ಶಾಲಾ ಮಕ್ಕಳ ಸಹಿತ ಪಾದಚಾರಿಗಳಿಗೆ ಅಪಘಾತ ಭೀತಿ
Team Udayavani, Apr 15, 2018, 6:45 AM IST
ಕೊಲ್ಲೂರು: ಇಡೂರು ಪೇಟೆಯ ಕುಂಜ್ಞಾಡಿಗೆ ಸಾಗುವ ಕೂಡುರಸ್ತೆಯ ಪಕ್ಕದ ಕೊಲ್ಲೂರು ರಾಜ್ಯ ಹೆದ್ದಾರಿಯ ಮುಖ್ಯರಸ್ತೆಯ ಇಕ್ಕೆಲಗಳು ಅಗಲ ಕಿರಿದಾಗಿದ್ದು ಅಪಘಾತ ಆಹ್ವಾನಿಸುವಂತಿದೆ.
ದಿನಂಪ್ರತಿ ನೂರಾರು ವಾಹನಗಳು ಸಾಗುವ ಈ ರಸ್ತೆಯ ಇಕ್ಕೆಲದ ಅಗಲ ಕಿರಿದಾಗಿರುವುದರಿಂದ ಸನಿಹದ ಶಾಲೆಯ ಮಕ್ಕಳು ಸಹಿತ ಪಾದಚಾರಿಗಳು ಆ ಮಾರ್ಗವಾಗಿ ಸಾಗುವಾಗ ಭಯಪಡಬೇಕಾದ ಪರಿಸ್ಥಿತಿ ಕಂಡುಬಂದಿದೆ. ಒಂದಿಷ್ಟು ರಸ್ತೆಯ ಇಕ್ಕೆಲಗಳ ಮಾರ್ಗವನ್ನು ಅಗಲಗೊಳಿಸಿದಲ್ಲಿ ಏಕಕಾಲದಲ್ಲಿ 2 ವಾಹನಗಳು ಸುಗಮವಾಗಿ ಸಂಚರಿಸಿದಾಗಲೂ ಪಾದಚಾರಿಗಳು ಭಯಪಡಬೇಕಾದ ಸಂದರ್ಭ ಬರುವುದಿಲ್ಲ. ಸಂಭವಿಸಬಹುದಾದ ಅಪಘಾತಗಳನ್ನೂ ತಡೆಯಬಹುದೆಂದು ನಿತ್ಯ ಪ್ರಯಾಣಿಕರು ಅಭಿಪ್ರಾಯಪಟ್ಟಿದ್ದಾರೆ.
ರಸ್ತೆ ವಿಸ್ತರಣೆಗೊಳಿಸಿ
ಮಾರಣಕಟ್ಟೆ ದೇಗುಲಕ್ಕೆ ಸಾಗುವ ತಿರುವಿನಲ್ಲೂ ಕೂಡ ಇದೇ ರೀತಿಯ ಸಮಸ್ಯೆ ಉಂಟಾಗಿದ್ದು ಇಲ್ಲಿ ಖಾಸಗಿ ಬಸ್Õಗಳು ರಸ್ತೆಯ ಮಧ್ಯದಲ್ಲೇ ನಿಲುಗಡೆ ಅಪಘಾತಕ್ಕೆ ಹೇತುವಾಗಿದೆ. ಇಡೂರು-ಕುಂಜ್ಞಾಡಿಯ ಭಾರೀ ತಿರುವಿನ ರಾಜ್ಯ ಹೆದ್ದಾರಿಯ ಒಂದು ಪಾರ್ಶ್ವದಲ್ಲಿ ರಸ್ತೆ ವಿಸ್ತರಣೆಗೊಳಿಸಿ ಡಾಮರು ಕಾಮಗಾರಿ ನಡೆಸಿದಂತೆ ಮಿಕ್ಕುಳಿದ ಪ್ರದೇಶಗಳಲ್ಲಿ ಅದೇ ಪದ್ಧತಿಯನ್ನು ಅನುಸರಿಸಿದಲ್ಲಿ ಸಂಭವನೀಯ ದುರಂತವನ್ನು ತಪ್ಪಿಸಲು ಸಾಧ್ಯವೆಂದು ಇಲ್ಲಿನ ನಿವಾಸಿ ಬಾಲಕೃಷ್ಣ ಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Los Angeles wildfires: ಕ್ಯಾಲಿಫೋರ್ನಿಯಾದಲ್ಲಿ ಕಾಳ್ಗಿಚ್ಚು… ಐವರು ಸಾವು
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.