ಮನೆ ಮನೆಗೆ ಉಚಿತ ನೀರು ಕೊಡುವ ಅಬೂಬಕ್ಕರ್‌

Team Udayavani, May 10, 2019, 6:04 AM IST

uchita-neeru

ಕಟಪಾಡಿ: ಮೂಡಬೆಟ್ಟು ಗ್ರಾಮದ ಸರಕಾರಿ ಗುಡ್ಡೆ ಕಾಲನಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಿದ್ದು, ಅಬೂಬಕ್ಕರ್‌ ಎಂಬವರು ತನ್ನ ಸ್ವಂತ ಬಾವಿಯ ಕುಡಿಯುವ ನೀರನ್ನು ಉಚಿತವಾಗಿ ಹಂಚುತ್ತಿದ್ದಾರೆ. ಆ ಮೂಲಕ ಇಲ್ಲಿನವರ ಪಾಲಿಗೆ ಆಪದಾºಂಧವರಾಗಿದ್ದಾರೆ.

ಕಟಪಾಡಿ ಗ್ರಾ.ಪಂ. ವ್ಯಾಪ್ತಿಯ ಈ ಕಾಲನಿಯಲ್ಲಿ ಮೂರ್‍ನಾಲ್ಕು ದಿನಗಳಿಗೊಮ್ಮೆ ನಳ್ಳಿಯಲ್ಲಿ ಅಲ್ಪ ಪ್ರಮಾಣದ ನೀರು ಸರಬರಾಜಾಗುತ್ತಿದೆ. ಆದರೆ ಈ ನೀರು ಸಾಕಾಗುತ್ತಿಲ್ಲ ಎಂಬುದನ್ನು ಮನಗಂಡು ಸ್ಥಳೀಯ ವಾರ್ಡು ಸದಸ್ಯ, ಮಾಜಿ ಗ್ರಾ.ಪಂ. ಉಪಾಧ್ಯಕ್ಷ ಅಬೂಬಕ್ಕರ್‌ ಎ. ಆರ್‌ ಅವರು ಕಳೆದ ಕೆಲ ವರ್ಷಗಳಿಂದ ಉಚಿತವಾಗಿ ನೀರು ನೀಡುತ್ತಿದ್ದಾರೆ.

ಸ್ವಂತ ಖರ್ಚಿನಲ್ಲಿ 300 ಮನೆಗೆ ನೀರು
ಈ ಕಾಲೋನಿಯಲ್ಲಿ ಸುಮಾರು 300 ರಷ್ಟು ಮನೆಗಳಿದ್ದು, ಇದ್ದ ಬಾವಿ, ನೀರಿನ ಆಶ್ರಯವು ಬತ್ತಿ ಹೋಗಿರುತ್ತದೆ. ಅಬೂಬಕ್ಕರ್‌ ಅವರ ಮನೆಯ
ಬಾವಿಯಲ್ಲಿ ಹೇರಳವಾಗಿ ನೀರಿದ್ದು, ಅವರು ಸ್ವತಃ ಬಾವಿಯಿಂದ ಸುಮಾರು ಎರಡು ಸಾವಿರ ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ಗೆ ನೀರನ್ನು ತುಂಬಿಸಿ ಸ್ವಂತ ಖರ್ಚಿನಲ್ಲಿಯೇ ಈ ಸರಕಾರಿ ಗುಡ್ಡೆಯ ಕಾಲೋನಿಯ ಎಲ್ಲಾ ಮನೆಗಳಿಗೂ ಜಾತಿ ಬೇಧ ಮರೆತು ಕುಡಿಯುವ ನೀರನ್ನು ಸರಬರಾಜು ಮಾಡುತ್ತಿದ್ದಾರೆ.

ಈ ಭಾಗದಲ್ಲಿ ಪಂಚಾಯತ್‌ ನೀರಿಗಾಗಿ ಮೂರು ಬೋರ್‌ವೆಲ್‌ ಹಾಕಲಾಗಿದ್ದು, 2 ಬೋರ್‌ವೆಲ್‌ಗ‌ಳು ಕೆಟ್ಟಿವೆ. ಇದ್ದ 1 ಬೋರ್‌ವೆಲ್‌ ಮೂಲಕ ನೀರು ಸರಬರಾಜು ಮಾಡುತ್ತಿದ್ದರೂ ನೀರಿನ ಕೊರತೆ ಬಾಧಿಸುತ್ತಿದೆ. ಇಂತಹ ಕಡು ಬೇಸಿಗೆಯ ಸಂದರ್ಭ ಕುಡಿಯುವ ನೀರಿನ ತೀವ್ರ ಬರವನ್ನು
ಎದುರಿಸಬೇಕಾದ ದುಸ್ಥಿತಿ ಈ ಕಾಲೋನಿ ನಿವಾಸಿಗಳದ್ದಾಗಿದ್ದು,
ಅಬೂಬಕ್ಕರ್‌ ಅವರ ಈ ಕೆಲಸಕ್ಕೆ ಸ್ಥಳೀಯರು ಮುಕ್ತ ಕಂಠದಿಂದ
ಶ್ಲಾ ಸಿದ್ದಾರೆ.

