Udupi: ABVP ಪ್ರತಿಭಟನೆ, SP ಗೆ ಪ್ರಶ್ನೆಗಳ ಸುರಿಮಳೆ
Team Udayavani, Jul 27, 2023, 11:41 PM IST
ಉಡುಪಿ: ಕಾಲೇಜಿನ ಶೌಚಾಲಯದಲ್ಲಿನ ವೀಡಿಯೋ ಚಿತ್ರೀಕರಣ ಪ್ರಕರಣವನ್ನು ಸಮಗ್ರ ತನಿಖೆಗೆ ಒಳಪಡಿಸಬೇಕು ಎಂದು ಎಬಿವಿಪಿ ಕಾರ್ಯಕರ್ತರು ಅಜ್ಜರಕಾಡು ಸೈನಿಕ ಸ್ಮಾರಕದ ಬಳಿ ಗುರುವಾರ ಪ್ರತಿಭಟನೆ ನಡೆಸಿ ಆಗ್ರಹಿಸಿದರು.
ಎಸ್‌ಪಿ ಅಕ್ಷಯ್ ಮಚ್ಚೀಂದ್ರ ಸ್ಥಳಕ್ಕೆ ಆಗಮಿಸಬೇಕು ಎಂದು ಒತ್ತಾಯಿಸಿದ ಪ್ರತಿಭಟನಾಕಾರರು, ಘೋ ಷಣೆ ಕೂಗುತ್ತಾ ಮುಖ್ಯರಸ್ತೆಯ ಕಡೆಗೆ ಬರುತ್ತಿದ್ದಂತೆ ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಪರಸ್ಪರ ವಾಗ್ವಾದ ನಡೆಯಿತಲ್ಲದೇ, ಕೆಲಕಾಲ ನೂಕಾಟ ನಡೆಯಿತು. ಇದನ್ನು ಕಂಡ ಶಾಸಕ ಯಶ್‌ಪಾಲ್ ಸುವರ್ಣ ಮಧ್ಯ ಪ್ರವೇಶಿಸಿ ವಿದ್ಯಾರ್ಥಿಗಳನ್ನು ದೂಡಬೇಡಿ. ಇಂತಹ ಘಟನೆಗಳನ್ನು ಸಹಿಸುವುದಿಲ್ಲ ಎಂದು ಪೊಲೀಸರನ್ನು ಎಚ್ಚರಿಸಿದರು.
ವಿದ್ಯಾರ್ಥಿನಿಗೆ ಆಗಿರುವ ಅನ್ಯಾಯವನ್ನು ವಿದ್ಯಾ ರ್ಥಿಗಳು ಖಂಡಿಸಿ ನ್ಯಾಯ ಕೇಳುತ್ತಿದ್ದಾರೆ, ತನಿಖೆಗೆ ಆಗ್ರಹಿಸುತ್ತಿದ್ದಾರೆ. ಪ್ರತಿಭಟನೆಗೆ ಅವಕಾಶ ನೀಡಿ ಎಂದರು. ಸ್ವಲ್ಪ ಹೊತ್ತಿನ ಬಳಿಕ ಸ್ಥಳಕ್ಕೆ ಬಂದ ಎಸ್‌ಪಿ, ಪ್ರತಿಭಟನಾ ನಿರತರ ಅಹವಾಲು ಆಲಿಸಿದರು.
ಪ್ರಶ್ನೆಗಳ ಸುರಿಮಳೆ
ಯಾವುದೇ ತನಿಖೆ ನಡೆಸದೇ ಏನೂ ಆಗಿಲ್ಲ ಎಂಬ ಹೇಳಿಕೆ ಹೇಗೆ ನೀಡಿದಿರಿ? ತಮಾಷೆಗಾದರೂ ಶೌಚಾಲ ಯದಲ್ಲಿ ಖಾಸಗಿ ವೀಡಿಯೋ ತೆಗೆಯುವುದನ್ನು ಐಪಿಎಸ್ ಅಧಿಕಾರಿಯಾಗಿ ನೀವು ಒಪ್ಪುತ್ತೀರಾ ಎಂದು ವಿದ್ಯಾರ್ಥಿನಿಯರು ಎಸ್‌ಪಿಯವರಿಗೆ ಪ್ರಶ್ನೆಗಳ ಸುರಿಮಳೆಗೈದರು. ತನಿಖಾಧಿಕಾರಿಯನ್ನು ಬದಲಿಸಿ, ಉನ್ನತ ಮಟ್ಟದ ತನಿಖೆ ನಡೆಸಿ ಇದರ ಹಿಂದಿನ ಜಾಲವನ್ನು ಭೇದಿಸಬೇಕು ಎಂದು ಆಗ್ರಹಿಸಿದರು.
ಈಗಾಗಲೇ ತನಿಖಾ ತಂಡವನ್ನು ಬದಲಿಸಿದ್ದು, ಅಗತ್ಯ ಬಿದ್ದರೆ ತನಿಖಾಧಿಕಾರಿಯನ್ನು ಬದಲಿಸುತ್ತೇವೆ. ತಪ್ಪಿತಸ್ಥರ ಬಳಿ ಹೆಚ್ಚುವರಿ ಮೊಬೈಲ್‌ಗಳಿದ್ದರೆ ಅವುಗಳನ್ನೂ ವಶಕ್ಕೆ ಪಡೆಯುತ್ತೇವೆ ಎಂದು ಎಸ್‌ಫಿ ಅವರು ಪ್ರತಿಭಟನಾ ನಿರತರಿಗೆ ಭರವಸೆ ನೀಡಿದರು.
