ಯುವಕರ ಸಕ್ರಿಯತೆ, ನೇರ ಪ್ರಜಾಪ್ರಭುತ್ವ


Team Udayavani, Nov 14, 2017, 8:53 AM IST

14-4.jpg

ಉಡುಪಿ: ಯುವ ಜನರು ಹೆಚ್ಚು ಹೆಚ್ಚು ಪ್ರಜಾಪ್ರಭುತ್ವ, ರಾಜಕೀಯದಲ್ಲಿ ತೊಡಗಿಕೊಳ್ಳಬೇಕು ಮತ್ತು ನೇರ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ರಾಜಕೀಯ ನೇತಾರ, ಸಂಸದ ವರುಣ್‌ ಗಾಂಧಿ ಹೇಳಿದರು. 

ಮಣಿಪಾಲದ ಸಿಂಡಿಕೇಟ್‌ ಬ್ಯಾಂಕ್‌ ಗೋಲ್ಡನ್‌ ಜುಬಿಲಿ ಸಭಾಂಗಣ ದಲ್ಲಿ ಸೋಮವಾರ “ರಾಜಕೀಯ ಸುಧಾ ರಣೆಯ ಅಗತ್ಯ’ ಕುರಿತು 25ನೇ ನಾಯಕತ್ವ ಸರಣಿ ಉಪನ್ಯಾಸ ವನ್ನು ನೀಡಿದ ಅವರು ದೇಶ ಎದುರಿಸು ತ್ತಿರುವ ವಿವಿಧ ಸಮಸ್ಯೆಗಳು ಮತ್ತು ವಿವಿಧೆಡೆ ಅದ್ಭುತ ಸಾಧನೆ ಮಾಡುವ ಉದಾಹರಣೆಗಳನ್ನು ಉಲ್ಲೇಖೀಸಿದರು. ನೇರ ಪ್ರಜಾಪ್ರಭುತ್ವದಲ್ಲಿ ಆನ್‌ಲೈನ್‌ ದೂರುಗಳು ದಾಖಲಾಗಿ ಜನ ಪ್ರತಿನಿಧಿ ಗಳು ಅದಕ್ಕೆ ಪ್ರತಿಕ್ರಿಯೆ ನೀಡು ವಂತಿರಬೇಕು. ಪ್ರತಿ ಕಾಮಗಾರಿಯನ್ನು ಜನರು ಕೇಳುವಂತಾಗಬೇಕು. ಕಾಮಗಾರಿಯ ಮುಂದೆ ವಿವರಗಳು ಲಗತ್ತಿ ಸಿರ ಬೇಕು ಎಂದರು. ಮುದ್ರಾ ಯೋಜನೆ ಯಲ್ಲಿ ಯುವಕರು ತಮ್ಮ ಚಿಂತನೆ ಗಳನ್ನು ಹರಿಬಿಡುವುದಕ್ಕೆ ಅವಕಾಶ ಗಳಿವೆ ಎಂದರು. 

ಖಾಸಗಿ ಮಸೂದೆ
ಜನರಿಗೆ ಸಮ್ಮತಿ ಇಲ್ಲದಿದ್ದರೆ ಜನ ಪ್ರತಿನಿಧಿಯನ್ನು ವಾಪಸು ಕರೆಸಿ ಕೊಳ್ಳಲು ಖಾಸಗಿ ಮಸೂದೆಯನ್ನು ಮಂಡಿ ಸಿದ್ದೇನೆ. ಇದು ಮುಂದಿನ ದಿನ ಗಳಲ್ಲಿ ಯಾದರೂ ಜಾರಿಗೊಳ್ಳಬಹುದು ಎಂದರು. 

