ಅದಮಾರು ಶ್ರೀಗಳಿಂದ ಉಗ್ರಾಣ ಮುಹೂರ್ತ
Team Udayavani, Jan 16, 2020, 5:05 AM IST
ಉಡುಪಿ: ಉತ್ತಮ ಆಹಾರ ಸೇವಿಸುವುದರಿಂದ ಜ್ಞಾನ ಸಂಪಾದಿಸಲು ಸಾಧ್ಯ ಎಂದು ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಸ್ವಾಮೀಜಿ ಅವರು ತಿಳಿಸಿದರು.
ಅದಮಾರು ಪರ್ಯಾಯದ ಪೂರ್ವಭಾವಿಯಾಗಿ ರಾಜಾಂಗಣದ ಪಾರ್ಕಿಂಗ್ ಏರಿಯಲ್ಲಿ ನಿರ್ಮಿಸಲಾದ ಅನಂತ ವೇದಿಕೆಯಲ್ಲಿ ಬುಧವಾರ ಆಯೋಜಿಸಿದ್ದ ಉಗ್ರಾಣ ಮುಹೂರ್ತ ನೆರವೇರಿಸಿ ಮಾತನಾಡಿದರು.
ಭಕ್ತರು, ಸಂಘ ಸಂಸ್ಥೆಗಳಿಂದ ಪರ್ಯಾಯದ ದಿನ ಮಠಕ್ಕೆ ಬೃಹತ್ ಪ್ರಮಾಣದಲ್ಲಿ ಹೊರೆಕಾಣಿಕೆ ಹರಿದು ಬರುತ್ತಿತ್ತು. ಹೀಗೆ ಬಂದ ಹೊರೆ ಕಾಣಿಕೆಯಲ್ಲಿ ತರಕಾರಿ ಹಾಗೂ ಆಹಾರ ಪದಾರ್ಥಗಳೇ ಹೆಚ್ಚಾಗಿರುತ್ತಿದ್ದರಿಂದ ಬಹುಪಾಲು ಹಾಳಾ ಗುತ್ತಿತ್ತು. ಭಕ್ತರು ಪ್ರೀತಿಯಿಂದ ದೇವರಿಗೆ ಅರ್ಪಿಸಿದ ಹೊರೆಕಾಣಿಕೆ ಸದ್ವಿನಿಯೋ ಗವಾಗಬೇಕು. ಅದು ಭಕ್ತರಿಗೆ ಅನ್ನ ಪ್ರಸಾದದ ರೂಪದಲ್ಲಿ ಸಿಗಬೇಕು ಎನ್ನುವ ನಿಟ್ಟಿನಲ್ಲಿ 15 ದಿನಗಳಿಗೊಮ್ಮೆ ಹೊರೆಕಾಣಿಕೆ ಸಲ್ಲಿಸುವ ಕ್ರಮವನ್ನು ಆರಂಭಿಸಲಾಗಿದೆ ಎಂದರು.
ಆದರ್ಶ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಚಂದ್ರಶೇಖರ್, ಅದಮಾರು ಮಠದ ಗೋವಿಂದ ರಾಜ್, ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ಅಧ್ಯಕ್ಷ ವಿಷ್ಣು ಪ್ರಸಾದ್ ಪಾಡಿಗಾರ್, ಪ್ರವೀಣ್ ಉಪಾಧ್ಯಾಯ, ಕುಮಾರಸ್ವಾಮಿ, ರಂಜನ್ ಕಲ್ಕೂರ, ಎಂ.ಎಸ್ ವಿಷ್ಣು, ದಿವ್ಯ ವಿಷ್ಣು ಪ್ರಸಾದ್, ಪದ್ಮಲತಾ, ಸುಮಿತ್ರ ಕೆರೆಮಠ, ಸವಿತಾ, ದೈವಜ್ಞ ಯುವಕ ಮಂಡಲದ ದಿವಾಕರ್ ಶೇಟ್, ಸುಬ್ರಹ್ಮಣ್ಯ, ಪ್ರಶಾಂತ್ ಉಪಸ್ಥಿತರಿದ್ದರು.
ನಾಲ್ಕು ದಿನ ಹೊರೆಕಾಣಿಕೆ
ರಾಜಾಂಗಣದ ಪಾರ್ಕಿಂಗ್ ಏರಿಯಾದ ಸಮೀಪ ಸುಮಾರು 120/40 ಚದರ ಅಡಿ ವಿಸ್ತೀರ್ಣದಲ್ಲಿ ಉಗ್ರಾಣವನ್ನು ನಿರ್ಮಿಸಲಾಗಿದೆ. ಭಾವಿ ಪರ್ಯಾಯ ಮಠ ಶ್ರೀಈಶಪ್ರಿಯರ್ತೀಥ ಸ್ವಾಮೀಜಿ ಅವರು “ಅನಂತ’ ಹೆಸರು ಸೂಚಿಸಿದ್ದು, ಜ. 15ರಿಂದ 18 ವರೆಗೆ ಈ ಉಗ್ರಾಣವು ಬೆಳಗ್ಗೆ 8ರಿಂದ ಸಂಜೆ 8ವರೆಗೆ ಕಾರ್ಯ ನಿರ್ವಹಿಸಲಿದೆ.
