ಕಾಪು ಯುವಕನ ಸಾಧನೆ: ಎನ್‌ಫೀಲ್ಡ್ ಬೈಕಲ್ಲಿ ಭಾರತ ಪರ್ಯಟನೆ
Team Udayavani, Jul 5, 2017, 3:45 AM IST
ಪಡುಬಿದ್ರಿ: ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ರಾಯಲ್ ಎನ್‌ಫೀಲ್ಡ್ ಬೈಕಲ್ಲಿ ಯಶಸ್ವಿಯಾಗಿ ಪರ್ಯಟನೆ ಮುಗಿಸಿ ವಾಪಸಾದ ಕಾಪುವಿನ ಸಚಿನ್ ಕೊಂಬಗುಡ್ಡೆ ಅವರನ್ನು ಕಾಪು ಎಸ್‌ಕೆಪಿಎ ಸದಸ್ಯರು ಹೆಜಮಾಡಿಯಲ್ಲಿ ಸಂಭ್ರಮದಿಂದ ಸ್ವಾಗತಿಸಿದರು.
ಮೇ 28ರಂದು ಕಾಪುವಿನಿಂದ ಹೊರಟಿದ್ದ ಸಚಿನ್ 16 ರಾಜ್ಯ, 11,000 ಕಿ.ಮೀ. ದೂರವನ್ನು ಕೇವಲ 37 ದಿನಗಳಲ್ಲಿ ಕ್ರಮಿಸಿದ್ದಾರೆ. ಸ್ವಯಂ ಸಿನೆಮಾಟೋಗ್ರಾಫರ್ ಆಗಿರುವ ಸಚಿನ್ ಫೋಟೋ ಶೂಟ್ ನಿಷ್ಣಾತರಾಗಿದ್ದು ಭಾರತದ ಕುರಿತ ಕಿರುಚಿತ್ರ ಮಾಲಿಕೆ ತಯಾರಿಸುವ ಉದ್ದೇಶದೊಂದಿಗೆ ಯಾತ್ರೆ ಕೈಗೊಂಡಿದ್ದರು.
ಜಮ್ಮು ಕಾಶ್ಮೀರದ ತಡೆಯಲಾರದ ಚಳಿ, ರಾಜಸ್ಥಾನದಲ್ಲಿನ 51 ಡಿಗ್ರಿ ಬಿಸಿಯನ್ನೂ ಕೂಡ ಸಹಿಸಿಕೊಂಡು ದೇಶಾದ್ಯಂತ ಸಂಚರಿಸಿದ ಸಚಿನ್‌ಗೆ ಒಂದೆರಡು ಕಡೆ ಬೈಕ್ ಕೈಕೊಟ್ಟು ಆತಂಕ ಎದುರಾಗಿತ್ತು. ಆ ಕ್ಷಣದಲ್ಲಿ ರಾಯಲ್ ಎನ್‌ಫೀಲ್ಡ್ ಕಂಪೆನಿಯು ಇವರ ನೆರವಿಗೆ ಧಾವಿಸಿ ಬಂದಿದೆ. ರಾತ್ರಿ 12ರ ವರೆಗೂ ಕೆಲವೊಮ್ಮೆ ಬೈಕ್ ಚಾಲನೆ ಮಾಡುತ್ತಿದ್ದೆ ಎಂದಿದ್ದಾರೆ. ಕಾಶ್ಮೀರದ ಲೇಹ್, ಕಾರ್ಗಿಲ್ ಮತ್ತು ಲಡಾಕ್‌ಗಳಂತಹ ಅತೀ ಎತ್ತರದ ಪ್ರದೇಶಗಳಲ್ಲಿ ಇವರಿಗೆ ಮಂಗಳೂರಿನ ಎಸ್‌ಡಿ ಜಾವಾ ಮೋಟಾರ್ ಬೈಕ್ ಕ್ಲಬ್ ಸದಸ್ಯರು ಜತೆಯಾಗಿದ್ದರು. ಮುಂದಕ್ಕೆ ಪ್ರೋತ್ಸಾಹ ದೊರೆತಲ್ಲಿ ವಿಶ್ವ ಪರ್ಯಟನೆ ಮಾಡುವ ಹೆಬ್ಬಯಕೆ ಇರುವುದಾಗಿ ಸಚಿನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
ತಿರುಪತಿ ಮೃಗಾಲಯದಲ್ಲಿ ಬೆಂಗಳೂರಿನಿಂದ ತರಲಾಗಿದ್ದ ರಾಯಲ್ ಬೆಂಗಾಲ್ ಟೈಗರ್ ‘ಮಧು’ ಸಾ*ವು
Mohammed Siraj: ಬಿಟೌನ್‌ನ ಈ ಹಾಟ್ ಬೆಡಗಿ ಜತೆ ಕ್ರಿಕೆಟಿಗ ಸಿರಾಜ್ ಡೇಟಿಂಗ್?
Vijayapura: ಮಹಾನಗರ ಪಾಲಿಕೆ ಉಪ ಚುನಾವಣೆ… ವಾರ್ಡ್ ನಂ.29ರಲ್ಲಿ ಬಿಜೆಪಿ ಗೆಲುವು
By Election: ಕೊಪ್ಪಳ ನಗರಸಭೆ ಉಪಚುನಾವಣೆ… ಕಮಲಕ್ಕೊಂದು ಕೈಗೊಂದು ಗೆಲುವು
Arrested: ಕಾರು ಬಾಡಿಗೆ ಪಡೆದಿದ್ದ ವಿದ್ಯಾರ್ಥಿಗಳ ಅಪಹರಿಸಿ ಸುಲಿಗೆ; ಮೂವರ ಬಂಧನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.