“ಸುಭಿಕ್ಷೆಯ ನಾಡಿಗೆ ಧರ್ಮ, ರಾಜಕೀಯ ಅಗತ್ಯ’
ಶ್ರೀಕೃಷ್ಣ ಮಠದಲ್ಲಿ "ವಿಶ್ವಾರ್ಪಣಮ್'ಗೆ ಚಾಲನೆ
Team Udayavani, Dec 6, 2021, 6:30 AM IST
ಉಡುಪಿ: ಧರ್ಮ ಎಂದರೆ ಸತ್ಯ, ಪ್ರಾಮಾಣಿಕತೆ, ಆಚಾರ-ವಿಚಾರ ಹಾಗೂ ಬದುಕಿನ ಆವಶ್ಯಕತೆ. ನಮ್ಮೊಳಗೆ ಪ್ರಾಮಾಣಿಕತೆಯಿದ್ದರೆ ವ್ಯಾಮೋಹ ತನ್ನಷ್ಟಕ್ಕೆ ಬಿಟ್ಟು ಹೋಗುತ್ತದೆ. ಸುಭಿಕ್ಷೆಯ ನಾಡಿಗೆ ಧರ್ಮ ಹಾಗೂ ರಾಜಕೀಯ ಎರಡೂ ಅತ್ಯಗತ್ಯ. ಇವೆರಡೂ ಒಂದೇ ನಾಣ್ಯದ ಎರಡು ಮುಖಗಳು ಎಂದು ಸಾಮಾಜಿಕ ಚಿಂತಕ, ಕಿರುತೆರೆ ನಟ ಹಾಗೂ ನಿರ್ದೇಶಕ ಎಸ್.ಎನ್. ಸೇತುರಾಂ ಹೇಳಿದರು.
ಶ್ರೀಕೃಷ್ಣ ಮಠ, ಪರ್ಯಾಯ ಶ್ರೀ ಅದಮಾರು ಮಠದ ವತಿಯಿಂದ ರವಿವಾರ ಪರ್ಯಾಯ ಮಂಗಲೋತ್ಸವ
“ವಿಶ್ವಾರ್ಪಣಮ್’ ಉದ್ಘಾಟನ ಸಮಾರಂಭ ದಲ್ಲಿ ಅವರು ಮಾತನಾಡಿದರು.
ಯಾವುದೇ ಧರ್ಮದಲ್ಲಿದ್ದರೂ ಆ ಧರ್ಮವನ್ನು ಅವರು ನಂಬಬೇಕು, ಪ್ರೀತಿಸ ಬೇಕು. ಅನ್ಯ ಧರ್ಮವನ್ನು ದ್ವೇಷಿಸುವಂಥ ವರಾಗಬಾರದು ಎಂದರು.
ಧರ್ಮದಲ್ಲಿ ಸ್ವಚ್ಛತೆ
ಹಿಂದೆ ಸತಿಸಹಗಮನ ಪದ್ಧತಿ ಅಲ್ಲೊಂದು ಇಲ್ಲೊಂದು ಇತ್ತು. ಇದಕ್ಕೆ ಸೂಕ್ತವಾದ ಕಾನೂನು ಇಲ್ಲ. ನಾಗರಿಕತೆ ಕಾಲಕ್ಕೆ ತಕ್ಕಂತೆ ಬದಲಾಗುತ್ತಾ ಹೋಗುತ್ತದೆ. ಮನೆಯಲ್ಲಿ ಕಸ ಬಿದ್ದಾಗ ಸ್ವಚ್ಛ ಮಾಡಿದಂತೆ ಧರ್ಮ ಎಂಬ ಮನೆಯಲ್ಲಿಯೂ ಇಂತಹಘಟನೆಗಳು ನಡೆದಾಗ ಅದನ್ನು ಸ್ವತ್ಛಮಾಡುವ ಮನೋಭಾವ ಪ್ರತಿಯೊಬ್ಬ ರಲ್ಲೂ ಮೂಡಬೇಕು. ಧರ್ಮದಲ್ಲಿ ಕಸ ಸೇರಿದರೆ ಅದನ್ನು ಸ್ವತ್ಛ ಮಾಡಬೇಕೇ ಹೊರತು ತೇಜೋವಧೆ ಸಲ್ಲದು ಎಂದರು.
ದೇಶದ ಜನ ಬುದ್ಧಿವಂತರು
ನಮ್ಮ ದೇಶದ ಜನರು ಬುದ್ಧಿವಂತರು. ಅದಕ್ಕೆ ವಿದೇಶದವರು ಅವರನ್ನು ಕರೆಯಿಸಿಕೊಂಡು ಉದ್ಯೋಗ ನೀಡುತ್ತಾರೆ. ಬೇರೆ ದೇಶಗಳನ್ನು ನಮ್ಮನ್ನು ಅವಲಂಬಿಸಿ ಕೊಂಡಿವೆ. ಧರ್ಮ ಉಳಿಸಲು ಹಳೆಯ ತಲೆಮಾರುಗಳು ಅಪಾರ ಶ್ರಮಿಸಿವೆ. ಅದನ್ನು ಉಳಿಸಿ, ಗೌರವಿಸುವ ಎಂದರು.
