ಕೊರೊನಾ ಭೀತಿ: ಪ್ರವಾಸಿ ತಾಣ, ಸಂತೆಗಳಲ್ಲಿ ಜನರಿಲ್ಲ

ಹೆಚ್ಚಿನ ಕಡೆಗಳಲ್ಲಿ ಜನಜೀವನ ಸಾಮಾನ್ಯ; ಮೀನು ಖರೀದಿಗೆ ಜನ

Team Udayavani, Mar 16, 2020, 5:30 AM IST

ಕೊರೊನಾ ಭೀತಿ: ಪ್ರವಾಸಿ ತಾಣ, ಸಂತೆಗಳಲ್ಲಿ ಜನರಿಲ್ಲ

ಕುಂದಾಪುರ: ಕೊರೊನಾ ಸಾರ್ವತ್ರಿಕವಾಗಿ ಹರಡದಂತೆ ಸರಕಾರ ಹತ್ತು ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂ ಡಿರುವ ಮಧ್ಯೆಯೇ ಜನತೆ ನಿರಾತಂಕರಾಗಿದ್ದಾರೆ. ಸಾಮಾನ್ಯ ದಿನಗಳಂತೆ ತಮ್ಮ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಆಸ್ಪತ್ರೆ
ಸರಕಾರಿ ಆಸ್ಪತ್ರೆಯಲ್ಲಿ ಕ್ಷಿಪ್ರ ಕಾರ್ಯಾಚರಣೆಗೆ ತಂಡಗಳನ್ನು ರಚಿಸಲಾಗಿದೆ. ವೈದ್ಯರು, ನರ್ಸ್‌, ಡಿ ಗ್ರೂಪ್‌ ಸಿಬಂದಿ ಸೇರಿದಂತೆ ವಿವಿಧ ತಂಡಗಳನ್ನು ಆಡಳಿತ ಶಸ್ತ್ರಚಿಕಿತ್ಸಕ ಡಾ| ರಾಬರ್ಟ್‌ ರೆಬೆಲ್ಲೋ ಅವರು ರಚಿಸಿದ್ದಾರೆ. 10 ಬೆಡ್‌ಗಳ ತೀವ್ರನಿಗಾ ವಾರ್ಡ್‌ನ್ನು ಸಿದ್ಧಪಡಿಸಲಾಗಿದೆ. ಪಿಪಿಇ (ಪರ್ಸನಲ್‌ ಪ್ರೊಟೆಕ್ಟಿವ್‌ ಎಕ್ವಿಪ್‌ಮೆಂಟ್‌) ಕಿಟ್‌ಗಳನ್ನು ಸಿದ್ಧಪಡಿಸಿ ಇಟ್ಟುಕೊಳ್ಳಲಾಗಿದೆ. ಮಾಸ್ಕ್ಗಳನ್ನು, ಆಂಟಿವೈರಸ್‌ ಔಷಧಗಳನ್ನು ತಯಾರಾಗಿಟ್ಟುಕೊಳ್ಳಲಾಗಿದೆ. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಅವರು ತಿಳಿಸಿದ್ದಾರೆ.

ಸ್ಯಾನಿಟೈಸರ್‌ ಇಲ್ಲ
ನಗರದ ಯಾವುದೇ ಮೆಡಿಕಲ್‌ ಸ್ಟೋರ್‌ಗಳಲ್ಲಿ, ಇತರ ಅಂಗಡಿಗಳಲ್ಲಿ ಸ್ಯಾನಿಟೈಸರ್‌ ದೊರೆಯುತ್ತಿಲ್ಲ. ಕಳೆದ ಕೆಲವು ದಿನಗಳಿಂದ ಸರಬರಾಜಾಗುತ್ತಿಲ್ಲ. ಕೆಲವೆಡೆ ಬಂದ ಸ್ಟಾಕನ್ನು ಕೂಡಾ ಮರಳಿ ಪಡೆದ ಸರಬರಾಜು ಸಂಸ್ಥೆಗಳು ಅವುಗಳನ್ನು ಬೆಂಗಳೂರಿಗೆ ಕಳುಹಿಸಿವೆ ಎನ್ನುತ್ತಾರೆ ಮೆಡಿಕಲ್‌ನವರು. ಒಂದು ಮೆಡಿಕಲ್‌ನಲ್ಲಿ ಶನಿವಾರ 200 ಸ್ಯಾನಿಟೈಸರ್‌ಗಳನ್ನು ತರಿಸ ಲಾಗಿದ್ದು ರವಿವಾರ ಮಧ್ಯಾಹ್ನದ ವೇಳೆಗೆ ಅದು ಖಾಲಿಯಾಗಿವೆ. ಸುಮಾರು 40 ರೂ.ಗೆಲ್ಲ ದೊರೆ ಯುವ ಸ್ಯಾನಿಟೈಸರ್‌ ಬೆಲೆ ಏಕಾಏಕಿ 120 ರೂ.ವರೆಗೆ ಏರಿಕೆಯಾಗಿದೆ. ಕಂಪೆನಿಗಳೇ ಅಧಿಕ ದರ ವಿಧಿಸಿ ಮಾರಾಟ ಮಾಡುತ್ತಿವೆ. ಮುಖಗವಸು ಕೂಡಾ ಅತ್ಯಂತ ಬೇಡಿಕೆ ಹೊಂದಿದ್ದು, ಇದರ ದರ ದಲ್ಲೂ ಏರಿಕೆಯಾಗಿದ್ದು ಸ್ಟಾಕ್‌ ಕಡಿಮೆಯಾಗಿದೆ.