ಈ ವೇಳೆ ಎಎಸ್‌ಪಿ ಸಿದ್ದಲಿಂಗಪ್ಪ ಸಹಿತ ನಗರ ಠಾಣೆಯ ಪೊಲೀಸ್ ಅಧಿಕಾರಿ ಸಿಬಂದಿ ಇದ್ದರು. ಪ್ರತಿಭಟನೆ ವೇಳೆ ಸಶಸ್ತ್ರ ಮೀಸಲು ಪಡೆಯ ಪೊಲೀಸರನ್ನು ನಿಯೋಜಿಸಲಾಗಿತ್ತು.
ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಸುಮುಖ್ ಭಟ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಶ್ರೀನಿತ್ಯ, ಜಿಲ್ಲಾ ಸಂಚಾಲಕ ಗಣೇಶ್, ನಗರ ಕಾರ್ಯದರ್ಶಿ ಶ್ರೀವತ್ಸ, ತಾಲೂಕು ಸಂಚಾಲಕ ಅಜಿತ್, ಐಶ್ವರ್ಯ, ಅಭಿಲಾಷಾ, ಮನು, ಶ್ರೀಹರಿ, ಭಾವನಾ, ಆಶಿಶ್ ಮತ್ತಿತರರು ಇದ್ದರು.
“ಬ್ಯೂಟಿಫುಲ್ ಶಿಕ್ಷೆ ಎಂದಿದ್ದರು…!”
ತಪ್ಪು ಮಾಡಿದ ಮೂವರು ವಿದ್ಯಾರ್ಥಿನಿಯರು ಅಂದು ಕಾಲೇಜಿನ ಹೊರಗೆ ನಿಂತಿದ್ದರು. ಆ ವೇಳೆ ಸ್ಕೂಟಿಯಲ್ಲಿ ಬಂದ ನಮ್ಮ ಕಾಲೇಜಿನ ಆಡಳಿತಾಧಿಕಾರಿ ಅಬ್ದುಲ್ ಖಾದರ್ ಅವರು ಆ ವಿದ್ಯಾರ್ಥಿನಿಯರಿಗೆ ಐದು ಬಾರಿ ಏನೋ ಬರೆಯುವ ಶಿಕ್ಷೆ ನೀಡಿ ಕಳುಹಿಸಿದರು. ಅನಂತರ ಖಾದರ್ ಅವರು ನಮ್ಮ ಬಳಿಗೆ ಬಂದು ನಾನು ಅವರ ವಿರುದ್ಧ”ಬ್ಯೂಟಿಫುಲ್ ಆ್ಯಕ್ಷನ್’ ತೆಗೆದುಕೊಂಡಿದ್ದು, ಐದು ಬಾರಿ ಬರೆಯಲು ಹೇಳಿದ್ದೇನೆ. ಅವರು ಇದನ್ನು ಗಮ್ಮತ್ತಿಗೆ ಮಾಡಿದ್ದಾರಂತೆ, ಹೋಗಲಿ ಬಿಡಿ ಎಂದರು. ಇಂಥ ಘಟನೆಗೆ ಆಡಳಿತಾಧಿಕಾರಿ ನೀಡಿರುವ ಇಂಪೊಸಿಶನ್ (ಶಿಕ್ಷೆ) ಇದು. ಬೇರೆ ವಿದ್ಯಾರ್ಥಿಗಳು ಮಾಡಿದ್ದರೆ ಇದೇ ರೀತಿಯ ಶಿಕ್ಷೆ ನೀಡುತ್ತಿದ್ದರೇ ಎಂದು ಆ ಕಾಲೇಜಿನ ವಿದ್ಯಾರ್ಥಿನಿಯರು ಪ್ರತಿಭಟನೆ ವೇಳೆ ಕಳವಳ ವ್ಯಕ್ತಪಡಿಸಿದರು.
ಉಡುಪಿ ಜಿಲ್ಲೆ ಶೈಕ್ಷಣಿಕ ಗುಣಮಟ್ಟಕ್ಕೆ ವಿಶ್ವದಲ್ಲೇ ಖ್ಯಾತಿ ಪಡೆದಿದೆ. ಇಲ್ಲಿನ ವಿದ್ಯಾರ್ಥಿನಿಗೆ ಅನ್ಯಾಯವಾದಾಗ ವಿದ್ಯಾರ್ಥಿಗಳು ಪ್ರತಿಭಟಿಸುತ್ತಾರೆ. ಅದನ್ನು ದಮನಿ ಸಲು ಪೊಲೀಸ್ ಇಲಾಖೆ ಮುಂದಾಗಬಾರದು. ಹೊರ ಜಿಲ್ಲೆಗಳಿಂದ ಬಂದಿರುವ ಪೊಲೀಸರು ಮೊದಲು ಜಿಲ್ಲೆಯ ಬಗ್ಗೆ ತಿಳಿದುಕೊಳ್ಳಬೇಕು.
– ಯಶ್‌ಪಾಲ್ ಎ ಸುವರ್ಣ, ಶಾಸಕರು, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Mudigere: ಕಾಫಿ ಬೆಳೆಗಾರರ ಸಂಘಟನೆಗಳ ಪದಾಧಿಕಾರಿಗಳ ಜೊತೆ ಪೊಲೀಸ್ ಅಧಿಕಾರಿಗಳ ಸಭೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.