ಅಕ್ಷರ ತಿಳಿಯದ ವ್ಯಕ್ತಿಯ ಮಾನವೀಯ ಸ್ಪಂದನ

Team Udayavani, Feb 24, 2017, 12:47 PM IST

2202bdre1a.jpg

ಬೈಂದೂರು: ಕೆಲವು ವ್ಯಕ್ತಿಗಳಲ್ಲಿ ಹಣವಿರುವುದಿಲ್ಲ. ಆದರೆ ಹೃದಯ ಶ್ರೀಮಂತಿಕೆಯಿರುತ್ತದೆ. ಇನ್ನು ಕೆಲವು ವ್ಯಕ್ತಿಗಳಲ್ಲಿ ಆಸಕ್ತಿಗಳಿರುತ್ತವೆ, ಅವಕಾಶಗಳಿರುವುದಿಲ್ಲ. ಆದರೆ ಇಲ್ಲೊಬ್ಬ ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ವ್ಯಕ್ತಿ ತಿರುಪತಿ ತೀರ್ಥಯಾತ್ರೆಗೆ ತೆರಳಿ ಒಂದು ತಿಂಗಳಿಂದ ಕಾಣೆಯಾದ ವ್ಯಕ್ತಿಯೊಬ್ಬನನ್ನು ಗುರುತಿಸಿ, ಮನೆಗೆ ಕರೆತಂದು ಕುಟುಂಬದ ಕಣ್ಣೀರ ಸಂಕಷ್ಟವನ್ನು ಹೋಗಲಾಡಿಸಿದ ಘಟನೆ ಯಡ್ತರೆ ಗ್ರಾ.ಪಂ. ವ್ಯಾಪ್ತಿಯ ಹೊಸೂರು ಎಂಬಲ್ಲಿ ನಡೆದಿದೆ.

ಘಟನೆಯ ವಿವರ: ಕರಾವಳಿ ಭಾಗ ಸೇರಿದಂತೆ ಬಹುತೇಕ ಕಡೆಗಳಲ್ಲಿ ಹತ್ತಾರು ವರ್ಷಗಳ ಬಳಿಕ ಕುಟುಂಬದ ಸದಸ್ಯರೆಲ್ಲರು ಸೇರಿ ತೀರ್ಥಯಾತ್ರೆಗೆ ತೆರಳುವ ಸಂಪ್ರದಾಯ ತಲೆತಲಾಂತರಗಳಿಂದ ನಡೆದುಕೊಂಡು ಬರುತ್ತಿದೆ. ಅದರಲ್ಲೂ ತಿರುಪತಿ ತೀರ್ಥಯಾತ್ರೆ ಎಂದಾಗ ಹಲವಾರು ಸಾಂಪ್ರದಾಯಿಕ ನಿಯಮಗಳ ಜತೆಗೆ ಜೀವನದ ಪುಣ್ಯಯಾತ್ರೆಯಾಗಿದೆ. ಯಡ್ತರೆ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಗ್ರಾಮೀಣ ಭಾಗವಾದ ಹೊಸೂರು ಮೂಲದ ಶೇಷು ಮರಾಠಿ ಕುಟುಂಬದ ಐವತ್ತಕ್ಕೂ ಅಧಿಕ ಸದಸ್ಯರು ಧರ್ಮಸ್ಥಳ, ಸುಬ್ರಹ್ಮಣ್ಯ, ತಿರುಪತಿ, ಮಂತ್ರಾಲಯ ಸೇರಿದಂತೆ ವಿವಿಧ ಪ್ರದೇಶಗಳಿಗೆ ತೀರ್ಥಯಾತ್ರೆಗೆ ತೆರಳಿದ್ದರು.

ಈ ಸಂದ‌ರ್ಭದಲ್ಲಿ ಶೇಷ ಮರಾಠಿ ಎನ್ನುವ ವ್ಯಕ್ತಿ ತಿರುಪತಿಯಲ್ಲಿ ಕಾಣೆ ಯಾಗಿದ್ದರು. ಕುಟುಂಬದ ಸದಸ್ಯರು ದಿನವಿಡಿ ಹುಡುಕಿ ಬಳಿಕ ಊರಿಗೆ ವಾಪಸ್ಸಾಗಿದ್ದರು. ತೀರ್ಥಯಾತ್ರೆಯ ಸಂಪ್ರದಾಯ ಮುಗಿದ ಬಳಿಕ ಊರಿನ ಕೆಲವು ಯುವಕರು ಪುನಃ ತಿರುಪತಿಗೆ ತೆರಳಿ ಒಂದು ವಾರದವರೆಗೂ ಹುಡುಕಾಟ ನಡೆಸಿದ್ದರು. ಆದರೆ ಕಾಣೆಯಾಗಿರುವ ಶೇಷ ಮರಾಠಿ ಪತ್ತೆಯಾಗಿರಲಿಲ್ಲ.ಬಳಿಕ ಆರಕ್ಷಕ ಠಾಣೆ ಹಾಗೂ ತಿರುಪತಿ ದೇವಸ್ಥಾನ ಸಮಿತಿಯಲ್ಲಿ ದೂರು ದಾಖಲಿಸಿ ವಾಪಸ್ಸಾಗಿದ್ದರು.

