ನಗರದಲ್ಲಿ ಭಯ ಸೃಷ್ಟಿಸಿದ್ದ ಮಾನಸಿಕ ರೋಗಿ ಸಂಪೂರ್ಣ ಗುಣಮುಖ
Team Udayavani, Jun 10, 2018, 6:15 AM IST
ಉಡುಪಿ: ಮಲ್ಪೆ, ಹೂಡೆ, ವಡಭಾಂಡೇಶ್ವರ, ಆದಿಉಡುಪಿ ಮೊದಲಾದ ಸಾರ್ವಜನಿಕ ಸ್ಥಳಗಳಲ್ಲಿ
ಅಪರಿಚಿತ ಮಾನಸಿಕ ಯುವಕನೋರ್ವ ಸಾರ್ವಜನಿಕರ ಮೇಲೆ ಕಲ್ಲು ಮೊದಲಾದ ಸಿಕ್ಕ ಸಿಕ್ಕ ವಸ್ತುಗಳನ್ನು ಎಸೆಯುತ್ತ, ಹಲ್ಲೆ ಮಾಡುತ್ತಾ ಪರಿಸರದಲ್ಲಿ ಭಯದ ವಾತಾವರಣ ಸೃಷ್ಟಿಸಿದ್ದ ಯುವಕ ಸದ್ಯ ಸಂಪೂರ್ಣ ಗುಣಮುಖವಾಗಿದ್ದಾರೆ.
ಪರಿಸರದ ಜನರ ಮನವಿ ಮೇರೆಗೆ ನಾಲ್ಕು ತಿಂಗಳ ಹಿಂದೆ ಯುವಕನನ್ನು ಸಮಾಜಸೇವಕ ವಿಶು ಶೆಟ್ಟಿ ಅಂಬಲಪಾಡಿ ಅವರು ಮಲ್ಪೆ ಪೋಲಿಸರ ಸಹಾಯದಿಂದ ವಶಕ್ಕೆ ಪಡೆದು ವಿಶೇಷ ಆ್ಯಂಬು ಲೆನ್ಸ್‌ನಲ್ಲಿ ಸಹಾಯಕರನ್ನು ನೇಮಿಸಿ ಧಾರವಾಡದಲ್ಲಿರುವ ಮಾನಸಿಕ ಆಸ್ಪತ್ರೆಗೆ ಸಾಗಿಸಿ ದಾಖಲು ಮಾಡಿದ್ದರು. ಸುಮಾರು 110 ದಿನಗಳ ಸುದೀರ್ಘ ಚಿಕಿತ್ಸೆಗೆ ಸ್ಪಂದಿಸಿದ ಯುವಕ ಸಂಪೂರ್ಣ ಗುಣಮುಖಗೊಂಡಿದ್ದಾರೆ. ತನ್ನ ಹೆಸರು ಶಕ್ತಿವೇಲು, ಊರು ತಮಿಳುನಾಡು ಎನ್ನುವ ವಿಳಾಸ ನೀಡಿದ್ದಾರೆ. ಮಲ್ಪೆ ಪೊಲೀಸರು ತಮಿಳುನಾಡಿಗೆ ತೆರಳಿ ಯುವಕನ ಸಂಬಂಧಿಕರಿಗೆ ವಿಷಯ ತಿಳಿಸಿದ್ದಾರೆ. ಯುವಕನನ್ನು ಧಾರವಾಡದಿಂದ ಉಡುಪಿಗೆ ಕರೆತಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಾರಸು ದಾರರ ಸ್ಪಂದನೆ ಇಲ್ಲದ ಕಾರಣದಿಂದ ನ್ಯಾಯಾಲಯದ ಆದೇಶದಂತೆ ಯುವಕ ನನ್ನು ಮಂಗಳೂರಿನ ನಿರಾಶ್ರಿತರ ಕೇಂದ್ರಕ್ಕೆ ದಾಖಲಿಸಲಾಗಿದೆ. ಯುವಕನ ರಕ್ಷಣಾ ಕಾರ್ಯಾಚರಣೆಗೆ ವಿಶು ಶೆಟ್ಟಿ ಅವರು 23 ಸಾವಿರ ರೂ. ಹಣ ವ್ಯಯಿಸಿದ್ದಾರೆ.
