ರಸ್ತೆಯಲ್ಲಿ ಹೊಂಡವೋ… ಹೊಂಡದೊಳಗೆ ರಸ್ತೆಯೋ…?
ಕರಾವಳಿಯ ಹೆಬ್ಟಾಗಿಲು ಆದಿವುಡುಪಿ - ಮಲ್ಪೆ ರಾಷ್ಟ್ರೀಯ ಹೆದ್ದಾರಿ ರಸ್ತೆ ದುಃಸ್ಥಿತಿ
Team Udayavani, Sep 3, 2022, 1:24 PM IST
ಮಲ್ಪೆ: ಕರಾವಳಿಯ ಹೆಬ್ಟಾಗಿಲು ಎಂದೇ ಗುರುತಿಸಿಕೊಂಡಿರುವ ಮಲ್ಪೆ ಮೀನುಗಾರಿಕಾ ಬಂದರು ಕೋಟ್ಯಂತರ ವ್ಯವಹಾರದ ಮೂಲವಾಗಿದ್ದರೂ ಇಲ್ಲಿನ ಸಂಪರ್ಕದ ಮುಖ್ಯ ರಸ್ತೆಗಳು ಡಾಮರು, ಜಲ್ಲಿಕಲ್ಲು ಕಿತ್ತು ಹೋಗಿ ರಸ್ತೆ ಪಕ್ಕಕ್ಕೆ ಸರಿದಿವೆ. ಕರಾವಳಿ ಬೈಪಾಸ್‌ನಿಂದ ಮಲ್ಪೆವರೆಗಿನ ರಸ್ತೆ ಮಧ್ಯೆ ಅಲ್ಲಲ್ಲಿ ಗುಂಡಿಗಳಾಗಿ ರಸ್ತೆಯೊಳಗೆ ಹೊಂಡವೋ ಹೊಂಡದೊಳಗೆ ರಸ್ತೆ ಇದೆಯೋ ಎಂಬಂತಿದೆ.
ಕರಾವಳಿ ಬೈಪಾಸ್‌ನಿಂದ ಆದಿವುಡುಪಿ, ಪಂದುಬೆಟ್ಟು ಕಲ್ಮಾಡಿ, ಮಲ್ಪೆವರೆಗಿನ ರಸ್ತೆ ಸಂಪೂರ್ಣ ಗುಂಡಿಗಳಿಂದ ಕೂಡಿದ್ದು ರಸ್ತೆ ಎಲ್ಲಿದೆ ಎನ್ನುವುದನ್ನು ಹುಡುಕುವ ಪರಿಸ್ಥಿತಿ ಇಲ್ಲಿ ಸಾಮಾನ್ಯವಾಗಿದೆ. ಹೊಂಡ ಗುಂಡಿಗಳಿಂದ ರಾಚುತ್ತಿದ್ದ ಈ ರಸ್ತೆ ವಾಹನ ಸವಾರರ ಜೀವಕ್ಕೆ ಕಂಟಕವಾಗಿದೆ. ಒಂದು ಹೊಂಡವನ್ನು ತಪ್ಪಿಸಲು ಹೋಗಿ ಇನ್ನೊಂದು ಹೊಂಡಕ್ಕೆ ಬಿದ್ದು ರಸ್ತೆಯಲ್ಲಿ ಸಂಭವಿಸುವ ಅಪಘಾತಗಳ ಸಂಖ್ಯೆ ಹೆಚ್ಚುತ್ತಲೇ ಇದೆ. ಸಂಬಂಧಪಟ್ಟ ಆಡಳಿತ ಮಾತ್ರ ದಿವ್ಯಮೌನ ವಹಿಸಿದೆ ಎಂದು ಆರೋಪಿಸಲಾಗಿದೆ.
ಬಸ್, ಲಘು ವಾಹನಗಳು, ಬೈಕ್‌ಗಳು ದಿನನಿತ್ಯ ಸಾವಿರಾರು ಸಂಖ್ಯೆಯಲ್ಲಿ ಓಡಾಡುತ್ತವೆ. ಮೀನುಗಾರಿಕಾ ವ್ಯಾಪಾರ ಕೇಂದ್ರವಾದ ಮಲ್ಪೆಗೆ ನಿತ್ಯ ಸಾವಿರಾರು ಸಂಖ್ಯೆಯಲ್ಲಿ ವಾಹನಗಳು ಸಂಚರಿಸುತ್ತವೆ. ಪ್ರವಾಸೋದ್ಯಮ ಕೇಂದ್ರ ಬೀಚ್, ಸೈಂಟ್ ಮೇರೀಸ್ ಐಲ್ಯಾಂಡ್‌ಗೆ ಪ್ರವಾಸಿಗರು, ಸಾರ್ವಜನಿಕರು ಇದೇ ಮಾರ್ಗದಲ್ಲಿ ಓಡಾಡಬೇಕು. ಆದರೆ ಈ ರಸ್ತೆ ಮಾತ್ರ ಓಬಿರಾಯನ ಕಾಲದಂತೆ ಇದೆ.
