ಕಾರ್ಕಳದಲ್ಲಿ ಜವಳಿ ಪಾರ್ಕ್ ಅಭಿವೃದ್ಧಿಗೆ ಕ್ರಮ: ಜವಳಿ ಸಚಿವ ಶಿವಾನಂದ ಪಾಟೀಲ್
Team Udayavani, Jul 15, 2023, 7:33 AM IST
ಬೆಂಗಳೂರು: ಖಾಸಗಿ ಸಹಭಾಗಿತ್ವದಲ್ಲಿ ಕಾರ್ಕಳದಲ್ಲಿ ಹಿಂದಿನ ಸರಕಾರ ಘೋಷಿಸಿರುವ ಜವಳಿ ಪಾರ್ಕ್ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವುದಾಗಿ ಜವಳಿ ಸಚಿವ ಶಿವಾನಂದ ಪಾಟೀಲ್ ಹೇಳಿದರು.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ವೇಳೆ ಬಿಜೆಪಿಯ ಸುನಿಲ್ಕುಮಾರ್ ಅವರ ಪ್ರಶ್ನೆಗೆ ಉತ್ತರಿಸಿ, ಶಿಗ್ಗಾವಿ ಮತ್ತು ಕಾರ್ಕಳದಲ್ಲಿ ಜವಳಿ ಪಾರ್ಕ್ ನಿರ್ಮಿಸಲು ಹಿಂದಿನ ಸರಕಾರ ಶ್ರಮಿಸಿತ್ತು. ಮುಖ್ಯಮಂತ್ರಿಗಳ ಕ್ಷೇತ್ರ ಶಿಗ್ಗಾವಿಯಲ್ಲಿ 50 ಕೋಟಿ ರೂ.ವೆಚ್ಚದಲ್ಲಿ ಜವಳಿ ಪಾರ್ಕ್ಗೆ ಚಾಲನೆ ಸಿಕ್ಕಿತು. ಕಾರ್ಕಳದ್ದು ಮಾತ್ರ ಬಾಕಿ ಉಳಿದಿತ್ತು. ಅದಕ್ಕೆ ನೀವು ಬಸವರಾಜ ಬೊಮ್ಮಾಯಿ ಅವರ ವಿಶ್ವಾಸಿಗರ ಪಟ್ಟಿಯಲ್ಲಿ ಇರದಿರುವುದೇ ಕಾರಣವಿರಬಹುದು ಎಂದು ಸಚಿವರು ಸುನಿಲ್ ಕುಮಾರ್ ಅವರ ಕಾಲೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಸುನಿಲ್ ಕುಮಾರ್, ನಾನು ಎಲ್ಲರ ವಿಶ್ವಾಸ ಗಳಿಸಿದ್ದೇನೆ. ಕಾರ್ಕಳದಲ್ಲಿ ಜವಳಿ ಪಾರ್ಕ್ಗೆ ಜಾಗ ಗುರುತಿಸುವುದು ಕಷ್ಟವಾಗಿ ವಿಳಂಬವಾಗಿದ್ದರಿಂದ ಹಾಗೆ ಉಳಿದಿದೆ. ಕರಾವಳಿ ಭಾಗದ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ನೀಡಲು ಇದು ಅಗತ್ಯವಾಗಿ ಆಗಬೇಕಿದೆ ಎಂದರು.
ಬಳಿಕ ಮಾತನಾಡಿದ ಸಚಿವರು, ಆಗಲಿ ಹಿಂದಿನ ಸರಕಾರದ ಬಗ್ಗೆ ಚರ್ಚಿಸುವುದು ಬೇಡ. ಈಗ ಮುಖ್ಯಮಂತ್ರಿ ಜತೆಗೆ ಚರ್ಚಿಸಿ ಜವಳಿ ಪಾರ್ಕ್ ಕಾರ್ಯವನ್ನು ಚುರುಕುಗೊಳಿಸುತ್ತೇವೆ. ಅದು ಸಾಧ್ಯವಾಗದೆ ಹೋದರೆ ಖಾಸಗಿ ಸಹಭಾಗಿತ್ವದಲ್ಲಿ ಜವಳಿ ಪಾರ್ಕನ್ನು ಆರಂಭಿಸಲು ಶ್ರಮಿಸುತ್ತೇವೆ ಎಂದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.