ಕಾಪು ಬೀಚ್‌ನಲ್ಲಿ ನೀರು ಪಾಲಾದ ಯುವಕನ ಶವ ಪತ್ತೆ
Team Udayavani, Apr 30, 2018, 10:36 AM IST
ಕಾಪು: ಕಾಪು ಬೀಚ್‌ನಲ್ಲಿ ನೀರು ಪಾಲಾಗಿದ್ದ ಬೆಂಗಳೂರು ನಿವಾಸಿ, ಮೂಲತಃ ರಾಜಸ್ಥಾನ ಮೂಲದ ಕಿಶೋರ್ ಸಿಂಗ್ (19) ಎಂಬಾತನ ಶವ ಎ. 29ರಂದು ಲೈಟ್‌ಹೌಸ್ ಬಳಿ ಪತ್ತೆಯಾಗಿದೆ.
ಶನಿವಾರ ಮಧ್ಯಾಹ್ನ ಬೆಂಗಳೂರು ಮತ್ತು ಮಂಗಳೂರಿನಿಂದ ಕಾಪು ಸಮುದ್ರ ತೀರಕ್ಕೆ ಆಗಮಿಸಿದ್ದ ಏಳು ಜನರ ತಂಡದಲ್ಲಿದ್ದ ಕಿಶೋರ್ ಸಿಂಗ್ ಮತ್ತು ಭರತ್ ಸಿಂಗ್ ಸಮುದ್ರ ಪಾಲಾಗಿದ್ದರು.
ಇವರಲ್ಲಿ ಭರತ್ ಸಿಂಗ್‌ನನ್ನು ಲೈಫ್ ಗಾರ್ಡ್ ಸದಸ್ಯರು ರಕ್ಷಿಸಿದ್ದು, ಕಿಶೋರ್ ಸಿಂಗ್ ನೀರಿನಲ್ಲಿ ಕೊಚ್ಚಿ ಹೋಗಿ ನಾಪತ್ತೆಯಾಗಿದ್ದರು. ಕಿಶೋರ್‌ನ ಪತ್ತೆಗಾಗಿ ಲೈಫ್ ಗಾರ್ಡ್ ಸದಸ್ಯರು, ಪೊಲೀಸರು, ಹೋಮ್ ಗಾರ್ಡ್ ಸಿಬಂದಿ ಮತ್ತು ಸ್ಥಳೀಯ ಮೀನುಗಾರಿಕಾ ದೋಣಿಯವರು ಸಾಕಷ್ಟು ಹುಡುಕಾಟ ನಡೆಸಿದ್ದರೂ ವಿಫಲರಾಗಿದ್ದರು.
ರವಿವಾರ ಬೆಳಗ್ಗೆ ಕಾಪು ಲೈಟ್ ಬಳಿ ಸಮುದ್ರದಲ್ಲಿ ಶವ ತೇಲುತ್ತಿರುವ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರ ಸಮ್ಮುಖದಲ್ಲಿ ಚಂದ್ರಹಾಸ್ ಕೈಪುಂಜಾಲು, ಸೂರಿ ಶೆಟ್ಟಿ, , ಪ್ರಶಾಂತ್, ವಿನೀತ್ ಜತೆ ಸೇರಿ ಶವವನ್ನು ಮೇಲಕ್ಕೆತ್ತಿದ್ದಾರೆ.ಮೃತದೇಹವನ್ನು ಮಣಿಪಾಲದಲ್ಲಿ ಮರಣೋತ್ತರ ಪರೀಕೆೆÒಗೊಳಪಡಿಸಿ, ಬಳಿಕ ಮೃತನ ಸಹೋದರ ಜೋದ ರಾಮ್ ಅವರಿಗೆ ಹಸ್ತಾಂತರಿಸಲಾಗಿದೆ. ಶವವನ್ನು ರಾಜಸ್ಥಾನಕ್ಕೆ ಕೊಂಡೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Udupi: ಮೀನುಗಾರರಿಗೆ ಎನ್‌ಎಫ್ಡಿಪಿ ಪೋರ್ಟಲ್‌ನಲ್ಲಿ ಶುಲ್ಕರಹಿತ ನೋಂದಣಿ
ಏಕನಿವೇಶನ ನಕ್ಷೆ ಅನುಮೋದನೆ ಅಧಿಕಾರ ಗ್ರಾಮ ಪಂಚಾಯತ್‌ಗೆ ನೀಡಲು ಸಿಎಂಗೆ ಸಂಸದ ಕೋಟ ಪತ್ರ
ಅಕ್ಕಿ ಗಿರಣಿ ಮುಂದೆ ಭತ್ತ ತುಂಬಿದ ವಾಹನಗಳ ಸಾಲು… ಮುಂಗಾರು ಮುಗಿದರೂ ನಿಲ್ಲದ ಕೃಷಿಕರ ಗೋಳು
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.