ಇದನ್ನೂ ಓದಿ:ಸೋಮವಾರ ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಭೇಟಿ : ಹಲವು ಒಪ್ಪಂದಗಳಿಗೆ ಸಹಿ ಸಾಧ್ಯತೆ
ಅನ್ನದಾನಕ್ಕೆ ವಿಶೇಷ ಮಹತ್ವ
ಅದಮಾರು ಮಠದ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಅವರು ಕಾರ್ಯಕ್ರಮ ಉದ್ಘಾಟಿಸಿ, ಮಠಗಳು ಸಮಾಜಕ್ಕೆ ನಿರಂತರ ಸ್ಪಂದಿಸುತ್ತಿವೆ. ಆದರೆ ಮಠದಿಂದ ಏನೂ ಸಿಗದ ಕೆಲವರು ಮಠಗಳ ಬಗ್ಗೆ ಅಪಪ್ರಚಾರದಲ್ಲಿ ನಿರತ ರಾಗಿದ್ದಾರೆ. ಬಡವ ಅಥವಾ ಬಲ್ಲಿದನಲ್ಲಿ ಹಸಿವೆ ಎಂಬುದು ಸಮಾನ. ಹೀಗಾಗಿ ಕೃಷ್ಣ ಮಠದಲ್ಲಿ ಅನ್ನದಾನಕ್ಕೆ ವಿಶೇಷ ಮಹತ್ವ ನೀಡಲಾಗಿದೆ ಎಂದರು.
ಉತ್ತಮ ವಿಚಾರ ಸ್ವೀಕರಿಸಿ
ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಶ್ರೀ ಈಶಪ್ರಿಯತೀರ್ಥ ಸ್ವಾಮೀಜಿ, ಎಲ್ಲರಿಂದಲೂ ಉತ್ತಮ ವಿಚಾರವನ್ನು ಸ್ವೀಕರಿಸಬೇಕು. ಅದನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಎತ್ತರಕ್ಕೆ ಬೆಳೆಯಲು ಸಾಧ್ಯ. ವಿಶ್ವಕ್ಕೆ ಭಾರತದ ಕೊಡುಗೆ ಅಪಾರವಾಗಿದ್ದು, ಇದನ್ನು ಜನರಿಗೆ ತಿಳಿಸಿಕೊಡುವ ಅಗತ್ಯವಿದೆ ಎಂದರು.
ಶ್ರೀ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರತೀರ್ಥ ಶ್ರೀಪಾದರು ಸಂದೇಶ ನೀಡಿದರು. ಶಾಸಕ ಕೆ. ರಘುಪತಿ ಭಟ್, ನಗರಸಭೆ ಅಧ್ಯಕ್ಷೆ ಸುಮಿತ್ರಾ ಆರ್. ನಾಯಕ್, ಕೆನರಾಬ್ಯಾಂಕ್ ಮಹಾಪ್ರಬಂಧಕ ಯೋಗೀಶ್ ಆಚಾರ್ಯ, ಕರ್ಣಾಟಕ ಬ್ಯಾಂಕ್‌ನ ಆಡಳಿತ ನಿರ್ದೇಶಕ ಮತ್ತು ಸಿಇಒ ಮಹಾಬಲೇಶ್ವರ ಎಂ.ಎಸ್. ಉಪಸ್ಥಿತರಿದ್ದರು.
ಪಂ| ವೆಂಕಟೇಶ ಕುಮಾರ್ ಧಾರವಾಡ ಅವರಿಂದ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು.
ಪರ್ಯಾಯ ಮಠದ ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿ, ಪ್ರಸ್ತಾವನೆ ಗೈದರು. ವಿದ್ವಾಂಸ ಕುತ್ಪಾಡಿ ಕೃಷ್ಣರಾಜ ಭಟ್ ನಿರೂಪಿಸಿದರು.
ಡಿ. 26ರ ತನಕ ಕಾರ್ಯಕ್ರಮ ವೈವಿಧ್ಯ
“ವಿಶ್ವಾರ್ಪಣಮ್’ ಅಂಗವಾಗಿ ಡಿ. 26ರ ತನಕ ಪ್ರತೀ ದಿನ ರಾಜಾಂಗಣದಲ್ಲಿ ವಿಶೇಷ ಕಾರ್ಯಕ್ರಮಗಳು ಜರಗಲಿವೆ.
ಔಷಧ ಸೇವನೆಯ ಅಡ್ಡಪರಿಣಾಮ!
ವಿಪರೀತ ಸಿಗರೇಟ್ ಸೇವನೆಯಿಂದ ಅನಾರೋಗ್ಯ ಉಂಟಾಗಿ 40 ವರ್ಷದ ಬಳಿಕ ವೈದ್ಯರಲ್ಲಿಗೆ ಹೋದಾಗ ಅವರು ಔಷಧ ನೀಡಿದ ಬಗ್ಗೆ ಮನೆಗೆ ಬಂದು ಆ ಔಷಧ ಒಳ್ಳೆಯಧ್ದೋ ಕೆಟ್ಟಧ್ದೋ; ಇದರಿಂದ ಜೀವಕ್ಕೆ ಏನಾದರೂ ಅಪಾಯವಿದೆಯೇ; ಈ ಔಷಧದ ಅಡ್ಡ ಪರಿಣಾಮಗಳೇನೂ ಎಂಬ ಬಗ್ಗೆ ಗೂಗಲ್ ಸರ್ಚ್ ಮಾಡುವ ಜನರಿದ್ದಾರೆ. ಆದರೆ ಸಿಗರೇಟ್ ಸೇವನೆ ಹಾನಿಕರ ಎಂಬ ಪ್ಯಾಕೆಟ್‌ನಲ್ಲಿ ಬರೆದಿರುವುದನ್ನು ಅವರು ಅಷ್ಟು ವರ್ಷದವರೆಗೆ ಗಮನಿಸದಿರುವುದೇ ದುರಂತ ಎಂದು ಸೇತುರಾಂ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್
Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ
Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫಲಿಸದೆ ವ್ಯಕ್ತಿ ಸಾವು
Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು
Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.