ಅಪಘಾತ ತುರ್ತು ವಾಹನ ಸಮಸ್ಯೆ: ನಾಗರಿಕರ ಸಭೆ


Team Udayavani, Apr 8, 2019, 6:30 AM IST

apagata

ಶಿರ್ವ: ಬಂಟಕಲ್ಲು ಪರಿಸರದಲ್ಲಿ ಆಕಸ್ಮಿಕ ದುರ್ಘ‌ಟನೆ, ರಸ್ತೆ ಅಪಘಾತ ನಡೆದಾಗ ತುರ್ತು ವಾಹನದ ಸಮಸ್ಯೆಯಿಂದ ಅನೇಕ ಪ್ರಾಣಹಾನಿ ನಡೆದ ಘಟನೆಯನ್ನು ಮನಗಂಡ ಸ್ಥಳೀಯ ವಿವಿಧ ಸಂಘಟನೆಗಳು ಸಂಘಟಿತರಾಗಿ ಸಾಮಾಜಿಕ ಕಾರ್ಯಕರ್ತ ಕೆ.ಆರ್‌.ಪಾಟ್ಕರ್‌ ಅವರ ನೇತೃತ್ವದಲ್ಲಿ ಬಂಟಕಲ್ಲು ಕೇಂದ್ರವಾಗಿರಿಸಿ ಕೊಂಡು ತುರ್ತುವಾಹನ (ಆ್ಯಂಬುಲೆನ್ಸ್‌) ವ್ಯವಸ್ಥೆ ಮಾಡುವ ಬಗ್ಗೆ ಪೂರ್ವಭಾವಿ ಸಭೆ ನಡೆಸಲಾಯಿತು.

ಹೇರೂರು ಶ್ರೀ ಗುರುರಾಘವೇಂದ್ರ ಸಮಾಜ ಮಂದಿರದಲ್ಲಿ ಜರಗಿದ ಬಂಟಕಲ್ಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ, ರಾಜಾಪುರ ಸಾರಸ್ವತ ಯುವ ವೃಂದ, ಶ್ರೀ ದುರ್ಗಾ ಮಹಿಳಾ ವೃಂದ, ಶ್ರೀ ಗುರು ರಾಘವೇಂದ್ರ ಸಮಾಜ ಸೇವಾ ಮಂಡಳಿ, ಶ್ರೀ ಗುರು ರಾಘವೇಂದ್ರ ಮಹಿಳಾ ಭಜನ ಮಂಡಳಿ, ಶ್ರೀ ವಿಶ್ವಕರ್ಮ ಸಂಘ, ಶ್ರೀ ವೈದ್ಯನಾಥ ಭಜನ ಮಂಡಳಿ ಅರಸೀಕಟ್ಟೆ, ರಿûಾ ಚಾಲಕ-ಮಾಲಕರ ಸಂಘ ಬಂಟಕಲ್ಲು ಮತ್ತು ಬಿ.ಸಿ.ರೋಡ್‌, ಕಾರು ಚಾಲಕ-ಮಾಲಕರ ಸಂಘ, ವೀರಮಾರುತಿ ಕಲಾ ಸಂಘ ಅರಸೀಕಟ್ಟೆ, ಐಸಿವೈಎಂ ಪಾಂಬೂರು ಸಂಘಟನೆಗಳ ಪ್ರತಿನಿಧಿಗಳ ಸಭೆಯಲ್ಲಿ ಧನಾತ್ಮಕ ಸ್ಪಂದನೆ ವ್ಯಕ್ತವಾಗಿ ಸ್ಥಳೀಯ ನಾಗರಿಕರ ಬಹುದಿನದ ಕನಸು ನನಸಾಗುವತ್ತ ದಿಟ್ಟ ಹೆಜ್ಜೆ ಇಡಲಾಯಿತು.

