ಆತ್ರಾಡಿಯಲ್ಲಿ ಬುಧವಾರ ರಾತ್ರಿ ಅಪಘಾತ; ರಿಕ್ಷಾ ಚಾಲಕ, ಪಾದಚಾರಿ ಸಾವು
Team Udayavani, Mar 12, 2020, 12:37 AM IST
ಉಡುಪಿ: ಆತ್ರಾಡಿ ಸಮೀಪದ ಶೇಡಿಗುಡ್ಡೆಯಲ್ಲಿ ಬುಧವಾರ ರಾತ್ರಿ 9.30ರ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.
ಆತ್ರಾಡಿಯ ಮದಗದಿಂದ ಪರ್ಕಳಕ್ಕೆ ಬರುತ್ತಿದ್ದ ವಸಂತ್ ನಾಯಕ್ ಸಣ್ಣಕ್ಕಿಬೆಟ್ಟು (28) ಅವರ ರಿಕ್ಷಾವು ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಾಧವ ಶೆಟ್ಟಿಗಾರ್ (68) ಎಂಬವರಿಗೆ ಢಿಕ್ಕಿ ಹೊಡೆಯಿತು. ಪರಿಣಾಮ ಮಾಧವ ಶೆಟ್ಟಿಗಾರ್ ಸ್ಥಳದಲ್ಲೇ ಸಾವನ್ನಪ್ಪಿದರು. ಬಳಿಕ ನಿಯಂತ್ರಣ ತಪ್ಪಿದ ರಿಕ್ಷಾವು ಕಾರಿಗೆ ಢಿಕ್ಕಿ ಹೊಡೆದು ವಸಂತ್ ನಾಯಕ್ ಅವರು ಗಂಭೀರವಾಗಿ ಗಾಯಗೊಂಡರು. ಅವರು ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದರು. ಹಿರಿಯಡಕ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.