ಆಧಾರ್ ನೋಂದಣಿ ಕೇಂದ್ರ ಕಾಪು ತಾಲೂಕು ಕಚೇರಿ ಸಂಕೀರ್ಣಕ್ಕೆ ಸ್ಥಳಾಂತರ
Team Udayavani, Nov 29, 2018, 1:45 AM IST
ಕಾಪು: ಕಾಪು ಬಂಗ್ಲೆ ಮೈದಾನದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಅಟಲ್ ಜೀ ಜನಸ್ನೇಹಿ ಕೇಂದ್ರ ಮತ್ತು ಆಧಾರ್ ನೋಂದಣಿ ಕೇಂದ್ರವನ್ನು ರಾ.ಹೆ. 66ರ ಸನಿಹದಲ್ಲಿರುವ ಹಳೆ ಪುರಸಭಾ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾಪು ತಾಲೂಕು ಕಚೇರಿ ಸಂಕೀರ್ಣಕ್ಕೆ ಸ್ಥಳಾಂತರಗೊಳಿಸಲಾಗಿದೆ.
ಆರಂಭದಲ್ಲಿ ಕಾಪು ಪೇಟೆಯ ಅನಂತ ಮಹಲ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜನಸ್ನೇಹಿ ಕೇಂದ್ರ ಬಳಿಕ ಕಾಪು ಬಂಗ್ಲೆ ಮೈದಾನದಲ್ಲಿದ್ದ ಪ್ರವಾಸಿ ಬಂಗಲೆಗೆ ಸ್ಥಳಾಂತರಗೊಂಡಿತ್ತು. ಬಳಿಕ ಕಾಪು ತಾಲೂಕು ಘೋಷಣೆಯಾದ ಬಳಿಕ ತಾಲೂಕು ಕಚೇರಿಯೊಂದಿಗೇ ಇತ್ತು. ಆದರೆ ಕಳೆದೆರಡು ತಿಂಗಳ ಹಿಂದೆ ತಾಲೂಕು ಕಚೇರಿ ಹಳೆ ಪುರಸಭೆ ಕಟ್ಟಡಕ್ಕೆ ಸ್ಥಳಾಂತರಗೊಂಡಿದ್ದರೂ ಜನಸ್ನೇಹಿ ಕೇಂದ್ರ ಸ್ಥಳಾಂತರಗೊಂಡಿರಲಿಲ್ಲ. ಇದೀಗ ಕಚೇರಿ ಸ್ಥಳಾಂತರಗೊಂಡಿರುವುದರಿಂದ ಕಂದಾಯ ಇಲಾಖೆ ಸಂಬಂಧಿತ ಹಾಗೂ ಇನ್ನಿತರ ಅರ್ಜಿಗಳ ಸೇವೆಯನ್ನು ಸಾರ್ವಜನಿಕರು ಒಂದೇ ಕಡೆ ಪಡೆಯಲು ಅವಕಾಶ ಮಾಡಿಕೊಟ್ಟಂತಾಗಿದೆ. ಕಾಪು ಪುರಸಭಾ ವ್ಯಾಪ್ತಿಯ ಮಲ್ಲಾರು, ಪಡು, ಉಳಿಯಾರಗೋಳಿ ಮತ್ತು ಮೂಳೂರು ಗ್ರಾಮಗಳ ಜನರ ಸೇವೆಗಾಗಿ ಕಾರ್ಯ ನಿರ್ವಹಿಸುತ್ತಿರುವ ಆಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಕಾಪು ತಾಲೂಕು ವ್ಯಾಪ್ತಿಯ ಎಲ್ಲಾ ಗ್ರಾಮಗಳ ಕಂದಾಯ ಇಲಾಖೆ ಸಂಬಂಧಿತ ವಿವಿಧ ಅರ್ಜಿಗಳ ಸ್ವೀಕಾರ ಮತ್ತು ವಿಲೇವಾರಿಯೂ ನಡೆಯಲಿದೆ.
ಜನಸ್ನೇಹಿ ಕೇಂದ್ರದಲ್ಲಿ 36 ಸೇವೆಗಳು ಲಭ್ಯ
ಸ್ಥಳಾಂತರಗೊಂಡಿರುವ ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಆರ್‌ಟಿಸಿ, ಆಧಾರ್ ನೋಂದಣಿ, ತಿದ್ದುಪಡಿ, ವಾಸ್ತವ್ಯ ದೃಢ ಪತ್ರ, ಮೋಜಿನಿ ಅರ್ಜಿ, 94ಸಿ, 94ಸಿಸಿ, ಜನನ ಮತ್ತು ಮರಣ ಪ್ರಮಾಣ, ವಿವಿಧ ಪಿಂಚಣಿ ಯೋಜನೆಗಳ ಸಹಿತ ಸರಕಾರದ 36 ಸೇವೆಗಳು ಲಭ್ಯವಿವೆ ಎಂದು ಇಲಾಖಾ ಮೂಲಗಳು ತಿಳಿಸಿವೆ.
ಒಂದೇ ಕಡೆ ಅವಕಾಶ
ಕಂದಾಯ ಇಲಾಖೆಗೆ ಸಂಬಂಧಿತ ಹಾಗೂ ಇನ್ನಿತರ ಅರ್ಜಿಗಳ ಸೇವೆಯನ್ನು ಒಂದೇ ಕಡೆ ಪಡೆಯಲು ಸಾರ್ವಜನಿಕರಿಗೆ ಅವಕಾಶ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.