ಅಂಚೆ ಕಚೇರಿಯಲ್ಲಿ ಆಧಾರ್ ನೋಂದಣಿ, ತಿದ್ದುಪಡಿ ಅಡೆತಡೆ
Team Udayavani, Sep 26, 2019, 5:50 AM IST
ಉಡುಪಿ: ಜಿಲ್ಲೆಯ ಕೆಲವು ಅಂಚೆ ಕಚೇರಿಗಳಲ್ಲಿ ವಿವಿಧ ಕಾರಣಗಳನ್ನು ನೀಡಿ ಆಧಾರ್ ಕಾರ್ಡ್ ತಿದ್ದುಪಡಿ ಹಾಗೂ ನೋಂದಣಿ ಕಾರ್ಯ ಸ್ಥಗಿತಗೊಳಿಸಿದ್ದು, ಸಾರ್ವಜನಿಕರು ತೊಂದರೆಗೆ ಸಿಲುಕಿದ್ದಾರೆ.
ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು ಈ ಹಿಂದೆ ಆಧಾರ್ ಕಾರ್ಡ್ ನೋಂದಣಿ ಮತ್ತು ತಿದ್ದುಪಡಿ ಅಧಿಕಾರವನ್ನು ಖಾಸಗಿ ಸಂಸ್ಥೆಗಳಿಗೆ ನೀಡಿತ್ತು. ಅನಂತರದ ದಿನದಲ್ಲಿ ಆದೇಶವನ್ನು ಹಿಂಪಡೆದು ಕೆಲ ಬ್ಯಾಂಕ್ ಮತ್ತು ಅಂಚೆ ಕಚೇರಿಗೆ ಈ ಸೇವೆಯ ಜವಾಬ್ದಾರಿಯನ್ನು ವರ್ಗಾಯಿಸಿತು.
ಪ್ರಾಧಿಕಾರದಿಂದಲೇ ಸೌಲಭ್ಯ ಪೂರೈಕೆ
ಪ್ರಾಧಿಕಾರದ ವತಿಯಿಂದ ಅಂಚೆ ಇಲಾಖೆಯ ಸಿಬಂದಿಗೆ ತರಬೇತಿ ನೀಡುವುದರ ಜತೆಗೆ ಆಧಾರ್ ಕಾರ್ಡ್ ನೋಂದಣಿ ಮತ್ತು ತಿದ್ದುಪಡಿಗೆ ಬೇಕಾಗುವ ಕಂಪ್ಯೂಟರ್ ಸೇರಿದಂತೆ ಯಂತ್ರೋಪಕರಣಗಳನ್ನು ಪೂರೈಸಿತು.
ಉಡುಪಿ ವಿಭಾಗದಲ್ಲಿ 62
ಉಡುಪಿ ವಿಭಾಗದ 62 ಅಂಚೆ ಕಚೇರಿಯಲ್ಲಿ ಆಯ್ದ 47 ಕಚೇರಿಗಳಲ್ಲಿ ಈ ಸೇವೆಯನ್ನು 2018ರಲ್ಲಿ ಪ್ರಾರಂಭಿಸಲಾಗಿತ್ತು. ಪ್ರಾರಂಭದಲ್ಲಿ ನಿತ್ಯ 15- 20 ಕಾರ್ಡ್‌ಗಳ ನೋಂದಣಿ ಹಾಗೂ ತಿದ್ದುಪಡಿ ಮಾಡಲಾಗುತ್ತಿತ್ತು. ಆದರೆ ಇದೀಗ ಕಚೇರಿ ಸಿಬಂದಿ ಬೇರೆ ಕೇಂದ್ರಗಳಿಗೆ ತೆರಳಿ ನೋಂದಣಿ ಮಾಡುವಂತೆ ಜನರ ಮೇಲೆ ಒತ್ತಡ ಹೇರುತ್ತಿದ್ದಾರೆ ಎನ್ನುವ ಆರೋಪಗಳಿವೆ.