ಬಸ್‌ ಸ್ಟಾಂಡ್‌

ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ ನಿಲ್ದಾಣದಲ್ಲಿ ರವಿವಾರ ಹಗಲಿನ ವೇಳೆ ಅಂತಹ ದೊಡ್ಡ ಪ್ರಮಾಣದ ಬದಲಾವಣೆ ಕಂಡು ಬರಲಿಲ್ಲ. ಎಂದಿನ ರವಿವಾರಗಳಂತೆಯೇ ಜನರ ಓಡಾಟ ಇದ್ದಿತ್ತು. ಬಸ್‌ಗಳೂ ಇದ್ದವು. ಕೆಲವರು ಮಾತ್ರ ಮುಖಕ್ಕೆ ಮುಖಗವಸು ಹಾಕಿದ್ದರು. ಇನ್ನಿತರರು ಸಾಮಾನ್ಯವಾಗಿಯೇ ಇದ್ದರು.

ಪ್ರವಾಸಿಗರ ಸಂಖ್ಯೆ ಕಡಿಮೆ
ಗಂಗೊಳ್ಳಿ/ ಮರವಂತೆ/ ಹೆಮ್ಮಾಡಿ/ ಬಸ್ರೂರು: ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಪ್ರಸಿದ್ಧ ಪ್ರವಾಸಿ ತಾಣವಾಗಿರುವ ತ್ರಾಸಿ – ಮರವಂತೆ ಬೀಚ್‌ನಲ್ಲಿ ರವಿವಾರ ಪ್ರವಾಸಿಗರ ಸಂಖ್ಯೆ ತುಂಬಾ ಕಡಿಮೆ ಇದ್ದಂತೆ ಕಂಡು ಬಂತು. ಇನ್ನು ಗ್ರಾಮೀಣ ಪ್ರದೇಶಗಳಲ್ಲಿ ರವಿವಾರವಾದ್ದರಿಂದ ಎಂದಿನಂತೆ ಜನ ಸಂಚಾರ ವಿರಳವಾಗಿತ್ತು.

ಬೇರೆ ಸಮಯಗಳಲ್ಲಿ ರವಿವಾರ ನೂರಾರು ಸಂಖ್ಯೆಯ ಪ್ರವಾಸಿಗರು ದೂರ-ದೂರದ ಊರುಗಳಿಂದ ಮರವಂತೆಯ ಕಡಲು – ನದಿಯ ಸೌಂದರ್ಯವನ್ನು ಆಸ್ವಾದಿಸಲು ಬರುತ್ತಿದ್ದರು. ಆದರೆ ಈ ವಾರ ಬೆರಳೆಣಿಕೆಯಷ್ಟು ಮಂದಿ ಮಾತ್ರ ಇದ್ದರು. ಗಂಗೊಳ್ಳಿಯ ಸೀವಾಕ್‌, ಕೋಡಿಯ ಸೀವಾಕ್‌ನಲ್ಲೂ ಜನ ಕಡಿಮೆಯಾಗಿದ್ದಾರೆ. ಬಸ್ರೂರಿನಲ್ಲೂ ಜನ ಸಂಚಾರ ವಿರಳವಿದ್ದು ಹೊಟೇಲ್‌ಗ‌ಳಲ್ಲಿ ಜನ ಕಡಿಮೆಯಿದ್ದರು.

ಮೀನು ಖರೀದಿಗೆ ಜನ
ಸಂತೆ, ಪೇಟೆಗಳಲ್ಲಿ ರವಿವಾರದ್ದರಿಂದ ಜನ ಸಂಚಾರ ಕಡಿಮೆಯಿದ್ದರೂ ಕೂಡ ಮುಳ್ಳಿಕಟ್ಟೆಯಲ್ಲಿರುವ ಮೀನು ಮಾರುಕಟ್ಟೆ, ಗಂಗೊಳ್ಳಿಯಲ್ಲಿರುವ ಮೀನು ಮಾರುಕಟ್ಟೆಗಳಲ್ಲಿ ಮೀನು ಖರೀದಿಗೆ ಜನ ಹೆಚ್ಚಿನ ಆಸಕ್ತಿ ತೋರಿದಂತೆ ಕಂಡು ಬಂತು.