ಕೃಷಿಕರ ಸಮಸ್ಯೆಗಳಿಗೆ ಕಾರಣ
ಕೃಷಿಕರ ಆತ್ಮಹತ್ಯೆಗಳನ್ನು ಉಲ್ಲೇಖೀಸಿದ ಅವರು ಕೃಷಿ ಭೂಮಿ ಬಾಡಿಗೆಗೆ ಕೊಡುವುದು ನಿಷೇಧದಲ್ಲಿದ್ದರೂ ಬಹು ತೇಕ ರಾಜ್ಯಗಳಲ್ಲಿ ಕೃಷಿಕರು ಇಂದಿಗೂ ಗೇಣಿದಾರರಾಗಿದ್ದಾರೆ. ಇವರಿಗೆ ನೇರ ವಾಗಿ ಕೃಷಿಕರಿಗೆ ಸಿಗಬೇಕಾದ ಬ್ಯಾಂಕ್‌ ಸೌಲಭ್ಯಗಳು ಸಿಗುವುದಿಲ್ಲ. ಇದೇ ನಿದ್ದರೂ ಭೂ ಹಿಡುವಳಿದಾರರಿಗೆ ಸಿಗು ತ್ತದೆ. ನೀತಿ ಆಯೋಗ ಕೃಷಿಕರ ರಕ್ಷಣೆಗೆ ಮುಂದಾದರೂ ಮಧ್ಯಪ್ರದೇಶ ಹೊರತು ಪಡಿಸಿ ಇತರ ಯಾವ ರಾಜ್ಯ ಗಳೂ ಬೆಂಬಲ ನೀಡಲಿಲ್ಲ ಎಂದರು. 

ಮಹಾರಾಷ್ಟ್ರದ ಮರಾಠವಾಡಾ ಪರಿಸರದಲ್ಲಿ ಹಿಂದಿನಿಂದಲೂ ನೀರಿನ ಕೊರತೆ ಇತ್ತು. ಇಲ್ಲಿ ಎಣ್ಣೆಕಾಳುಗಳನ್ನು ಬೆಳೆಯುತ್ತಿದ್ದರು. ಇದರ ಬದಲು ಹೆಚ್ಚಿನ ನೀರು ಬೇಕಾದ ಕಬ್ಬು ಬೆಳೆಸಲು 1950ರಲ್ಲಿ ಸರಕಾರ ಒತ್ತಾಯಿಸಿತು. ನೇಕಾರರಿಗೆ 1985-90ರ ಅವಧಿ ಯಲ್ಲಿ ಸಿಗುವ ಸೌಲಭ್ಯಗಳನ್ನು ನಿಲುಗಡೆ ಗೊಳಿಸಿದ್ದರಿಂದ ಕೈಮಗ್ಗ ಕ್ಷೇತ್ರ ಹಿನ್ನಡೆ ಕಂಡಿತು ಎಂದರು. 

ಕೊಲೆ ಮಾಡಿದ ಆರೋಪ ಹೊಂದಿದ ವ್ಯಕ್ತಿಯೊಬ್ಬ ನ್ಯಾಯ ವಿಳಂಬದಿಂದಾಗಿ ರಾಜ್ಯದ ಡಿಜಿಪಿ ಮಟ್ಟಕ್ಕೆ ಏರುತ್ತಾನೆ, ಲಕ್ನೋದಲ್ಲಿ ಅತ್ಯಾಚಾರ ಮಾಡಿದ ವ್ಯಕ್ತಿಯೊಬ್ಬ ಕಳೆದ ಚುನಾವಣೆಯಲ್ಲಿ ಬಿಎಸ್ಪಿ ಅಭ್ಯರ್ಥಿಯಾದ ಎಂದು ವರುಣ್‌ ಬೆಟ್ಟು ಮಾಡಿದರು. 

ವೇತನ ಹೆಚ್ಚಳಕ್ಕೆ ನೈತಿಕತೆ ಇಲ್ಲ
1952-72ರ ಅವಧಿಯಲ್ಲಿ ವರ್ಷ ದಲ್ಲಿ 140 ದಿನ ಸಂಸತ್‌ನಲ್ಲಿ ಅಧಿ ವೇಶನ, ಚರ್ಚೆಗಳು ನಡೆದರೆ ಬಳಿಕ 57 ದಿನಗಳಿಗೆ ಇಳಿದಿವೆ. 15 ವರ್ಷ ಗಳಲ್ಲಿ ಶೇ. 61 ಬಿಲ್ಲು ಗಳು ಚರ್ಚೆಯೇ ಇಲ್ಲದೆ ಅಂಗೀಕಾರ ವಾಗು ತ್ತಿವೆ. ಶೇ. 28 ಕಾನೂನುಗಳು ಹತ್ತು ವರ್ಷಗಳಲ್ಲಿ ಕೊನೆಯ 3 ಗಂಟೆಗಳಲ್ಲಿ ಸ್ವೀಕೃತವಾಗಿವೆ. ಶೇ.72 ಕಾನೂನುಗಳು ಸ್ಥಾಯೀ ಸಮಿತಿಗೆ ಹೋಗದೆ ಅಂಗೀಕಾರ ಗೊಂಡಿವೆ. ಕಳೆದ ಏಳು ವರ್ಷಗಳಲ್ಲಿ ಐದು ಬಾರಿ ಸಂಸತ್‌ ಸದಸ್ಯರ ವೇತನ ಏರಿಕೆ ಯಾಗಿವೆ. ಚರ್ಚೆ ಇಲ್ಲದೆ ಸಂಸತ್ತು ನಡೆ ಯುವುದಾದರೆ ಸಂಸತ್ತು, ವಿಧಾನ ಸಭೆಗಳ ಸದಸ್ಯರ ವೇತನವನ್ನು ಹೆಚ್ಚಿಸುವುದು ಎಷ್ಟು ಸರಿ ಎಂದರು. 

