ಸುಜ್ಲಾನ್‌ ಕಂಪೆನಿ: ಗುತ್ತಿಗೆ ಕಾರ್ಮಿಕ ಸಮಸ್ಯೆ ತಾತ್ಕಾಲಿಕ ಪರಿಹಾರ


Team Udayavani, Apr 12, 2017, 2:49 PM IST

odambadike-parihara.jpg

ಪಡುಬಿದ್ರಿ: ಉಡುಪಿ ತಹಶೀಲ್ದಾರ್‌ ಮಹೇಶ್ಚಂದ್ರ, ಕಾರ್ಮಿಕ ಇಲಾಖಾಧಿಕಾರಿ ಎಂ.ಪಿ. ವಿಶ್ವನಾಥ್‌, ಕ್ಷೇತ್ರದ ಶಾಸಕ ವಿನಯಕುಮಾರ್‌ ಸೊರಕೆ, ಕಾರ್ಮಿಕ ರಕ್ಷಣಾ ವೇದಿಕೆಯ ರವಿ ಶೆಟ್ಟಿ ಮತ್ತಿತರ ಸಮ್ಮುಖದಲ್ಲಿ ಸುಜ್ಲಾನ್‌ ಗುತ್ತಿಗೆದಾರರು, ಕಾರ್ಮಿಕ ನಾಯಕರು, ಸುಜ್ಲಾನ್‌ ಎಸ್‌ ಇ ಬ್ಲೇಡ್ಸ್‌ ಅಧಿಕಾರಿಗಳ ನಡುವೆ ಒಡಂಬಡಿಕೆಯೇರ್ಪಟ್ಟು ಒಮ್ಮತದ ಅಭಿಪ್ರಾಯ ವಿನಿಮಯ ಪತ್ರಕ್ಕೆ ಸಹಿ ಮಾಡಿಕೊಳ್ಳುವ ಮೂಲಕ ಸುಜ್ಲಾನ್‌ ಗುತ್ತಿಗೆ ಕಾರ್ಮಿಕರ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಂಡುಕೊಳ್ಳಲಾಯಿತು.

ಕಂಪೆನಿಯು ಕೆಲಸದಿಂದ ತೆಗೆದಿದ್ದ 750 ಮಂದಿ ಗುತ್ತಿಗೆ ಕಾರ್ಮಿಕರಿಗೆ ಒಂದು ತಿಂಗಳ ಪೂರ್ಣ ಸಂಬಳ ನೀಡಿಕೆ, ಯುನಿಟೆಕ್‌ ಕಂಪೆನಿ ಬಾಕಿ ಉಳಿಸಿಕೊಂಡಿದ್ದ ಬೋನಸ್‌ ವಿತರಣೆ ಹಾಗೂ ಇದೇ ಗುತ್ತಿಗೆ ಕಾರ್ಮಿಕರನ್ನು ಕೆಲಸಕ್ಕೆ ಮರು ನೇಮಿಸಿಕೊಳ್ಳುವ ಮತ್ತು ವರ್ಗಾವಣೆ ಮಾಡಬೇಕಾದಲ್ಲಿ ಕಾರ್ಮಿಕರೊಂದಿಗೆ ಚರ್ಚಿಸಿ ವರ್ಗಾವಣೆಗೊಳಿಸುವ ನಿರ್ಣಯಗಳೊಂದಿಗೆ ಕಾರ್ಮಿಕ ಸಮಸ್ಯೆಗೆ ತತ್ಕಾಲದ ಪರಿಹಾರ ಕಂಡುಕೊಳ್ಳಲಾಯಿತು.

