ಆಧಾರ್‌ಗೆ ಬಹೂದ್ದೇಶಿತ ಮುಖ: ರಾಜೀವ್ ಚಂದ್ರಶೇಖರ್
Team Udayavani, Apr 16, 2019, 6:00 AM IST
ಉಡುಪಿ: ಆಧಾರ್ ಕಾರ್ಡ್‌ನ್ನು ಮೇಲ್ದರ್ಜೆಗೇರಿಸಿ ಬಹು ಉದ್ದೇಶಿತ ಕಾರ್ಡ್ ಆಗಿ ಮಾಡುವ ಉದ್ದೇಶವಿದೆ ಎಂದು ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಹೇಳಿದರು.
ಮಣಿಪಾಲದ ಹೊಟೇಲ್ ಕಂಟ್ರಿ ಇನ್ ಸಭಾಂಗಣದಲ್ಲಿ ರವಿವಾರ ದೇಶಭಕ್ತರ ವೇದಿಕೆ ಆಶ್ರಯದಲ್ಲಿ “ರಾಷ್ಟ್ರೀಯ ಭದ್ರತೆ ವಿಚಾರದಲ್ಲಿ ನಾಗರಿಕರ ಪಾತ್ರ’ ಪರಿಕಲ್ಪನೆಯಲ್ಲಿ ಆಯೋಜಿಸಲಾದ “ರಾಷ್ಟ್ರೀಯ ಭದ್ರತೆ’ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಬಳಿಕ ಸಂವಾದದಲ್ಲಿ ಅವರು ಮಾತನಾಡಿದರು.
ದಿವ್ಯಾ ಹೆಗ್ಡೆ ಪ್ರಶ್ನೆಗೆ ಉತ್ತರಿಸಿ, ವಾಜಪೇಯಿ ಸಾಮಾನ್ಯ ಗುರುತು ಚೀಟಿ ಕಲ್ಪನೆ ಆರಂಭಿಸಿದ್ದರು. ಮುಂದೆ ರಾಷ್ಟ್ರೀಯ ನೋಂದಣಿ ನಾಗರಿಕ ಕಾರ್ಡ್ ಆಗಿ ಪರಿವರ್ತಿಸುವ ಇರಾದೆ ಇದೆ. ಇದು ಆಧಾರ್‌ನ ಮುಂದಿನ ಹೆಜ್ಜೆ ಎಂದರು.
370ನೆಯ ವಿಧಿ ರದ್ದು
ಎನ್‌ಡಿಎ ಸರಕಾರ ಬಂದ ಬಳಿಕ ಜಮ್ಮು ಕಾಶ್ಮೀರದ 370ನೆಯ ವಿಧಿ ಯನ್ನು ರದ್ದುಗೊಳಿಸುವುದಾಗಿ ರಾಜೀವ್ ಹೇಳಿದರು. ರಫೇಲ್ ಖರೀದಿ ರಾಷ್ಟ್ರದ ರಕ್ಷಣೆಗಾಗಿ. ಭೂಸೇನೆ, ವಾಯು- ನೌಕಾಪಡೆ ಗಳನ್ನು ಅತ್ಯಾಧುನಿಕವಾಗಿ ಮೇಲ್ದರ್ಜೆ ಗೇರಿಸಲು ಮೋದಿ ಬದ್ಧವಾಗಿದ್ದಾರೆ. ಎಂದು ರಾಜೀವ್ ಹೇಳಿದರು.
ವಿಲಾಸ ನಾಯಕ್ ಸ್ವಾಗತಿಸಿ, ಪ್ರಾಧ್ಯಾಪಕ ಶ್ರೀನಾಥ್ ಕಾರ್ಯಕ್ರಮ ನಿರ್ವಹಿಸಿದರು. ವಿದ್ಯಾರ್ಥಿ ಸಂಘಟನೆ ನಾಯಕಿ ರಶ್ಮಿ ಸಾಮಂತ್ ವಂದಿಸಿದರು. ಕಾರ್ಯಕ್ರಮದ ಪ್ರಧಾನ ಸಂಚಾಲಕ ಮಹೇಶ್ ಠಾಕೂರ್ ಉಪಸ್ಥಿತರಿದ್ದರು. ಪ್ರೊ| ಬಾಲಕೃಷ್ಣ ಮಧ್ದೋಡಿ, ಗೋಕುಲ್ ಅತಿಥಿಗಳನ್ನು ಪರಿಚಯಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರ್ ರತ್ನಾಕರ ಹೆಗ್ಡೆ ಉಪಸ್ಥಿತರಿದ್ದರು.
“ರಾಷ್ಟ್ರಪ್ರಧಾನ ಚುನಾವಣೆ’
ನಿವೃತ್ತ ಸೇನಾಧಿಕಾರಿ, ಚಿಂತಕ ಸುರೇಂದ್ರ ಪೂನಿಯಾ ಮಾತನಾಡಿ, ದೇಶದ ಭದ್ರತೆ ಮುಖ್ಯವಾಗಬೇಕು. ಮೋದಿ ಮತ್ತು ಬಿಜೆಪಿ ಇದನ್ನೇ ಹೇಳುತ್ತಿದ್ದಾರೆ. ಇದು ಮಹತ್ವದ ಚುನಾವಣೆ. ಇಲ್ಲಿ ರಾಷ್ಟ್ರಪ್ರಧಾನ ಮತ್ತು ಪರಿವಾರ ಪ್ರಧಾನದ ನಡುವೆ ಚುನಾವಣೆ ನಡೆಯುತ್ತಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Pushpa 2: ಖಾಕಿಗೆ ಸವಾಲು ಹಾಕುವ ʼಪುಷ್ಪ-2ʼ ಹಾಡು ರಿಲೀಸ್; ವಿವಾದದ ಬೆನ್ನಲ್ಲೇ ಡಿಲೀಟ್
IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್ ಬುಕ್ಕಿಂಗ್ ಸಮಸ್ಯೆ-ಪ್ರಯಾಣಿಕರ ಆಕ್ರೋಶ
Kazakhstan: ವಿಮಾನ ದುರಂತ ಸಂದರ್ಭದ ಕೊನೆಯ ಕ್ಷಣದ ಭಯಾನಕ ವಿಡಿಯೋ ವೈರಲ್…
Belagavi: ಮಹಾತ್ಮ ಗಾಂಧಿ ಪುತ್ಥಳಿ ಅನಾವರಣಗೊಳಿಸಿದ ಸಿಎಂ ಸಿದ್ದರಾಮಯ್ಯ
Bengaluru: ಚಲಿಸುತ್ತಿದ್ದ ರೈಲಿಗೆ ಸಿಲುಕಿ ಇಬ್ಬರು ಯುವಕರು ಸಾವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.