ಅಪಘಾತ ವಲಯವಾಗುತ್ತಿದೆ ಪೆರಂಪಳ್ಳಿ ರಸ್ತೆ
Team Udayavani, Nov 13, 2021, 4:10 AM IST
ಉಡುಪಿ: ಸ್ಥಗಿತಗೊಂಡಿರುವ ಅಂಬಾಗಿಲು- ಪೆರಂಪಳ್ಳಿ-ಮಣಿಪಾಲ ರಿಂಗ್ ರೋಡ್ ಚತುಷ್ಪಥ ಕಾಮಗಾರಿ ಈಗ ಸವಾರರ ಪಾಲಿಗೆ ಕಂಟಕವಾಗಿ ಪರಿಣಮಿಸಿದೆ.
ಒಂದೆಡೆ ಹೊಂಡ-ಗುಂಡಿಗಳಿಂದ ಕೂಡಿರುವ ರಸ್ತೆ ಇದ್ದರೆ ಮತ್ತೆ ಕೆಲವೆಡೆ ಡಾಮರು ರಸ್ತೆ ಇದೆ. ಇದರ ಅರಿವಿಲ್ಲದ ಚಾಲಕರು ಅತೀ ವೇಗದಿಂದ ತೆರಳುವ ಸಂದರ್ಭದಲ್ಲಿ ಅಪಘಾತಕ್ಕೀಡಾಗುತ್ತಿದ್ದಾರೆ. ಸೋಮ ವಾರವೂ ಪೆರಂಪಳ್ಳಿಯ ಟ್ರಿನಿಟಿ ತಿರುವು ಪ್ರದೇಶದಲ್ಲಿ ಕಾರೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ನಡೆದಿದೆ. ಕಡಿದಾದ ತಿರುವಿನಲ್ಲಿ ಒಮ್ಮೆಲೆ ವಾಹನ ತಿರುಗಿಸುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಸೂಚನ ಫಲಕವಿಲ್ಲ:
ಒಂದೆಡೆ ಪೂರ್ಣಗೊಳ್ಳದ ಕಾಮ ಗಾರಿ, ಮತ್ತೂಂದೆಡೆ ನಿರ್ದಿಷ್ಟ ನಾಮ ಫಲಕ ಅಳವಡಿಕೆ ಮಾಡದಿರುವ ಕಾರಣ ಸವಾರರು ಈ ಭಾಗದಲ್ಲಿ ಗೊಂದಲಕ್ಕೀಡಾಗುತ್ತಿದ್ದಾರೆ.
ದ್ವಿಚಕ್ರ ಸವಾರರಿಗೂ ಕಷ್ಟಕರ ಕಾಮಗಾರಿ ನಿಲುಗಡೆಯಾಗಿರುವ ಸ್ಥಳಗಳಲ್ಲಿ ಹೊಂಡಗುಂಡಿಗಳಿಂದ ತುಂಬಿಹೋಗಿರುವ ಕಾರಣದಿಂದಾಗಿ ಹಾಗೂ ಕಲ್ಲುಗಳು ಚದುರಿ ಹೋಗಿರು ವುದರಿಂದಾಗಿ ದ್ವಿಚಕ್ರ ವಾಹನ ಸವಾರರು ಭಯದಿಂದಲೇ ಸವಾರಿ ಮಾಡಬೇಕಾಗಿದೆ. ಮಳೆ ಬಂದರೆ ಹೊಂಡಗಳಲ್ಲಿ ನೀರು ನಿಂತು ರಸ್ತೆಯೂ ಸ್ಪಷ್ಟವಾಗಿ ಗೋಚರವಾಗುತ್ತಿಲ್ಲ ಎನ್ನುತ್ತಾರೆ ವಾಹನ ಸವಾರರು.
ರಸ್ತೆ ಕಾಮಗಾರಿ , ಹೊಂಡ-ಗುಂಡಿಗಳನ್ನು ಮುಚ್ಚಲೂ ಕ್ರಮ ತೆಗೆದುಕೊಳ್ಳಲಾಗುವುದು. ವೇಗಮಿತಿ ಫಲಕಗಳನ್ನೂ ಕಾಮಗಾರಿ ಸಂಪೂರ್ಣಗೊಂಡ ಬಳಿಕ ಅಳವಡಿಸಲಾಗುವುದು. ಎಚ್ಚರಿಕೆ ಫಲಕ ಅಳವಡಿಕೆಗೆ ಕ್ರಮ ತೆಗೆದುಕೊಳ್ಳಲಾಗುವುದು. -ಜಗದೀಶ್ ಭಟ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ ಉಪವಿಭಾಗ, ಉಡುಪಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.