ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Team Udayavani, Nov 15, 2024, 12:04 PM IST
ಬೆಳ್ಮಣ್: ಕರಾವಳಿಯಲ್ಲಿ ಮುಂಗಾರು ಮಳೆ ಮುಗಿದಿದ್ದರೂ ಕೃಷಿಕರ ಗೋಳು ನಿಂತಿಲ್ಲ. ಫಸಲು ಕಟಾವಿಗೆ ಬಂದ ಸಂದರ್ಭ ರೈತರು ಅಕಾಲಿಕ ಮಳೆಯಿಂದ ಕಂಗೆಟ್ಟರು. ಬೆಳ್ಮಣ್, ಮುಂಡ್ಕೂರು ಭಾಗದ ಕೆಲವೆಡೆ ಇನ್ನೂ ಕಟಾವು ಬಾಕಿ ಇದ್ದು, ಕಟಾವು ಯಂತ್ರಗಳ ಕೊರತೆ ಇದಕ್ಕೆ ಕಾರಣ. ತಮಿಳುನಾಡು ಕಡೆಗಳಲ್ಲಿ ಬೆಳೆ ಕಟಾವಿಗೆ ಬಂದಿದ್ದು, ಅಲ್ಲಿ ಗಂಟೆಗೆ ಹೆಚ್ಚುವರಿ ಆದಾಯ ಇರುವುದರಿಂದ ಕಟಾವು ಯಂತ್ರಗಳ ಮಾಲಕರು ಅತ್ತ ಧಾವಿಸಿದ್ದಾರೆ ಎಂದು ನಮ್ಮ ಭಾಗದ ಕೃಷಿಕರು ಹೇಳುತ್ತಿದ್ದಾರೆ.
ಮಳೆಯಿಂದ ಬೈಹುಲ್ಲಿಗೆ ಹಾನಿ
ಭತ್ತಗಳನ್ನು ಬೇರ್ಪಡಿಸುವ ತವಕದಲ್ಲಿ ಮಳೆಯ ಕಾರಣದಿಂದ ಬೈಹುಲ್ಲುಗಳು ಒದ್ದೆಯಾಗಿ ಕೃಷಿಕರು ಅಪಾರ ನಷ್ಟ ಎದುರಿಸಿದ್ದಾರೆ. ಎಕ್ರೆಗಟ್ಟಲೆ ಗದ್ದೆಗಳ ಬೈ ಹುಲ್ಲು ಗೊಬ್ಬರವಾಗಿದೆ.
ಅಕ್ಕಿ ಗಿರಣಿ ಮುಂದೆ ವಾಹನಗಳ ಸಾಲು
ಸಾಲ ಮಾಡಿ ಬೇಸಾಯ ಮಾಡಿದ ರೈತರು ತುರ್ತಾಗಿ ಹಣ ಪಡೆಯುವ ತವಕದಲ್ಲಿ ತಮ್ಮ ಭತ್ತಗಳನ್ನು ವಾಹನಗಳಲ್ಲಿ ತುಂಬಿಸಿಕೊಂಡು ಅಕ್ಕಿ ಗಿರಣಿ ಮುಂದೆ ಸಾಲು ನಿಲ್ಲುತ್ತಿದ್ದಾರೆ. ಆದರೆ ಅಲ್ಲೂ ನಿರೀಕ್ಷಿತ ದರ ಸಿಗುತ್ತಿಲ್ಲ ಎಂಬ ದೂರುಗಳಿವೆ.
ಒಟ್ಟಾರೆ ಕರಾವಳಿಯ ಕೃಷಿಕರು ಅಕಾಲಿಕ ಮಳೆ, ಯಂತ್ರೋಪಕರಣಗಳ ಕೊರತೆ ಸಹಿತ ಹಲವು ಸಮಸ್ಯೆಗಳಿಂದ ಕಂಗೆಡುವಂತಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮತಿ ಪ್ರತಿಭಾ, ಗೀತಾ ತ್ರಯೋದಶಾವಧಾನ’ ಸಂಪನ್ನ
Adani: ಅದಾನಿ ಫೌಂಡೇಶನ್ 17 ಲಕ್ಷ ರೂಪಾಯಿ ಕಾಮಗಾರಿಗೆ ಗುದ್ದಲಿ ಪೂಜೆ
Udupi: ಬಚ್ಚಿಟ್ಟ ಮದುವೆ; ಗಂಡನ ಗುಟ್ಟು-ರಟ್ಟು; ಪತಿ ಸಹಿತ 6ಮಂದಿ ವಿರುದ್ಧ ಪ್ರಕರಣ ದಾಖಲು
Padubidri:15 ಲಕ್ಷ ರೂ. ಪಡೆದು ಮರಳಿಸದೆ ಜೀವಬೆದರಿಕೆ; ಪ್ರಕರಣ ದಾಖಲು
Kudremukh: ಹೊತ್ತಿ ಉರಿದ ಟೆಂಪೋದಲ್ಲಿದ್ದದ್ದು ಕಟಪಾಡಿ ಮೂಲದ 8 ಕುಟುಂಬಗಳು
MUST WATCH
ಹೊಸ ಸೇರ್ಪಡೆ
BJP; ಕುಮಾರ್ ಬಂಗಾರಪ್ಪ ರಾಜ್ಯಾಧ್ಯಕ್ಷನಾಗುವುದು ತಿರುಕನ ಕನಸು: ರೇಣುಕಾಚಾರ್ಯ
Tirumala:ಇನ್ಮುಂದೆ ಭಕ್ತರು ಒಂದೇ ಗಂಟೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಪಡೆಯಬಹುದು..!
Farmers: ವಂಚನೆ ದೂರು ನೀಡುವ ರೈತರಿಗೆ 1 ಲಕ್ಷ ರೂ.ನಗದು ಬಹುಮಾನ – ಸಚಿವ ಶಿವಾನಂದ ಪಾಟೀಲ
Hanuru: ಮಾದಪ್ಪನ ಬೆಟ್ಟದ ನಿಲ್ದಾಣಕ್ಕೆ ಬೇಕು ಮೂಲಸೌಕರ್ಯ
Karnataka; ಸಿಸೇರಿಯನ್ ಹೆರಿಗೆ ತಡೆಯಲು ಹೊಸ ಕಾರ್ಯಕ್ರಮ ಘೋಷಿಸುತ್ತೇವೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.