ಪ್ರತಿ ಮನೆಗೆ 300 ಲೀ.
ದಿನವೊಂದರ 200ರಿಂದ 300 ಲೀಟರ್‌ಗೂ ಅಧಿಕ ನೀರನ್ನು ಪ್ರತೀ ಮನೆಗೂ ತಲುಪುವಂತೆ ನೋಡಿಕೊಳ್ಳುತ್ತಿದ್ದಾರೆ. ಬೆಳಿಗ್ಗೆ 7ಗಂಟೆಯಿಂದ 12 ಗಂಟೆಯ ತನಕ ಹಾಗೂ ಸಂಜೆ 4ಗಂಟೆಯಿಂದ ರಾತ್ರಿ ಸರಿಸುಮಾರು 10 ಗಂಟೆಯ ತನಕವೂ ಕುಡಿಯುವ ನೀರನ್ನು ಉದ್ಯಮಿ ಅಬೂಬಕ್ಕರ್‌ ಮನೆಮಂದಿಯ ಸಹಕಾರದೊಂದಿದೆ ಸರಬರಾಜು ಮಾಡುತ್ತಿದ್ದಾರೆ.

ಮನೆಯ ಬಾವಿಯಲ್ಲಿ ಭೂಮಿತಾಯಿ ನೀಡಿದ ನೀರು ಇದೆ. ಪತ್ನಿ, ಮಕ್ಕಳ ಸಹಕಾರದಿಂದ ಸ್ವತಃ ಬಾಡಿಗೆ ವಾಹನ ಗೊತ್ತುಪಡಿಸಿ ಖರ್ಚು ಭರಿಸಿಕೊಂಡು ಸ್ಥಳೀಯ 300ರಷ್ಟು ನಿವಾಸಿಗಳಿಗೆ ಕೊಡುತ್ತಿದ್ದೇನೆ. ಮುಂದೆಯೂ ಈ ಸೇವೆ ನಡೆಸಲು ಬದ್ಧವಾಗಿದ್ದೇನೆ.
– ಅಬೂಬಕ್ಕರ್‌ ಎ.ಆರ್‌, ಉದ್ಯಮಿ, ಕಟಪಾಡಿ ಗ್ರಾ.ಪಂ.ಸದಸ್ಯ.

ಟಾಪ್ ನ್ಯೂಸ್

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Kazakhstan: ಕಜಕ್‌ ವಿಮಾನವನ್ನು ರಷ್ಯಾವೇ ಉರುಳಿಸಿದೆ: ಅಜರ್‌ಬೈಜಾನ್‌

Kazakhstan: ಕಜಕ್‌ ವಿಮಾನವನ್ನು ರಷ್ಯಾವೇ ಉರುಳಿಸಿದೆ: ಅಜರ್‌ಬೈಜಾನ್‌

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

ಯಮುನಾ ನದಿಯಲ್ಲಿ ಡಾ| ಮನಮೋಹನ್‌ ಸಿಂಗ್‌ ಚಿತಾಭಸ್ಮ ವಿಸರ್ಜನೆ

Yamuna ನದಿಯಲ್ಲಿ ಡಾ| ಮನಮೋಹನ್‌ ಸಿಂಗ್‌ ಚಿತಾಭಸ್ಮ ವಿಸರ್ಜನೆ

1-astr

Shri Krishna Matha; ವಿಶ್ವಮಟ್ಟದಲ್ಲಿ ಭಗವದ್ಗೀತೆ ಜಾಗೃತಿ: ಪುತ್ತಿಗೆ ಶ್ರೀ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-astr

Shri Krishna Matha; ವಿಶ್ವಮಟ್ಟದಲ್ಲಿ ಭಗವದ್ಗೀತೆ ಜಾಗೃತಿ: ಪುತ್ತಿಗೆ ಶ್ರೀ

accident

Padubidri: ಮೊಬೈಲ್‌ ಕೊಡಿಸದ ತಾಯಿ; ಸಾಯಲು ಹೆದ್ದಾರಿಗೋಡಿದ ಮಗ; ಲಾರಿ ಡಿಕ್ಕಿ

de

Malpe: ತೆಂಕನಿಡಿಯೂರು; ತೀವ್ರ ಅಸ್ವಸ್ಥಗೊಂಡ ವ್ಯಕ್ತಿ ಸಾವು

4

Udupi: ಗಾಂಜಾ ಮಾರಾಟ; ಮೂವರ ಬಂಧನ

10

Udupi: ಸಂಚಾರ ಬದಲಿಸಿದರೂ ಸಮಸ್ಯೆ ಬದಲಾಗಲಿಲ್ಲ!

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Israel ಪ್ರಧಾನಿ ಬೆಂಜಮಿನ್‌ ನೆತನ್ಯಾಹುಗೆ ಪ್ರಾಸ್ಟೇಟ್‌ ಶಸ್ತ್ರಚಿಕಿತ್ಸೆ

Kazakhstan: ಕಜಕ್‌ ವಿಮಾನವನ್ನು ರಷ್ಯಾವೇ ಉರುಳಿಸಿದೆ: ಅಜರ್‌ಬೈಜಾನ್‌

Kazakhstan: ಕಜಕ್‌ ವಿಮಾನವನ್ನು ರಷ್ಯಾವೇ ಉರುಳಿಸಿದೆ: ಅಜರ್‌ಬೈಜಾನ್‌

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Madhya Pradesh: ಕೊಳವೆ ಬಾವಿಗೆ ಬಿದ್ದಿದ್ದ 10 ವರ್ಷದ ಬಾಲಕ ಸಾವು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Rajasthan: ಕಾಂಗ್ರೆಸ್‌ ಸರಕಾರ ರಚಿಸಿದ್ದ 9 ಜಿಲ್ಲೆಗಳು ರದ್ದು

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

Bangladesh ಮತದಾನದ ಅರ್ಹ ವಯಸ್ಸು 17ಕ್ಕಿಳಿಸಲು ಚಿಂತನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.