ಹೆಚ್ಚುವರಿ ಶಿಕ್ಷಕರಿಗೆ ವರ್ಗಾವಣೆ ಚಿಂತೆ: ಮಕ್ಕಳ ವಿದ್ಯಾಭ್ಯಾಸದ ಮೇಲೆ ಪರಿಣಾಮ ಸಾಧ್ಯತೆ
Team Udayavani, Jan 17, 2023, 7:00 AM IST
ಉಡುಪಿ: ಸರಕಾರಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಆರಂಭ ವಾಗಿರುವುದ ರಿಂದ ಹೆಚ್ಚಿನ ಶಾಲೆಗಳಲ್ಲಿ ಶೈಕ್ಷಣಿಕ ವರ್ಷದ ಮಧ್ಯದಲ್ಲೇ ಶಿಕ್ಷಕರ ಸಮಸ್ಯೆ ಎದುರಾಗಲಿದೆ ಮತ್ತು ಇದು ಮಕ್ಕಳ ಕಲಿಕೆಯ ಮೇಲೂ ಪರಿಣಾಮ ಬೀರಲಿದೆ.
ಹಿಂದಿನ ವರ್ಷದಲ್ಲಿ ಹೆಚ್ಚುವರಿ ಶಿಕ್ಷಕರಾಗಿ ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ವರ್ಗಾವಣೆ ಹೊಂದಿ ವರ್ಷ ಕಳೆದಿಲ್ಲ. ಆಗಲೇ ಮತ್ತೊಂದು ಶಾಲೆಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.
ಕರಾವಳಿಯ ಉಭಯ ಜಿಲ್ಲೆಯ ಬಹುತೇಕ ಸರಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆಯಿದೆ. ಹೆಚ್ಚುವರಿಯಾಗಿರುವ ಶಿಕ್ಷಕ ರನ್ನು ವರ್ಗಾವಣೆ ಮಾಡಿದರೆ ಬೋಧನೆಯಲ್ಲಿ ಇನ್ನಷ್ಟು ಸಮಸ್ಯೆಯಾಗಲಿದೆ ಎಂಬುದು ಅನೇಕ ಶಾಲೆಯ ಮುಖ್ಯ ಶಿಕ್ಷಕರ ಅಭಿಪ್ರಾಯವಾಗಿದೆ.
ಕೆಲವೊಂದು ಶಾಲೆಗಳಲ್ಲಿ ನಿವೃತ್ತಿಯ ಅಂಚಿನಲ್ಲಿರುವ ಶಿಕ್ಷಕರಿದ್ದಾರೆ. ಅಂದರೆ, 2023ರ ಮಾರ್ಚ್ ಅಂತ್ಯಕ್ಕೆ ನಿವೃತ್ತಿ ಹೊಂದುವ ಶಿಕ್ಷಕರಿರುವ ಶಾಲೆಗಳಲ್ಲಿಯೂ ಹೆಚ್ಚುವರಿ ಶಿಕ್ಷಕರನ್ನು ವರ್ಗಾವಣೆ ಮಾಡ ಲಾಗುತ್ತಿದೆ. ಇದರಿಂದ ಏಕಕಾಲದಲ್ಲಿ ಎರಡು ಹುದ್ದೆಗಳು ಖಾಲಿಯಾಗಲಿವೆ. ನಿವೃತ್ತಿ ಹೊಂದುವ ಶಿಕ್ಷಕರ ಜಾಗದಲ್ಲಿ ಹೆಚ್ಚುವರಿ ಶಿಕ್ಷಕರು ಅದೇ ಶಾಲೆಯಲ್ಲಿ ಉಳಿಯು ವಂತೆ ಮಾಡಬೇಕು. ಪ್ರೌಢ ಶಾಲೆ ಯಲ್ಲಿ ವಿಷಯವಾರು ಬೋಧನೆ ಇರು ವುದರಿಂದ ಅಂತಹ ಕಡೆಗಳಲ್ಲಿ ತಾಂತ್ರಿಕ ಸಮಸ್ಯೆಯಾಗಲಿದೆ. ಆದರೆ ಪ್ರಾಥಮಿಕ ಶಾಲೆಗಳಲ್ಲಿ ಇದು ಸಾಧ್ಯ ಎನ್ನಲಾಗಿದೆ.
ಪಟ್ಟಿ ಪ್ರಕಟ: ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಸಂಬಂಧ ಈಗಾಗಲೇ ಶಿಕ್ಷಣ ಇಲಾಖೆಯಿಂದ ಪಟ್ಟಿಯನ್ನು ಬಿಡುಗಡೆ ಮಾಡಿ, ಅದರಂತೆ ಶಿಕ್ಷಕರಿಂದ ಆಕ್ಷೇಪಣೆಯನ್ನು ಆಹ್ವಾನಿಸಲಾಗಿದೆ. ಬಹು ತೇಕ ಶಿಕ್ಷಕರು ತಾವು ಈಗ ಇರುವ ಶಾಲೆ ಗಳಲ್ಲೇ ಮುಂದುವರಿಸುವಂತೆ ಕೋರಿ ಕೊಂಡಿದ್ದಾರೆ. ಇನ್ನು ಕೆಲವು ಶಿಕ್ಷಕರು ತಮಗೆ ವರ್ಗಾ ವಣೆ ಮಾಡುವಂತೆ ಮನವಿ ಮಾಡಿ ದ್ದಾರೆ. ಜ.24ರಂದು ಹೆಚ್ಚುವರಿ ಶಿಕ್ಷಕರ ವರ್ಗಾವಣೆ ನಡೆಯುವ ಸಾಧ್ಯತೆಯಿದೆ.