ಟ್ಯಾಪ್ಮಿ ನಿರ್ದೇಶಕ ಪ್ರೊ| ಮಧು ವೀರರಾಘವನ್‌ ಸ್ವಾಗತಿಸಿದರು. ಆಡಳಿತ ಮಂಡಳಿ ಸದಸ್ಯ, ಮಣಿಪಾಲ ವಿ.ವಿ. ಕುಲಪತಿ ಡಾ|ಎಚ್‌.ವಿನೋದ ಭಟ್‌ ಗೌರವಿಸಿದರು. ವಿನೋದ ಮಾಧವನ್‌ ನಿರ್ವಹಿಸಿದರು. 

ಔಷಧ- ಮಾಲಿನ್ಯ- ರೋಗ…
 ಹೈದರಾಬಾದ್‌ ಮೂಸಿ ನದಿ ತೀರದಲ್ಲಿ 197 ಜನರಿಕ್‌ ಔಷಧ ಗಳ ಕಾರ್ಖಾನೆಗಳಿದ್ದು ದಕ್ಷಿಣ ಆಫ್ರಿಕದಂತಹ ಬಡ ರಾಷ್ಟ್ರ ಗಳಿಗೆ ಔಷಧಗಳು ರಫ್ತು ಆಗು ತ್ತಿವೆ. ಇದರಿಂದ ನದಿ ಎಷ್ಟು ಕಲುಷಿತ ವಾಗಿದೆ ಎಂದರೆ ಡೇರಾ ಮತ್ತು ಬಂದ್ವಾರಿ ಗ್ರಾಮಗಳ 1.6 ಲಕ್ಷ ಜನರು ಕ್ಯಾನ್ಸರ್‌ಗೆ ತುತ್ತಾಗಿದ್ದಾರೆ. ಇಲ್ಲಿ ಬಾವಿ ನೀರು ರಕ್ತದಂತೆ ಕೆಂಪು ಆಗಿದೆ. ಕಳೆದ ಐದು ವರ್ಷಗಳಲ್ಲಿ 36,000 ಚಿಕ್ಕಮಕ್ಕಳು ಸತ್ತಿದ್ದಾರೆ. 

 ಮಹಾರಾಷ್ಟ್ರದ ಲಾತೂರಿನಲ್ಲಿ ಈಗಿನ ಮುಖ್ಯಮಂತ್ರಿಗಳು ರೈಲಿ ನಲ್ಲಿ ನೀರು ಸರಬರಾಜು ಮಾಡ ಹೊರಟರೆ 3, 5, 6 ಲೀ. ನೀರು ಕದಿಯುವ ಕಳ್ಳರು ಇದ್ದಾರೆ. ಆದರೆ ಇದೇ ಮಹಾರಾಷ್ಟ್ರ ನಗರ ಗಳ ನೂರಾರು ಫ್ಲಾ éಟು ಗಳಲ್ಲಿ ಈಜು ಕೊಳ ಗಳಿವೆ. 

 ಭಾರತದಲ್ಲಿ  ಶೇ. 71 ಸಂಸದರು 2ನೆಯ ಬಾರಿ ಗೆಲುವು ಸಾಧಿಸಲಿಲ್ಲ. ಜನ ಸಂಪರ್ಕದ ಕೊರತೆಯೇ ಇದಕ್ಕೆ ಕಾರಣ. 