2ನೇ ಪ್ರಮುಖ ವ್ಯವಹಾರ ಕೇಂದ್ರ
ಶಿರ್ವ ಗ್ರಾಮದ ಎರಡನೆಯ ಪ್ರಮುಖ ವ್ಯವಹಾರ ಕೇಂದ್ರ ಬಂಟಕಲ್ಲು ಇತ್ತೀಚಿನ ದಿನಗಳಲ್ಲಿ ಅಭಿವೃದ್ಧಿ ಪಥದತ್ತ ಸಾಗುತ್ತಿದ್ದು ಮಲ್ಲಿಗೆ ಕೃಷಿ ಈ ಭಾಗದ ಪ್ರಮುಖ ಕಸುಬಾಗಿದೆ. ಐದು ಕಂದಾಯ ಗ್ರಾಮಗಳಾದ ಶಿರ್ವ, ಬೆಳ್ಳೆ, 92 ಹೇರೂರು (ಮಜೂರು), ಕುರ್ಕಾಲು ಮತ್ತು ಇನ್ನಂಜೆ ಗ್ರಾಮಗಳ ಗಡಿಭಾಗದ ಸಂಗಮ ಕೇಂದ್ರ. ಪೇಟೆಯ ಕೇಂದ್ರ ಭಾಗದಲ್ಲಿ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಬಂಟೇಶ್ವರ, ನಾಗಬ್ರಹ್ಮಸ್ಥಾನ, ಸಮೀಪ ದಲ್ಲಿಯೇ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯ, 92 ಹೇರೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ, ಶ್ರೀ ರಾಘವೇಂದ್ರ ಸ್ವಾಮಿಗಳ ಗುಡಿಗಳಿವೆ.

ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಬಿ. ಮಾಧವ ಕಾಮತ್‌, ಬಿ. ಪುಂಡಲೀಕ ಮರಾಠೆ, ದಿನೇಶ ದೇವಾಡಿಗ ಹೇರೂರು, ರೋಹಿಣಿ ಜಗದೀಶ್‌ ನಾಯಕ್‌, ಜಗದೀಶ ಆಚಾರ್ಯ ಹೇರೂರು, ವಿನ್ಸೆಂಟ್‌ ಕ್ಯಾಸ್ತಲಿನೊ ಪಲ್ಕೆ, ಅನಂತರಾಮ ವಾಗ್ಲೆ ಸಡಂಬೈಲು, ಗಣೇಶ್‌ ಶೆಟ್ಟಿ ಹೇರೂರು, ಶೈಲೇಶ್‌ ಕಲ್ಲುಗುಡ್ಡೆ, ಡೆನ್ನಿಸ್‌ ಡಿ‡’ಸೋಜಾ ಪಾಂಬೂರು, ರಾಘವೇಂದ್ರ ಕುಲಾಲ್‌, ದಿನೇಶ್‌ ಎಸ್‌.ಕೆ., ಹರೀಶ್‌ ಹೇರೂರು, ವಸಂತಿ ಅಶೋಕ್‌ ಆಚಾರ್ಯ ಹೇರೂರು, ಅರುಂಧತಿ ಪ್ರಭು, ಶಿಕ್ಷಕ ಎಸ್‌.ಎಸ್‌.ಪ್ರಸಾದ್‌, ಬಂಟಕಲ್ಲು ರಾಮಕೃಷ್ಣ ಶರ್ಮಾ, ಮುರಳೀಧರ ಆಚಾರ್ಯ, ಶಂಕರ ಪದಕಣ್ಣಾಯ, ಇಗ್ನೇಷಿಯಸ್‌ ಡಿ‡’ಸೋಜಾ, ಶಂಕರ ಕೊಟ್ಯಾನ್‌, ವಿಠಲ್‌ ಕುಲಾಲ್‌ ಉಪಸ್ಥಿತರಿದ್ದರು.

