ಹೆದ್ದಾರಿ ಗೊಂದಲ ಶೀಘ್ರ ಇತ್ಯರ್ಥಕ್ಕೆ ಎಸಿ ಸೂಚನೆ
ವಿಪತ್ತು ನಿರ್ವಹಣೆ: ಪೂರ್ವಸಿದ್ಧತೆ ಸಭೆ
Team Udayavani, May 11, 2019, 6:00 AM IST
ಸಾಂದರ್ಭಿಕ ಚಿತ್ರ.
ಕುಂದಾಪುರ: ಮಳೆಗಾಲಕ್ಕೂ ಮುನ್ನ ಕುಂದಾಪುರದಿಂದ ಶಿರೂರುವರೆಗಿನ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಲ್ಲಿ ಉಂಟಾಗಿರುವ ಗೊಂದಲಗಳನ್ನು ಶೀಘ್ರ ಇತ್ಯರ್ಥಪಡಿಸಿ, ಮುಂಗಾರಿನಲ್ಲಿ ಯಾವುದೇ ತೊಂದರೆಯಾಗದಂತೆ ಅನುಕೂಲ ಮಾಡಿಕೊಡಬೇಕು ಎಂದು ಅಧಿಕಾರಿಗಳು, ಕಾಮಗಾರಿ ವಹಿಸಿಕೊಂಡಿರುವ ಸಂಸ್ಥೆಯ ಅಧಿಕಾರಿಗಳಿಗೆ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಡಾ| ಎಸ್. ಎಸ್. ಮಧುಕೇಶ್ವರ್ ಸೂಚನೆ ನೀಡಿದರು.
ಅವರು ಕುಂದಾಪುರದ ತಾ.ಪಂ.ಸಭಾಂಗಣದಲ್ಲಿ ನಡೆದ ವಿಪತ್ತು ನಿರ್ವಹಣೆ ಮತ್ತು ಮಳೆಗಾಲಕ್ಕೆ ಸಂಬಂಧಪಟ್ಟಂತೆ ಕೈಗೊಳ್ಳಬೇಕಾದ ಕ್ರಮಗಳ ಕುರಿತ ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವಸಿದ್ದತಾ ಸಭೆಯಲ್ಲಿ ಮಾತನಾಡಿದರು.
ನೇರ ಹೊಣೆ
ಮಳೆಗಾಲದಲ್ಲಿ ಹೆದ್ದಾರಿಯಲ್ಲಿ ವಾಹನ ಸವಾರರಿಗೆ ಯಾವುದೇ ತೊಂದರೆಯಾಗಬಾರದು. ಏನಾ ದರೂ ಅನಾಹುತ ಸಂಭವಿಸಿದರೆ ಅದಕ್ಕೆ ಗುತ್ತಿಗೆ ವಹಿಸಿಕೊಂಡ ಕಂಪೆನಿಯವರೇ ನೇರ ಹೋಣೆಯಾಗುತ್ತಾರೆ. ಕಾಮಗಾರಿ ವೇಳೆ ಅಲ್ಲಲ್ಲಿ ರಾಶಿ ಹಾಕಲಾದ ಮಣ್ಣಿನ ರಾಶಿಯನ್ನು ತೆರವುಗೊಳಿಸಬೇಕು. ಮರವಂತೆಯಲ್ಲಿ ಹೆದ್ದಾರಿ ಹಾಗೂ ತಡೆಗೋಡೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಜನರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಿ ಎಂದು ಎಸಿ ಆದೇಶಿಸಿದರು.
ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಹೆದ್ದಾರಿ ಕಾಮಗಾರಿ ಅವ್ಯವಸ್ಥೆಯ ಕುರಿತು ಸಭೆಯಲ್ಲಿ ಪ್ರಸ್ತಾವಿಸಿ, ತಲ್ಲೂರಿನಿಂದ ಆರಂಭಗೊಂಡು, ಮರವಂತೆ, ಒತ್ತಿನೆಣೆ, ಶಿರೂರು ಅನೇಕ ಕಡೆಗಳಲ್ಲಿ ಸಮಸ್ಯೆ ಉದ್ಭವವಾಗಿದೆ. ಕುಂದಾಪುರದ ಶಾಸ್ತಿÅ ಸರ್ಕಲ್, ಬಸ್ರೂರು ಮೂರುಕೈ ಬಳಿ ಗೊಂದಲಕ್ಕೆ ಎಡೆಮಾಡಿಕೊಟ್ಟಿದೆ ಎಂದವರು ತಿಳಿಸಿದರು.
ಇನ್ನು ಇದಕ್ಕೆ ಪ್ರತಿಕ್ರಿಯಿಸಿದ ಐಆರ್‌ಬಿ ಅಧಿಕಾರಿ ಯೋಗೇಂದ್ರಪ್ಪ, ಹೆದ್ದಾರಿ ಕಾಮಗಾರಿ ವೇಳೆ ಜನರಿಗೆ ತೊಂದರೆಯಾಗುತ್ತಿರುವುದರ ಬಗ್ಗೆ ಸಾಧ್ಯವಾದಷ್ಟರ ಮಟ್ಟಿಗೆ ಪರಿಹರಿಸಲು ಪ್ರಯತ್ನಿಸಿದ್ದೇವೆ. ಹೆದ್ದಾರಿ ಪ್ರಾಧಿಕಾರ ನಮಗೂ ಕೆಲ ನಿರ್ದೇಶನಗಳನ್ನು ನೀಡಿದ್ದು, ಅದರಂತೆ ಕಾಮಗಾರಿ ನಿರ್ವಹಿಸುತ್ತಿದ್ದೇವೆ ಎಂದರು.
ಸಭೆಯಲ್ಲಿ ಕುಂದಾಪುರ ತಹಶೀಲ್ದಾರ್ ವೀರೇಂದ್ರ ಬಾಡ್ಕರ್, ಬೈಂದೂರು ತಹಶೀಲ್ದಾರ್ ಬಿ.ಪಿ. ಪೂಜಾರ, ಮತ್ತಿತರರು ಉಪಸ್ಥಿತರಿದ್ದರು.
ಕಾಲುಸಂಕ: ದುರಸ್ತಿಗೆ ಮುಂದಾಗಿ
ತಾಲೂಕಿನ ಹಲವು ಕಡೆಗಳಲ್ಲಿ ಈಗಲೂ ಜನ ಕಾಲುಸಂಕವನ್ನೇ ಆಶ್ರಯಿಸಿದ್ದು, ಇದರಲ್ಲಿ ಕೆಲವೆಡೆಗಳಲ್ಲಿ ಕಾಲುಸಂಕಗಳನ್ನು ಅಪಾಯಕಾರಿಯಾಗಿದ್ದು, ಈ ಬಗ್ಗೆ ಗಮನವಹಿಸಿ, ದುರಸ್ತಿಗೆ ಮುಂದಾಗಿ. ಈ ಬಗ್ಗೆ ತತ್‌ಕ್ಷಣ ಎಲ್ಲೆಲ್ಲ ಕಾಲುಸಂಕಗಳಿವೆ. ಅವುಗಳ ಸ್ಥಿತಿ ಹೇಗಿದೆ ಎನ್ನುವುದರ ಬಗ್ಗೆ ಒಂದು ಪಟ್ಟಿ ತಯಾರಿಸಿ, ಕ್ರಮಕೈಗೊಳ್ಳಿ ಎಂದು ಎಸಿ ಡಾ| ಮಧುಕೇಶ್ವರ್ ಆದೇಶಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.