 ಮುರ್ಶಿದಾಬಾದ್‌ನಲ್ಲಿ ಬಾಬರ್‌ ಎಂಬ 9 ವರ್ಷದ ಬಾಲಕ ಬಹು  ದೂರ ಓದಲು ಹೋಗಿ ತಾನು ಕಲಿ ತದ್ದನ್ನು ಬೇರೆ ಯವ ರಿಗೆ ಕಲಿಸಿಕೊಡುತ್ತಿದ್ದಾನೆ. ಇವನಿಂದ ಕಲಿತವರು ಮತ್ತೆ ಐದು ಜನರಿಗೆ ಹೇಳಿಕೊಡುತ್ತಿದ್ದಾರೆ. 
ವರುಣ್‌ ಗಾಂಧಿ

ಟಾಪ್ ನ್ಯೂಸ್

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Sagara-Autrity

Sagara: ಹತ್ತು ಎಕರೆ ಜಾಗದಲ್ಲಿ ಆಶ್ರಯ ಲೇ ಔಟ್ ನಿರ್ಮಿಸಿ ಬಡವರಿಗೆ ಹಂಚಿಕೆ: ಶಾಸಕ ಬೇಳೂರು

1-ree

Karkala; ಕಸದಲ್ಲಿದ್ದ 25 ಗ್ರಾಂ ಚಿನ್ನದ ಸರ ಮರಳಿಸಿ ಪ್ರಾಮಾಣಿಕತೆ ಮೆರೆದ SLRM ಸಿಬಂದಿಗಳು

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

Keerthy Suresh: ಪೋಷಕರು ನಿಶ್ಚಯಿಸಿದ ಹುಡುಗನ ಜತೆ ನಡೆಯಲಿದೆ ಕೀರ್ತಿ ಸುರೇಶ್‌ ಮದುವೆ?

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು

ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್‌ ಪಡೆದು ಸಿನಿಮಾದಲ್ಲಿ ಫೇಮ್‌ ಆದ ಕಲಾವಿದರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

Udupi: ಗಾಂಜಾ ಮಾರಾಟ ಮಾಡುತ್ತಿದ್ದ ಮೂವರ ಬಂಧನ; 8 ಲಕ್ಷ ಮೌಲ್ಯದ ಗಾಂಜಾ ವಶಕ್ಕೆ

10-karkala

Karkala: ಬಾವಿ‌ಗೆ ಬಿದ್ದು ವ್ಯಕ್ತಿ‌ ‌ಸಾವು‌; ಮೃತದೇಹ ಮೇಲಕ್ಕೆತ್ತಿದ ಅಗ್ನಿಶಾಮಕ‌ ಪಡೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Udupi: ಗೀತಾರ್ಥ ಚಿಂತನೆ 95: ಹೃಷೀಕೇಶನಲ್ಲಿ ಗುಡಾಕೇಶನ ಪ್ರಾರ್ಥನೆ

Padubidri-Police

Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು

POLICE-5

Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ

MUST WATCH

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

ಹೊಸ ಸೇರ್ಪಡೆ

5

Sullia: ಅಪಘಾತ; ಪರಾರಿಯಾಗಿದ್ದ ಲಾರಿ ವಶಕ್ಕೆ

1-eshwar-bg

K.S.Eshwarappa;’ಕ್ರಾಂತಿವೀರ’ ಹೊಸ ಬ್ರಿಗೇಡ್ ಘೋಷಣೆ: ಫೆ.4ರಂದು ಉದ್ಘಾಟನೆ

School-Chikki

Davanagere: ಮೊಟ್ಟೆ ವಿತರಣೆಯಲ್ಲಿ ಲೋಪ; ಮುಖ್ಯ ಶಿಕ್ಷಕಿ, ದೈಹಿಕ ಶಿಕ್ಷಣ ಶಿಕ್ಷಕ ಅಮಾನತು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

Kasargod: ನಾಟಕ ತಂಡ ಸಂಚರಿಸುತ್ತಿದ್ದ ಬಸ್‌ ಮಗುಚಿ ಇಬ್ಬರು ನಟಿಯರ ಸಾವು

3

Kasaragod: ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಿಂದ ಕಳವು; ಆರೋಪಿಯ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.