ಅಪಘಾತಕ್ಕೆ ಆಹ್ವಾನ ನೀಡುತ್ತಿದೆ ಪಂದುಬೆಟ್ಟು ಮುಖ್ಯ ರಸ್ತೆ ಮಧ್ಯೆಯ ಹೊಂಡ!
ವಾಹನ ಸಂಚಾರಕ್ಕೆ ಅಡ್ಡಿ; ಸೂಕ್ತ ಸ್ಪಂದನೆಗೆ ಸಾರ್ವಜನಿಕರಿಂದ ಆಗ್ರಹ
Team Udayavani, Sep 4, 2021, 5:46 AM IST
ಮಲ್ಪೆ: ಆದಿವುಡುಪಿ-ಮಲ್ಪೆ ಮುಖ್ಯರಸ್ತೆಯ ಪಂದುಬೆಟ್ಟು ಬಳಿ ರಸ್ತೆ ಮಧ್ಯೆ ಭಾರಿ ಗಾತ್ರದ ಹೊಂಡ ನಿರ್ಮಾಣಗೊಂಡಿದ್ದು, ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿದೆ. ರಸ್ತೆ ಮಧ್ಯೆ ಸುಮಾರು 5 ಅಡಿಗಳಷ್ಟು ವಿಸ್ತಾರದಲ್ಲಿ ಹೊಂಡವಾಗಿದ್ದು, ದ್ವಿಚಕ್ರ ಸವಾರರು ಸೇರಿದಂತೆ ವಾಹನ ಸಾವರರಿಗೆ ಅಪಾಯ ಎದುರಾಗಲಿದೆ.
ಇದು ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಪ್ರಮುಖವಾಗಿ ಮೀನುಗಾರಿಕೆ ಬಂದರು ಮಲ್ಪೆಗೆ ಹೊಂದಿಕೊಂಡಿರುವ ರಸ್ತೆಯಾದ್ದರಿಂದ ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತದೆ.
ಈ ರಸ್ತೆಯಲ್ಲಿರುವ ಗುಂಡಿಯ ಪಕ್ಕದಲ್ಲಿಯೇ ವಾಹನ ಸವಾರರು ಗುಂಡಿ ತಪ್ಪಿಸಲು ಒಮ್ಮೆಲೆ ಬದಿಗೆ ಸರಿದಾಗ ಎದುರು ಅಥವಾ ಹಿಂದಿನಿಂದ ಬರುವ ವಾಹನಗಳಿಗೆ ಢಿಕ್ಕಿ ಹೊಡೆದು ಅನಾಹುತಗಳನ್ನು ತಂದುಕೊಳ್ಳುವ ಪ್ರಮೇಯಗಳು ಸಾಕಷ್ಟು ಬಾರಿ ನಡೆದಿದೆ. ಈ ಹಿಂದೆ ಸ್ಥಳೀಯರು ಒಂದೆರಡು ಸಲ ಸಿಮೆಂಟ್ ಮಿಶ್ರಿತ ಜಲ್ಲಿಹಾಕಿ ಹೊಂಡ ಮುಚ್ಚುವ ಕೆಲಸವನ್ನು ಮಾಡಿದ್ದರೂ ಮತ್ತೆ ಅದು ಯಥಾಸ್ಥಿಗೆ ತಲುಪಿದೆ.
ಇದನ್ನೂ ಓದಿ:ಮಲ್ಪೆ-ತೊಟ್ಟಂ: ಕೈರಂಪಣಿ ಬಲೆಗೆ ಬಿತ್ತು ರಾಶಿ ರಾಶಿ ಪಾಂಪ್ರಟ್ ಮೀನು!
ಇಂತಹದೇ ಮತ್ತೊಂದು ಹೊಂಡ ಪಂದುಬೆಟ್ಟು ವಿಲೇಜ್ ಇನ್ ಬಾರ್ ಸಮೀಪವೂ ನಿರ್ಮಾಣಗೊಂಡಿದೆ.
ಮಳೆಗಾಲವಾದ್ದರಿಂದ ಈ ಹೊಂಡದಲ್ಲಿ ನೀರು ನಿಂತು ದ್ವಿಚಕ್ರ ಸವಾರರು ಹೊಂಡದ ಅರಿವಿಲ್ಲದೆ ತೆರಳುವುದರಿಂದ ಬೈಕಿನೊಂದಿಗೆ ಹೊಂಡಕ್ಕೆ ಬಿದ್ದು ಗಾಯಗೊಳ್ಳುತ್ತಿದ್ದಾರೆ. ದಿನಂಪ್ರತಿ ಇಷ್ಟೆಲ್ಲ ಅನಾಹುತಗಳು ನಡೆಯುತ್ತಿದ್ದರೂ ಹೆದ್ದಾರಿ ಇಲಾಖೆಯಾಗಲಿ, ಸ್ಥಳೀಯಾಡಳಿತವಾಗಿಲಿ ಸುಮ್ಮನಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Belagavi Session ಉದ್ವಿಗ್ನ:ಹೆಬ್ಬಾಳ್ಕರ್ ವಿರುದ್ದ ಅವಾಚ್ಯ ಪದ ಬಳಸಿದರೆ ಸಿ.ಟಿ.ರವಿ?
Year Ender: Horror movies-2024 ರ ಟಾಪ್ 5 ಹಾರರ್ ಚಲನಚಿತ್ರಗಳು
Udupi: ಗೀತೋತ್ಸವದಲ್ಲಿ ಹಾಸ್ಯೋತ್ಸವ; ನಕ್ಕು ನಲಿದ ಜನಸ್ತೋಮ
Chikkaballapur: 5 ವರ್ಷದಲ್ಲಿ 514 ತಾಯಿ-ಮಗು ಸಾವಿನ ಪ್ರಕರಣ!
ಪರ್ಯಾಯ ಶ್ರೀ ಪುತ್ತಿಗೆ ಶ್ರೀಕೃಷ್ಣ ಮಠ: ಸ್ಮೃತಿ ಪ್ರತಿಭಾ,ಗೀತಾ ತ್ರಯೋದಶಾವಧಾನ’ ಸಂಪನ್ನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.