತಿದ್ದೇನೆ. ರಸ್ತೆಯನ್ನು ಪೂರ್ಣಮಾಡಿಕೊಡಲು ಸಾಧ್ಯವಾಗಿಲ್ಲ ಎನ್ನುತ್ತಾರೆ ಇಲ್ಲಿನ ಸದಸ್ಯರು. ರಸ್ತೆ ಬೇಡಿಕೆ ಈಡೇರಿದರೆ ಅನುಕೂಲವಾಗುತ್ತದೆ. ದ್ವಿಚಕ್ರ ವಾಹನಗಳು ಹೋಗುವಷ್ಟಾದರೂ ಮಾಡಿಕೊಡಲಿ. ಅಸಲಿಗೆ ರಿಕ್ಷಾ ಹೋಗುವಷ್ಟು ಮಾಡಬಹುದು. ಆದರೆ ಖಾಸಗಿ ಜಾಗದ ಸಮಸ್ಯೆಯೇನಾದರೂ ಆಗುವುದಿದ್ದರೆ ದ್ವಿಚಕ್ರ ವಾಹನ ಹಾಗೂ ಪಾದಚಾರಿಗಳ ಓಡಾಟಕ್ಕೆ ಸುವ್ಯವಸ್ಥಿತಗೊಳಿಸಬಹುದು ಎನ್ನುತ್ತಾರೆ ಇಲ್ಲಿನ ಜನ.
ಸ್ಲ್ಯಾಬ್ ಆಗಿಲ್ಲ
ಕಾಂಕ್ರೀಟ್ ರಸ್ತೆಯಿದೆ. ಪಕ್ಕದಲ್ಲೇ ಚರಂಡಿಗಳಿವೆ. ಆದರೆ ಆದರ್ಶ ಎಂಜಿನಿಯರಿಂಗ್ ವರ್ಕ್ಸ್ ಬಳಿ ಚರಂಡಿಗೆ ಸ್ಲ್ಯಾಬ್ ಅಳವಡಿಸಿಲ್ಲ. ಹಾಗಾಗಿ ಮಕ್ಕಳು, ಹಿರಿಯ ನಾಗರಿಕರು, ದನ, ಕರು ಗಳು ಬೀಳುವ ಘಟನೆಗಳು ಆಗಾಗ ನಡೆಯುತ್ತವೆ. ಕೆಲವು ಬಾರಿ ದ್ವಿಚಕ್ರ ವಾಹನಗಳೇ ಆಯ ತಪ್ಪಿ ಬಿದ್ದುದೂ ಇದೆ ಎನ್ನುತ್ತಾರೆ ಇಲ್ಲಿನ ಅಂಗಡಿ ಮಾಲಕರು. ಚರಂಡಿಗೆ ಸ್ಲ್ಯಾಬ್ ಅಳವಡಿಸಿದರೆ ರಸ್ತೆಯೂ ಅಗಲವಾಗುತ್ತದೆ. ಪ್ರಸ್ತುತ ಸಂಗಂನಿಂದ ಅಂಚೆಕಚೇರಿ ಮೂಲಕ ಬಂದು ಪುರಸಭೆ ವ್ಯಾಪ್ತಿಯ ಮುಖ್ಯ ರಸ್ತೆಗೆ ಸೇರುವ ರಸ್ತೆಯ ಅನಂತರ ಪುರಸಭೆಯ ಇನ್ನೊಂದು ಬದಿಗೆ ಮುಖ್ಯ ರಸ್ತೆ ಸೇರಲು ಇದೇ ರಸ್ತೆ ಪ್ರಮುಖ ಆಧಾರ. ಯಾವುದಾದರೂ ಒಂದು ರಸ್ತೆಯನ್ನು ಅಭಿವೃದ್ಧಿಯೋ ಇನ್ನೇನೋ ಕಾರಣದಿಂದ ಸಂಚಾರ ದುರ್ಬಲಗೊಳಿಸಿದಾಗ ಇದರ ಉಪಯೋಗ ತೀರಾ ಅನಿವಾರ್ಯವಾಗುತ್ತದೆ. ಸ್ಲ್ಯಾಬ್ ಅಳವಡಿಕೆಗೆ ಸದಸ್ಯರ ಬಳಿ ಅನೇಕ ಬಾರಿ ಮನವಿ ಮಾಡಿದ್ದರೂ ಇನ್ನೂ ಅನುದಾನ ಕೊರತೆಯೋ, ಅಧಿಕಾರ ಸಿಕ್ಕಿಲ್ಲ ಎಂದೋ ಅಂತೂ ಬಾಕಿಯಾಗಿದೆ ಎನ್ನುತ್ತಾರೆ ಈ ಭಾಗದ ಜನ.
