“ನೋಟಾ’ ಅಭಿಯಾನ ವಿರುದ್ಧ ಕ್ರಮ: ಡಿಸಿ ಎಚ್ಚರಿಕೆ
Team Udayavani, Mar 24, 2019, 12:45 PM IST
ಉಡುಪಿ: “ನೋಟಾ’ ಚಲಾಯಿಸಲು ಅಭಿಯಾನ ನಡೆಸಿದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
ಶನಿವಾರ ಉಡುಪಿಯಲ್ಲಿ ಪತ್ರಕರ್ತರಿಗಾಗಿ ನಡೆದ ಸ್ವೀಪ್ ಮಾಹಿತಿ ಮತ್ತು ಅಣಕು ಮತದಾನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮತದಾನ ಪ್ರತಿಯೋರ್ವರ ಹಕ್ಕು. ಒಂದು ವೇಳೆ ಯಾರೊಬ್ಬ ಅಭ್ಯರ್ಥಿಗೂ ಮತದಾನ ಮಾಡಲು ಇಚ್ಛೆ ಇಲ್ಲದವರು “ನೋಟಾ’ ಚಲಾಯಿಸಬಹುದು. ಆದರೆ “ನೋಟಾ’ ಚಲಾಯಿಸಬೇಕೆಂದು ಯಾವುದೇ ವ್ಯಕ್ತಿ-ಸಂಘಟನೆಗಳು ಅಭಿಯಾನ ನಡೆಸಿದರೆ ಅದು ಇನ್ನೋರ್ವನ ಹಕ್ಕನ್ನು ಕಸಿದುಕೊಂಡಂತಾಗುತ್ತದೆ. ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾಡಳಿತದಿಂದಲೇ ವಾಹನ
ಮತದಾನದಂದು ಅಶಕ್ತರಿಗೆ ಜಿಲ್ಲಾಡಳಿತದಿಂದಲೇ ವಾಹನ ವ್ಯವಸ್ಥೆ ಮಾಡಲಾಗುವುದು. ಸ್ಥಳೀಯ ಗ್ರಾ.ಪಂ.ಗಳಿಗೆ ಈ ಜವಾಬ್ದಾರಿ ವಹಿಸಲಾಗುವುದು. ರಾಜಕೀಯ ಪಕ್ಷಗಳು ವಾಹನ ವ್ಯವಸ್ಥೆ ಮಾಡಿದರೆ ಅದು ಆಮಿಷವೇ ಆಗುತ್ತದೆ. ಇದರ ಬಗ್ಗೆ ಮತದಾರರು ಜಾಗೃತರಾಗಬೇಕು. ಯಾವುದೇ ಆಮಿಷಕ್ಕೆ ಒಳಗಾಗಬಾರದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಕ್ಯೂ ಆ್ಯಪ್
ಮತದಾನ ಕೇಂದ್ರಗಳಲ್ಲಿ ಇರುವ ಸರತಿ ಸಾಲಿನ ಬಗ್ಗೆ ತಿಳಿದುಕೊಳ್ಳಲು ಆ್ಯಪ್ ವ್ಯವಸ್ಥೆ ಇರುತ್ತದೆ. ಕಳೆದ ಬಾರಿ ಕೆಲವು ಆಯ್ದ ಮತದಾನ ಕೇಂದ್ರಗಳ ಕುರಿತು ಮಾಹಿತಿ ಈ ಆ್ಯಪ್‌ನಲ್ಲಿ ದೊರೆತಿತ್ತು. ಈ ಬಾರಿ ಆ್ಯಪ್‌ನಲ್ಲಿ ಎಷ್ಟು ಮತದಾನ ಕೇಂದ್ರಗಳ ಮಾಹಿತಿ ದೊರೆಯುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಉಡುಪಿ ಜಿಲ್ಲೆಯಲ್ಲಿ ಉತ್ತಮ ಪ್ರಮಾಣದಲ್ಲಿ ಮತದಾನವಾಗುತ್ತಿದೆ. ಹಾಗಾಗಿ ಮತದಾನ ಪ್ರಮಾಣದಲ್ಲಿ ಬೇರೆ ಜಿಲ್ಲೆಗಳಿಗೆ ಹೋಲಿಸದೆ ನಮ್ಮ ಪ್ರಮಾಣವನ್ನೇ ಮತ್ತಷ್ಟು ಹೆಚ್ಚಿಸುವತ್ತ ಗಮನ ಹರಿಸುತ್ತೇವೆ ಎಂದರು. ವೋಟರ್ ಸ್ಲಿಪ್‌ಗ್ಳನ್ನು ಚುನಾವಣ ಅಧಿಕಾರಿ, ಸಿಬಂದಿಗಳೇ ವಿತರಿಸುತ್ತಾರೆ. ರಾಜಕೀಯ ಪಕ್ಷಗಳು ವೋಟರ್ ಸ್ಲಿಪ್‌ಗ್ಳನ್ನು ಮನೆ ಮನೆಗೆ ತೆರಳಿ ವಿತರಿಸುವಂತಿಲ್ಲ ಎಂದರು.
