ಕ್ಯಾನ್ಸರ್‌ನಿಂದ ಬಳಲುತ್ತಿರುವ ವಿದ್ಯಾರ್ಥಿ; ನೆರವಿಗಾಗಿ ಮೊರೆಯಿಡುತ್ತಿರುವ ಕುಟುಂಬ
Team Udayavani, Feb 2, 2020, 5:57 AM IST
ಕಾರ್ಕಳ: ಈತ ಮಿಯ್ಯಾರು ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜಿನ ವಿಜ್ಞಾನ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿ ಶಶಿಕುಮಾರ್. ಎಲ್ಲರಂತೆ ಲವಲವಿಕೆಯಿಂದ ಕಾಲೇಜಿನ ಆಟ-ಪಾಠಗಳಲ್ಲಿ ತೊಡಗಿಸಿಕೊಂಡಿದ್ದ ಬಾಲಕ.
ಹೀಗಿರುವಾಗ 10 ದಿನಗಳ ಹಿಂದೆ ಈತನಿಗೆ ಹೊಟ್ಟೆನೋವು ಕಾಣಿಸಿಕೊಂಡಿದ್ದು, ತಪಾಸಣೆಗಾಗಿ ಡಾಕ್ಟರ್ ಬಳಿ ತೆರಳಿದಾಗ ಆಘಾತಕಾರಿ ವಿಚಾರ ಬೆಳಕಿಗೆ ಬಂತು. ಆತನ ಎರಡೂ ಕಿಡ್ನಿ ವೈಫಲ್ಯಕ್ಕೀಡಾಗಿರುವುದು ಕಂಡುಬಂತು. ಕಿಡ್ನಿ ಚಿಕಿತ್ಸೆಗಾಗಿ ಬೆಂಗಳೂರಿನ ಕೆಂಪೇಗೌಡ ಆಸ್ಪತ್ರೆಗೆ ದಾಖಲಿಸಲಾಗಿ ಹೆಚ್ಚಿನ ತಪಾಸಣೆಗೊಳಪಡಿಸಿದಾಗ ಬಾಲಕನಿಗೆ ರಕ್ತದ ಕ್ಯಾನ್ಸರ್ ಖಚಿತವಾಯಿತು. ಮೊದಲೇ ಕಿಡ್ನಿ ವೈಫಲ್ಯ ವಿಚಾರ ತಿಳಿದು ಆಘಾತಕ್ಕೀಡಾದ ಕುಟುಂಬಕ್ಕೆ ಕ್ಯಾನ್ಸರ್‌ಗೆ ತುತ್ತಾಗಿರುವ ಸುದ್ದಿ ಕೇಳಿ ಬರಸಿಡಿಲು ಬಡಿದಂತಾಯಿತು.
ಬಾಲಕನನ್ನು ಬೆಂಗಳೂರಿನ ಕ್ಯಾನ್ಸರ್ ಸ್ಪೆಷಾಲಿಟಿ ಆಸ್ಪತ್ರೆಗೆ ದಾಖಲಿಸಲಾಯಿತು. ಡಯಾಲಿಸಿಸ್ ಮಾಡ ಲಾಗುತ್ತಿದ್ದು, ರಕ್ತದ ಕ್ಯಾನ್ಸರ್‌ಗೂ ಚಿಕಿತ್ಸೆ ನೀಡಲಾಗುತ್ತಿದೆ. ಚಿಕಿತ್ಸೆ ದುಬಾರಿಯಾದ ಪರಿಣಾಮ ಹಣ ಹೊಂದಿಸುವುದು ಕುಟುಂಬಕ್ಕೆ ಭಾರಿ ಕಷ್ಟಕರವಾಗಿದೆ.
ಬಾಲಕನ ಚಿಕಿತ್ಸೆಗಾಗಿ ಸುಮಾರು 8ರಿಂದ 15 ಲಕ್ಷ ರೂ. ಖರ್ಚಾಗಲಿದ್ದು, ಆ ಮೊತ್ತ ಭರಿಸಲು ಕುಟುಂಬ ಶಕ್ತವಾಗಿಲ್ಲ. ಹೀಗಾಗಿ ಸೃದಯ ಬಂಧುಗಳಲ್ಲಿ ನೆರ ವಾಗುವಂತೆ ಅಂಗಲಾಚುತ್ತಿದೆ.
ನೆರವು ನೀಡಲಿಚ್ಚಿಸುವವರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೆತ್ತೂರುವಿನ 37374599139 ಖಾತೆಗೆ ಪಾವತಿ ಮಾಡಬಹುದಾಗಿದೆ. ಐಎಫ್ಎಸ್‌ಸಿ ಎಸ್‌ಬಿಐಎನ್ 0040295. ಮೊ: 8861530896.
ಸಹಕಾರ ಬೇಕು
ನಮ್ಮ ವಿದ್ಯಾರ್ಥಿ ಶಶಿಕುಮಾರ್ ಗುಣಮುಖನಾಗಿ ಮತ್ತೆ ಎಂದಿನಂತೆ ಕಾರ್ಯಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತಾಗಬೇಕು. ಈ ನಿಟ್ಟಿನಲ್ಲಿ ಆತನಿಗೆ ಉತ್ತಮ ರೀತಿಯ ಚಿಕಿತ್ಸೆ ನೀಡಬೇಕಾಗಿದೆ. ಶಶಿಕುಮಾರ್ ಕುಟುಂಬ ತೀರಾ ಬಡತನದಿಂದ ಕೂಡಿರುವುದರಿಂದ ಆರ್ಥಿಕ ಸಹಕಾರ ಬೇಕಾಗಿದೆ. ಮಾನವೀಯ ನೆಲೆಯಲ್ಲಿ ನೆರವಿನ ಹಸ್ತ ಚಾಚಿ ಕುಟುಂಬದ ಕಣ್ಣೀರು ಒರೆಸುವಲ್ಲಿ ಸಹೃದಯ ಬಂಧುಗಳಲ್ಲಿ ಈ ಮೂಲಕ ವಿನಮ್ರವಾಗಿ ವಿನಂತಿಸುತ್ತಿದ್ದೇನೆ.
–ಈಶ್ವರ್ ಎಲ್.,
ಪ್ರಾಂಶುಪಾಲರು,ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜು, ಮಿಯ್ಯಾರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮಲ್ಪೆ ಬಂದರಿನಲ್ಲಿ ಮೀನು ಕಳ್ಳರಿಗೆ ಧರ್ಮದೇಟು
Manipal: ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರಿಸಲು ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ
ಕಲಾವಿದರ ಮಾಸಾಶನ ಹೆಚ್ಚಳಕ್ಕೆ ಸಿಗದ ಆರ್ಥಿಕ ಇಲಾಖೆ ಒಪ್ಪಿಗೆ
Udupi: ಗೀತಾರ್ಥ ಚಿಂತನೆ-148: ಹೇಳುವುದು ಸುಖವಾದರೂ ಆಗುವುದು ದುಃಖ
Udupi: ಶ್ರೀಕೃಷ್ಣಮಠದಲ್ಲಿ ದಾಸವರೇಣ್ಯ ಶ್ರೀ ವಿಜಯದಾಸರು ಸಿನೆಮಾ ಪ್ರದರ್ಶನ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.