ಪಡುಕರೆ ಕಡಲ ತೀರದ ಸುರಕ್ಷತೆಗೆ ಎಡಿಬಿ ಯೋಜನೆ
Team Udayavani, Oct 5, 2018, 6:00 AM IST
ಕಟಪಾಡಿ: ಉದ್ಯಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡುಕರೆ ಭಾಗದ ಕಡಲ ತಟದಲ್ಲಿ ಸಮುದ್ರ ತೀರ ಕೊರೆತ ತಡೆಗಟ್ಟಲು ಕಲ್ಲಿನ ತಡೆ (ರಾಕ್‌ಗ್ರೋಯ್ನ) ನಿರ್ಮಿಸಿ ಸಮುದ್ರ ತೀರವನ್ನೂ ವಿಶಾಲಗೊಳಿಸುವ ಎಡಿಬಿ ಯೋಜನೆ ಪ್ರಗತಿಯಲ್ಲಿದೆ.
91.09 ಕೋ. ರೂ. ವೆಚ್ಚದ ಯೋಜನೆ
ರಾಜ್ಯ ಬಂದರು ಮತ್ತು ಒಳ ಜಲಸಾರಿಗೆ ಇಲಾಖೆ ಕರಾವಳಿ ತೀರದ ಸುರಕ್ಷತೆಗೆ ಈ ಯೋಜನೆಯನ್ನು ಪರಿಷ್ಕೃತ ಮೊತ್ತ ಮೊತ್ತ 91.09 ಕೋಟಿ ರೂ.ನಲ್ಲಿ ಅನುಷ್ಠಾನಗೊಳಿಸಿದ್ದು ಈಗಾಗಲೇ ಶೇ.45ರಷ್ಟು ಕಾಮಗಾರಿ ಪೂರೈಸಲಾಗಿದೆ. ಕರಾವಳಿ
ಯಲ್ಲಿ ಇದನ್ನು ಪ್ರಾಯೋಗಿಕ ಯೋಜನೆಯಾಗಿ ಅನುಷ್ಠಾನಿಸ ಲಾಗುತ್ತಿದೆ.
ಯೋಜನೆ ಏನು?
ಉದ್ಯಾವರ ಗ್ರಾಮ ಪಂಚಾಯತ್ ಇದರ 13ನೇ ವಾರ್ಡಿನ 5 ಕಿ.ಮೀ ವ್ಯಾಪ್ತಿ ಪ್ರದೇಶದಲ್ಲಿ 35 ರಾಕ್‌ಗ್ರೋಯ್ನಗಳನ್ನು ಪರಸ್ಪರ 125 ರಿಂದ 130 ಮೀಟರ್ ಅಂತರಗಳಲ್ಲಿ ನಿರ್ಮಿಸಲಾಗುತ್ತಿದೆ. ಈಗಾಗಲೇ 16ರಷ್ಟು ರಾಕ್‌ಗ್ರೋಯ್ನಗಳನ್ನು ನಿರ್ಮಿಸಲಾಗಿದ್ದು, ಉಳಿದ ರಾಕ್‌ಗ್ರಾಯಿನ್ ನಿರ್ಮಾಣದ ಕೆಲಸ ಪ್ರಗತಿಯಲ್ಲಿದೆ. ಕಲ್ಲುಗಳನ್ನು ಹೇರುವ ಮೊದಲು ತಳಭಾಗದಲ್ಲಿ ಜಿಯೋ ಟೆಕ್ಸ್ ಟೈಲ್ಸ್ ಫೈಬರ್ ಹೊದಿಕೆಯನ್ನು ಬಳಸಿಕೊಂಡು ಅದರ ಮೇಲ್ಭಾಗದಲ್ಲಿ 10 ರಿಂದ 100 ಕೆ.ಜಿ. ಭಾರದ ಕಲ್ಲುಗಳು, ಅನಂತರದಲ್ಲಿ 100 ರಿಂದ 200 ಕೆ.ಜಿ. ಭಾರದ ಕಲ್ಲುಗಳನ್ನು ಹಾಕಲಾಗುತ್ತದೆ. ಅದರ ಮೇಲ್ಭಾಗದಲ್ಲಿ 1ರಿಂದ 3 ಟನ್ ಭಾರದ ಕಲ್ಲುಗಳನ್ನು ಪೇರಿಸಿಡಲಾಗುತ್ತದೆ. ಬಳಿಕ 2 ರಿಂದ 4 ಟನ್ ಭಾರದ ಕಲ್ಲುಗಳ ಪದರವನ್ನು ನಿರ್ಮಿಸಲಾಗುತ್ತಿದೆ.