ನ್ಯಾಯಾಲಯದಿಂದ ಮಾನಸಿಕ ಅಸ್ವಸ್ಥರು ಎಂದು ಘೋಷಿಸಿದವರನ್ನು ಹೊರತುಪಡಿಸಿ ಇತರರು, ಅಂದರೆ ವಿಶೇಷ ಚೇತನರು (ಬುದ್ಧಿಮಾಂದ್ಯರು) ಮತದಾನ ಮಾಡಬಹುದು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಸಿಂಧೂ ಬಿ. ರೂಪೇಶ್ ಹೇಳಿದರು.
ಸ್ವೀಪ್ ಸಮಿತಿ ತಾಲೂಕು ನೋಡಲ್ ಅಧಿಕಾರಿ ರಾಜು ಕೆ., ವಾರ್ತಾಧಿಕಾರಿ ಖಾದರ್ ಶಾ ಉಪಸ್ಥಿತರಿದ್ದರು.
ಬಸ್‌ದರ ನಿಯಂತ್ರಣ: ಸಿಎಸ್‌ಗೆ ಪತ್ರ
ಮತದಾನ ಸಂದರ್ಭ ಊರಿಗೆ ಆಗಮಿಸುವವರಿಗೆ ಬಸ್ ದರ ಹೊರೆಯಾಗಲಿರುವ ವಿಚಾರವನ್ನು ಸರಕಾರದ ಮುಖ್ಯ ಕಾರ್ಯದರ್ಶಿಯವರ ಗಮನಕ್ಕೆ ತರುವುದಾಗಿ ಉಡುಪಿ ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ತಿಳಿಸಿದ್ದಾರೆ.
“ಮತದಾನದ ದಿನದ ಹಿಂದೆ ಮುಂದೆ ಸರಣಿ ರಜೆಗಳು ಇರುವುದರಿಂದ ಆಗ ಕೆಎಸ್‌ಆರ್‌ಟಿಸಿ ಮತ್ತು ಖಾಸಗಿ ಬಸ್‌ಗಳ ಟಿಕೆಟ್ ದರ ಹೆಚ್ಚು ಮಾಡಲಾಗುತ್ತದೆ. ಇದರಿಂದ ಮತದಾರರು ಊರಿಗೆ ಬರಲು ಹಿಂದೇಟು ಹಾಕುವ ಅಪಾಯವಿರುತ್ತದೆ’ ಎಂದು ಪತ್ರಕರ್ತರು ಜಿಲ್ಲಾಧಿಕಾರಿಯರ ಗಮನ ಸೆಳೆದಾಗ ಪ್ರತಿಕ್ರಿಯಿಸಿ, ರಾಜ್ಯಮಟ್ಟದಲ್ಲಿಯೇ ಇದಕ್ಕೆ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Video: ವೇದಿಕೆ ಮೇಲಿಂದ ಕೆಳಗೆ ಬಿದ್ದ ಕೇರಳ ಶಾಸಕಿ ಉಮಾ ಥಾಮಸ್… ಸ್ಥಿತಿ ಗಂಭೀರ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.