ವಿವೇಕಾನಂದರ ತತ್ವಗಳನ್ನು ಅಳವಡಿಸಿಕೊಳ್ಳಿ: ರಾಜೇಶ್
Team Udayavani, Jun 17, 2019, 5:04 AM IST
ಹೆಬ್ರಿ: ಉತ್ತಮ ವ್ಯಕ್ತಿತ್ವ ಅಳವಡಿಸಿಕೊಂಡಾಗ ಮಾತ್ರ ಮನುಷ್ಯ ಜೀವನ ಸಾರ್ಥಕವಾಗುತ್ತದೆ. ಈ ಪ್ರಮುಖ ಉದ್ದೇಶವನ್ನು ಇಟ್ಟುಕೊಂಡು ಡಿವೈನ್ ಪಾರ್ಕ್ ವಿವೇಕಾನಂದರ ತಣ್ತೀಗಳನ್ನು ಬೋಧಿಸುತ್ತಿದ್ದು ಸುಮಾರು 5ಕೋಟಿ ರೂ.ಗೂ ಮಿಕ್ಕಿ ಅನುಯಾಯಿಗಳನ್ನು ಹೊಂದಿದೆ ಎಂದು ಉಡುಪಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೊರಿಯಲ್ ಕಾಲೇಜಿನ ಉಪನ್ಯಾಸಕ ರಾಜೇಶ್ ನಾಯರ್ ಹೇಳಿದರು.
ಸಾಲಿಗ್ರಾಮ ಡಿವೈನ್ ಪಾರ್ಕ್ ಟ್ರಸ್ಟ್ ಇದರ ಅಂಗಸಂಸ್ಥೆ ಹೆಬ್ರಿ ವಿವೇಕ ಜಾಗೃತ ಬಳಗ ಉಪಸಮಿತಿ ಇದರ ಆಶ್ರಯದಲ್ಲಿ ಜೂ. 16ರಂದು ಹೆಬ್ರಿ ಶ್ರೀರಾಮ ಭಜನ ಮಂದಿರದಲ್ಲಿ ನಡೆದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನೆಮನೆಗಳಲ್ಲಿ ಸತ್ಸಂಗವಾಗಲಿ
ಅಧ್ಯಕ್ಷತೆ ವಹಿಸಿದ್ದ ಹೆಬ್ರಿ ವಿವೇಕ ಜಾಗ್ರತ ಬಳಗ ಉಪಸಮಿತಿಯ ಗೌರವಾಧ್ಯಕ್ಷ ಹರಿದಾಸ ಬಿ.ಸಿ. ರಾವ್ ಶಿವಪುರ ಮಾತನಾಡಿ, ವಿವೇಕಾನಂದರ ತಣ್ತೀಗಳು ಬದುಕಿಗೆ ದಾರಿ ದೀಪ. ದೇವರೊಂದೆ ನಾಮ ಹಲವು ಎಂಬ ಉದ್ದೇಶದಿಂದ ಡಿವೈನ್ ಪಾರ್ಕ ಕೆಲಸಮಾಡುತ್ತಿದ್ದು, ಪ್ರತಿಯೊಬ್ಬರ ಮನೆಯಲ್ಲಿ ಭಜನೆ, ಧಾರ್ಮಿಕ ಕಾರ್ಯಕ್ರಮಗಳು ನಡೆಯು ವುದರ ಮೂಲಕ ಧರ್ಮ ಜಾಗೃತಿ ಮೂಡಿಸಬೇಕು. ಈ ನಿಟ್ಟಿನಲ್ಲಿ ಹೆಬ್ರಿ ಸಮಿತಿಯ ಆಶ್ರಯದಲ್ಲಿ ಪ್ರತಿಯೊಬ್ಬರ ಮನೆಯಲ್ಲಿ ಸತ್ಸಂಗ ಕಾರ್ಯಕ್ರಮಗಳು ಜರಗಲಿ ಎಂದರು.
ಸಾಲಿಗ್ರಾಮ ಡಿವೈನ್ ಪಾರ್ಕ್ ಟ್ರಸ್ಟ್‌ನ ಡಿವೈನ್ ಭಜನಾ ಆಫೀಸರ್ ಪ್ರೇಮಕಲಾ ದಾಮೋದರ ಮಲ್ಯ, ಸಂದೇಶ್ ಕುಮಾರ್ ಹೆಬ್ರಿ, ಉಮೇಶ್ ಉಪಸ್ಥಿತರಿದ್ದರು.
ವೈ.ಆರ್. ಸುರೇಶ್ ಸ್ವಾಗತಿಸಿ, ಉಮೇಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ರಾಘವ ಹೆಬ್ರಿ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.