ಒಳಚರಂಡಿ
ಒಳಚರಂಡಿ ಕಾಮಗಾರಿ ಆಗಿದೆ. ಯಥಾಪ್ರಕಾರ ಕಾಂಕ್ರೀಟ್ ರಸ್ತೆಯನ್ನು ಅಗೆದು ಬಗೆದು ಕಾಮಗಾರಿ ಮಾಡಿ ಅದನ್ನು ಹೇಗೇಗೋ ಮುಚ್ಚಿ ಏರುತಗ್ಗುಗಳನ್ನು ಉಂಟು ಮಾಡಲಾಗಿದೆ. ಆದರೆ ಈ ಭಾಗದ ಮನೆಯವರಿಗೆ ಇರುವ ಅನುಮಾನ ಏನೆಂದರೆ ಒಳಚರಂಡಿ ನೀರು ರಸ್ತೆಯಲ್ಲಿ ಹಾಕಿದ ಪೈಪಿಗೆ ಹೋಗುವುದು ಬಿಡಿ, ಆ ಪೈಪಿನ ನೀರೇ ಮನೆಗೆ ಬರದೇ ಇದ್ದರೆ ಸಾಕು ಎಂಬಂತಹ ಆತಂಕವೂ ಇದೆ.
ಸ್ಲ್ಯಾಬ್ ಹಾಕಲಿ
ಹಿರಿಯರು, ಮಕ್ಕಳು ಎನ್ನದೇ ರಸ್ತೆ ಬದಿಯ ಚರಂಡಿಗೆ ಬೀಳುತ್ತಿದ್ದಾರೆ. ಇದಕ್ಕೊಂದು ಸ್ಲ್ಯಾಬ್ ಅಳವಡಿಸಿ ಎಂದು ಮನವಿ ಮಾಡಿದರೂ ಈಡೇರಿಲ್ಲ. ಅಂಗಡಿಗಳಿಗೆ ಗ್ರಾಹಕರು ಬರದಂತಹ ಸ್ಥಿತಿ ಇದೆ. ತಕ್ಕಮಟ್ಟಿಗೆ ನಾವೇ ಕಲ್ಲುಚಪ್ಪಡಿ ಹಾಕಿಕೊಂಡಿದ್ದೇವೆ. ಬಾಕಿ ಉಳಿದ ಕಡೆಗೆ ಪುರಸಭೆಯವರು ಹಾಕಬೇಕಿದೆ.
-ವಿವೇಕ್ ಭಂಡಾರಿ, ಸುಪ್ರೀಂ ಹೇರ್ ಡ್ರೆಸರ್ಸ್, ಫಿಶ್ ಮಾರ್ಕೆಟ್ ರಸ್ತೆ
ಸ್ಲ್ಯಾಬ್ ಹಾಕಲಿ
ಹಿರಿಯರು, ಮಕ್ಕಳು ಎನ್ನದೇ ರಸ್ತೆ ಬದಿಯ ಚರಂಡಿಗೆ ಬೀಳುತ್ತಿದ್ದಾರೆ. ಇದಕ್ಕೊಂದು ಸ್ಲ್ಯಾಬ್ ಅಳವಡಿಸಿ ಎಂದು ಮನವಿ ಮಾಡಿದರೂ ಈಡೇರಿಲ್ಲ. ಅಂಗಡಿಗಳಿಗೆ ಗ್ರಾಹಕರು ಬರದಂತಹ ಸ್ಥಿತಿ ಇದೆ. ತಕ್ಕಮಟ್ಟಿಗೆ ನಾವೇ ಕಲ್ಲುಚಪ್ಪಡಿ ಹಾಕಿಕೊಂಡಿದ್ದೇವೆ. ಬಾಕಿ ಉಳಿದ ಕಡೆಗೆ ಪುರಸಭೆಯವರು ಹಾಕಬೇಕಿದೆ.