ಇದು ಸಮುದ್ರದ ಕಡೆಯಿಂದ -1.5 ಮೀಟರ್ ಆಳದಿಂದ ದಡದ ಅಂಚಿನತ್ತ 1.65 ಮೀಟರ್ ಎತ್ತರ ಇದ್ದು, 65 ರಿಂದ 68 ಮೀಟರ್ ಉದ್ದಕ್ಕೆ ಐ ಮಾದರಿಯಲ್ಲಿ ಇಳಿಜಾರಾಗಿ ರೂಪದಲ್ಲಿ ನಿರ್ಮಿಸಲಾಗುತ್ತಿದೆ. ರಸ್ತೆಯ ಭಾಗದಿಂದ 10 ರಿಂದ 20 ಮೀ ಅಂತರದಲ್ಲಿ ಸ್ಥಳವನ್ನು ಕಾಯ್ದಿರಿಸಲಾಗುತ್ತದೆ. ಇಲ್ಲಿ ನಿಗದಿತ ಭಾರದ ಬಂಡೆಕಲ್ಲುಗಳನ್ನು ಮಾತ್ರ ಬಳಸಿಕೊಂಡು ಕಾಮಗಾರಿಯನ್ನು ನಿರ್ವಹಿಸಲಾಗುತ್ತಿದೆ ತಡೆಗೋಡೆ ಮತ್ತು ವಿಸ್ತೃತ ಸಮುದ್ರ ತೀರ ಎಡಿಬಿ ಪೈಲಟ್ ಪ್ರಾಜೆಕ್ಟ್ ನಡಿ ವಿಸ್ತೃತ ಸಮುದ್ರ ತೀರ ನಿರ್ಮಾಣ ಉದ್ದೇಶವೂ ಇಡೇರಲಿದೆ. ರಾಕ್‌ಗ್ರೋಯ್ನಗಳ ಮಧ್ಯೆ ಮರಳು ಶೇಖರಣೆಗೊಳ್ಳುವುದರಿಂದ ಸಮುದ್ರ ತೀರ ವಿಸ್ತರಣೆಯಾಗುತ್ತದೆ. ಜತೆಗೆ ತಡೆಗೋಡೆ ರೀತಿ ಕೆಲಸವೂ ಮಾಡಲಿದೆ. ಈ ಮಳೆಗಾಲದಲ್ಲಿ ರಾಕ್‌ಗ್ರಾಯಿನ್‌ಗಳು ಸಮುದ್ರದ ತೀವ್ರ ಉಬ್ಬರಗಳನ್ನು ಎದುರಿಸಿದ್ದು, ಕಲ್ಲುಗಳು ಬೀಳಲಿಲ್ಲ ಅಥವಾ ಚದುರಿಲ್ಲ ಎಂದು ಸುಸ್ಥಿರ ಕರಾವಳಿ ತೀರ ಸಂರಕ್ಷಣೆ ಹಾಗೂ ನಿರ್ವಹಣೆ ಯೋಜನೆಯ ಅಧಿಕಾರಿಗಳು ಹೇಳಿದ್ದಾರೆ.
ವಿದೇಶಗಳಲ್ಲೂ ಇದೆ ಈ ಪದ್ಧತಿ
ರಾಕ್‌ಗ್ರೋಯ್ನಗಳನ್ನು ಬಳಸಿ ಸಮುದ್ರ ತೀರಗಳನ್ನು ಸುರಕ್ಷಿತವಾಗಿಡುವ ಯೋಜನೆಗಳು ವಿದೇಶಗಳ ಪ್ರಖ್ಯಾತ ಬೀಚ್‌ಗಳಲ್ಲೂ ಮಾಡಲಾಗಿದೆ. ಸ್ಪೇನ್‌ನ ಕ್ಯಾಟಲೋನಿಯಾ ಸಮುದ್ರತೀರ, ಅಮೆರಿಕದ ನ್ಯೂಜೆರ್ಸಿಯ ಸೀ ಬ್ರೈಟ್ ಬೀಚ್‌ಗಳಲ್ಲಿ ಅಳವಡಿಸಲಾಗಿದೆ. ಯುಕೆಯ ಮುಂಡ್‌ಸ್ಲೆ„ ಬೀಚ್‌ನಲ್ಲಿ ಮರದ ದಿಮ್ಮಿಗಳನ್ನು ಹಾಕಿದ ಗ್ರೋಯ್ನಗಳನ್ನು ಅಳವಡಿಸಲಾಗಿದೆ.
ಮೀನುಗಾರಿಕೆಗೆ ಅಡ್ಡಿ ಇಲ್ಲ
ಯೋಜನೆ ಬಹಳಷ್ಟು ಪ್ರಯೋಜನಕಾರಿಯಾಗಿದ್ದು, ಸಮುದ್ರ ತೀರ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮರಳು ಸಂಗ್ರಹಗೊಳ್ಳುತ್ತಿದೆ. ಕಡಲ್ಕೊರೆತದ ಸಮಸ್ಯೆಗೆ ಪರಿಣಾಮಕಾರಿಯಾಗಿದೆ. ಮೀನುಗಾರಿಕೆಗೆ ಅಡ್ಡಿ, ಆತಂಕ ಇಲ್ಲ .
– ಕೃಷ್ಣ ಜಿ.ಕೋಟ್ಯಾನ್,
ಗ್ರಾ. ಪಂ. ಸದಸ್ಯ, ಉದ್ಯಾವರ
– ವಿಜಯ ಆಚಾರ್ಯ ಕಟಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Journalist:ಅಭಿವೃದ್ಧಿಪತ್ರಿಕೋದ್ಯಮ ಪ್ರಶಸ್ತಿ:ಗಿರೀಶ್ ಲಿಂಗಣ್ಣಗೆ ಸ್ವಾಮೀಜಿಗಳಿಂದ ಶ್ಲಾಘನೆ
Katpadi: ನಕಲಿ ದಾಖಲೆ ಸೃಷ್ಟಿಸಿ 45 ಲಕ್ಷ ರೂ. ಸಾಲ ಪಡೆದು ವಂಚನೆ ; ಪ್ರಕರಣ ದಾಖಲು
Kaup: ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ವಿಕ್ರಂ ಕಾಪು ನೇಮಕ
Manipal: ಮೂವರ ಮೇಲೆ ಜೇನುನೊಣ ದಾಳಿ; ಓರ್ವನಿಗೆ ಗಾಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.