ಶಿವಮೊಗ್ಗದಲ್ಲಿ ಪತ್ತೆ: ಅಕ್ಷರ ತಿಳಿಯದ ಈತನಿಗೆ  ಮರಾಠಿ ಹೊರತುಪಡಿಸಿ ಇತರ ಭಾಷೆ ತಿಳಿದಿರಲಿಲ್ಲ. ಶೇಷ ಮರಾಠಿ ಚಪ್ಪಲಿ ಅಂಗಡಿಗೆ ತೆರಳಿದ್ದು, ದಾರಿ ತಿಳಿಯದೇ ದಿಕ್ಕುಪಾಲಾಗಿದ್ದನು. ಕೈಯಲ್ಲಿ ಹಣ ಇಲ್ಲದ ಕಾರಣ ನಾಲ್ಕು ದಿವಸ ಊಟ ಮಾಡಿರಲಿಲ್ಲ. ಬಳಿಕ ರೈಲ್ವೆ ನಿಲ್ದಾಣದಲ್ಲಿ ಯಾರೋ ಶಿವಮೊಗ್ಗ ರೈಲು ಹತ್ತಿಸಿದ್ದಾರೆ.ಶಿವಮೊಗ್ಗದಿಂದ ಬಳಿಕ ಊರಿನ ದಾರಿ ತಿಳಿಯದೇ ಪುನಃ ಬೆಂಗಳೂರಿಗೆ ತೆರಳಿದ್ದಾನೆ. ಈ ಸಂದರ್ಭದಲ್ಲಿ ಸ್ಥಳೀಯರೊಬ್ಬರು ತೋಟದಲ್ಲಿ ಕೆಲಸ ನೀಡಿದ್ದಾರೆ. ಆದರೆ ವಾರ ಕಳೆದರೂ ಸಂಬಳ ನೀಡಿರಲಿಲ್ಲ. 

ಒಂದೆಡೆ ಊರಿನ ದಾರಿ ಸಿಗದೆ ಕಂಗಾಲಾಗಿರುವುದು ಇನ್ನೊಂದೆಡೆ ಕಾಡುತ್ತಿರುವ ಕುಟುಂಬದ ನೆನಪಿನಿಂದಾಗಿ ಮಾನಸಿಕವಾಗಿ ಜರ್ಝರಿತವಾಗಿದ್ದನು.ಇದೇ ಸಂದರ್ಭದಲ್ಲಿ ಪಕ್ಕದ ತೋಟದಲ್ಲಿ ಕೂಲಿ ಮಾಡುತ್ತಿರುವ ತೆರಿಕೆರೆಯ ಕೆ.ವಿ. ಗಂಗಾಧರಯ್ಯ ಎನ್ನುವ ವ್ಯಕ್ತಿ ಈತನ ಮಾನಸಿಕ ತೊಳಲಾಟವನ್ನು ಗಮನಿಸಿ ಮಾಹಿತಿ ಪಡೆದಿದ್ದಾರೆ. ಬಳಿಕ ಆತನಿಗೆ ಸಾಂತ್ವನ ಹೇಳುವ ಜತೆಗೆ ಅವರ ಮನೆಯಲ್ಲಿ ಉಟೋಪಚಾರ ನೀಡಿ ಸ್ವಂತ ಖರ್ಚಿನಲ್ಲಿ ಕುಂದಾಪುರ ತಾಲೂಕಿನ ಯಡ್ತರೆ ಗ್ರಾಮದ ಹೊಸೂರಿಗೆ ಕರೆತಂದು ಮನೆಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಸಾರ್ವಜನಿಕರಿಂದ ಸಮ್ಮಾನ: ಕೂಲಿ ಕೆಲಸ ಮಾಡಿ ಜೀವನ ಸಾಗಿಸುವ ಜತೆಗೆ  ದಾರಿ  ತಪ್ಪಿದ ಶೇಷು ಮರಾಠಿಯನ್ನು ಮನೆಗೆ ತಲುಪಿಸಿದ ಗಂಗಾಧರಯ್ಯ ಅವರ ಸೇವೆಯಿಂದ ಒಂದು ತಿಂಗಳಿಂದ ದುಃಖದಲ್ಲಿದ್ದ ಕುಟುಂಬಕ್ಕೆ ದೇವರೆ ತಲುಪಿಸಿದ ಭಾವನೆ ಮೂಡಿಸಿದೆ. ಇಂತಹ ಮಾನವೀಯ ಕಾರ್ಯ ಮಾಡಿದ ತೆರಿಕೆರೆಯ ಗಂಗಾಧರಯ್ಯ ಅವರನ್ನು ಶಿರೂರು ಜೇಸಿ ಮುಂದಾಳತ್ವದಲ್ಲಿ ಸಾರ್ವಜನಿಕರು ಸಮ್ಮಾನಿಸಿದರು. ಹಾಗೂ ಇಂತಹ ಕಾರ್ಯ ಇತರರಿಗೂ ಮಾದರಿಯಾಗಲಿ ಎಂದು ಆಶಿಸಿದರು.