ಇಲ್ಲಿನ ರಸ್ತೆಯ ಕೆಲವಡೆ ಕಾಂಕ್ರೀಟ್ ಕಾಮಗಾರಿಯಾಗಿದ್ದು ಕಾಂಕ್ರೀಟ್ ರಸ್ತೆಯ ಇಕ್ಕೆಲಗಳಲ್ಲಿ ಹಾಕಿದ ಡಾಮರು ಕಿತ್ತು ಬೃಹತ್ ಗಾತ್ರದ ಹೊಂಡಗಳು ನಿರ್ಮಾಣ ವಾಗಿದ್ದು ಅಪಘಾತಗಳು ಸಂಭವಿಸುವುದು ಸಾಮಾನ್ಯವಾಗಿದೆ ಎನ್ನುತ್ತಾರೆ ಸ್ಥಳೀಯರು. ಹೊಂಡಕ್ಕೆ ಜಲ್ಲಿ ತುಂಡುಗಳನ್ನು ತುಂಬಿಸ ಲಾಗಿದ್ದು, ಮಾರನೇ ದಿನ ಎದ್ದು ಇನ್ನಷ್ಟು ಅನಾಹುತಗಳಿಗೆ ಕಾರಣವಾಗಿದೆ.
ಇದನ್ನೂ ಓದಿ : ವಾರದ ಬಳಿಕ ಸೂಟ್ ಕೇಸ್ ನೊಳಗೆ ಪತ್ತೆಯಾಯ್ತು ಬಾಲಕಿಯ ಮೃತದೇಹ : ಕೊಲೆ ರಹಸ್ಯ ನಿಗೂಢ
ಯಾರೂ ಗಮನಹರಿಸುತ್ತಿಲ್ಲ
ಹೆದ್ದಾರಿ ಎನ್ನುವ ಬದಲು ಇದನ್ನು ಹೊಂಡಗುಂಡಿಗಳ ದಾರಿ ಎಂದರೂ ತಪ್ಪಿಲ್ಲ. ದಿನನಿತ್ಯವೂ ಜಿಲ್ಲೆಯ ಸಾವಿರಾರು ವಾಹನಗಳಿಗೆ ಆಸರೆಯಾಗಿರುವ ಈ ಹೆದ್ದಾರಿಗಳು ಮರಣ ಗುಂಡಿಗಳಾಗಿ ಬದಲಾಗಿದೆ. ಸಂಬಂಧಪಟ್ಟವರಿಗೆ ಮಳೆಗಾಲದ ಮೊದಲೇ ಸೂಚನೆ ನೀಡಲಾಗಿತ್ತು. ಈ ಬಗ್ಗೆ ಪತ್ರಿಕೆಯಲ್ಲಿ ಹಲವಾರು ಬಾರಿ ದೂರಿಕೊಳ್ಳಲಾಗಿತ್ತು. ಯಾರೂ ಇತ್ತ ಗಮನಹರಿಸಲೇ ಇಲ್ಲ.
-ಪ್ರದೀಪ್ ಟಿ. ಮೆಂಡನ್, ಸ್ಥಳೀಯರು
ಸದ್ಯ ತಾತ್ಕಾಲಿಕ ಪರಿಹಾರ
ಇಲ್ಲಿನ ರಸ್ತೆಯ ವಿಸ್ತರಣೆ ಯೋಜನೆ ಇರುವುದರಿಂದ ಹೆಚ್ಚೇನು ಮಾಡಲು ಸಾಧ್ಯವಾಗುವುದಿಲ್ಲ. ಸದ್ಯ ಹೊಂಡಕ್ಕೆ ಸಿಮೆಂಟ್ ಮಿಶ್ರಿತ ಜಲ್ಲಿಯನ್ನು ಹಾಕುವ ಕೆಲಸವನ್ನು ನಡೆಯುತ್ತದೆ. ಮಳೆ ಮುಗಿದ ಮೇಲೆ ಪೂರ್ಣ ಡಾಮರು ಕಾಮಗಾರಿ ಮಾಡಲಾಗುವುದು.
-ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.