ವಾರದ ಸಂತೆಯ ಬಗ್ಗೆ ಚಿಂತನೆ
ಹಲವು ದಶಕಗಳ ಹಿಂದೆ ಪ್ರತೀ ಸೋಮವಾರ ಬಂಟಕಲ್ಲಿನಲ್ಲಿ ವಾರದ ಸಂತೆ ಜರಗುತ್ತಿದ್ದು, ಕ್ರಮೇಣ ನಿಂತುಹೋಗಿದೆ. ಅದನ್ನು ಪುನಶ್ಚೇತನಗೊಳಿಸುವ ನಿಟ್ಟಿನಲ್ಲಿ ಶಿಕ್ಷಕ ಎಸ್‌.ಎಸ್‌. ಪ್ರಸಾದ್‌ ಅವರ ಅಭಿಪ್ರಾಯಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಯಿತು.ಬಂಟಕಲ್ಲಿನ ಸರ್ವಾಂಗೀಣ ಪ್ರಗತಿ, ಸಾಮರಸ್ಯ ಹಾಗೂ ನಾಗರಿಕರ ಮೂಲಭೂತ ಸಮಸ್ಯೆಗಳ ಬಗ್ಗೆ ಸ್ಪಂದನೆ ನೀಡುವಲ್ಲಿ ನಾಗರಿಕ ಸೇವಾ ಸಮಿತಿಯನ್ನು ರಚಿಸಿಆ ಮೂಲಕ ವ್ಯವಹರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

ಟಾಪ್ ನ್ಯೂಸ್

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ

Nirmala 2 a

Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ

arrested

Big Boss ಸ್ಪರ್ಧಿಯಾಗಿದ್ದ ನಟ-ಗಾಯಕ ಮಾದಕ ವಸ್ತು ಸಹಿತ ಬಂಧನ

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Pushpa 2 trailer: ಪೈಸಾ ವಸೂಲ್‌ ಅವತಾರದಲ್ಲಿ ʼಪುಷ್ಪರಾಜ್‌ʼ; ಅಲ್ಲು ಭರ್ಜರಿ ಆ್ಯಕ್ಷನ್

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ

Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

byndoor

Karkala: ಕೀಟ ನಾಶಕ ಸೇವಿಸಿ ವ್ಯಕ್ತಿ ಸಾವು

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Karkala: ಬೋಳ ಅಕ್ರಮ ಮದ್ಯ ದಾಸ್ತಾನು ಪ್ರಕರಣ: ಕಾರವಾರದಲ್ಲಿ ಓರ್ವ ಆರೋಪಿ ಬಂಧನ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

Lokayukta: ಖಜಾನೆ ಇಲಾಖೆ ಉಪನಿರ್ದೇಶಕ, ಸಹಾಯಕ ಲೋಕಾಯುಕ್ತ ಬಲೆಗೆ

UV-Navaroopa

Manipal: ಗ್ರಾಮೀಣ ಓದುಗರ ಸ್ಪಂದನೆಯೇ ಯಶಸ್ಸು: ಎಂಡಿ, ಸಿಇಒ ವಿನೋದ್‌ ಕುಮಾರ್‌

Udupi: ರೈಲು ಬಡಿದು ವ್ಯಕ್ತಿ ಸಾವು

Udupi: ರೈಲು ಬಡಿದು ವ್ಯಕ್ತಿ ಸಾವು

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

Madhya Pradesh: ಸರ್ಕಾರಿ ಕಾರ್ಯಕ್ರಮದಲ್ಲಿ ನಕ್ಕ ಅಧಿಕಾರಿ ವಿರುದ್ಧ ಶೋಕಾಸ್‌ ನೋಟಿಸ್‌

1-reee

Congress ಜೂಟ್ ಮತ್ತು ಲೂಟ್ ರಾಜಕೀಯದಲ್ಲಿ ತೊಡಗಿದೆ: ರಾಜಸ್ಥಾನ ಸಿಎಂ ಭಜನ್ ಲಾಲ್

byndoor

Karkala: ಕೀಟ ನಾಶಕ ಸೇವಿಸಿ ವ್ಯಕ್ತಿ ಸಾವು

baby 2

Hospital ನಿಂದ ಶಿಶುವಿನ ಅಪಹರಣ: ರೈಲು ನಿಲ್ದಾಣದಲ್ಲಿ ರಕ್ಷಣೆ: ಇಬ್ಬರ ಬಂಧನ

Nirmala 2 a

Middle class; ಮಧ್ಯಮ ವರ್ಗದವರಿಗೆ ಪರಿಹಾರ: ಎಕ್ಸ್ ಬಳಕೆದಾರಗೆ ನಿರ್ಮಲಾ ಪ್ರತಿಕ್ರಿಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.