ಸಿಬಂದಿ ಕೊರತೆಯಿಂದ ವಾಪಸು
ಅಂಚೆ ಕಚೇರಿಯಲ್ಲಿ ಸಿಬಂದಿ ಕೊರತೆ ಹಾಗೂ ಕಾರ್ಯ ಒತ್ತಡದಿಂದ ಸೇವೆ ಸ್ಥಗಿತಗೊಳಿಸಿದ್ದಾರೆ. ಈ ಬಗ್ಗೆ ಮಾಹಿತಿ ತಿಳಿಯದ ಜನರು ದೂರದ ಪ್ರದೇಶದವರು ಆಧಾರ್ ನೋಂದಣಿಗೆ ಅಂಚೆ ಕಚೇರಿಗೆ ಬಂದು ಕೆಲಸವಾಗದೆ ಹಿಂದಿರುಗುತ್ತಿದ್ದಾರೆ.
ಬಂದದ್ದು ವ್ಯರ್ಥವಾಯ್ತು
ಬಾರಕೂರು ಅಂಚೆ ಕಚೇರಿಗೆ ಆಧಾರ್ ಕಾರ್ಡ್ ತಿದ್ದುಪಡಿಗೆ ಬಂದಿದ್ದೇನೆ. ಸಿಬಂದಿ ಆಧಾರ ನೋಂದಣಿ ಸಾಧ್ಯವಿಲ್ಲ ಎನ್ನುತ್ತಿದ್ದಾರೆ.
-ವಿಜೇಂದ್ರ, ಬಾರಕೂರು
ಸ್ಟೇಟ್ ಬ್ಯಾಂಕ್ ಸಂಪರ್ಕಿಸಲು ಹೇಳುತ್ತಿದ್ದಾರೆ
ಬ್ರಹ್ಮಾವರ ಅಂಚೆ ಕಚೇರಿಯಲ್ಲಿ ಆಧಾರ್ ಕಾರ್ಡ್ ನೋಂದಣಿ ಕುರಿತು ಸಿಬಂದಿಯನ್ನು ಕೇಳಿದರೆ ಈಗಾಗಲೇ 25 ಟೋಕನ್ ವಿತರಣೆಯಾಗಿದೆ. ಸ್ಟೇಟ್ ಬ್ಯಾಂಕ್ ಸಂಪರ್ಕಿಸುವಂತೆ ಉತ್ತರ ನೀಡುತ್ತಿದ್ದಾರೆ.
– ಸಂತೋಷ್, ಮಂದಾರ್ತಿ
ಕಾರ್ಡ್ ತಿದ್ದುಪಡಿ, ನೋಂದಣಿ ರದ್ದು ಅಸಾಧ್ಯ
ಜಿಲ್ಲೆಯ ಅಂಚೆಕಚೇರಿಯಲ್ಲಿ ಆಧಾರ್ ನೋಂದಣಿ ಹಾಗೂ ತಿದ್ದುಪಡಿ ಕಾರ್ಯ ನಡೆಯುತ್ತಿದೆ. ಕಾರ್ಯ ಒತ್ತಡ ಹಾಗೂ ಸರ್ವರ್‌ನಲ್ಲಿ ಸಮಸ್ಯೆ ಎದುರಾದಾಗ ಸಿಬಂದಿ ಸ್ವಲ್ಪ ಸಮಯ ಸ್ಥಗಿತಗೊಳಿಸುತ್ತಾರೆ. ಸಂಪೂರ್ಣವಾಗಿ ಕಾರ್ಡ್ ತಿದ್ದುಪಡಿ ಹಾಗೂ ನೋಂದಣಿಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ.
-ಸುಧಾಕರ್ ದೇವಾಡಿಗ, ಅಂಚೆ ಅಧೀಕ್ಷಕ, ಉಡುಪಿ ವಿಭಾಗ
– ತೃಪ್ತಿ ಕುಮ್ರಗೋಡು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxal Encounter Case: ಜಯಂತ್ ಗೌಡ ವಿಚಾರಣೆ, ಠಾಣೆಗೆ ಮುತ್ತಿಗೆ ಹಾಕಿದ ಗ್ರಾಮಸ್ಥರು
ಅಂಬಾಗಿಲು: ಚಾಲಕನ ನಿಯಂತ್ರಣ ತಪ್ಪಿ ಸಿಮೆಂಟ್ ರೆಡಿಮಿಕ್ಸ್ ವಾಹನ ಪಲ್ಟಿ… ತಪ್ಪಿದ ಅವಘಡ
Udupi: ಸಹಕಾರ ಕ್ಷೇತ್ರ ಪಠ್ಯವಾಗಲಿ: ಡಾ| ಎಂ.ಎನ್.ಆರ್.
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.