-ವಿವೇಕ್ ಭಂಡಾರಿ, ಸುಪ್ರೀಂ ಹೇರ್ ಡ್ರೆಸರ್ಸ್, ಫಿಶ್ ಮಾರ್ಕೆಟ್ ರಸ್ತೆ
ಒಳಚರಂಡಿ ಸರಿಪಡಿಸಲಿ
ರಸ್ತೆಗಳನ್ನು ಹಾಳುಗೆಡವಿ ಒಳಚರಂಡಿಗೆ ಸಂಪರ್ಕ ಕಲ್ಪಿಸಿ ದ್ದಾರೆ. ಆದರೆ ಮನೆ ಇಳಿಜಾರಿನಲ್ಲಿದ್ದು ಒಳಚರಂಡಿಯ ಮುಖ್ಯ ಪೈಪ್ ಎತ್ತರದಲ್ಲಿದೆ. ಇನ್ನು ನೀರು ಬಿಟ್ಟರೆ ಊರಿನ ನೀರೆಲ್ಲ ನಮ್ಮ ಮನೆಗೆ ಬರದೇ ಇದ್ದರೆ ಸಾಕು.
-ಉದಯ ಪೂಜಾರಿ,
ಫಿಶ್ ಮಾರ್ಕೆಟ್ ರಸ್ತೆ
ಕೆಲಸಗಳು ನಡೆದಿಲ್ಲ
ನಾನು ಕಳೆದ ಅವಧಿಯಲ್ಲಿ ಸದಸ್ಯನಾಗಿದ್ದಾಗ ಒಂದಷ್ಟು ಕೆಲಸಗಳು ನಡೆದಿವೆ. ಆದರೆ ಈ ಬಾರಿ ಸದಸ್ಯನಾದ ಬಳಿಕ ಅಧಿಕಾರವೂ ಸಿಕ್ಕಿಲ್ಲ. ಅನುದಾನವೂ ಸಿಕ್ಕಿಲ್ಲ ಎಂದಾಗಿದೆ. ಹಾಗಾಗಿ ಯಾವುದೇ ಕೆಲಸ ನಡೆದಿಲ್ಲ. ಇತರ ವಾರ್ಡ್‌ಗಳಲ್ಲಿ ಲಕ್ಷಾಂತರ ರೂ. ಕಾಮಗಾರಿ ನಡೆಯುತ್ತಿದೆ. ನಮ್ಮ ವಾರ್ಡ್‌ಗೆ ಯಾಕೆ ಅನುದಾನ ದೊರೆತಿಲ್ಲ ಎನ್ನುವುದು ಗೊತ್ತಿಲ್ಲ. ಕೆಲಸ ಎಲ್ಲ ವಾರ್ಡ್‌ಗಳಲ್ಲಿ ನಡೆಯಲಿ, ಆದರೆ ಅನುದಾನ ಹಂಚಿಕೆಯಲ್ಲಿ ರಾಜಕೀಯ ನಡೆಯಬಾರದು ಎನ್ನುವುದು ನನ್ನ ಅಭಿಪ್ರಾಯ.
-ಶ್ರೀಧರ ಶೇರೆಗಾರ್,
ಸದಸ್ಯರು, ಪುರಸಭೆ
ಆಗಬೇಕಾದ್ದೇನು?
ಒಳಚರಂಡಿಯಿಂದ ಹಾಳಾದ ರಸ್ತೆಗಳ ದುರಸ್ತಿ
ಚರಂಡಿಗಳಿಗೆ ಸ್ಲ್ಯಾಬ್ ಅಳವಡಿಕೆ
ಅರ್ಧವಾದ ರಸ್ತೆ ಕಾಮಗಾರಿ ಪೂರ್ಣಗೊಳಿಸುವುದು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
Professional Life: ಚಿತ್ರರಂಗಕ್ಕೆ ನಟ ದರ್ಶನ್ ಮರುಪ್ರವೇಶ!
Demand: ಮನೆ ನಿರ್ಮಾಣ: ಶೇ.18 ಜಿಎಸ್‌ಟಿ ರದ್ಧತಿಗೆ ಆಗ್ರಹಿಸುವೆ: ಟಿ.ಬಿ.ಜಯಚಂದ್ರ
Haveri: ಬಾಲಕಿಗೆ ಲೈಂಗಿಕ ದೌರ್ಜನ್ಯ, ಮತಾಂತರಕ್ಕೆ ಯತ್ನ: ಇಬ್ಬರ ವಶ
Re-Enforcement: ಹಳೇ ಪಿಂಚಣಿ ಯೋಜನೆ ಜಾರಿಗೊಳಿಸಿ: ಸಿ.ಎಸ್.ಷಡಾಕ್ಷರಿ ಮನವಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.