ಮನೋ ರೋಗಿಗಳನ್ನು ಹೀಯಾಳಿಸದಿರಿ
ಅಪರಿಚಿತ ಯುವಕ, ಯುವತಿಯರು ತಮ್ಮ ಜೀವನದಲ್ಲಿನ ನಾನಾ ಸಮಸ್ಯೆ ಗಳಿಂದ ಮನೋರೋಗಿಯಾಗಿ, ಅಸಹಾಯಕರಾಗಿ ಸಮಾಜದಲ್ಲಿ ಅಲೆದಾಡುತ್ತಿದ್ದಾರೆ. ಅಂತಹವರ ಸಮಸ್ಯೆಗಳ ನೆರವಿಗೆ ಸಾರ್ವಜನಿಕರು, ಸಂಘ ಸಂಸ್ಥೆಗಳು, ವಿವಿಧ ಇಲಾಖೆಗಳು ತತ್‌ಕ್ಷಣ ಧಾವಿಸಿದಲ್ಲಿ ಮುಂದಾಗುವ ದೊಡ್ಡ ಅನಾಹುತ ತಪ್ಪಿಸಬಹುದಾಗಿದೆ. ಮಾನಸಿಕ ಅಸ್ವಸ್ಥರ ಮೇಲೆ ಹಲ್ಲೆ ನಡೆಸುವ , ಹಾಸ್ಯಾಸ್ಪದವಾಗಿ ಬಳಸಿಕೊಳ್ಳುವ ವಿಘ್ನ ಸಂತೋಷಕ್ಕೆ ಯಾರೂ ಮುಂದಾಗ ಬಾರದು. ಮಾನಸಿಕವಾಗಿ ನೊಂದು ನಿರ್ಗತಿಕರಾಗಿರುವವರಿಗೆ ಉಡುಪಿ ಯಲ್ಲಿ ಸರಿಯಾದ ಪುನರ್ವಸತಿ ಕೇಂದ್ರ ಇಲ್ಲ. ಈ ಬಗ್ಗೆ ಜಿಲ್ಲಾಡಳಿತ ಗಮನಹರಿಸಬೇಕು.
- ವಿಶು ಶೆಟ್ಟಿ , ಅಂಬಲಪಾಡಿ
ಸಿಕ್ಕ ಸಿಕ್ಕವರಿಗೆ ಕಲ್ಲು ಹೊಡೆಯುತ್ತಿದ್ದ.
ನಾಲ್ಕು ತಿಂಗಳ ಹಿಂದೆ ಮಲ್ಪೆ , ಆದಿ ಉಡುಪಿ ಪರಿಸರದಲ್ಲಿ ಜನರಿಗೆ ಕಲ್ಲು ಹೊಡೆದು ಆತಂಕ ಸೃಷ್ಟಿಸಿದ್ದವನನ್ನು ಸಮಾಜ ಸೇವಕ ವಿಶು ಶೆಟ್ಟಿ ಧಾರವಾಡದ ಮಾನಸಿಕ ಆಸ್ಪತ್ರೆಗೆ ದಾಖಲಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru Airport; 20 ಲಕ್ಷ ರೂ.ಗಳ ಚಿನ್ನಾಭರಣವಿದ್ದ ಬ್ಯಾಗ್ ವಾರಸುದಾರರಿಗೆ ಹಸ್ತಾಂತರ
Mangaluru; ಟ್ಯಾಂಕರ್ ವ್ಯವಹಾರ: ನಕಲಿ ದಾಖಲೆ ಸೃಷ್ಟಿಸಿ ವಂಚನೆ
ಮಂಡ್ಯ ಸಾಹಿತ್ಯ ಸಮ್ಮೇಳನದ ನಿರ್ಣಯಗಳು ಶೀಘ್ರ ಅನುಷ್ಠಾನಗೊಳ್ಳಲಿ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.