ಮೀನು ಖರೀದಿಗೆ ಜನ
ಸಂತೆ, ಪೇಟೆಗಳಲ್ಲಿ ರವಿವಾರದ್ದರಿಂದ ಜನ ಸಂಚಾರ ಕಡಿಮೆಯಿದ್ದರೂ ಕೂಡ ಮುಳ್ಳಿಕಟ್ಟೆಯಲ್ಲಿರುವ ಮೀನು ಮಾರುಕಟ್ಟೆ, ಗಂಗೊಳ್ಳಿಯಲ್ಲಿರುವ ಮೀನು ಮಾರುಕಟ್ಟೆಗಳಲ್ಲಿ ಮೀನು ಖರೀದಿಗೆ ಜನ ಹೆಚ್ಚಿನ ಆಸಕ್ತಿ ತೋರಿದಂತೆ ಕಂಡು ಬಂತು.ಹೆಮ್ಮಾಡಿ, ತಲ್ಲೂರು, ಗಂಗೊಳ್ಳಿ, ಶಂಕರ ನಾರಾಯಣ, ಹಾಲಾಡಿ, ಬೆಳ್ವೆ, ತ್ರಾಸಿ, ಮರವಂತೆ ಸೇರಿದಂತೆ ಹೆಚ್ಚಿನೆಲ್ಲ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಭೀತಿಯಲ್ಲಿ ಅಲ್ಲದಿದ್ದರೂ, ರವಿವಾರವಾದ್ದರಿಂದ ಜನ ಸಂಚಾರ ಕಡಿಮೆಯಿತ್ತು.

ಸಂತೆಗೂ ಎಫೆಕ್ಟ್
ಪ್ರತಿ ರವಿವಾರ ಗೋಳಿಯಂಗಡಿ ಪೇಟೆಯಲ್ಲಿ ವಾರದ ಸಂತೆ ನಡೆಯುತ್ತದೆ. ಇಲ್ಲಿ ಕೊಂಚ ಪ್ರಮಾಣದಲ್ಲಿ ಜನರ ಸಂಖ್ಯೆ ಇಳಿಮುಖವಾಗಿತ್ತು.

ಮುಂಜಾಗ್ರತೆ ಕ್ರಮ
ದೇಗುಲ ವ್ಯವಸ್ಥಾಪನ ಸಮಿತಿ, ಆರೋಗ್ಯ ಇಲಾಖೆಯ ಸಹಭಾಗಿತ್ವದಲ್ಲಿ ದೇಗುಲಕ್ಕೆ ಆಗಮಿಸುವ ಭಕ್ತರ ಆರೋಗ್ಯದ ಬಗ್ಗೆ ನಿಗಾ ವಹಿಸಲಾಗುತ್ತಿದೆ. ಅನಾರೋಗ್ಯಕ್ಕೀಡಾದ ವ್ಯಕ್ತಿಗಳು ಕಂಡುಬಂದರೆ ತಪಾಸಣೆಗೆ ಸೂಕ್ತ ವ್ಯವಸ್ಥೆ ಏರ್ಪಡಿಸಲಾಗಿದೆ. ತಾಲೂಕು ವೈದ್ಯಾಧಿಕಾರಿ ಅವರ ಮಾರ್ಗದರ್ಶನದಲ್ಲಿ ಹೆಚ್ಚಿನ ನಿಗಾ ವಹಿಸಲಾಗಿದೆ. ಶುಚಿತ್ವಕ್ಕೆ ಆದ್ಯತೆ ನೀಡಲಾಗಿದ್ದು ಕ್ರಿಮಿನಾಶಕ ಔಷಧ ಸಿಂಪಡಿಸಲಾಗುತ್ತಿದೆ. ಪರಿಸರ ಮಾಲಿನ್ಯವಾಗದಂತೆ ಸ್ವತ್ಛತೆಗೆ ಆದ್ಯತೆ ನೀಡಲಾಗಿದೆ. ಗ್ರಾ.ಪಂ. ವತಿಯಿಂದ ಹೆಚ್ಚಿನ ಸಹಕಾರ ನೀಡಲಾಗುತ್ತಿದೆ
-ಪ್ರಕಾಶ ಪೂಜಾರಿ, ಅಧ್ಯಕ್ಷರು, ಗ್ರಾ.ಪಂ., ಕೊಲ್ಲೂರು

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

1-namm-mannu-1

Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.