ಉಡುಪಿ: ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘ ಅಧ್ಯಕ್ಷರ ವಿರುದ್ದ ವಂಚನೆ ಪ್ರಕರಣ ದಾಖಲು
Team Udayavani, Dec 22, 2022, 6:04 PM IST
ಉಡುಪಿ: ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ ಬಿ.ವಿ. ಲಕ್ಷ್ಮೀನಾರಾಯಣ ಭಟ್ ವಿರುದ್ಧ 40.59 ಲ.ರೂ.ವಂಚನೆ ಮಾಡಿದ ಪ್ರಕರಣ ಉಡುಪಿ ಸೆನ್ ಠಾಣೆಯಲ್ಲಿ ದಾಖಲಾಗಿದೆ.
ಕಾರ್ಕಳ ನಿವಾಸಿ ಪ್ರಕಾಶ್ ಕಾಮತ್ ಅವರು ಉಡುಪಿಯ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದಲ್ಲಿ 2019 ರಲ್ಲಿ ಎಫ್.ಡಿ.ಇರಿಸಿದ್ದರು. ಹಣಕ್ಕೆ ಸಹಕಾರ ಸಂಘ ಪ್ರತಿ ತಿಂಗಳು ಶೇ.10ರಂತೆ ಬಡ್ಡಿಯನ್ನು ಎಸ್.ಬಿ.ಖಾತೆಗೆ ಹಾಕುತ್ತಿದ್ದರು. 3 ವರ್ಷದ ಅನಂತರ ರಿನಿವಲ್ ಕೂಡ ಮಾಡಿದ್ದರು. ಜೂನ್ 2022 ರಿಂದ ಇವರ ಖಾತೆಗೆ ಬಡ್ಡಿ ಹಣ ಬಂದಿರಲಿಲ್ಲ. ಈ ಬಗ್ಗೆ ವಿಚಾರಿಸಿದಾಗ ಸ್ವಲ್ಪ ದಿನದಲ್ಲಿ ಬಡ್ಡಿ ನೀಡುವುದಾಗಿ ತಿಳಿಸಿದ್ದರೂ ಇದುವರೆಗೂ ನೀಡಿರಲಿಲ್ಲ.
ಪತ್ರಿಕೆ ವರದಿಯಿಂದ ಮಾಹಿತಿ:
ಡಿ.20ರಂದು ದಿನಪತ್ರಿಕೆಯಲ್ಲಿ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘ ಉಡುಪಿಯಲ್ಲಿ ಕೋಟ್ಯಂತರ ರೂ.ವಂಚನೆ ಆರೋಪ ಪ್ರತಿಭಟನೆ ಬಗ್ಗೆ ವರದಿಯಾಗಿದ್ದು, ಆ ಬಳಿಕ ಪ್ರಕಾಶ್ ಕಾಮತ್ ಅವರು ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘಕ್ಕೆ ಬಂದು ನೋಡಿದಾಗ ಅದು ಮುಚ್ಚಲ್ಪಟ್ಟಿತ್ತು. ಇವರಂತೆ ಆ ಸಹಕಾರ ಸಂಘದಲ್ಲಿ ಕೆ.ಸತ್ಯಮೂರ್ತಿ ರಾವ್, ಲೀಲಾವತಿ, ಡಿ.ಭಾಸ್ಕರ್ ಕೋಟ್ಯಾನ್, ಟಿ. ಕೃಷ್ಣ ಗಾಣಿಗ, ಸುರೇಶ್ ಭಟ್ ಅವರಿಂದ ಒಟ್ಟು 40,59,000 ರೂ.ಹೂಡಿಕೆ ಮಾಡಿಸಿಕೊಂಡಿದ್ದಾರೆ. ಇಷ್ಟೇ ಅಲ್ಲದೆ ಇತರ ನೂರಾರು ಜನರಿಂದ ಕೂಡ ಹೂಡಿಕೆ ಮಾಡಿಕೊಂಡು ಸಂಘದ ಅಧ್ಯಕ್ಷ ಬಿ.ವಿ.ಲಕ್ಷ್ಮೀನಾರಾಯಣ ಭಟ್, ಮ್ಯಾನೇಜರ್ ಆಶಾ ಹಾಗೂ ಆಡಳಿತ ಮಂಡಳಿಯ ಸದಸ್ಯರು ಬಡ್ಡಿಯನ್ನು ಸರಿಯಾಗಿ ನೀಡದೆ ಸಹಕಾರ ಸಂಘವನ್ನು ಮುಚ್ಚಿ ಪ್ರಕಾಶ್ ಕಾಮತ್ ಹಾಗೂ ಇತರರಿಗೆ ಮೋಸ, ನಂಬಿಕೆ ದ್ರೋಹ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.