ನೀರು ಕಾಣದ ಗುಲ್ವಾಡಿ ಗ್ರಾಮದ ಅಬ್ಬಿಗುಡ್ಡಿ ನಿವಾಸಿಗಳು
Team Udayavani, Mar 9, 2019, 12:30 AM IST
ಬಸ್ರೂರು: ಗುಲ್ವಾಡಿ ಗ್ರಾ,ಪಂ.ನ ವ್ಯಾಪ್ತಿಯ ಒಂದನೇ ವಾರ್ಡ್‌ನಲ್ಲಿ ಮಾವಿನಕಟ್ಟೆ ಸಮೀಪ ಅಬ್ಬಿಗುಡ್ಡಿಯ ಜನರು ಬೇಸಗೆ ಆರಂಭದಲ್ಲೇ ನೀರಿಲ್ಲದೆ ಬಸವಳಿದಿದ್ದಾರೆ.
ಜನರಿಗೆ ಕುಡಿಯುವ ನೀರಿಲ್ಲ
ಸುಮಾರು 450 ಮಂದಿ ನಿವಾಸಿಗಳಿರುವ ಈ ಪ್ರದೇಶದಲ್ಲಿ ಮಾರ್ಚ್ ನಂತರ ನೀರಿನ ಸಮಸ್ಯೆ ತೀವ್ರ ಬಿಗಡಾಯಿಸುತ್ತದೆ. ಗ್ರಾ.ಪಂ. ಹೇಳುವ ಪ್ರಕಾರ ಪ್ರಸ್ತುತ ಅಬ್ಬಿಗುಡ್ಡಿಯಲ್ಲಿ ಬಾವಿ ತೋಡಿದರೆ ನೀರು ಬರುವುದಿಲ್ಲ. ಈಗ ಬೇರೊಂದು ಬಾವಿಯಿಂದ ಪ್ರತಿ ಮನೆಗೆ 250ಲೀ. ನೀರನ್ನು ನಳ್ಳಿ ಮೂಲಕ ಬಿಡಲಾಗುತ್ತಿದೆ.
ಹಣಕಾಸಿನ ಕೊರತೆ
ಈಗಾಗಲೇ ವಾರಾಹಿ ನದಿ ತಟದಲ್ಲಿ ರೂ.3.5 ಲಕ್ಷ ವೆಚ್ಚದಲ್ಲಿ ನೂತನ ಬಾವಿಯೊಂದನ್ನು ತೆರೆಯಲಾಗಿದೆ. ಆದರೆ ಇಲ್ಲಿಂದ ನೀರನ್ನು ಅಬ್ಬಿಗುಡ್ಡಿ ಪ್ರದೇಶಕ್ಕೆ ತಲುಪಿಸಬೇಕಾದರೆ ನೂತನ ಮೋಟಾರ್ ಮತ್ತು ಪೈಪ್‌ಗ್ಳನ್ನು ಹಾಕಬೇಕಾಗಿದೆ. ಈ ಕಾಮಗಾರಿಗೆ ಗ್ರಾ.ಪಂ.ನಿಂದ 14ನೇ ಹಣಕಾಸಿನ ಯೋಜನೆಯಡಿ ರೂ.5 ಲಕ್ಷ ಹಣವನ್ನು ವ್ಯಯಿಸಬಹುದು. ಆದರೆ ಇದಕ್ಕೆ ಇನ್ನೂ 5 ಲಕ್ಷ ರೂ. ಕೊರತೆ ಇದೆ. ಈ ಹಣವನ್ನು ಹಣವನ್ನು ತಾ.ಪಂ., ಜಿ.ಪಂ. ಅಥವಾ ಶಾಸಕರ ನಿಧಿಯಿಂದ ಬಳಸಬೇಕಾಗಿದೆ ಎನ್ನುತ್ತಾರೆ.
ನಮಗೆ ಈಗ ನೀರು ಸಿಗುತ್ತಿಲ್ಲ
ಅಬ್ಬಿಗುಡ್ಡಿಗೆ ಈಗ ಯಾವ ಕಡೆಯಿಂದಲೂ ನೀರು ಬರುತ್ತಿಲ್ಲ. ಕೆಲವರ ಮನೆಯಲ್ಲಿ ಬಾವಿಯಿದ್ದರೆ, ಪೈಪ್ ಮೂಲಕ ನೀರು ಕೂಡ ಸರಬರಾಜಾಗುತ್ತಿಲ್ಲ. ದುಬಾರಿ ಹಣ ತೆತ್ತು ಟ್ಯಾಂಕರ್ ನೀರು ಪಡೆಯಬೇಕಾದ ಸನ್ನಿವೇಶವಿದೆ.
– ಹುಸೇನ್, ಅಬ್ಬಿಗುಡ್ಡಿ ನಿವಾಸಿ
ಬಾವಿ ತೆಗೆಯಲಾಗಿದೆ
ಈಗಾಗಲೇ ವಾರಾಹಿ ನದಿ ತಟದಲ್ಲಿ ನೂತನ ಬಾವಿಯನ್ನು ತೆಗೆಯಲಾಗಿದೆ. ಅದಕ್ಕೆ ಮೋಟಾರ್, ಪೈಪ್‌ಗ್ಳನ್ನು ಅಭ್ಯ ಅನುದಾನದಡಿ ಅಳವಡಿಸಿ ಎತ್ತರದ ಪ್ರದೇಶವಾದ ಅಬ್ಬಿಗುಡ್ಡಿಯ ಮನೆಗಳಿಗೆ ನೀರನ್ನು ಸರಬರಾಜು ಮಾಡಲಾಗುತ್ತದೆ. ಪ್ರಸ್ತುತ ಸೌಕೂರು ಸಮೀಪದ ಬಾವಿಯಿಂದ ಅಲ್ಲಿನ ಜನರಿಗೆ ನೀರನ್ನು ಒದಗಿಸುತ್ತಿದ್ದೇವೆ. 14ನೇ ಹಣಕಾಸು ಯೋಜನೆಯಡಿ ರೂ.5,77,000 ಹಣ ಇರಿಸಿದ್ದು ಅನುಮೋದನೆಗೊಂಡಿದೆ. ಶೀಘ್ರ ಅಲ್ಲಿಗೆ ನೀರನ್ನು ಶಾಶ್ವತವಾಗಿ ಸರಬರಾಜು ಮಾಡುತ್ತೇವೆ.
– ವನಿತಾ ಶೆಟ್ಟಿ,,
ಅಭಿವೃದ್ಧಿ ಅಧಿಕಾರಿ,ಗ್ರಾ.ಪಂ. ಗುಲ್ವಾಡಿ
– ದಯಾನಂದ ಬಳ್ಕೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.