20 ವರ್ಷಗಳ ಕಾಲ ಮಣ್ಣಪಳ್ಳ ನಿವಾಸದಲ್ಲಿ ವಾಸವಿದ್ದ ಆದಿತ್ಯ ರಾವ್ ಕುಟುಂಬಿಕರು!
Team Udayavani, Jan 22, 2020, 1:22 PM IST
ಉಡುಪಿ: ಕರಾವಳಿಯನ್ನು ಬೆಚ್ಚಿಬೀಳಿಸಿದ್ದ ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ಪ್ರಕರಣದ ಆರೋಪಿ ಆದಿತ್ಯ ರಾವ್ ಮನೆ ಇರುವುದು ಉಡುಪಿಯ ಮಣಿಪಾಲದ ಮಣ್ಣಪಳ್ಳದಲ್ಲಿ!
ಶಂಕಿತ ಆರೋಪಿ ಆದಿತ್ಯ ರಾವ್ ತಂದೆ ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದು ಅವರ ಮನೆ ಮಣ್ಣಪಳ್ಳದ ಹುಡ್ಕೋ ಕಾಲನಿಯಲ್ಲಿದೆ. ಆದರೆ ಕಳೆದ ಎಂಟು ತಿಂಗಳಿನಿಂದ ಹುಡ್ಕೋ ಕಾಲೋನಿಯ ಮನೆಯಲ್ಲಿ ಯಾರೂ ವಾಸವಿರಲಿಲ್ಲ. ಹಾಗಾಗಿ ಈ ಮನೆ ಖಾಲಿಯಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ಕಳೆದ 20 ವರ್ಷಗಳಿಂದ ಈ ಕುಟುಂಬ ಇಲ್ಲಿ ವಾಸವಿತ್ತು. ಆದರೆ ಆದಿತ್ಯ ರಾವ್ ಅವರನ್ನು ಅಕ್ಕ ಪಕ್ಕದವರು ಕಂಡ ಬಗ್ಗೆ ಅವರಲ್ಲಿ ಮಾಹಿತಿ ಇಲ್ಲ. ಆದಿತ್ಯ ರಾವ್ ತಂದೆ ಆವರು ಆಗಾಗ ಬಂದು ಹೋಗುತ್ತಿದ್ದರು ಎನ್ನುತ್ತಾರೆ ಸ್ಥಳಿಯರು.
ಆದಿತ್ಯ ರಾವ್ ಅವರ ತಾಯಿ ವರ್ಷಗಳ ಹಿಂದೆ ತೀರಿಕೊಂಡಿದ್ದರು. ಆ ಸಮಯದಲ್ಲಿ ಆದಿತ್ಯ ರಾವ್ ಹುಸಿ ಬಾಂಬ್ ಬೆದರಿಕೆ ಆರೋಪದಲ್ಲಿ ಜೈಲು ಪಾಲಾಗಿದ್ದರು. ಜೈಲು ಅಧಿಕಾರಿಗಳ ಮೂಲಕ ತಾಯಿಯ ನಿಧನದ ಸುದ್ದಿಯನ್ನು ಆದಿತ್ಯ ರಾವ್ ಗೆ ತಿಳಿಸಲಾಗಿತ್ತು ಎನ್ನಲಾಗಿದೆ.
ಪತ್ನಿಯ ನಿಧನದ ನಂತರ ಆದಿತ್ಯ ರಾವ್ ತಂದೆ ಮಣಿಪಾಲದ ಈ ಮನೆಯನ್ನು ಖಾಲಿ ಬಿಟ್ಟು ಇನ್ನೋರ್ವ ಮಗನ ಜೊತೆ ಮಂಗಳೂರಿನಲ್ಲಿ ವಾಸವಾಗಿದ್ದಾರೆ. ಆದಿತ್ಯ ರಾವ್ ಕಿರಿಯ ಸಹೋದರ ಕೂಡಾ ಬ್ಯಾಂಕ್ ನಲ್ಲಿ ಉದ್ಯೋಗದಲ್ಲಿದ್ದಾರೆ.
ಸೋಮವಾರ ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಅನುಮಾನಾಸ್ಪದ ಬ್ಯಾಗ್ ಪತ್ತೆಯಾಗಿತ್ತು. ಬಳಿಕ ಪರಿಶೀಲನೆ ನಡೆಸಿದಾಗ ಸಜೀವ ಬಾಂಬ್ ಇರುವುದು ಪತ್ತೆಯಾಗಿತ್ತು. ನಂತರದ ಕಾರ್ಯಾಚರಣೆಯಲ್ಲಿ ಅದನ್ನು ಕೆಂಜಾರು ಮೈದಾನದಲ್ಲಿ ನಿಯಂತ್ರಿತವಾಗಿ ಸ್ಫೋಟಿಸಲಾಗಿತ್ತು.
ಸಿಸಿಟಿವಿಯಲ್ಲಿ ಸೆರೆಯಾಗಿದ್ದ ದೃಶ್ಯಾವಳಿಯನ್ನು ಆಧರಿಸಿ ಶಂಕಿತನ ಫೋಟೋ ಒಂದನ್ನು ಪೊಲೀಸರು ಬಿಡುಗಡೆ ಮಾಡಿದ್ದರು.
ಬುಧವಾರ ಬೆಳಿಗ್ಗೆ ಬೆಂಗಳೂರಿನಲ್ಲಿ ಡಿಜಿ ಮತ್ತು ಐಜಿಪಿ ನೀಲಮಣಿ ಎನ್ ರಾಜು ಅವರ ಕಚೇರಿಯಲ್ಲಿ ಆರೋಪಿ ಆದಿತ್ಯ ರಾವ್ ಶರಣಾಗಿದ್ದ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್; ಎತ್ತು ಸಾವು
Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು
Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ
Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ
Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.