ಕೋಟೇಶ್ವರದ ಕೊಡಿಹಬ್ಬದಲ್ಲಿ ಆದಿ ಯೋಗಿ ಪ್ರತಿಮೆ
Team Udayavani, Nov 23, 2018, 2:45 AM IST
ಕೋಟೇಶ್ವರ : ಇಶಾ ಪೌಂಡೇಶನ್ ಖ್ಯಾತಿಯ ಸದ್ಗುರು ಜಗ್ಗಿ ವಾಸುದೇವ ಅವರು ತಮಿಳುನಾಡಿನ ಕೊಯಮತ್ತೂರಿನಲ್ಲಿ ನಿರ್ಮಿಸಿರುವ ಬೃಹತ್ ಆದಿ ಯೋಗಿ ಪ್ರತಿಮೆಯ ತದ್ರೂಪಿ ಕಲಾಕೃತಿಯನ್ನು ಕೊಡಿ ಹಬ್ಬದ ಸಲುವಾಗಿ ಕೋಟೇಶ್ವರದ ರಾಮನಾಥ ಕಟ್ಟೆ ಬಳಿ ನಿರ್ಮಿಸುವುದರ ಮೂಲಕ ಹಬ್ಬದ ಸೊಬಗಿಗೆ ಹೊಸ ಕಳೆ ತಂದುಕೊಟ್ಟಿದೆ.
ಕಳೆದ 25 ವರ್ಷಗಳಿಂದ ಇಲ್ಲಿನ ರಾಮನಾಥಗೋಳಿ ಕಟ್ಟೆ ಫ್ರೆಂಡ್ಸ್ ಹಾಗೂ ಜಿ.ವಿ. ಆರ್ಟ್ಸ್ ಸಹಯೋಗದೊಡನೆ ಕೊಡಿ ಹಬ್ಬದ ಸಂದರ್ಭದಲ್ಲಿ ಥರ್ಮಾಕೋಲ್‌ನಿಂದ ನಿರ್ಮಿಸಲಾಗಿದ್ದ ತಾಜ್‌ಮಹಲ್, ಅಯೋದ್ಯ ರಾಮ ಮಂದಿರ, ಶಬರಿಮಲೆ ಶ್ರೀ ಅಯ್ಯಪ್ಪ ದೇವಸ್ಥಾನ, ಗೋಲ್ಡನ್ ಟೆಂಪಲ್, ತಿರುಪತಿ ವೆಂಕಟೇಶ್ವರ ಸಹಿತ ನಾನಾ ಕಲಾಕೃತಿಗಳು ಭಕ್ತರನ್ನು ಆಕರ್ಷಿಸುವುದರೊಡನೆ ರಂಜಿಸಿತು.
ಯಾವುದೇ ಫಲಾಪೇಕ್ಷೆ ಇಲ್ಲದೇ ಇಲ್ಲಿನ ಯುವಕರು ಕೇವಲ 15 ದಿನಗಳಲ್ಲಿ ಇಂತಹ ಕಲಾಕೃತಿಗಳನ್ನು ಕೈಚಳಕದಿಂದ ನಿರ್ಮಿಸಿ ಶಹಭಾಷ್ ಎಂಬ ಬಿರುದಿಗೆ ಪಾತ್ರರಾಗಿರುತ್ತಾರೆ. ಆದಿಯೋಗಿಯ ಈ ಕಲಾಕೃತಿಯು 19 ಫೀಟ್ ಎತ್ತರ ಹೊಂದಿದ್ದು 21 ಫೀಟ್ ಅಗಲದಿಂದ ಕೂಡಿದೆ. ನಯನ ಮನೋಹರವಾದ ಇಲ್ಲಿನ ಕಲಾಕೃತಿಯು ದಿನದಿಂದ ದಿನಕ್ಕೆ ಜನಮನ ಸೂರೆಗೊಳ್ಳುತ್ತಿದ್ದು ಕಲಾಕಾರರ ಪ್ರಾವಿಣ್ಯತೆಗೆ ಭೇಷ್ ಎಂದಿರುತ್ತಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.