ವರ್ಗಾವಣೆ ಗೋಳು
ಹೆಚ್ಚುವರಿ ಶಿಕ್ಷಕರಿಗೆ ಜಿಲ್ಲೆಯಿಂದ ಹೊರಗೆ ವರ್ಗಾವಣೆ ಇರುವುದಿಲ್ಲ. ಆಯಾ ಜಿಲ್ಲೆ ಅಥವಾ ತಾಲೂಕು ವ್ಯಾಪ್ತಿಯಲ್ಲೇ ಶಿಕ್ಷಣ ಇಲಾಖೆ ಸೂಚಿಸಿರುವ ಮಕ್ಕಳ ಮತ್ತು ಶಿಕ್ಷಕರ ಅನುಪಾತದ ಆಧಾರದಲ್ಲಿ ಶಿಕ್ಷಕರ ಕೊರತೆ ಇರುವ ಶಾಲೆಗಳಿಗೆ ಮರು ಹೊಂದಾಣಿಕೆ ಮಾಡಲಾಗುತ್ತದೆ. ಮುಂದಿನ ವರ್ಷ ವರ್ಗಾವಣೆ ನಡೆಯುವ ಸಂದರ್ಭದಲ್ಲಿ ಮತ್ತೆ ಇರುವವರನ್ನು ಬೇರೆ ಶಾಲೆಗೆ ವರ್ಗಾಯಿಸುವ ಸಾಧ್ಯತೆಯೂ ಇರುತ್ತದೆ. ಅಲ್ಲದೆ, ಹೆಚ್ಚುವರಿ ಶಿಕ್ಷಕರ ನಿಯೋ ಜನೆಯೇ ವಿಚಿತ್ರವಾಗಿದೆ. ಒಂದು ತರಗತಿಯಲ್ಲಿ ಇಷ್ಟೇ ಮಕ್ಕಳು ಇರ ಬೇಕು. ಶಾಲೆಯಲ್ಲಿ ಇಷ್ಟೇ ಶಿಕ್ಷಕರು ಇರಬೇಕು ಎಂಬ ಕೆಲವು ಗೊಂದಲಕಾರ ನಿಯಮವು ನಮ್ಮನ್ನು ಕಗ್ಗಂಟು ಮಾಡಿದೆ ಎಂದು ಹೆಚ್ಚುವರಿ ಶಿಕ್ಷಕರು ಗೋಳುತೋಡಿಕೊಂಡಿದ್ದಾರೆ.
ಶಾಲೆಗಳಿಂದಲೂ ಪ್ರತಿಭಟನೆ
ಅನೇಕ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇರುವುದರಿಂದ ಈಗಾಗಲೇ ಬೋಧನೆ ಮಾಡುತ್ತಿರುವ ಹೆಚ್ಚುವರಿ ಶಿಕ್ಷಕರನ್ನು ಬೇರೆ ಶಾಲೆಗೆ ವರ್ಗಾವಣೆ ಮಾಡುತ್ತಿದ್ದಾರೆ ಎಂಬ ಸುದ್ದಿ ತಿಳಿಯುತ್ತಿದ್ದಂತೆ, ಎಸ್‌ಡಿಎಂಸಿ ಹಾಗೂ ಸ್ಥಳೀಯರು ಸೇರಿಕೊಂಡು ಹೆಚ್ಚುವರಿಯಾಗಿ ಇರುವ ಶಿಕ್ಷಕರನ್ನು ತಮ್ಮ ಶಾಲೆಯಲ್ಲೇ ಉಳಿಸಿಕೊಳ್ಳಲು ಮಕ್ಕಳ ಮೂಲಕ ಪ್ರತಿಭಟನೆ ರೂಪಿಸುತ್ತಿದ್ದಾರೆ. ಬಹುತೇಕ ಕಡೆಗಳಲ್ಲಿ ಪ್ರತಿಭಟನೆಯನ್ನು ಮಾಡಿ, ಡಿಡಿಪಿಐ, ಬಿಇಒ ಹಾಗೂ ಸ್ಥಳೀಯ ಶಾಸಕರಿಗೆ ಮನವಿಯನ್ನು ಶಾಲೆಗಳಿಂದ ಸಲ್ಲಿಸಲಾಗಿದೆ.
ಹೆಚ್ಚುವರಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ಶುರು ವಾಗಿದೆ. ಜ.24ರಂದು ಆನ್‌ಲೈನ್ ಮೂಲಕ ಕೌನ್ಸೆಲಿಂಗ್ ನಡೆಯಲಿದೆ. ಅನೇಕರು ಈಗಾ ಗಲೇ ಆಕ್ಷೇಪಣೆಗಳನ್ನು ಬಿಇಒ ಕಚೇರಿಗೆ ಸಲ್ಲಿಸಿದ್ದಾರೆ. ಅದರ ಆಧಾರ ದಲ್ಲೇ ಮುಂದಿನ ಪ್ರಕ್ರಿಯೆ ನಡೆಯ ಲಿದೆ. ಸಾಮಾನ್ಯ ವರ್ಗಾವಣೆ ಪ್ರಕ್ರಿಯೆ ಇನ್ನು ಆರಂಭವಾಗಿಲ್ಲ.
-ಗಣಪತಿ, ಸುಧಾಕರ್,
ಡಿಡಿಪಿಐ, ಉಡುಪಿ, ದ.ಕ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.