ಮಂಗಳವಾರ ಬೆಳಗ್ಗೆ ಮತ್ತೆ ಒಗ್ಗೂಡಿದ ಸುಜ್ಲಾನ್‌ ಗುತ್ತಿಗೆ ಕಾರ್ಮಿಕರು ಮುಂಜಾನೆ ಪಾಳಿಗೆ ಕಾರ್ಮಿಕರನ್ನು ಕರೆತಂದಿದ್ದ ಬಸ್‌ಗಳನ್ನು ಗೇಟಲ್ಲೇ ತಡೆದು ನಿಲ್ಲಿಸಿದರು. ಬಸ್‌ಗಳನ್ನು ಕಂಪೆನಿಯೊಳಕ್ಕೆ ತೆರಳಲು ಈ ಮುಷ್ಕರ ನಿರತ ಕಾರ್ಮಿಕರು ಅನುವು ಮಾಡಿಕೊಡಲಿಲ್ಲ. ಬಿಜೆಪಿ, ಜೆಡಿಎಸ್‌ ನಾಯಕರು ಕಾರ್ಮಿಕರಿಗೆ ಸಾಥ್‌ ನೀಡಿದ್ದರು. ಒಂದೊಮ್ಮೆ ಕಾರ್ಮಿಕ
ಇಲಾಖಾ ಅಧಿಕಾರಿಗಳು, ಉಡುಪಿ ತಹಶೀಲ್ದಾರರು ಕಂಪೆನಿಯ ಅಧಿಕಾರಿಗಳೊಂದಿಗೆ ಕಂಪೆನಿಯ ಒಳಗೆ ಮಾತುಕತೆಗೆ ತೊಡಗಿದ್ದಾಗ ಮತ್ತೆ ಸಿಟ್ಟಿಗೆದ್ದ ಕಾರ್ಮಿಕ ನಾಯಕರು ತಮ್ಮನ್ನು ಬಿಟ್ಟು ಮಾತುಕತೆ ನಡೆಸಬಾರದೆಂಬಂತೆ ಪಟ್ಟು ಹಿಡಿದಿದ್ದರು. ಆಗ ಅವರನ್ನು ಸಮಾಧಾನಿಸಿ ಹೊರಕ್ಕೆ ಕಳುಹಿಸಲಾಗಿತ್ತು. ತಹಶೀಲ್ದಾರ್‌ ಮಹೇಶ್ಚಂದ್ರ ಹೊರಗೆ ಬಂದು ಕಾರ್ಮಿಕರ ಬಳಿ ಮಾತುಕತೆಗಳ ಬಗ್ಗೆ ವಿವರಿಸಿದರು.

ಬೇಡಿಕೆ ಕುಸಿದಿರುವುದರಿಂದ ಗುತ್ತಿಗೆ ಆಧಾರದಲ್ಲಿದ್ದ ಕಾರ್ಮಿಕರನ್ನು ಕೈಬಿಡಲಾಗಿದೆ ಎಂದು ಸುಜ್ಞಾನ್‌ ಕಂಪೆನಿಯ ಅಧಿಕಾರಿಗಳು ಸೋಮವಾರ ತಿಳಿಸಿದ್ದರು.  

ಬಾಗಿಲ ಗಾಜು ತಾಗಿ ಗಾಯ
ಸಂಜೆ ವೇಳೆಗೆ ಕಾರ್ಮಿಕ ಅಧಿಕಾರಿಯೋರ್ವರ ತಪ್ಪು ನಡೆಯಿಂದಾಗಿ ಕಾರ್ಮಿಕರ ಆಕ್ರೋಶ ಭುಗಿಲೆದ್ದು ಅಧಿಕಾರಿಗಳ ಮಟ್ಟದ ಸಭೆ ನಡೆಯುತ್ತಿದ್ದ ಆಸ್ಪೆನ್‌ ಇನ್‌ಫ್ರಾಸ್ಟ್ರಕ್ಚರ್‌ ಆಡಳಿತ ಕಚೇರಿಯೊಳಗೆ ಪ್ರವೇಶಿಸಲು ಹವಣಿಸಿದಾಗ ಬಾಗಿಲಿನ ಗಾಜು ಬಿದ್ದು, ಅದು ಜೆಡಿಎಸ್‌ ನಾಯಕ ಇಸ್ಮಾಯಿಲ್‌ ಪಲಿಮಾರ್‌ ಕೈಗೆ ತಗುಲಿ ಗಾಯವಾಯಿತು. ತತ್‌ಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಯಿತು.

ಸಂಜೆ ಶಾಸಕ ಸೊರಕೆ ಅವರು ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿ, ಒಡಂಬಡಿಕೆಯ ಪ್ರಸ್ತಾವ ಅವರ ಮುಂದಿಟ್ಟ ಬಳಿಕ ಕಾರ್ಮಿಕರು ಅಲ್ಲಿಂದ ನಿರ್ಗಮಿಸಿದರು.  ಕಾರ್ಮಿಕ ಇಲಾಖಾ ನಿರೀಕ್ಷಕರಾದ ರಾಮಮೂರ್ತಿ, ಜೀವನ್‌ ಕುಮಾರ್‌ ಒಡಂಬಡಿಕೆಯನ್ನು ಕಾರ್ಯರೂಪಕ್ಕಿಳಿಸಲು ಸಹಕರಿಸಿದ್ದರು. ಉಡುಪಿ ಡಿವೈಎಸ್ಪಿ ಕುಮಾರಸ್ವಾಮಿ, ಕಾಪು ಸರ್ಕಲ್‌ ಹಾಲಮೂರ್ತಿ ರಾವ್‌ ಮತ್ತಿತರ ಕಡೆಗಳ ಪೊಲೀಸ್‌ ಅಧಿಕಾರಿಗಳು ಬಂದೋಬಸ್ತ್ ಏರ್ಪಡಿಸಿದ್ದರು.

