ಆದಿವುಡುಪಿ ಅಂಚೆ ಕಚೇರಿ ಮುಚ್ಚಿಸದಂತೆ ಮನವಿ
Team Udayavani, Jul 23, 2017, 5:45 AM IST
ಮಲ್ಪೆ: ಆದಿವುಡುಪಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೋಸ್ಟ್ ಆಫೀಸನ್ನು ಉಡುಪಿ ಬನ್ನಂಜೆಯ ಸಬ್ ಪೋಸ್ಟ್ ಅಫೀಸಿನೊಂದಿಗೆ ವಿಲೀನಗೊಳಿಸುವ ಪ್ರಕ್ರಿಯೆಯನ್ನು ಕೈ ಬಿಡುವಂತೆ ಆಗ್ರಹಿಸಿ ಆದಿವುಡುಪಿ ಮೂಡುಬೆಟ್ಟಿನ ನಾಗರಿಕರು ಸಚಿವ ಪ್ರಮೋದ್ ಮಧ್ವರಾಜ್ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಈ ಪರಿಸರದಲ್ಲಿ ಸಿಂಡಿಕೇಟ್ ಬ್ಯಾಂಕ್, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಅಂಗನವಾಡಿ, ಮಾಜಿ ಸೈನಿಕರ ವಿವಿದ್ದೊದ್ದೇಶ ಸಂಘ, ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ, ಕೃಷಿ ಉತ್ಪನ್ನ ಮಾರುಕಟ್ಟೆ ಕಚೇರಿ, ಮುಂತಾದ ಪ್ರಾಮುಖ್ಯ ಸರಕಾರಿ ಖಾಸಗಿ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿದೆ. ಸುಮಾರು 5 ಸಾವಿರಕ್ಕಿಂತಲೂ ಹೆಚ್ಚಿನ ಕುಟುಂಬಗಳು ಈ ಪ್ರದೇಶದಲ್ಲಿ ವಾಸಿಸುತ್ತಿದ್ದು ಈ ಅಂಚೆ ಕಚೇರಿಯಲ್ಲಿ ವ್ಯವಹಾರ ನಡೆಸುತ್ತಿದ್ದಾರೆ. ಅಂಚೆ ಕಚೇರಿ ಮುಚ್ಚಿದಲ್ಲಿ ಈ ಪರಿಸರದ ಜನರಿಗೆ ತೊಂದರೆ ಯಾಗಲಿದೆ. ನಗರಸಭಾ ಸದಸ್ಯ ಹಾರ್ಮೀಸ್ ನೋರೊನ್ನಾ, ರಾವಲ್, ಸುಖೇಶ್, ಗುರು, ಅರುಣ್, ಮಾದವ ಬನ್ನಂಜೆ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.