Kollur Mookambika: ದರ್ಶನ್ ಬಂಧಮುಕ್ತಿಗಾಗಿ ಮೂಕಾಂಬಿಕೆಯ ಮೊರೆ ಹೋದ ಪತ್ನಿ ವಿಜಯಲಕ್ಷ್ಮಿ
ನವ ಚಂಡಿಕಾಯಾಗ ಮಾಡಿಸಿದ ಪತ್ನಿ
Team Udayavani, Jul 26, 2024, 9:39 AM IST
ಕೊಲ್ಲೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್ ಶೀಘ್ರ ಬಂಧಮುಕ್ತವಾಗಲೆಂದು ದರ್ಶನ್ ಪತ್ನಿ ಕೊಲ್ಲೂರು ಮೂಕಾಂಬಿಕೆ ಮೊರೆ ಹೋಗಿದ್ದಾರೆ,
ಅದರಂತೆ ಶುಕ್ರವಾರ ವಿಜಯಲಕ್ಷ್ಮಿ ಹಾಗೂ ಸಂಗಡಿಗರು ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಪತಿ ಹೆಸರಿನಲ್ಲಿ ಚಂಡಿಕಾ ಯಾಗ ನಡೆಯುತ್ತಿದ್ದು ಪತ್ನಿ ವಿಜಯಲಕ್ಷ್ಮಿ ಭಾಗಿಯಾಗಿದ್ದಾರೆ.
ಜೋರಾಗಿ ಸುರಿಯುತ್ತಿರುವ ಮಳೆಯಲ್ಲೇ ದೇವಸ್ಥಾನಕ್ಕೆ ಐದು ಸುತ್ತು ಬಂದು ಜೈಲಿನಲ್ಲಿರುವ ತನ್ನ ಪತಿ ಆದಷ್ಟು ಬೇಗ ಬಂಧಮುಕ್ತವಾಗುವಂತೆ ಬೇಡಿಕೊಂಡಿದ್ದಾರೆ.
ಕೊಲೆ ಕೇಸ್ನಲ್ಲಿ ಜೈಲು ಸೇರಿರುವ ಪತಿ ದರ್ಶನ್ ಅವರನ್ನ ಹೊರತರಲು ಪತ್ನಿ ವಿಜಯಲಕ್ಷ್ಮೀ ಹರಸಾಹಸ ಪಡುತ್ತಿದ್ದಾರೆ. ಪತಿ ದರ್ಶನ್ ಒಳಿತಿಗಾಗಿ ವಿಜಯಲಕ್ಷ್ಮೀ ಒದ್ದಾಡುತ್ತಿದ್ದಾರೆ. ವಕೀಲರ ಜೊತೆ ಚರ್ಚೆ ನಡೆಸಿರುವ ವಿಜಯಲಕ್ಷ್ಮೀ ಆಗಾಗ ಜೈಲಿಗೆ ಭೇಟಿಕೊಟ್ಟು ಪತಿ ದರ್ಶನ್ ಜೊತೆ ಮಾತುಕತೆ ನಡೆಸುತ್ತಿದ್ದಾರೆ.
ದರ್ಶನ್ಗೆ ಮನೆಯೂಟ, ಹಾಸಿಗೆ ಸೌಲಭ್ಯ ನೀಡಲು ಕೋರ್ಟ್ ನಕಾರ:
ಮನೆಯೂಟಕ್ಕೆ ಅನುಮತಿ ಕೋರಿ ನಟ ದರ್ಶನ್ (Darshan) ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Case) ನ್ಯಾಯಾಂಗ ಬಂಧನದಲ್ಲಿರುವ ದರ್ಶನ್ ಮನೆಯ ಊಟ, ಹಾಸಿಗೆ ಹಾಗೂ ಬಟ್ಟೆಯನ್ನು ತರಿಸಲು ಅನುಮತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಗುರುವಾರ (ಜು.25ರಂದು) ಅರ್ಜಿಯ ವಿಚಾರಣೆಯನ್ನು ನಡೆಸಿದ ಬೆಂಗಳೂರಿನ 24ನೇ ಎಸಿಎಂಎಂ ನ್ಯಾಯಾಲಯ ಮನೆ ಊಟ , ಹಾಸಿಗೆ, ಬಟ್ಟೆಯನ್ನು ತರುವಂತಿಲ್ಲ ಎನ್ನುವ ಮೂಲಕ ಅರ್ಜಿಯನ್ನು ವಜಾಗೊಳಿಸಿ ಆದೇಶ ನೀಡಿದೆ.
ಇದನ್ನೂ ಓದಿ: ಮಲೆನಾಡಲ್ಲಿ ಮಳೆಯ ಅಬ್ಬರ: ಶಿವಮೊಗ್ಗ ಜಿಲ್ಲೆಯ ಮೂರೂ ತಾಲೂಕಿನ ಶಾಲಾ ಕಾಲೇಜುಗಳಿಗೆ ರಜೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.