ಪತ್ರಿಕೆಯೊಂದಿಗೆ ಮಾತನಾಡಿದ ಗಂಗಾಧರಯ್ಯ, ಕಷ್ಟಗಳು ಎಲ್ಲರಿಗೂ ಒಂದೆ. ಮನೆಯ ಯಜಮಾನ ಇಲ್ಲದ ಪರಿಸ್ಥಿತಿ ಹಾಗೂ ಪರಿಚಯವಿಲ್ಲದ ಊರಿನಲ್ಲಿ ಸಂಕಷ್ಟ ಎದುರಾದಾಗ ದುಃಖ ಸಹಜವಾಗಿರುತ್ತದೆ. ಓದು ಬರಹ ತಿಳಿಯದಿರುವ ಕಾರಣ ನಾನೇ ಸ್ವತಃ ಮನೆಗೆ ಕರೆತಂದಿದ್ದೇನೆ. ಕುಟುಂಬದ ಸಂತೋಷ ನೋಡಿ ಮಾಡಿದ ಕಾರ್ಯಕ್ಕೆ ಸಂತೃಪ್ತಿ ತಂದಿದೆ ಎಂದಿದ್ದಾರೆ.ನಿತ್ಯ ಜೀವನದ ಜಂಜಾಟದ ನಡುವೆ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವವರ ಸಂಖ್ಯೆ ವಿರಳ. ಅಂತಹದ್ದರಲ್ಲಿ ತಿರುಪತಿಯಲ್ಲಿ ಕಾಣೆಯಾದವನನ್ನು ಹುಡುಕಿ ಕರೆತಂದ ಇಂತಹ ವ್ಯಕ್ತಿಯ ಸಾಧನೆ ನಿಜಕ್ಕೂ ಶ್ಲಾಘನೀಯವಾಗಿದೆ.

ಟಾಪ್ ನ್ಯೂಸ್

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

bhairathi ranagal review

Bhairathi Ranagal Review: ರೋಣಾಪುರದ ರಣಬೇಟೆಗಾರ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Agri

State Government Programme: ರೈತರಿಂದ ದೂರ ಸರಿದ ಕೃಷಿ ಯಂತ್ರಧಾರೆ

Byndoor-Vahical

Byndoor: ಮೀನು ಸಾಗಿಸುವ ವಾಹನದಲ್ಲಿ ಜಾನುವಾರು ಸಾಗಾಟ!

Kota-Meet

Udupi: ಜಿಲ್ಲೆಗೆ ಆಗಮಿಸುವ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಿ: ಸಂಸದ ಕೋಟ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

MUST WATCH

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

ಹೊಸ ಸೇರ್ಪಡೆ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ನಿಧನ

Tamil Director: ಖ್ಯಾತ ತಮಿಳು ಚಿತ್ರ ನಿರ್ದೇಶಕ ಸುರೇಶ್ ಸಂಗಯ್ಯ ವಿಧಿವಶ

SMAT: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

SMAT 2024: ಸಯ್ಯದ್‌ ಮುಷ್ತಾಕ್‌ ಅಲಿ ಕೂಟಕ್ಕೆ ಬಲಿಷ್ಠ ಕರ್ನಾಟಕ ತಂಡ ಪ್ರಕಟ

2-news

ಹೆದ್ದಾರಿ ತಡೆ ನಡೆಸಿದ ಆರೋಪ; ಸುಳ್ಯ, ಬೈಂದೂರು ಶಾಸಕರ ಸಹಿತ ಹಲವರ ವಿರುದ್ಧ ಪ್ರಕರಣ

IPL Auction: Mallika Sagar will conduct the entire IPL auction

IPL Auction: ಸಂಪೂರ್ಣ ಐಪಿಎಲ್‌ ಹರಾಜು ನಡೆಸಲಿದ್ದಾರೆ ಮಲ್ಲಿಕಾ ಸಾಗರ್

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Jhansi Hospital: ಅಗ್ನಿ ದುರಂತ, ನವಜಾತ ಶಿಶುಗಳ ಸಜೀವ ದಹನ… ಮೋದಿ ಸಂತಾಪ, ಪರಿಹಾರ ಘೋಷಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.