ಹೊರೆಕಾಣಿಕೆ ನೀಡುವ ಭಕ್ತರಿಗೆ, ಸಂಸ್ಥೆಗಳಿಗೆ ಮಠದ ಪ್ರಮಾಣ ಪತ್ರ, ಮಂತ್ರಾಕ್ಷತೆ ಹಾಗೂ ಪ್ರಸಾದವನ್ನು ನೀಡ ಲಾಗುತ್ತದೆ. ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ 50 ಮಂದಿ ಸ್ವಯಂ ಸೇವಕರು ಹಾಗೂ ದೈವಜ್ಞ ಯುವಕ ಮಂಡಲದ ಸದಸ್ಯರು ಉಗ್ರಾಣದ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ.
ಪರ್ಯಾಯ ಅಂಗವಾಗಿ ಇಲ್ಲಿಯವರೆಗೆ ಒಟ್ಟು ತಿಂಗಳಿಗೆ ಎರಡು ಬಾರಿಯಂತೆ ಹೊರೆ ಕಾಣಿಕೆ ನೀಡಲು ಒಟ್ಟು 48 ಕಡೆಗಳಿಂದ ಹೆಸರು ನೋಂದಾಯಿಸಿಕೊಂಡಿವೆ. ಪರ್ಯಾ ಯದ ಬಳಿಕ ಬರುವ ಹೊರೆಕಾಣಿಕೆ ಸಂಸ್ಕೃತ ಕಾಲೇಜು ಮಾರ್ಗವಾಗಿ ನೇರವಾಗಿ ಶ್ರೀಕೃಷ್ಣ ಮಠ ತಲುಪ ಲಿದೆ. ಮಠ ಹಾಗೂ ಭಕ್ತರ ನಡುವೆ ಬಾಂಧವ್ಯ ವೃದ್ಧಿಯಾಗಬೇಕು ಎನ್ನುವ ನಿಟ್ಟಿನಲ್ಲಿ ಭಕ್ತರನ್ನು ಶ್ರೀಗಳು ನೇರವಾಗಿ ಭೇಟಿ ಮಾಡಲಿದ್ದು, ಮಂತ್ರಾಕ್ಷತೆ ನೀಡಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Malpe: ಬೀಚ್‌ನಲ್ಲಿ ಮತ್ತೆ ಆರಂಭವಾಗಿದೆ ಫ್ಲೋಟಿಂಗ್ ಬ್ರಿಡ್ಜ್, ಪ್ರವಾಸಿಗರ ಸ್ಪಂದನೆ
Udupi: ಗೀತಾರ್ಥ ಚಿಂತನೆ-88: ಸಮಸ್ಯೆಯ ಮೂಲ ಹುಡುಕುವ ರೀತಿ
Kaup: ಪಠ್ಯದ ಜತೆಗೆ ಶಿಕ್ಷಣಕ್ಕೆ ಆದ್ಯತೆ ಅತ್ಯಗತ್ಯ: ಡಾ| ಕೆ. ಪ್ರಕಾಶ್ ಶೆಟ್ಟಿ
Ajekar Case: ನ್ಯಾಯಾಂಗ ಬಂಧನ ವಿಸ್ತರಣೆ
Karkala Parashurama statue Case: ಶಿಲ್ಪಿ ಕೃಷ್ಣ ನಾಯ್ಕ ಜಾಮೀನು ಅರ್ಜಿ ತಿರಸ್ಕೃತ
MUST WATCH
ಹೊಸ ಸೇರ್ಪಡೆ
By Election: ಸಿದ್ದರಾಮಯ್ಯ ಸರಕಾರ ಕಿತ್ತೊಗೆಯುವವರೆಗೂ ಹೋರಾಟ ನಿಲ್ಲಲ್ಲ: ಎಚ್.ಡಿ.ದೇವೇಗೌಡ
High Court: ʼಅಪರಾಧಿ ಪತಿಯೊಂದಿಗೆ ನೆಲೆಸಿದ ಮಾತ್ರಕ್ಕೆ ಪತ್ನಿಯನ್ನೂ ಅಪರಾಧಿ ಮಾಡಲಾಗದುʼ
Karnataka: ಅರಣ್ಯದಲ್ಲಿ ನಿರಂತರ ಗಣಿ ಚಟುವಟಿಕೆಗೆ ಅನುಮತಿ?
Mangaluru: ಮಾರುಕಟ್ಟೆಯಲ್ಲೀಗ ಬಂಗುಡೆ ಬಲು ಅಗ್ಗ! ವಿದೇಶದಲ್ಲಿ ಬೇಡಿಕೆ ಇಳಿಕೆ
Kambala: ಕೋಣಗಳ ಸಂಖ್ಯೆ ದುಪ್ಪಟ್ಟು-ಕಂಬಳ ಆಸಕ್ತಿ ಮೂರುಪಟ್ಟು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.