ಟಾಪ್ ನ್ಯೂಸ್

rahul

IIT Madras: ಕಾಂಗ್ರೆಸ್ ಮತ್ತು ಬಿಜೆಪಿ ಹೇಗೆ ಭಿನ್ನ? ಉತ್ತರ ನೀಡಿದ ರಾಹುಲ್ ಗಾಂಧಿ

ಪೊಂಗಲ್‌ – ಸಂಕ್ರಾಂತಿಗೆ ಮನರಂಜನೆಯ ಹಬ್ಬದೂಟ: ಇಲ್ಲಿದೆ ರಿಲೀಸ್‌ ಆಗಲಿರುವ ಚಿತ್ರಗಳ ಪಟ್ಟಿ

ಪೊಂಗಲ್‌ – ಸಂಕ್ರಾಂತಿಗೆ ಮನರಂಜನೆಯ ಹಬ್ಬದೂಟ: ಇಲ್ಲಿದೆ ರಿಲೀಸ್‌ ಆಗಲಿರುವ ಚಿತ್ರಗಳ ಪಟ್ಟಿ

2-kunigal

Kunigal:ಮನೆಗೆ ನುಗ್ಗಿದ ದುಷ್ಕರ್ಮಿಗಳು; ರಾಡ್ ನಿಂದ ತಲೆಗೆ ಹೊಡೆದು ಮಾಂಗಲ್ಯಸರ ದೋಚಿ ಪರಾರಿ

Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ

Bengaluru: ಬಿಬಿಎಂಪಿ ಕಸದ ಲಾರಿ ಹರಿದು ಇಬ್ಬರು ಸಹೋದರಿಯರ ಬಲಿ

Australia won the BGT 2024-25

INDvAUS: ಸಿಡ್ನಿಯಲ್ಲಿ ಸೋಲು; ದಶಕದ ಬಳಿಕ ಬಾರ್ಡರ್‌ ಗಾವಸ್ಕರ್‌ ಟ್ರೋಫಿ ಸೋತ ಭಾರತ

Private-Bus

Private Bus fare: ಶೀಘ್ರದಲ್ಲೇ ಖಾಸಗಿ ಬಸ್‌ ಪ್ರಯಾಣ ದರವೂ ಏರಿಕೆ?

1-horoscope

Daily Horoscope: ಅವಿವಾಹಿತರಿಗೆ ವಿವಾಹ ಯೋಗ, ವಸ್ತ್ರ ಆಭರಣ ವ್ಯಾಪಾರಿಗಳಿಗೆ ಅಧಿಕ ಲಾಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-girish

Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ

16

Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು

Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ

Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ

Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ

Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ

Missing Case: ಮಗುವಿನೊಂದಿಗೆ ತಾಯಿ ನಾಪತ್ತೆ

Missing Case: ಮಗುವಿನೊಂದಿಗೆ ತಾಯಿ ನಾಪತ್ತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್‌, ಮತ್ತಿಬ್ಬರ ಮೇಲೆ ಕೇಸ್‌

Bengaluru: ಯುವತಿ ಜೊತೆ ಅಸಭ್ಯ ವರ್ತನೆ: ಮ್ಯಾನೇಜರ್‌, ಮತ್ತಿಬ್ಬರ ಮೇಲೆ ಕೇಸ್‌

Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ

Bengaluru: 3 ತಿಂಗಳ ಹಿಂದಷ್ಟೇ ವಿವಾಹ ಆಗಿದ್ದ ಚಿನ್ನಾಭರಣ ವ್ಯಾಪಾರಿ ಆತ್ಮಹತ್ಯೆ

rahul

IIT Madras: ಕಾಂಗ್ರೆಸ್ ಮತ್ತು ಬಿಜೆಪಿ ಹೇಗೆ ಭಿನ್ನ? ಉತ್ತರ ನೀಡಿದ ರಾಹುಲ್ ಗಾಂಧಿ

Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ

Bengaluru: 40000 ರೂ. ಲಂಚ ಸ್ವೀಕರಿಸುವಾಗ ಎಎಸ್‌ಐ ಸೇರಿ ಇಬ್ಬರು ಲೋಕಾ ಬಲೆಗೆ

3-girish

Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.